ಕಾರ್ತೀಕದ ತಂಪುಹೊತ್ತಲ್ಲಿ ಬೆಚ್ಚಗಿಡುವುದಕ್ಕೊಂದು ಕುರುಕು ಪದ್ಯ ಸಿಕ್ಕರೆ!
ಈ ಜನಪದ ಗೀತೆ ಓದಿ. ಇದು ಸಂವಾದದ ಶೈಲಿಯಲ್ಲಿ ಅವರಿಬ್ಬರ ರಸಿಕತನವನ್ನೂ ಹೇಳುತ್ತಾ ಹೋಗುತ್ತದೆ. ಪ್ರೇಮದ ಉತ್ಕಟತೆಯನ್ನೂ ತೋರುತ್ತದೆ. ಎಲ್ಲಿಂದಲೋ ಶುರುವಾಗಿ ಎಲ್ಲಿಗೋ ತಲುಪುತ್ತದೆ.
ಬಹುಶಃ ಮತ್ತಷ್ಟು ಗಾಢವಾಗಿ ಒಳಹೊಕ್ಕರೆ ಮತ್ತಷ್ಟು ಅರ್ಥಗಳನ್ನೂ ಇದು ಹೊಳೆಯಿಸುತ್ತದೋ ಏನೋ?
ಊರ ಮುಂದಲ ತೋಟ ಮಾಡಯ್ಯ ಚೆನ್ನಾರಿ ಚೆಲುವಾ
ನಿನ್ನ ನೋಡುತ ನೀರ ತರುವೇನೂ
ಊರ ಮುಂದಲ ತೋಟ ಮಾಡಿದರೆ ಚೆನ್ನಾರಿ ಚೆಲುವೆ
ದನ ಕರುಗಳ ಕಾಟ ಬಹಳಲ್ಲೇ
ದನಕರುಗಳ ಕಾಟವಾದಾರೆ ಚೆನ್ನಾರಿ ಚೆಲುವ
ಜಾಲಿ ಕಡಿದು ಬೇಲಿ ನಡಿಸಯ್ಯೋ
ಜಾಲಿ ಕಡಿದು ಬೇಲಿ ನಡಿಸಿದರ ಚೆನ್ನಾರಿ ಚೆಲುವಿ
ಮಂಗಮುಶಗಳ ಕಾಟ ಬಹಳಲ್ಲೇ
ಮಂಗಮುಶಗಳ ಕಾಟವಾದಾರ ಚೆನ್ನಾರಿ ಚೆಲುವಾ
ತೋಟಕೊಂದು ಆಳನಿರಿಸಯ್ಯೋ
ತೋಟಕೊಂದು ಆಳನಿರಿಸಿದರ ಚೆನ್ನಾರಿ ಚೆಲುವೆ
ಕಾಗೆ ಕೋಗಿಲೆ ಕಾಟ ಬಹಳಲ್ಲೇ
ಕಾಗೆ ಕೋಗಿಲೆ ಕಾಟವಾದಾರೆ ಚೆನ್ನಾರಿ ಚೆಲುವ
ಆಳ ಕೈಗೊಂದು ಕವಣೆ ಕೊಡಿಸಯ್ಯೋ
ಆಳ ಕೈಗೊಂದು ಕವಣೆ ಕೊಟ್ಟರೆ ಚೆನ್ನಾರಿ ಚೆಲುವೆ
ಜೇನುಗೂಡಿಗೆ ಏಟು ಬಿತ್ತಲ್ಲೆ
ಜೇನು ಗೂಡಿಗೆ ಏಟು ಬಿದ್ದರ ಚೆನ್ನಾಗಿ ಚೆಲುವ
ಜೇನುತುಪ್ಪದ ರುಚಿಯ ನೋಡಯ್ಯೋ!
ಈ ಜನಪದ ಗೀತೆ ಓದಿ. ಇದು ಸಂವಾದದ ಶೈಲಿಯಲ್ಲಿ ಅವರಿಬ್ಬರ ರಸಿಕತನವನ್ನೂ ಹೇಳುತ್ತಾ ಹೋಗುತ್ತದೆ. ಪ್ರೇಮದ ಉತ್ಕಟತೆಯನ್ನೂ ತೋರುತ್ತದೆ. ಎಲ್ಲಿಂದಲೋ ಶುರುವಾಗಿ ಎಲ್ಲಿಗೋ ತಲುಪುತ್ತದೆ.
ಬಹುಶಃ ಮತ್ತಷ್ಟು ಗಾಢವಾಗಿ ಒಳಹೊಕ್ಕರೆ ಮತ್ತಷ್ಟು ಅರ್ಥಗಳನ್ನೂ ಇದು ಹೊಳೆಯಿಸುತ್ತದೋ ಏನೋ?
ಊರ ಮುಂದಲ ತೋಟ ಮಾಡಯ್ಯ ಚೆನ್ನಾರಿ ಚೆಲುವಾ
ನಿನ್ನ ನೋಡುತ ನೀರ ತರುವೇನೂ
ಊರ ಮುಂದಲ ತೋಟ ಮಾಡಿದರೆ ಚೆನ್ನಾರಿ ಚೆಲುವೆ
ದನ ಕರುಗಳ ಕಾಟ ಬಹಳಲ್ಲೇ
ದನಕರುಗಳ ಕಾಟವಾದಾರೆ ಚೆನ್ನಾರಿ ಚೆಲುವ
ಜಾಲಿ ಕಡಿದು ಬೇಲಿ ನಡಿಸಯ್ಯೋ
ಜಾಲಿ ಕಡಿದು ಬೇಲಿ ನಡಿಸಿದರ ಚೆನ್ನಾರಿ ಚೆಲುವಿ
ಮಂಗಮುಶಗಳ ಕಾಟ ಬಹಳಲ್ಲೇ
ಮಂಗಮುಶಗಳ ಕಾಟವಾದಾರ ಚೆನ್ನಾರಿ ಚೆಲುವಾ
ತೋಟಕೊಂದು ಆಳನಿರಿಸಯ್ಯೋ
ತೋಟಕೊಂದು ಆಳನಿರಿಸಿದರ ಚೆನ್ನಾರಿ ಚೆಲುವೆ
ಕಾಗೆ ಕೋಗಿಲೆ ಕಾಟ ಬಹಳಲ್ಲೇ
ಕಾಗೆ ಕೋಗಿಲೆ ಕಾಟವಾದಾರೆ ಚೆನ್ನಾರಿ ಚೆಲುವ
ಆಳ ಕೈಗೊಂದು ಕವಣೆ ಕೊಡಿಸಯ್ಯೋ
ಆಳ ಕೈಗೊಂದು ಕವಣೆ ಕೊಟ್ಟರೆ ಚೆನ್ನಾರಿ ಚೆಲುವೆ
ಜೇನುಗೂಡಿಗೆ ಏಟು ಬಿತ್ತಲ್ಲೆ
ಜೇನು ಗೂಡಿಗೆ ಏಟು ಬಿದ್ದರ ಚೆನ್ನಾಗಿ ಚೆಲುವ
ಜೇನುತುಪ್ಪದ ರುಚಿಯ ನೋಡಯ್ಯೋ!
6 comments:
ಪ್ರಿಯ ಜೋಗಿ,
ಈ ಕುರುಕು ಪದ್ಯ ನಮ್ಮ ಶಾಲೆಯ ದಿನಗಳ ವಾರ್ಷಿಕೋತ್ಸವದ ಡ್ಯಾನ್ಸಾಗಿತ್ತು.. ವಾರ್ಷಿಕೋತ್ಸವ ಮುಗಿದು ಪರೀಕ್ಷೆ ಬರುವವರೆಗೂ ಶಾಲೆಯ ಮೂಲೆಮೂಲೆಯಲ್ಲೂ ನಮ್ಮ ನರ್ತನವಿರುತ್ತಿತ್ತು.. :)
ನಿಮಗೆ ಡಬ್ಬಲ್ ಥ್ಯಾಂಕ್ಸ್ - ಈ ಪದ್ಯಕ್ಕೆ ಮತ್ತು ಮೇರುತಿ ಗುಡ್ಡದ ಚಂದದ ಫೋಟೊಕ್ಕೆ.
ಪ್ರೀತಿಯಿಂದ
ಸಿಂಧು
Marawagiddare... haagu Janapada very delighful poems. thanks jogi.
ಡಿಯರ್ ಸಿಂಧು,
ನಿಮಗೆ ಮೇರುತಿ ಗಿರಿಯ ಬಗ್ಗೆ ಹೇಗೆ ಗೊತ್ತು. ಅದನ್ನು ಹೇಗೆ ಗುರುತಿಸಿದಿರಿ. ನೀವೂ ಆ ಪ್ರದೇಶದವರಾ.
-ಜೋಗಿ
ee haadna yuvaraj bombat aagi haadtaare..
ಸರ್,
ಅಲ್ಲಿಯವಳಾಗಿದ್ದರೆ ಎಷ್ಟು ಚೆನ್ನಾಗಿತ್ತು!!
ನನ್ನೂರು ಸಾಗರ. ಮೇರುತಿ ಗುಡ್ಡಕ್ಕೆ ನಾವು ಚಾರಣ ಹೋಗಿದ್ದೆವು. ತುಂಬ ಇಷ್ಟವಾದ ಜಾಗ. ನಾವು ಬಸರಿಕಟ್ಟೆಯ ಬಸ್ ಸ್ಟಾಂಡಿನಿಂದ ಇದೇ ವ್ಯೂ ಇರುವ ಫೋಟೊ ತೆಗೆದಿದ್ದೆವು.
.. ಜಯಪುರದಿಂದ ಬಸರೀಕಟ್ಟೆಯವರೆಗಿನ ದಾರಿಯೇ ಒಂದು ಸುಂದರ ಅನುಭೂತಿ.
ಸಿಂಧು
Sorry for my bad english. Thank you so much for your good post. Your post helped me in my college assignment, If you can provide me more details please email me.
Post a Comment