Tuesday, August 19, 2008

ಒಂದು ವಿಪ್ಲವ ರಾತ್ರಿಗೆ

ಕಟ್ಟಕಡೆಯ ಕರೆಗೆ ಕಾಯುತ್ತ ಕೂತ
ಕನಕನ ಹಾಗೆ ಕಿಂಡಿಯಿರದ
ಗೋಡೆಯಾಚೆಗೆ ಅರೆಬೆತ್ತಲೆ ಮೈ.
ಬಿಲ್ಲಿನ ಹಾಗೆ ಬಾಗಿದ ಬೆನ್ನಿಗೆ ಯಜುರ್ವೇದಿಗಳ
ಕುಹಕ ಮಂತ್ರೋಚ್ಚಾರ, ಶಂಖಜಾಗಟೆಯ ಜೊತೆ
ಉಚ್ಛಾಟನೆಯ ಮೊದಲ ಹಂತ.
ಅಶ್ವಯುಜ ಕಾರ್ತೀಕ-ಶರದೃತು

ಕಂಪ್ಯೂಟರಿನ ಮೇಲೆ ಬೀಜಾಕ್ಷರದ
ಕುರುಹು. ಯಾರ ಅಂಗಕ್ಕೋ ತೆಕ್ಕೆಬಿದ್ದ
ಲಿಂಗಕ್ಕೆ ಅಂಗಮರ್ದನದ
ನರುಗಂಪು.
ಶ್ರಾವಣದ ಮಳೆಗೆ
ನಡುರಾತ್ರಿಯ ಏದುಸಿರ ಲಯ.
ಮೇಷ ವೃಷಭ ಮಿಥುನ.

ಪಂಚತಂತ್ರಕ್ಕೆ
ಚತುರೋಪಾಯದ ಬೆಂಗಾವಲು.
ಚತುಷ್ಪದದಲ್ಲಿ ಭಾಮಿನಿಯ ನುಡಿಸಿದರೆ
ಕೊನೆಗೂ ಷಟ್ಪಧಿಯ ಶ್ರೀರಕ್ಷೆ.
ಮುಗಿಲಿಂದ ಮಿಂಚಿಳಿದು
ಮೈತುಂಬ ನವಿಲುಗರಿ.
ಚಂದ್ರಮಂಚಕ್ಕೆ ಬಂದ ಚಕೋರಿಗೆ
ಚಾತಕ ಪಕ್ಷಿಯ ಸುಡುದಾಹ!
ಪ್ರಭವ ವಿಭವ ಶುಕ್ಲ.

ಬಂಡೆಹೊತ್ತು ಬೆಟ್ಟ
ಹತ್ತುವ ಇಳಿವ ಸಿಸಿಫಸ್ಸನ ಕರ್ಮಕಾಂಡ.
ತುದಿಯೇರಿದ ಮರುಕ್ಷಣ
ತಳಸ್ಪರ್ಶಿ ಅನುಭವ.
ನಿರರ್ಥಕತೆಯ ಅಂತ್ಯಕ್ಕೆ
ಅನೂಹ್ಯ ತಿರುವು
ಮಾರ್ಚ್ ಏಪ್ರಿಲ್ ಮೇ
or May not.
(ಹಾಯ್ ಬೆಂಗಳೂರಲ್ಲಿ ಪ್ರಕಟಗೊಂಡಿದೆ)

12 comments:

Anonymous said...

ಹೊರಗೆ ಬೀಳುತ್ತಿರುವ ಮಳೆಯ ನಡುವೆ ಬೆಚ್ಚನೆ ಸಾಲುಗಳನ್ನು ಓದಿಸಿದಿರಿ..;-)
ಒಂದೇ ಓದಿಗೆ ಚಿತ್ತಾದೆ. ಮರು ಓದುಗಳು ಏನು ಹೇಳಬಹುದು? ಕುತೂಹಲ.
ಕಡೆಯ ಎಂಟು ಸಾಲುಗಳು ಮನಸ್ಪರ್ಶಿ.
ಸಿಸಿಫಸ್, ಅನೂಹ್ಯ ತಿರುವು, ಮೇ ನಾಟ್...

ಹಾಂ..ರಾತ್ರಿ ಮತ್ತೆ ಈ ಪದ್ಯ ಓದುತ್ತಾ ಕೂತರೆ..
ಶ್ರಾವಣದ ಮಳೆಗೆ
ನಡುರಾತ್ರಿ ಏದುಸಿರ ಲಯ..

-ಅಲೆಮಾರಿ

Anonymous said...

beautiful
-g n mohan

ಟೀನಾ said...

ಜೋಗಿಯವರೆ,
ನಿರರ್ಥಕತೆಯ ಅಂತ್ಯಕ್ಕೆ
ಅನೂಹ್ಯ ತಿರುವು

ಆಹ!! ಅಂದೆ
ಓದಿದ ಮೇಲೆ.
ಒಂದು ಸಣ್ಣ ನಗುವಿನೊಂದಿಗೆ.
-ಟೀನಾ

Harish said...

ಅರ್ಥವಾಗಲಿಲ್ಲ ಸ್ವಾಮಿ. ಈ ಕವಿತೆಯ ಅರ್ಥವನ್ನು ಯಾರಾದರೂ ತಿಳಿಸಿದರೆ ಉಪಕರಿಸಿದಂತಾಗುತ್ತದೆ.

rj said...

ನವ್ಯಕ್ಕಿಂತಲೂ ಕೊಂಚ advanced ಇದ್ದಂತೆ ತೋರಿತು.
ಅದೇನೋ ಮಾಡರ್ನ ಪೇಂಟಿಂಗ್ ಅಂತಾರಲ್ಲ ಹಾಗೆ!
ಹಾಗಾಗಿ ತೀಕ್ಷ್ಣ ಶಬ್ದಗಳ ಇರಿತದಲ್ಲೂ ಒಂಥರಾ ಖುಶಿ ಇದೆ.
ಅನಿರೀಕ್ಷಿತ ತಂತ್ರಗಾರಿಕೆಯಿಂದ ಒಳ್ಳೇ bridge ಕಟ್ಟಿದ್ದೀರಿ ಅನ್ನಬಹುದು..
-ರಾಘವೇಂದ್ರ ಜೋಶಿ.

Anonymous said...

As usual it is loaded! Loads of history, memory, myths and dogmas... and specifically of your extensive reading.

ಕನಕನಿಂದ ಸಿಸಿಫಸ್ಸಿನವರೆಗೆ ಖಂಡಾಂತರಗಳ ಕರ್ಮಕಾಂಡ, ಪಂಚತಂತ್ರ ಮತ್ತು ಚತುರೋಪಾಯ
ಭಾಮಿನಿ ಮತ್ತು ಷಟ್ಪದಿ
ಮುಗಿಲು, ಮಿಂಚು, ನವಿಲುಗರಿ
ಚಂದ್ರ, ಚಾತಕ, ಚಕೋರಿ... ಇವುಗಳ ನಡುವೆ ನಕ್ಷತ್ರಗಳು, ಮಾಹೆಗಳು, ಮಾಸಗಳು, ಸಂವತ್ಸರಗಳು, ಋತುಮಾನಗಳು! ನೆನಪು, ಚರಿತೆ, ಕಥೆ, ಪುರಾಣಗಳಲ್ಲಿ ಮೈ ಕಳೆದುಕೊಂಡ ವಿಪ್ಲವ!! ಶೀರ್ಷಿಕೆಯಲ್ಲಿ `ವಿಪ್ಲವ'ವಿರದಿದ್ದರೆ ಕವಿತೆಯಲ್ಲಿ ಅದು ಕಾಣಲಿಕ್ಕಿಲ್ಲವೇನೋ!!

ಈ ನಡುವೆ ಅರ್ಥವಾಯಿತು ಅಂದುಕೊಂಡರೆ ಅರ್ಥ. ದಕ್ಕಿದಷ್ಟು.

ನಮಸ್ಕಾರ.

anonymous said...

For the intelligent few by the intelligent!! It's more like the 'A' movie. People watched it simply because they didn't want to be dumb in front of others. Bloggers seem to write for few other elite bloggers who are at the same level as the author (who are born with the ability to understand just about everything!) and appreciate the writing in as cryptic way as possible so that other dumbos cannot decipher what's happening!

Anonymous said...

i strongly second the previous comment.

Anonymous said...

i strongly second the previous comment.

Anonymous said...

ನವ್ಯ ಕವಿತೆಗಳಿಗೆ ಅರ್ಥವಿರುವುದಿಲ್ಲ. ಅದು ಅಮೀಬಾ ದ ಹಾಗೆ, ಜೀವ ಉಂಟು, shape ಇಲ್ಲ. ಇಲ್ಲಿರುವ ಅನುಕುಉಲ ನೋಡಿ, ಅದನ್ನು ಹೇಗೆ ಬೇಕಾದರೂ ಚಿತ್ರಿಸಬಹುದು.
DMS

Anonymous said...

I love you..cryptic poet jogi..others may or may not..

Reshma Rao said...

adbhutha sir :)