ನಾನೇಕೆ ಓದುತ್ತೇನೆ?
ಈ ಪ್ರಶ್ನೆಗೆ ಇವತ್ತು ಉತ್ತರ ಹುಡುಕುವುದು ಕಷ್ಟ. ಕೇವಲ ಖುಷಿಗೋಸ್ಕರ ಓದುವುದಕ್ಕೆ ಇವತ್ತು ಯಾರಿಗೂ ಪುರುಸೊತ್ತಿಲ್ಲ. ಓದುವುದರಿಂದ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ ಅನ್ನುವುದನ್ನು ಯಾರೂ ನಂಬುವುದಿಲ್ಲ. ಓದುವುದರಿಂದ ಜೀವನಪ್ರೀತಿ ಹೆಚ್ಚಾಗುತ್ತದೆ ಎನ್ನುವವರು ಸಿಗುವುದಿಲ್ಲ. ಮನರಂಜನೆಗಾಗಿ ಬೇರೆ ಮಾಧ್ಯಮಗಳಿವೆ.ನಮಗೆ ಬೇಕಾದದ್ದು ಮಾಹಿತಿ ಮಾತ್ರ ಅನ್ನುವವರು ಹೆಚ್ಚಾಗುತ್ತಿದ್ದಾರೆ. ಹೀಗಾಗಿ ಒಂದು ಜೀವನಚರಿತ್ರೆಯನ್ನೋ ಒಂದು ಕಾದಂಬರಿಯನ್ನೋ ಇಡಿಯಾಗಿ ಓದಿ ಸುಖಿಸುವ ಅಗತ್ಯ ಯಾರಿಗೂ ಕಂಡುಬರುತ್ತಿಲ್ಲ.
ಹಾಗೆ ಹೇಳಿದರೆ ಇದನ್ನು ಕೇವಲ ವಾದಕ್ಕಾಗಿ ಹೇಳಲಾಗುತ್ತಿದೆ ಎಂದು ವಾದಿಸುವವರಿದಿದ್ದಾರೆ. ಅಂಕಿ-ಅಂಶಗಳನ್ನು ಕೊಟ್ಟು ಇಂತಿಷ್ಟು ಮಂದಿ ಪುಸ್ತಕ ಓದೇ ಓದುತ್ತಾರೆ ಎಂದು ಹೇಳುವವರಿದ್ದಾರೆ. ಆದರೆ ಅಂಕಿ-ಅಂಶಗಳಿಗಿಂತ ಮುಖ್ಯವಾಗಿ ಗಮನಿಸಬೇಕಾದ ಅಂಶ ಇನ್ನೊಂದಿದೆ. ಅದು ಇವತ್ತಿನ ಓದುಗರಿಗೆ ಇಷ್ಟವಾಗುವ ಸಾಹಿತ್ಯ ಸೃಷ್ಟಿಯಾಗುತ್ತಿದೆಯೇ ಎನ್ನುವ ಪ್ರಶ್ನೆ.
ಕೆ. ಎ್. ನರಸಿಂಹಸ್ವಾಮಿ ತೀರಿಕೊಂಡಾಗ ಅವರ ಹಾಡುಗಳ ಮೂಲಕವೇ ಅವರಿಗೆ ಶ್ರದಾ್ಧಂಜಲಿ ಅರ್ಪಿಸುವ ಕಾರ್ಯಕ್ರಮವೊಂದು ನಡೆಯಿತು. ಅಲ್ಲಿಗೆ ಬಂದಿದ್ದವರೆಲ್ಲ ಮಧ್ಯವಯಸ್ಕರು; ಅವರನ್ನು ಕರೆತರಬೇಕಾದ ಅನಿವಾರ್ಯಕ್ಕೆ ಬಂದಿದ್ದ ಬೆರಳೆಣಿಕೆಯ ತರುಣ-ತರುಣಿಯರು. ಕೆ. ಎ್.ನ. ಮೂರು ತಲೆಮಾರಿನ ಜವ್ವನಿಗರನ್ನೂ ದಂಪತಿಗಳನ್ನೂ ಆಪ್ತವಾಗಿ ಆವರಿಸಿಕೊಂಡವರು. ಅವರು ಇವತ್ತಿನ ಏರುಜವ್ವನೆಯರಿಗೇಕೆ ಇಷ್ಟವಾಗುವುದಿಲ್ಲ?
ನವತರುಣ-ತರುಣಿಯರ ಬಳಿ ಉತ್ತರ ಸಿದ್ಧವಾಗಿದೆ; `ಕೆಎ್ನ ನಿಮ್ಮ ಕಾಲಕ್ಕೇ ಸರಿ. ಅವರು ಬರೆದದ್ದನ್ನು ನಾವೂ ಓದಿ ಹತ್ತಿರವಾಗೋದಕ್ಕೆ ಯತ್ನಿಸಿದೆವು. ಆದರೆ ನಮಗ್ಯಾಕೋ ಅದು ರುಚಿಸಲೇ ಇಲ್ಲ. ತುಂಬ ಔ್ಡೇಟೆ್ ಕವಿ ಅವರು. ಅಂಥ ಸೂಕ್ಪ್ಮ ಸಂವೇದನೆಗಳು ಈಗ ಯಾರಲ್ಲೂ ಇಲ್ಲ.
ಅಂದರೆ?
ತಾರುಣ್ಯದ ಸಂವೇದನೆಗಳೂ ಬದಲಾಗಿಹೋಗಿದ್ದಾವಾ?
`ಹೌದು. ನಮ್ಮೂರ ಬಂಡಿಯಲಿ ನಿಮ್ಮೂರ ಬಿಟ್ಟಾಗ ಓಡಿದುದು ದಾರಿ ಬೇಗ' ಅಂತ ಬರೆದಿದ್ದಾರೆ. ಈಗ ಬಂಡಿ ಎಲ್ಲಿದೆ? ಕಾರಲ್ಲಿ ಝಮ್ಮಂತ ಹೋಗಿ ಬರುತ್ತೇವೆ? ಬಸ್ಸಲ್ಲಿ ಚೆನ್ನಾಗಿ ನಿದ್ದೆ ಹೊಡೀತಾ ಊರಿಗೆ ಹೋಗುತ್ತೇವೆ'.
ಅದೆಲ್ಲ ಸರಿ. ಕಾರನ್ನೋ ಬಸ್ಸನ್ನೋ ಬಂಡಿ ಅಂದುಕೊಳ್ಳಬಹುದಲ್ಲ?
`ಆದರೆ ಏರುತ ಇಳಿಯುತ ರಾಯರು ಬಂದರು ದೂರದ ಊರಿಂದ. ಕಣ್ಣನು ಕಡಿದರು ನಿದ್ದೆಯು ಬಾರದು ಪದುಮಳು ಒಳಗಿಲ್ಲ ಅಂದರೆ ನಮಗೆ ಹ್ಯಾಗೆ ಅರ್ಥವಾಗಬೇಕು? ಈಗ ಆಕೆ ಪೀರಿಯ್ಸನಲ್ಲಿದ್ದರೂ ಜೊತೆಗೇ ಇರುತ್ತಾಳೆ. ನಮ್ಮ ಹತ್ತಿರವೇ ನ್ಯಾ್ಕಿ್ ತರಿಸುತ್ತಾಳೆ.'
ಅದೆಲ್ಲ ನಿಮ್ಮಿಬ್ಬರ ನಡುವಿನ ಹೊಂದಾಣಿಕೆಗೆ ಸಂಬಂಧಿಸಿದ್ದು. ಆದರೆ ನರಸಿಂಹಸ್ವಾಮಿ ಬರೆದಂಥ ಮೃದುವಾದ ಭಾವನೆಗೆ ಅವಕಾಶವೇ ಇಲ್ಲ ಅಂತೀರಾ? ಯಾವತ್ತೂ ನಿಮಗೆ ಹಾಗೆಲ್ಲ ಅನ್ನಿಸಲೇ ಇಲ್ಲವೇ?
`ಇಲ್ಲ. ಮೊದಲ ದಿನ ಮೌನ... ಅಳುವೇ ತುಟಿಗೆ ಬಂದಂತೆ.. ಅನ್ನುವ ಸಾಲು ನನಗೆ ಹೇಗೆ ಹೊಂದಬೇಕು? ನನ್ನ ಹತ್ತಿರ ಮೊಬೈಲಿದೆ. ಗಂಡನ ಮನೆಗೆ ಬಂದ ತಕ್ಪಣ ಫೋ್ ಮಾಡಿ ಅಮ್ಮನ ಹತ್ತಿರ ಮಾತಾಡಿದೆ. ಮತ್ತೆರಡು ಸಾರಿ ತಂಗಿ ಫೋ್ ಮಾಡಿದ್ಳು. ಸುಮ್ನೆ ತರಲೆ ಮಾಡ್ತಾಳೆ ಅಂತ ರಿಸೀ್ ಮಾಡ್ಲಿಲ್ಲ. ತುಂಟ ಮೆಸೇ್ ಕಳಿಸಿದ್ದಾಳೆ'
`ನಥಿಂ್ ಈ್ ಸೋ ಸೆಂಟಿಮೆಂಟ್. ಸುಮ್ನೆ ಹುಡುಗರು ಟೆನ್ಷ್ ಮಾಡ್ಕೋತಾರೆ. ಹುಡುಗಿಯನ್ನು ತವರಿಗೆ ಕಳಿಸುವಾದ ಅಳೋದು ಕೇವಲ ಫಾರ್ಮಾಲಿಟಿ ಅಷ್ಟೇ. ಒಬ್ಬಳೇ ಮಗಳೆಂದು ನೀವೇಕೆ ಕೊರಗುವಿರಿ? ಒಬ್ಬಳೇ ಮಡದಿ ಎನಗೆ? ಹಬ್ಬದೂಟದ ನಡುವೆ ಕಣ್ಣೀರ ಸುರಿಸದಿರಿ, ಸುಮ್ಮನಿರಿ ಮಾವನವರೇ ಎಂಬ ಮಾತು ನಮಗಂತೂ ಹೊಂದೋಲ್ಲ ಬಿಡಿ' ಅನ್ನುತ್ತಾರೆ ನವದಂಪತಿಗಳು.
ಅಲ್ಲಿಗೆ ಸಾಹಿತ್ಯ ತನ್ನ ಮಾಂತ್ರಿಕತೆ ಕಳಕೊಂಡಿದೆಯಾ? ಅಥವಾ ಕಳೆದ ಹತ್ತು ದಶಕಗಳಲ್ಲಿ ನಿಧಾನವಾಗಿ ಆದ ಬದಲಾವಣೆಯನ್ನು ಮೀರಿಸುವಂಥ ಬದಲಾವಣೆ ದಿಡೀರನೆ ಸಂಭವಿಸಿದೆಯಾ? ಅದನ್ನು ಹಿಡಿದಿಡುವ ಸಾಹಿತ್ಯ ನಮ್ಮಲ್ಲಿ ಸೃಷ್ಟಿಯಾಗುತ್ತಿಲ್ಲ ಅನ್ನೋಣವೇ? ಹಾಗಿದ್ದರೆ ಇದೇ ಹುಡುಗ-ಹುಡುಗಿಯರು ಮೆಚ್ಚಿ ಗುನುಗುನಿಸುವ ಇಂಗ್ಲಿಷ್ ಪಾಪ್ ಸಾಂಗುಗಳಲ್ಲಿ ಅಂಥ ಸಾಹಿತ್ಯ ಏನಿದೆ?
ಅದಕ್ಕೋಸ್ಕರವೇ ಒಂದು ಕೆಸೆಟ್ ತರಿಸಿ ಕಷ್ಟಪಟ್ಟು ಕೇಳಿದರೆ ಅದರಲ್ಲಿದ್ದದ್ದು ಇಷ್ಟೇ;
If I had to live my life without you near me
The days would all be empty
The nights would seem so long
With you I see forever oh so clearly
I might have been in love before
But it never felt this strong
Our dreams are young and we both know
They'll take us where we want to go
Hold me now, touch me now
I don't want to live without you
ಈ ಸರಳ ಸಾಲುಗಳೇ ಇವತ್ತಿನ ಇಂಗ್ಲಿಷ್ ಬಲ್ಲ ತರುಣ-ತರುಣಿಯರ ಪ್ರೇಮಗೀತೆ. ಇದಕ್ಕಿಂತ ಸಾವಿರ ಪಾಲು ಉತ್ತಮವಾದ ಹಾಡನ್ನು ನರಸಿಂಹಸ್ವಾಮಿ, ಬೇಂದ್ರೆ, ಕುವೆಂಪು ಬರೆದಿದ್ದಾರೆ ಅಂದರೆ ಒಪ್ಪುವುದಕ್ಕೆ ಹುಡುಗರು ತಯಾರಿಲ್ಲ. ಅವರೆಲ್ಲ ಬರೆದಿರಬಹುದು, ಅದರೆ ಅದನ್ನು ನಮಗೆ ಬೇಕಾದ ಫಾರ್ನಲ್ಲಿ ಪ್ರೆಸೆಂಟ್ ಮಾಡುವುದೂ ಮುಖ್ಯ. ಜಾರ್ಜ್ ಬೆನ್ಸನ್ ಹಾಡು ಕೇಳುತ್ತಿದ್ದರೆ ನನಗದು ಪೂರ್ತಿಯಾಗಿ ಅರ್ಥವಾಗುತ್ತದೆ. ಅದು ನನ್ನ ಭಾಷೆಯಲ್ಲಿದೆ ಎನ್ನುತ್ತಾರೆ ಯೌವನಿಗರು.
ಅದನ್ನೂ ತಳ್ಳಿಹಾಕುವಂತಿಲ್ಲ. ಈಗ ಸ್ನೇಹ ಮತ್ತು ಪ್ರೀತಿ ದೇಶಭಾಷೆಗಳ ಎಲ್ಲೆ ದಾಟಿದೆ. ಜಾತಿಯ ಹಂಗನ್ನು ಮೀರಿದೆ. ಹೀಗಾಗಿ ಸಾರ್ವತ್ರಿಕವಾದ ಒಂದು ಭಾಷೆ ಪ್ರೇಮಿಗಳಿಗೆ ಬೇಕಾಗಿದೆ. ಕನ್ನಡದಲ್ಲಿ ಪ್ರೇಮಿಸಲಿಕ್ಕೆ ಹೊರಡುವ ಹುಡುಗ ತನ್ನ ಮಿತಿಯೊಳಗೇ ಇರಬೇಕಾಗುತ್ತದೆ. ಕನ್ನಡದ ಹುಡುಗ ಪಂಜಾಬಿನ ಹುಡುಗಿಯನ್ನು ಪ್ರೀತಿಸಿದರೆ ಇಬ್ಬರಿಗೂ ಅರ್ಥವಾಗುವ ಒಂದು ಭಾಷೆಯಲ್ಲಿ ಅನುಸಂಧಾನ ಬೇಕಾಗುತ್ತದೆ. ನಮ್ಮ ಶಿಕ್ಪಣ ಆ ಇಬ್ಬರಿಗೂ ಅನುಕೂಲವಾಗುವ ಇಂಗ್ಲಿಷನ್ನು ಕೊಟ್ಟುಬಿಟ್ಟಿದೆ. ಅಲ್ಲಿಗೆ ಪಂಜಾಬಿಯೂ ಸಾಯುತ್ತದೆ; ಕನ್ನಡವೂ ಸಾಯುತ್ತದೆ. ಅವರಿಬ್ಬರೂ ಇಂಗ್ಲಿಷಲ್ಲಿ ಮಾತಾಡುತ್ತಾರೆ. ಮಕ್ಕಳು ಅರ್ಧ ಪಂಜಾಬಿ, ಅರ್ಧ ಇಂಗ್ಲಿಷ್ ಕಲಿಯುತ್ತವೆ. ಆದರೆ ಇಂಗ್ಲಿಷ್ ಮಾತನಾಡುತ್ತವೆ.
ಇದನ್ನೆಲ್ಲ ಮೀರಿಯೂ ಕನ್ನಡ ಬದುಕುವಂತೆ ಮಾಡುವುದು ಹೇಗೆ? ಕನ್ನಡದಲ್ಲಿ ಅರ್ಥಪೂರ್ಣ ಸಾಹಿತ್ಯ ಬಂದಿದೆ, ಬರುತ್ತಿದೆ ಎಂದು ನಂಬಿಸುವುದು ಹೇಗೆ? ಪ್ರೇಮಕ್ಕಿಂತ ಭಾಷೆ ದೊಡ್ಡದು ಎಂದು ಒಪ್ಪಿಸುವ ಶಕ್ತಿ ಯಾರಿಗಿದೆ?
ಈ ಹಿನ್ನೆಲೆಯಲ್ಲಿ `ನಾನೇಕೆ ಓದುತ್ತೇನೆ' ಎಂಬ ಪ್ರಶ್ನೆಗೆ ಅರ್ಥ ಬರುತ್ತದೆ. ಒಬ್ಬ ಕನ್ನಡದ ಬರಹಗಾರ ಓದುವುದನ್ನು ಬರೆಯುವುದನ್ನು ಇವತ್ತು ಮತ್ತೊಬ್ಬ ಓದುತ್ತಾನೆ ಅನ್ನುವ ನಂಬಿಕೆಯಿಲ್ಲ. ಹೀಗಾಗಿ ಒಬ್ಬನೇ ಸಾಹಿತಿಯನ್ನು ಓದುವ ಇಬ್ಬರು ಮುಖಾಮುಖಿಯಾಗುವುದಿಲ್ಲ. ಯಾಕೆಂದರೆ ಎಂಥ ಶ್ರೇಷ್ಠ ಕೃತಿಯೇ ಆದರೂ ಸಾವಿರ ಪ್ರತಿ ಖರ್ಚಾಗುವ ಹೊತ್ತಿಗೆ ಏದುಸಿರುಬಿಡುತ್ತದೆ. ಐದು ಕೋಟಿ ಕನ್ನಡಿಗರ ಪೈಕಿ ಒಂದು ಕಾದಂಬರಿಯನ್ನು ಕೇವಲ ಒಂದು ಸಾವಿರ ಮಂದಿ ಓದುತ್ತಾರೆ. ಅಂದರೆ ಒಟ್ಟು ಜನಸಂಖ್ಯೆಯ ಶೇಕಡಾ .002 ಮಂದಿಗೆ ಮಾತ್ರ ಸಾಹಿತ್ಯ ಬೇಕು!
ಹಾಗಿದ್ದರೆ ನಾನೇಕೆ ಓದಬೇಕು?
Saturday, February 9, 2008
Subscribe to:
Post Comments (Atom)
7 comments:
ಇದೆಲ್ಲಾ ಅರ್ಥವಾಗುವುದಿಲ್ಲ ನನಗೆ. ಓದುವುವರು 'ನಾನೇಕೆ ಓದುತ್ತೇನೆ?' ಎಂದು ಯಾಕೆ ಕೇಳಿಕೊಳ್ಳಬೇಕು... ಅದ್ಯಾವ ಚಿಂತೆ ಇಲ್ಲದೆ ಪ್ರಶ್ನೆಗಳಿಂದ ಹಿಂಸಿಸಿಕೊಳ್ಳದೆ ಏನನ್ನೂ ಕೇಳಿಕೊಳ್ಳದೆ ಓದುತ್ತಾರೆ.. ಅವರಿಗೆ ಕಾರಣಗಳು ಬೇಡ... ಅದಲ್ಲದೆ ನನಗೆ ಮತ್ತು ನನ್ನ ಹುಡುಗನಿಗೆ ಕೆ.ಎಸ್.ನ , ಬೇಂದ್ರೆ, ಕುವೆಂಪು, ಅಡಿಗ, shelly, eliot, Byron ... ಎಲ್ಲಾ ಸಮಾನವಾಗಿ ಇಷ್ಟ ಆಗುತ್ತಾರೆ.
ಮಣ್ಣಿನ ದಾರಿಗಳಲ್ಲಿ ಬಂಡಿಗಳಲ್ಲಿ ಕುಳಿತಿಲ್ಲ ಎಂದ ಮಾತ್ರಕ್ಕೆ ಅದನ್ನು ಕಲ್ಪಿಸಿಕೊಂಡು ಅನುಭವಿಸುವುದು ಸಾಧ್ಯವೇ ಇಲ್ಲ ಅಂತೇನೂ ಅಲ್ಲ. ರಾಮಾಯಣ, ಮಹಾಭಾರತ, ಪುರಾಣ, ಜನಪದ ಕತೆಗಳ ಪರಿಸರ ಎಲ್ಲಿದೆ? ಆದರೂ ಇಷ್ಟವಾಗುವುದಿಲ್ಲವೆ?. ಒಂದು ಕೃತಿಯನ್ನು ಅದರ ಪರಿಸರ, ಕಾಲದಲ್ಲಿ ಹೊಕ್ಕು ನೋಡಿ ಅದರ ಭಾವವನ್ನು ಮನಸ್ಸು ತಿಳಿದು ಸುಖಿಸುತ್ತದೆ. ಎಲ್ಲ ಕಾಲದಲ್ಲು ಇಂಥ ತರುಣರು ಇದ್ದೇ ಇದ್ದರು. ನನ್ನ ಅನೇಕ ಸ್ನೇಹಿತರಿಗೆ ಯಾವ ಸಾಹಿತ್ಯವೂ ಅರ್ಥವಾಗುವುದಿಲ್ಲ, ಮೆಟಾಲಿಕಾ ಹಾಡುಗಳನ್ನು ಬಿಟ್ಟು. ಇಂಗ್ಲೀಷು ಕಾದಂಬರಿಗಳನ್ನು ಓದುವುದೇ ಒಂದು ಹೆಗ್ಗಳಿಕೆ. ಅಂತಹವರ ಬಗ್ಗೆ ಅವರು ಹೇಳುತ್ತಿರುವುದು ಸರಿ ಎನ್ನುವ ರೀತಿಯಲ್ಲಿ ಅವರ ಕಡೆ ವಾಲಿಕೊಂಡು ಸುಮ್ಮನಿರಬೇಕಿಲ್ಲ. ಅದಕ್ಕಾಗಿ ಅದರ ಅವಶ್ಯಕತೆಗಳಿಗೆ ತಕ್ಕಂತೆ ಬರೆಯಬೇಕು ಅನ್ನುವುದೂ ಸರಿಯಲ್ಲ. ಅದು ನನ್ನ ಸಹಜ ಅಭಿವ್ಯಕ್ತಿ ಆಗಬೇಕು. ಹಾಗಿದ್ದಲ್ಲಿ ಸರಿ. ಸುಮ್ಮನೆ ಶಾಪಿಂಗ್ ಮಾಲ್, ಕಾಫಿ ಡೇ, ಬೌಲಿಂಗ್ ಅಂತ ತುರುಕಿಸಿದರೆ ಆಯಿತಾ? ಅಲ್ಲಿ ಏನೂ ಜರುಗದಿದ್ದರೂ? ಯಾವುದೇ ಒಳನೋಟ ಸೂಕ್ಷ್ಮ ಗ್ರಹಿಕೆಗಳು ಇಲ್ಲದಿದ್ದರೂ?
ಕೆ.ಎಸ್.ಎನ್, ಚೆನ್ನವೀರ ಕಣವಿ, ಬೇಂದ್ರೆ, ಅಡಿಗರು outdated ಅಂದರೆ, I pity them. ಸೂಕ್ಷ್ಮ ಸಂವೇದನೆಗಳು ಇಲ್ಲದವನಿಗೆ ಯಾವತ್ತೂ ಇಲ್ಲ, ಯಾವ ಕಾಲವಾಗಿದ್ದರೂ.
sir.i believed that agood work of a author is not his achievement.the greatness is of the readers who enjoy and feel happy by reading it.writer is just a MEDIA.i am happy with ur articles but ur novel is not satisfied me.
ನಲ್ಮೆಯ ಜೋಗಿ,
"ಐದು ಕೋಟಿ ಕನ್ನಡಿಗರ ಪೈಕಿ ಒಂದು ಕಾದಂಬರಿಯನ್ನು ಕೇವಲ ಒಂದು ಸಾವಿರ ಮಂದಿ ಓದುತ್ತಾರೆ. ಅಂದರೆ ಒಟ್ಟು ಜನಸಂಖ್ಯೆಯ ಶೇಕಡಾ .002 ಮಂದಿಗೆ ಮಾತ್ರ ಸಾಹಿತ್ಯ ಬೇಕು!"
ಎಂಥಾ ಮಾತು! ಬಹುಷಃ ಗಂಭೀರ ಸಾಹಿತ್ಯವನ್ನು ತುಂಬ ಗಂಭೀರವಾಗಿ ತೆಗೆದುಕೊಳ್ಳುವ ನಮ್ಮಂಥವರನ್ನು ಯೋಚಿಸಲು ಶುರು ಮಾಡಿಸುವುದೇ ನಿಮ್ಮ ಇಂಥ ಸಾಲುಗಳು.
ನಾನು ಮಾತಾಡುವುವುದು ನನ್ನ ಸುತ್ತಲಿದ್ದವರಿಗೆ ಏಕೆ ಅರ್ಥವಾಗುವುದಿಲ್ಲವೆಂಬುದನ್ನು ಈ ಒಂದು ವಾಕ್ಯ ಹೇಳಿತು.
ಕೇಶವ (www.kannada-nudi.blogspot.com)
ಜೋಗಿಯವರೇ , ಇವತ್ತಿನ ಪೀಳಿಗೆಯ ಸಂವೇದನೆಯೇ ವಿಭಿನ್ನ ಎನ್ನುವುದನ್ನ ಸೋದಾಹರಿತವಾಗಿ ವಿವರಿಸಿದ್ದೀರಿ. ನನಗೆ ತಮ್ಮ ಬರಹ istavaaguvudu ತಾವು ಕಟ್ಟಿಕೊಡುವ ಇಂಥ ಒಳ ನೋಟಗಳಿಂದ. ಕೆ ಎಸ್ ನ ಅವರ ಕವಿತೆಗಳ ಉಪಮೆಗಳು ಹಾಗು ಚಿತ್ರಣಗಳು ಇಂದಿನ ಪೀಳಿಗೆಗೆ ಅಪ್ರಸ್ತುತ ಎನ್ನಿಸುವಿದು ಸ್ವಾಭಾವಿಕ ಎಂದು ನನ್ನ ಭಾವನೆ. ಬಹುಶ ಅಂತರಾಳದಲ್ಲಿ ಮನುಷ್ಯ ಪ್ರಕೃತಿಗೆ ಹತ್ತಿರವಾದರು, ಹೊರಗಿಂದ ಒಂದು ಸೋಗಿನ ಭಾವನೆಯಲ್ಲಿ ಬದುಕುವುದು ಅನಿವಾರ್ಯ ಅಥವಾ ಅದು ಅವನ ಅನ್ತ್ಹಸ್ಥ ವಾದ ದ್ವಂದ್ವ! .
D.M.Sagar
ಎಲ್ಲ ಬಲ್ಲವರಿಲ್ಲ | ಬಲ್ಲವರು ಬಹಳಿಲ್ಲ
ಬಲ್ಲಿದರು ಇದ್ದು ಬಲವಿಲ್ಲ ಸಾಹಿತ್ಯ |
ವೆಲ್ಲವರಿಗಿಲ್ಲ ಸರ್ವಜ್ಞ |
Hello Jogi,
Your Article is nice and sensible. Our Tejaswi has changed or evolved with the time and he was relevant and he will be i belive. For me still Tejaswi millenium series looks more interesting though we have High tech channels like Discovery and National Geographic, which can show us all those things of millenium series... still some useless critics keep saying negative things abut Tejaswi's Millenium series. We hardly get a writer who is relevant and in that also these useless obstacles..
Regards
venkatesh
Post a Comment