Friday, September 7, 2007

ಈಗ ಆ ಊರಿನಲ್ಲಿ ತರುಣರೇ ಇಲ್ಲ...


ಕರಾವಳಿ ತೀರದ ಹೆಸರಿಲ್ಲದ ಒಂದು ಹಳ್ಳಿ. ಇಡೀ ಹಗಲು ಸಮದ್ರದ ಮೇಲಿನಿಂದ ಬೀಸಿ ಬರುವ ಗಾಳಿಯಿಂದಾಗಿ ಧಗೆ. ಸಂಜೆ ಹೊತ್ತಿಗೆ ಅದೇ ಗಾಳಿ ತಂಪಾಗುತ್ತದೆ. ಹಗಲಿಡೀ ದುಡಿದ ಜನ ಸಂಜೆ ಹೊತ್ತಿಗೆ ನಿಸೂರಾಗುತ್ತಾರೆ. ಹೆಗಲಿಗೊಂದು ಬೈರಾಸ ಹಾಕಿಕೊಂಡು ಗಡಂಗಿನ ಮುಂದೆ ಕೂರುತ್ತಾರೆ. ಹೊಟ್ಟೆ ತುಂಬ ಕಳ್ಳು ಕುಡಿದು, ತೂರಾಡುತ್ತಾ, ಬೈಯುತ್ತಾ ರಾತ್ರಿ ಹೊತ್ತಿಗೆ ಮನೆ ತಲುಪುತ್ತಾರೆ. ಮತ್ತೆ ಬೆಳಗ್ಗೆ ಏನೂ ಆಗಿಲ್ಲವೆಂಬಂತೆ ಕೆಲಸ ಶುರುಮಾಡುತ್ತಾರೆ. ಕಣ್ಣಲ್ಲಿ ಆಯಾಸದ ಸುಳಿವೇ ಇರುವುದಿಲ್ಲ. ವಯಸ್ಸಾಗಿದ್ದು ಸುಕ್ಕುಗಟ್ಟಿದ ಹಣೆಯಿಂದಷ್ಟೇ ಗೊತ್ತಾಗುತ್ತದೆ.
ಇದು ನಡುವಯಸ್ಕರ ಕತೆ. ಇನ್ನು ಹದಿಹರೆಯದ ಹುಡುಗರಿಗೆ ಕೆಲಸವೇ ಇಲ್ಲ. ಅವರು ಯಥಾಶಕ್ತಿ ವಾಲಿಬಾ್, ಕ್ರಿಕೆ್, ಚೆನ್ನೆಮಣೆ, ಚದುರಂಗ- ಮುಂತಾದ ಆಟಗಳಲ್ಲಿ ತೊಡಗಿಕೊಂಡಿದ್ದವರು. ಬೇಸಗೆಯ ಸಂಜೆಗಳಲ್ಲಿ ಯಕ್ಪಗಾನವೋ ನಾಟಕವೋ ಸಂಗೀತ ಸಂಜೆಯೋ ಏನಾದರೊಂದು ಹತ್ತಿರದ ಪಟ್ಟಣದಲ್ಲಿ ನಡೆದರೆ ಅಲ್ಲಿ ಇವರೆಲ್ಲ ಹಾಜರು. ಅದಾದ ಮೇಲೆ ಸಮೀಪದ ಚಿತ್ರಮಂದಿರದ ಮುಂದೆ ಇವರ ಪಾಳಿ. ಅಂತೂ ಸಂಜೆಯ ಹೊತ್ತು ಊರಿಗೆ ಕಾಲಿಟ್ಟರೆ ತರುಣರೋ ತರುಣರು.
ಅಂಥ ಊರುಗಳು ಈಗ ಹೇಗಾಗಿವೆ ಗೊತ್ತೇ? ಆ ಊರುಗಳಲ್ಲಿ ತರುಣರೇ ಇಲ್ಲ. ಯೌವನ ಆ ಬೀದಿಗಳಲ್ಲಿ ಮೆರವಣಿಗೆ ಹೊರಟು ದಶಕಗಳೇ ಕಳೆದಿವೆ. ಯುವ ತಲೆಮಾರು ಹಲವಾರು ಹಳ್ಳಿಗಳಲ್ಲಿ ಕಾಣಸಿಗುವುದೇ ಇಲ್ಲ. ನೆರಿಗೆ ಚಿಮ್ಮಿಸುತ್ತಾ ನಡೆಯುವ ಹುಡುಗಿಯರಿಲ್ಲದ, ಹುಸಿ ಗಾಂಭೀರ್ಯದಿಂದ ಚಿಗುರುಮೀಸೆ ತಿರುವಿಕೊಳ್ಳುತ್ತಾ ತುಟಿಯಂಚಲ್ಲೇ ನಗುವ ಹುಡುಗರಿಲ್ಲದ ಹಳ್ಳಿಯನ್ನು ಊಹಿಸಿಕೊಳ್ಳಿ. ಅದೊಂದು ಘಟನೆಗಳೇ ಇಲ್ಲದ ದಿನದಂತೆ ನೀರಸವಾಗಿರುತ್ತದೆ. ಅಂಥ ವಾತಾವರಣ ಪ್ರತಿ ಹಳ್ಳಿಯಲ್ಲೂ ಇದೆ.
ಅಷ್ಟೆ ಅಲ್ಲ, ಮೊದಲೆಲ್ಲ ಒಂದು ಹಳ್ಳಿಯನ್ನು ಅಲ್ಲಿ ಕೂತು ಬರೆಯುತ್ತಿರುವ ಲೇಖಕರ ಹೆಸರಿನಿಂದಲೇ ಗುರುತಿಸುವಷ್ಟು ಎಲ್ಲರೂ ಓದಿಕೊಂಡಿರುತ್ತಿದ್ದರು. ಬೀರಣ್ಣ ನಾಯಕ ಮೊಗಟಾ, ಗೋಪಾಲಕೃಷ್ಣ ವಂಡ್ಸೆ, ನಿರಂಜನ ವಾನಳ್ಳಿ.. ಹೀಗೆ ಹಂದ್ರಾಳ, ಬಳ್ಳಾರಿ, ಚೊಕ್ಕಾಡಿ, ಬರಗೂರು, ನಾಗತಿಹಳ್ಳಿಯಂಥ ಊರುಗಳೆಲ್ಲ ಅಲ್ಲಿ ಕೂತು ಬರೆಯುತ್ತಿದ್ದ ಲೇಖಕರಿಂದಾಗಿಯೇ ಪ್ರಸಿದ್ಧವಾಗಿದ್ದವು. ಒಂದೊಂದು ಹಳ್ಳಿಯಲ್ಲೇ ಹತ್ತಾರು ಲೇಖಕರು ಸಿಗುತ್ತಿದ್ದರು. ಅವರೆಲ್ಲ ವಾರಪತ್ರಿಕೆಗಳಿಗೆ, ಮಾಸಪತ್ರಿಕೆಗಳಿಗೆ, ದಿನಪತ್ರಿಕೆಗಳ ದೂರುಗಂಟೆ, ವಾಚಕರವಾಣಿ ವಿಭಾಗಕ್ಕೆ ಬರೆಯುತ್ತಿದ್ದರು. ಕತೆ ಚೆನ್ನಾಗಿದೆ ಎಂದೋ ಆತ್ಮಕ್ಕೆ ಸಾವಿಲ್ಲ ಎಂದೋ ಪತ್ರ ಬರೆಯುತ್ತಿದ್ದರು. ಒಬ್ಬೊಬ್ಬ ಸಂಪಾದಕನ ಮುಂದೆಯೂ ಅಕ್ಪರಶಃ ನೂರ ತೊಂಬತ್ತೆಂಟು ಲೇಖನಗಳಿರುತ್ತಿದ್ದವು. ಆ ಲೇಖನಗಳನ್ನು ಪ್ರಕಟಿಸಿ ಎಂದು ಪತ್ರಗಳನ್ನು ಬರೆಯುವವರಿದ್ದರು. ಪತ್ರಿಕಾ ಸಂಪಾದಕರೋ ಸಹಲೇಖಕರೋ ಮತ್ತೊಂದು ಹಳ್ಳಿಗೆ ಹೋದರೆ ಅಲ್ಲಿಯ ಪತ್ರಿಕಾ ಏಜಂಟನ ಮೂಲಕ ಆ ಹಳ್ಳಿಯ ಲೇಖಕನ ಮನೆ ಪತ್ತೆ ಮಾಡಬಹುದಾಗಿತ್ತು. ಹಲವಾರು ಗೆಳೆಯರು ಹುಟ್ಟಿಕೊಳ್ಳುತ್ತಿದ್ದುದು ಹಾಗೆಯೇ.
ಆದರೆ ಇವತ್ತು ಪತ್ರಿಕೆಗಳಿಗೆ ಹಳ್ಳಿಗಳಿಂದ ಲೇಖನಗಳು ಬರುತ್ತಿಲ್ಲ. ಹೊಸ ಹೊಸ ಲೇಖಕರು ಬರೆಯುತ್ತಿಲ್ಲ. ಹೊಸ ಹೆಸರುಗಳು ಕಾಣಿಸುತ್ತಿಲ್ಲ. ಅದೇ ಹಳೆಯ ಲೇಖಕರೇ ಹೊಸ ಥರ ಬರೆಯಲು ಯತ್ನಿಸುತ್ತಾರೆ. ಅದನ್ನು ಯುವಕರು ಓದುವುದಿಲ್ಲ. ಅದರ ಬಗ್ಗೆ ಚರ್ಚಿಸುವುದಿಲ್ಲ. ಲೋಹಿಯಾ ವಾದ ಯಾವತ್ತೋ ಸತ್ತು ಹೋಗಿದೆ. ಮಾರ್ಕ್ಸನ ಬಗ್ಗೆ ಅನೇಕರಿಗೆ ಗೊತ್ತಿಲ್ಲ. ಹಿಟ್ಲರ್ ಮೇಲೆ ಯಾರಿಗೂ ಸಿಟ್ಟಿಲ್ಲ. ಗಾಂಧೀವಾದ ಶೂದ್ರನ ಸೊತ್ತಾಗಿಬಿಟ್ಟಿದೆ.
ಇದು ಸಾಮಾಜಿಕ ಸ್ಥಿತ್ಯಂತರದ ಮಾತಾದರೆ, ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿಯೂ ಇಂಥದ್ದೇ ಶೂನ್ಯ ಎಲ್ಲೆಲ್ಲೂ ಇದೆ. ಆಧ್ಯಾತ್ಮಿಕವಾಗಿಯೂ ಅದರ ಪ್ರಭಾವಗಳನ್ನು ನೋಡಬಹುದು. ಒಂದು ಕಾಲದಲ್ಲಿ ಲೇಖಕರನ್ನು ಗಾಢವಾಗಿ ಪ್ರಭಾವಿಸಿದ್ದ ಜಿಡ್ಡು ಕೃಷ್ಣಮೂರ್ತಿ, ರಜನೀ್, ವಿವೇಕಾನಂದ, ಪರಮಹಂಸ ಮುಂತಾದವರು ಕಣ್ಮರೆಯಾಗಿದ್ದಾರೆ. ಯಾವ ಹುಡುಗನೂ ತನ್ನ ಓದುವ ಕೋಣೆಯಲ್ಲಿ ಇವತ್ತು ವಿವೇಕಾನಂದರ ಫೋಟೋ ಅಂಟಿಸಿಕೊಳ್ಳುವುದಿಲ್ಲ. ಕಣ್ಮುಂದೆ ವಿವೇಕಾನಂದರನ್ನು ಇಟ್ಟುಕೊಂಡು ಟೀವಿಯಲ್ಲಿ ಮಲ್ಲಿಕಾ ಶೆರಾವ್ಳ ನಗ್ನಾವತಾರವನ್ನು ನೋಡುವಾಗ ಆತನನ್ನು ದ್ವಂದ್ವ ಕಾಡುತ್ತದೆ.
ಇದು ಒಂದು ಮುಖ. ಇನ್ನೊಂದು ಕಡೆ ಪುಟ್ಟ ಹಳ್ಳಿಗಳಲ್ಲಿ ಒಂದಷ್ಟು ಹರಟೆ ಕೇಂದ್ರಗಳಿದ್ದವು. ಅವು ಹಳೆಯ ಕಾಲದ ಸೇತುವೆ, ಟೈಲ್ ಅಂಗಡಿ, ಪತ್ರಿಕಾ ಏಜಂಟನ ಪುಟ್ಟ ಸ್ಟಾಲು, ನಾಲ್ಕಾಣೆಗೆ ಒಂದು ಟೀ ಮಾರುತ್ತಿದ್ದ ಶೆಟ್ಟರ ಹೊಟೆಲ್ಲು, ಹೊಳೆತೀರದ ಬಂಡೆಗಲ್ಲು. ಇವತ್ತು ಇವೆಲ್ಲ ಅನಾಥವಾಗಿವೆ. ಟೈಲ್ ಅಂಗಡಿಗೆ ಕಾಲಿಡುವುದನ್ನೇ ಹಳ್ಳಿ ಮತ್ತು ಪಟ್ಟಣದ ಹುಡುಗರು ಮರೆತಿದ್ದಾರೆ. ಶೇಡೆ್ ಜೀ್‌ಸಗೆ ಹುಡುಗಿಯರು ಮಾರು ಹೋಗಿದ್ದಾರೆ.
ಎಲ್ಲಕ್ಕಿಂತ ಮುಖ್ಯವಾಗಿ ಒಂದೂರಿಗೂ ಇನ್ನೊಂದೂರಿಗೂ ಇರುವ ವ್ಯತ್ಯಾಸ ಬದಲಾಗಿದೆ. ಅರೇಅಂಗಡಿಯಲ್ಲಿರುವ ರಾಮತೀರ್ಥಕ್ಕೂ ದರ್ಬೆಯಲ್ಲಿರುವ ಲಕ್ಪ್ಮಣ ತೀರ್ಥಕ್ಕೂ ಏನು ಫರಕು ಎಂದು ಕೇಳಿದರೆ ಆಯಾ ಊರಿನ ಮಂದಿಯೇ ನಿಬ್ಬೆರಗಾಗುತ್ತಾರೆ. ಯಾವುದೇ ಊರಿಗೆ ಹೋದರೂ ಅದೇ ತಿಂಡಿ ತೀರ್ಥ ಸಿಗುತ್ತದೆ. ಅದೇ ರುಚಿಯ ಕೋಕಾಕೋಲಗಳು ಎಲ್ಲೆಲ್ಲೂ ಇವೆ. ಎಲ್ಲರೂ ಒಂದೇ ಥರದ ಬಟ್ಟೆ ತೊಟ್ಟುಕೊಂಡು ಓಡಾಡುತ್ತಾರೆ. ಎಲ್ಲ ಊರಿನ ಮಕ್ಕಳೂ ಒಂದೇ ಥರ ಮಾತಾಡುತ್ತವೆ. ಒಂದೇ ನರ್ಸರಿ ರೈಮನ್ನು ಒಂದೇ ರಾಗದಲ್ಲಿ ಹಾಡುತ್ತವೆ. ಜಾನಿ ಜಾನಿ ಯೆ್ ಪಪ್ಪಾ...
ಜಾಗತೀಕರಣದ ಬಗ್ಗೆ ಮಾತಾಡುವವರು ಇದನ್ನೆಲ್ಲ ಗಮನಿಸುವುದು ಒಳ್ಳೆಯದು. ಒಂದು ಊರು ಅಲ್ಲಿಯ ಜೀವನ ಅಲ್ಲಿಯ ತರುಣತರುಣಿಯರು ಆ ಊರಲ್ಲಿ ಮಳೆಗಾಲದಲ್ಲಿ ಅಗಲವಾಗಿ ಬೇಸಗೆಯಲ್ಲಿ ಕಿರಿದಾಗಿ ಹರಿಯುವ ನದಿ, ಅಲ್ಲಲ್ಲಿಯ ಮಂದಿ ತೊಡುವ ಉಡುಪು- ಎಲ್ಲವೂ ವಿಶಿಷ್ಟವಾಗಿರುತ್ತಿತ್ತು. ಜಾಗತೀಕರಣಕ್ಕಿಂತ ಮೊದಲೇ ಶಿಕ್ಪಣ ಇದನ್ನೆಲ್ಲ ಬದಲಾಯಿಸಿತು. ಓದಿದವರ ಹವ್ಯಾಸಗಳೂ ಓದದವರ ಹವ್ಯಾಸಗಳೂ ಬೇರೆಬೇರೆಯಾದವು. ಹಳ್ಳಿಗಳಿಂದ ತರುಣರೆಲ್ಲ ದೊಡ್ಡ ಊರುಗಳಿಗೆ ವಲಸೆ ಹೋದರು. ಪ್ರತಿಯೊಂದು ಹಳ್ಳಿಯೂ ನಡುವಯಸ್ಕರ ನಿಲ್ದಾಣದಂತೆ ಕಾಣಿಸತೊಡಗಿತು. ಆ ನಡುವಯಸ್ಕರು ಯಾವ ನಿರ್ಧಾರವನ್ನೂ ಕೈಗೊಳ್ಳಲಾರದೆ, ಕಿರುಚಲಾರದೆ, ತೊಂದರೆಯಾದಾಗ ದೊಡ್ಡ ದನಿಯಲ್ಲಿ ಹೇಳಿಕೊಳ್ಳಲಾರದೆ ವಿಚಿತ್ರ ದಿಗ್ಭ್ರಾಂತಿಯಲ್ಲಿ ಬದುಕತೊಡಗಿದರು.
ಈಗ ಅವರಿಗೆಲ್ಲ ವಯಸ್ಸಾಗಿದೆ.
*****
ಇದಕ್ಕೆ ಸಂಬಂಧಿಸಿದಂತೆ ಮತ್ತೊಂದು ಪುಟ್ಟ ಪ್ರಸಂಗವನ್ನು ಹೇಳಬೇಕಿದೆ. ಇತ್ತೀಚೆಗೆ ಗೆಳೆಯ ಬಿ. ಗಣಪತಿ ಅಮಾಸೆಗೌಡ ಎಂಬ ವ್ಯಕ್ತಿಯೊಬ್ಬನ ಕತೆ ಹೇಳಿದರು. ಈ ಅಮಾಸೆಗೌಡ ಗಜಾನನ ಹೆಗಡೆಯವರ ಮನೆಯಲ್ಲಿ ದುಡಿಯುತ್ತಿದ್ದ. ಆತನ ಸುಂದರಿ ಹೆಂಡತಿಯನ್ನು ಗಜಾನನ ಹೆಗಡೆ ತನ್ನವಳನ್ನಾಗಿ ಮಾಡಿಕೊಂಡಿದ್ದ. ಅದನ್ನು ಪ್ರತಿಭಟಿಸುವ ಆರ್ಥಿಕವಾದ ಮತ್ತು ಸಾಮಾಜಿಕವಾದ ತಾಕತ್ತು ಅಮಾಸೆ ಗೌಡನಿಗೆ ಇರಲಿಲ್ಲ. ಆದರೆ ಅವರ ಪ್ರತಿಭಟನೆ ವ್ಯಕ್ತವಾಗದೇ ಇರುತ್ತಿರಲಿಲ್ಲ. ಅದಕ್ಕೆ ಆತ ಒಂದು ಉಪಾಯ ಕಂಡುಕೊಂಡಿದ್ದ.
ಹೆಂಡತಿಯನ್ನು ಅಪಾರವಾಗಿ ಪ್ರೀತಿಸುವ ಅವಳನ್ನು ಯಾವ ಕಾರಣಕ್ಕೂ ನೋಯಿಸಲು ಇಚ್ಚಿಸದ ಆತ ರಾತ್ರಿ ಕಂಠಪೂರ್ತಿ ಕುಡಿಯುತ್ತಿದ್ದ. ಕುಡಿದ ಮತ್ತಿನಲ್ಲಿ ಮನೆಗೆ ಬಂದು ಹೆಂಡತಿಯನ್ನು ಜಪ್ಪುತ್ತಿದ್ದ. ಮನೆಗೆ ಬರುವ ಹಾದಿಯಲ್ಲಿ ಗಜಾನನ ಹೆಗಡೆಯವರ ಮನೆ ಮುಂದೆ ನಿಂತು ` ಏನೋ.. ಗಜಾನನ ಹೆಗಡೆ... ನಿನಗೆ ಮಜಾ ಮಾಡೋದಕ್ಕೆ ನನ್ನ ಹೆಂಡ್ತೀನೇ ಬೇಕೇನೋ... ಸೂ..ಮಗನೇ.. ನನಗೂ ನಿನ್ನ ಹೆಂಡ್ತೀನ ಕೊಡೋ... ಮಾನಗೆಟ್ಟೋನೆ' ಎಂದು ಏರುದನಿಯಲ್ಲಿ ಬೈಯುತ್ತಿದ್ದ. ಅದನ್ನು ಕೇಳಿಸಿಕೊಂಡ ನಂತರವೇ ಗಜಾನನ ಹೆಗಡೆಯ ಕುಟುಂಬ ಮಲಗುತ್ತಿದ್ದುದು.
ಮಾರನೆಯ ಬೆಳಗ್ಗೆ ಎಂಟೂವರೆಗೆಲ್ಲ ನಿಯತ್ತಾಗಿ ಅದೇ ಗಜಾನನ ಹೆಗಡೆಯ ಮನೆ ಮುಂದೆ ಹಾಜರಾಗಿ ದೇಹವನ್ನು ಹಿಡಿಯಾಗಿಸಿ ಅವರ ಮುಂದೆ ನಿಲ್ಲುತ್ತಿದ್ದ. ಅವರು ಗಂಭೀರವಾಗಿ ರಾತ್ರಿ ಜಾಸ್ತಿಯಾಯ್ತೇನೋ ಅನ್ನುತ್ತಿದ್ದರು. ಆತ ಅಬೋಧ ಮುಗ್ಧತೆಯ ನಗು ನಕ್ಕು `ಕಳ್ಳಮುಂಡೇದು ಸೋಮಿ. ಕುಡಿದದ್ದೂ ಗೊತ್ತಾಗಲ್ಲ, ಮನೆಗೆ ಹೋಗಿದ್ದೂ ಗೊತ್ತಾಗಲ್ಲ' ಅನ್ನುತ್ತಿದ್ದ.
ಪ್ರತಿಭಟನೆ, ವಿರೋಧ ಹೇಗೆಲ್ಲ ವ್ಯಕ್ತವಾಗುತ್ತದೆ ನೋಡಿ. ಬಹುಶಃ ಅಮಾಸೆಗೌಡನ ಹೆಂಡತಿಯ ಹಾದರ ಕೂಡ ಆಕೆಯ ಪ್ರತಿಭಟನೆಯ ಅಸ್ತ್ರವೇ ಇದ್ದೀತೋ ಏನೋ? ಆದರೆ ಸಾಮಾಜಿಕವಾಗಿ ಆಕೆ ತನ್ನ ಗಂಡನನ್ನು ಶೋಷಿಸುತ್ತಿರುವವನ ಜೊತೆ ಸೇರಿ ಗಂಡನ ಅನ್ಯಾಯವನ್ನು ವಿರೋಧಿಸುತ್ತಿದ್ದಳಾ ಅನ್ನುವುದನ್ನು ನೆನೆದಾಗ ಗೊಂದಲವಾಗುತ್ತದೆ.
******
ಈಗ ಹೇಳಿ!
ಜಾಗತೀಕರಣವನ್ನಾಗಲೀ ಬದಲಾದ ಕಾಲಮಾನವನ್ನಾಗಲೀ ಅಷ್ಟು ಸುಲಭವಾಗಿ ಹಿಡಿದಿಡುವುದು ಸಾಧ್ಯವೇ?

12 comments:

Anonymous said...

Preetiya Jogi,
This visit I found Bangalore also to be devoid of young crowd at least in my family circle. Every youngster in the family is away in the US/UK and I see the elderly parents discussing about NYC / California vaibhavagalu. This made me re-call an incident that happend ten years back. I used to work in the US and had met an youngster and in his own words:
"Sister..I think my parents are happy b'cos I work here in the US, their status has improved in the friends and family circle..in my heart I know that I want to be back in India..starngely, but for my little niece no-one has ever asked me to go back home" So the tarunaru that you have mentioned may have migrated to the cities and sadly the youngsters from the city are elsewhere:(

Prashanth M said...

modala saalugaLanna Odi, oMdu haLLiya kathe heltiddeera andukonde... aadare neevu hELidaaga adu haLLi-haLLigaLa kathe :(

Anonymous said...

Jogiyavare Namaskaragalu,

Nanoo kooda karavali teerada ondu chikka halliya taruna. namma halliyallu hechchenilla 10 varshada hinde jana tumbi tulukaduttidaru. namma balya adeshtu saviyagittendere adannu varnisalu nannalli ashtondu panditya illa. aadare eega namma halliyalli janare viralavagi bittiddare... namma suttamuttalina manegalalli 2 manegalu janarillade nelasamvagide... eegeega halliyalli janisuva makkalige balya endare nirmanusha manegalallina hedarike endu vivarisuvantaguvudeno endu tumba bhayavaguttade. adare halliyalli makkalu huttalu balya saviyalu halliyalli nelasi samsara maduvavaru bekallave.. addarinda ee bhayavu hechchu kadadagide.. idu jagateekarana tanditta karala vishadavo.. athava halligalallina abhivruddiya kadege janasamanyarige, sarkarakke iruva nirlakshyavo, mattu tatparinama alli untada avakasha heenateyo gottilla... aadare hallige hintirugidaga... tumba novaguttade... munde bharatada halligalellavoo namma pakkada manegalante nelasamavadare? eshtaramattada samskritika, sahityika nashtgalaguttavo?
Nijavagiyoo tumba olleya prastutate iruva lekhana... nammoorina bagge barediddeera annisitu... kangalalli neeru...

Dhanyavagalu,
Giriraj

vee ಮನಸ್ಸಿನ ಮಾತು said...

ಹಳ್ಳಿಗಳಲ್ಲಿ ಯುವಜನತೆ ಮರೆಯಾಗಲು ಜಾಗತೀ (ಕಾ)ಕರಣ ವೆನ್ನುತ್ತೀರಾ?.... ನಮ್ಮ ಬೆಂಗಳೂರಿನಲ್ಲಿ ಧೂಳುಮಯ ವಾತಾವರಣದಿಂದ ಎಲ್ಲರೂ ಒಂದೇ ಥರಹ ಕಾಣುತ್ತಿದ್ದಾರೆ... ಧುನಿಯಾ ಸಿನಿಮಾ ನೋಡಿದ ಹಾಗೆ ಆಗುತ್ತಿದೆ.

Anonymous said...

janaki coloumnnalli banda hale baraha bittu berenadroo hosadu bareyiri marayare !
- chintajanaka

Keshav Kulkarni said...

ಜೋಗಿ,
ತುಂಬ ಗಂಭೀರವಾದ ವಿಚಾರವನ್ನು ತುಂಬ ಚೆನ್ನಾಗಿ ಬರೆದಿದ್ದೀರಾ, ಇಲ್ಲಿ ದೂರದ ಇಂಗ್ಲಂಡಿನಲ್ಲಿ ಪರಿಸ್ಥಿತಿ ನೀವು ಬರೆದಿರುವುದಕ್ಕಿಂತಲೂ ಹದೆಗೆಟ್ಟಿದೆ. ಈ ದೇಶದಲ್ಲಿ, ಒಂದು ಮನೆ ನೋಡಿದರೆ ಹೆಚ್ಚುಕಡಿಮೆ ಎಲ್ಲ ಮನೆ ನೋಡಿದಂತೆ; ಒಂದು high street (ಪೇಟೆ ಬೀದಿ) ನೋಡಿದರೆ ಎಲ್ಲ ಊರಿನ high street ನೋಡಿದಂತೆ, ಅದೇ Tesco, Sainsburys, Currys, M & S....ಸಾಲು ಸಾಲಾಗಿ ಅವೇ ಅಂಗಡಿಗಳು, ಅವೇ ವಸ್ತುಗಳು; ಒಂದು ಊರನ್ನು ನೋಡಿದರೆ ಎಲ್ಲ ಊರುಗಳನ್ನೂ ನೋಡಿದಂತೆ (ಸ್ವಲ್ಪ ಮಟ್ಟಿಗೆ ಲಂಡನ್ ಹೊರತುಪಡಿಸಿ). ಅದಕ್ಕೇ, ಇಲ್ಲಿ ಯಾರು ಎಲ್ಲಿಂದ ಬಂದರೂ ಲಂಡನ್ ನೋಡುತ್ತಾರೆ, ಲಂಡನ್ ನೋಡಿದರೆ ಇಡೀ ಇಂಗ್ಲಂಡನ್ನು ನೋಡಿದಂತೆ, ಈ ಮಾತಿನಲ್ಲಿ ಒಂಚೂರೂ ಉತ್ರ್ಪೇಕ್ಷೆ ಇಲ್ಲ. ಈ ಪ್ರಕ್ರಿಯೆಗೆ clown towns ಎನ್ನುತ್ತಾರೆ, ಎಲ್ಲಿ ಹೋದರೂ ಅದೇ Pepsi, ಅದೇ cola. ಮೊನ್ನೆ ಬೆಂಗಳೂರಿಗೆ ಬಂದಿದ್ದೆನಲ್ಲ, ಅಲ್ಲಿನ supermallಗಳ ತುಂಬ ಇಲ್ಲಿ ನೋಡುವ brandಗಳೇ! ಅಯ್ಯೋ, ಜಾಗತೀಕರಣವೇ?

ಕೇಶವ (www.kannada-nudi.blogspot.com)

ಕನಸು said...

ಜೋಗಿ ಸರ್
ಮಕ್ಕಳನ್ನು ಪೇಟೆಗಳಿಗೆ ಮಾರಿಕೊಂಡು ಹಳ್ಳಿಗಳಲ್ಲಿ ಉಳಿದು ಬಿಟ್ಟ ಬಹಳ ಮಂದಿ ನಡುವಯಸ್ಕರಿಗೆ,ಚಿಕ್ಕಂದಿನಿಂದಲೇ ಅಮೇರಿಕಾದ ಕನಸು ತುಂಬಿ ಮಕ್ಕಳನ್ನು ಸಾಗರ ದಾಟಿಸಿದ ನಗರವಾಸಿಗಳಿಗೆ ಈ ಕುರಿತು ಹೆಚ್ಚೇನೂ (ನಾವು ಅಂದುಕೊಳ್ಳುವಷ್ಟು} ದುಖವಿಲ್ಲ. ಅದೇ ಅವರಿಗೆ ಹೆಮ್ಮೆ.ತಮ್ಮ ಮಕ್ಕಳು ಈ ಹಳ್ಳಿಯಿಂದ ತಪ್ಪಿಸಿಕೊಳ್ಳಲಿ,ವಿದೇಶ ಸುತ್ತಲಿ ಎಂಬ ಆಸೆಯೇ ಹೆಚ್ಚು. ಆದರೆ ವಯಸ್ಸು ಇಳಿದಂತೆ ಕಾಡುವ ಒಂಟಿತನ...........
ಇದೇ ಮುಂದುವರಿದರೆ ಮುಂದೊಮ್ಮೆ ಹಳ್ಳಿಗಳೆಲ್ಲಾ ಹೇಗಾಗಬಹುದು.
ಭಯ ಆಗುತ್ತೆ.

ಇಷ್ಟೆಲ್ಲಾ ಯೋಚಿಸುವ, ಹಳ್ಳಿಗಳನ್ನು ಬಿಟ್ಟು ಬಂದ ನಾವು ಒಂದು ವಾರ ಹಳ್ಳಿನಲ್ಲಿ ಠಿಕಾಣಿ ಹೂಡಿ ಹಳ್ಳಿಯ ಶುದ್ಧ ಪರಿಸರವನ್ನು ಹೊಗಳುತ್ತೀವಿ. ರಜಾ ಕಳೆದು ಹಳ್ಳಿ ಬಿಡುವಾಗ ಹಳಹಳಿಸುತ್ತೀವಿ.ಆದರೆ ಮತ್ತೆ ಹಳ್ಳಿಗೆ ವಾಪಾಸ್ ಹೋದರೆ ಸಂತೋಷವಾಗಿ ಇರುತ್ತೀವಾ.......
ಪ್ರಶ್ನೆ ಕಾಡುತ್ತೆ.

Dr.ASHOK said...

sir i am extremely sorry to say this, i recieved your mail, but i don't why only your mail is not opening in kannada font . It is opening in some unreadable format and i don't know how to convert it into a readable format, i was not able to know what you were trying to tell , i kindly request you mail me in english so that i can know what you were trying to tell.
with regagds,
Dr.Ashok.K.R

Dr.ASHOK said...

ಮಾನ್ಯರೇ,
ನಿಮ್ಮ ಈ-ಮೇಲ್ ತಲುಪಿತು. ಬೇಸರದ ಸ೦ಗತಿಯೆ೦ದರೆ ನಿಮ್ಮ ಕನ್ನಡದ ಬರಹ ಓದಲಾಗದ ಫಾ೦ಟಿನಲ್ಲಿ ನನ್ನ ಮೇಲ್ ಬಾಕ್ಸಿನಲ್ಲಿದೆ. ಅದನ್ನು ಹೇಗೆ ಪರಿವರ್ತಿಸಬೇಕೆ೦ಬುದು ತಿಳಿಯುತ್ತಿಲ್ಲ, ಮೇಲಾಗಿ ನನ್ನ ಬಳಿ ಸ್ವ೦ತ ಕ೦ಪ್ಯೂಟರ್ ಇಲ್ಲ, ಹೊರಗಿನ ಕ೦ಪ್ಯೂಟರ್ ಗಳನ್ನು ಹೆಚ್ಚು ಬಳಸುತ್ತೇನೆ.
ದಯವಿಟ್ಟು ತಾವು ಆ೦ಗ್ಲ ಭಾಷೆಯಲ್ಲೊಮ್ಮೆ ಮೇಲ್ ಮಾಡಿದರೆ ಬಹಳ ಅನುಕೂಲವಾಗುತ್ತೆ,
ಇ೦ತಿ ವ೦ದನೆಗಳೊ೦ದಿಗೆ,
ಅಶೋಕ್.ಕೆ.ಆರ್.

VENU VINOD said...

ನನ್ನ ಊರಲ್ಲೂ ಈಗ ಹಳೆಯ ಮುಖಗಳೇ. ನನ್ನನ್ನೂ ಕಾಡುತ್ತಿದ್ದ ಯೋಚನೆಗಳನ್ನು ನೀವು ಅಕ್ಷರರೂಪಕ್ಕಿಳಿಸಿದ್ದೀರಿ

Srinivas Kulkarni Turvihal said...

Nimma leKhana oDuvademdare
akshara sammohana kke silukuvadu ende aratha

Anda Haage nanna blog

http://kavimanasu.blogspot.com/blog nalli
Kannadalli hEge haakabeku anta gottilla !
adikke kanglish nalli

Srinivas Kulkarni Turvihal.

Anonymous said...

come to think of it, as a woman, I would find a great sense of pay back to an abusive husband by sleeping with his boss.