
ಆತ್ಮೀಯರೇ,
ನನ್ನ ಕಾದಂಬರಿಯೊಂದು ಪ್ರಕಟಣೆಗೆ ಸಿದ್ಧವಾಗುತ್ತಿದೆ. ಅದರ ಹೆಸರು ನದಿಯ ನೆನಪಿನ ಹಂಗು. ನಾನು ತುಂಬ ಹಿಂದೆ ಗೆಳೆಯ ಶಾಮಸುಂದರ್ ಪೋರ್ಟಲ್ಲಿಗೆ ಬರೆದ ಕಾದಂಬರಿ ಇದು. ಅಲ್ಲಿ ನನ್ನ ಹೆಸರು ಪ್ರಕಟವಾಗಿರಲಿಲ್ಲ. ಆಮೇಲೆ ಇದನ್ನು ನನ್ನದೇ ಬ್ಲಾಗಿನಲ್ಲಿ ಹಾಕಲು ಆರಂಭಿಸಿದೆ. ಅದೃಷ್ಟವಶಾತ್ ಅದನ್ನು ಪೂರ್ತಿಯಾಗಿ ಹಾಕವುದು ಸಾಧ್ಯವಾಗಲೇ ಇಲ್ಲ.
ಇದನ್ನು ತಾಂತ್ರಿಕ ಕಾರಣಗಳಿಗಾಗಿ ಕಾದಂಬರಿ ಎಂದು ಕರೆದಿದ್ದೇನೆ ಅಷ್ಟೇ. ಇದಕ್ಕೆ ಕಾದಂಬರಿಯ ಯಾವ ಗುಣವೂ ಇಲ್ಲ. ಅದು ನೆನಪಿನ ದಾಖಲೆಗಳಷ್ಟೇ. ನನ್ನ ನೆನಪಿಗೆ ದಕ್ಕಿದ್ದನ್ನು ಹಾಗ್ಹಾಗೇ ಬರೆದುಕೊಂಡು ಹೋಗಿದ್ದೇನೆ. ಓದುವ ಕುತೂಹಲ ಉಳಿಸಿಕೊಂಡದ್ದು ಗಾಢವಾಗಿ ತಟ್ಟುತ್ತದೆ ಅನ್ನುವುದು ಸುಳ್ಳು. ಗಾಢವಾಗಿ ಏನನ್ನೋ ಕಟ್ಟಿಕೊಡಲು ಹೊರಟಾಗ ಓದುವ ಕುತೂಹಲ ಉಳಿಸಿಕೊಳ್ಳುವುದು ಕಷ್ಟ.
ಕಾದಂಬರಿಗೆ ಅಪಾರ ಸೊಗಸಾದ ಮುಖಪುಟ ಮಾಡಿದ್ದಾರೆ. ಗೆಳೆಯ ಬಿ ಸುರೇಶ್ ಪ್ರಕಟಿಸುವ ಸಾಹಸ ಮಾಡುತ್ತಿದ್ದಾರೆ. ಕಾದಂಬರಿಗೆ ಬಿಡುಗಡೆಯಿಲ್ಲ. ಪುಸ್ತಕ ಸಾಹಿತ್ಯ ಸಮ್ಮೇಳನದ ಹೊತ್ತಿಗೆ ಪುಸ್ತಕದಂಗಡಿಗಳಲ್ಲಿ ಸಿಗುತ್ತದೆ.
ಮುಂದಿನದು ದೇವರಾ ಚಿತ್ತ.
-ಜೋಗಿ
8 comments:
ಹಂಗಿನರಮನೆಯ ಹೊರಗೆ"ಗೆ ಸ್ವಾಗತ
ಆದಷ್ಟು ಬೇಗ ಬರಲಿ.
ಹಿಟ್ ಮೇಲೆ ಹಿಟ್ ಮೇಲೆ ಹಿಟ್ !!
ಕಂಗ್ರಾಟ್ಸ್!!
Jogi avare,
I am waiting for your book. The title is music to our ears. If it's a river novel, I am sure, I will like it more! Wish you the best.
- Tina.
Dear Jogi,
Nadiya nenapina hangu- was very interesting and I use to wait for that regularly. Wish you goodluck with the novel.
regards
Dr.D.M.Sagar
dear tina,
TINA vina Trunamapi na chalathi. ಕಾದಂಬರಿ ತಲುಪಿಸುತ್ತೇನೆ. ಥ್ಯಾಂಕ್ಸ್.
ಡಿಯರ್ ಸಾಗರ್,
ನೀವು ಓದಿ ಮೆಚ್ಚಿದ್ದು ಆತ್ಮವಿಶ್ವಾಸ ಕೊಟ್ಟಿದೆ.
ಮಹೇಶ್, ಥ್ಯಾಂಕ್ಯೂ.
ವಿಕ್ರಮ್, ನಿಮ್ಮ ಬ್ಲಾಗ್ ಚೆನ್ನಾಗಿದೆ. ಒಳ್ಳೆಯ ಕವಿತೆಗಳಿವೆ.
-ಜೋಗಿ
jogi saar,
kaayutta iddeve swami nimma pustakakke ,
bega namma kaayuvike ya hanginida horage baruvante maadi
ಎಲ್ಲ ನದಿಗಳಿಗು ಕಡಲು ಇರುವುದಿಲ್ಲ.........
subtitle..ಚೆನ್ನಾಗಿದೆ......
ಬೈಲೈನ್ ಸುಪರ್! ಒಂದರ ಮೇಲೆ ಒಂದು ಜೋಗಿ ಪುಸ್ತಕಗಳು ಬರ್ತಿರೋದು ಸಖತ್ ಖುಷಿ ವಿಷ್ಯ.
ಕಾಯ್ತಿದೀನಿ ನದಿ ಹರಿದು ಬರೋದನ್ನ...
Post a Comment