ಕಣ್ಣ ದಡಕ್ಕೆ
ಸುಮ್ಮನೆ ಅಪ್ಪಳಿಸಿದರೆ
ಅಲೆ.
ಒಳಹೊಕ್ಕು ಎಲ್ಲ
ತೆಕ್ಕೆಗೆ ದಕ್ಕಿಸಿಕೊಂಡು
ಒಯ್ದರೆ
ಹೆದ್ದೆರೆ.
ಕೊಂದು
ಮುಂದುವರಿದರೆ
ಸುನಾಮಿ.
ಅವಳು ಅರಬೀ
ಸಮುದ್ರ
ವ್ಯಾಮೋಹಿ ಅಲೆ
ಮಾರಿ.
ಮುಟ್ಟಿದ ಮೂರನೆಯ
ಸಂಜೆ
ಮುಟ್ಟಿದ್ದು ನಿಜವೋ ಸುಳ್ಳೋ
ಅನುಮಾನ.
ಮತ್ತೊಂದು ಸ್ಪರ್ಶಕ್ಕೆ
ಅವಳು
ನವನವೋನ್ಮೇಷಶಾಲಿನಿ.
ದೋಣಿಯೋ ತೆಪ್ಪವೋ
ತೇಲಿದರೆ ಕಡಲಾಸೆ
ಮುಳುಗಿದರೆ
ಒಡಲಾಳ.
watch fish
watching you
watching them
Tuesday, July 8, 2008
Subscribe to:
Post Comments (Atom)
8 comments:
ಹೆದ್ದೆರೆ ಅಂದರೆ ದೊಡ್ಡದಾದ ತೆರೆ ಅಂತನಾ? ಅಥವಾ ಹೆದ್ದೆರೆಯನ್ನ ಹೆದ್ದಾರಿ ಅಂತ ಬಿಂಬಿಸಿದ್ದರೆ ಹೆಚ್ಚು ಹೊಸ ಅರ್ಥ ಹೊರಹೊಮ್ಮುತ್ತಿತ್ತೇನೋ..
ಮ್...ಮಧ್ಯೆ watch fish
watching you
watching them
ಇದರ ಔಚಿತ್ಯವೂ ಗೊತ್ತಾಗಲಿಲ್ಲ ಕ್ಷಮಿಸಿ..
-ರಾಘವೇಂದ್ರ ಜೋಶಿ.
ಪದ್ಯ ತೆಪ್ಪದಲ್ಲಿ ತೇಲಿದ ಹಾಗೆ ಇದೆ..
ಕಣ್ಣ ದಡಕ್ಕೆ
ಸುಮ್ಮನೆ ಅಪ್ಪಳಿಸಿದರೆ
ಅಲೆ.
ಒಳಹೊಕ್ಕು ಎಲ್ಲ
ತೆಕ್ಕೆಗೆ ದಕ್ಕಿಸಿಕೊಂಡು
ಒಯ್ದರೆ
ಹೆದ್ದೆರೆ.
ವಾಹ್...!!
- ಅಲೆಮಾರಿ
chennagide jogi
-g n mohan
superb
sannidhi
superb...
-sannidhi
ಮೋಟರ್ ಬೋಟು ಅವಳಿಗೆ ಯಾಕೆ ಇಷ್ಟವಿಲ್ಲವೋ ದೇವರೇ ಬಲ್ಲ!! ನನಗಂತೂ ತುಂಬಾ ಇಷ್ಟ ಆಯಿತು.
ಕಣ್ಣ ದಡಕ್ಕೆ
ಸುಮ್ಮನೆ ಅಪ್ಪಳಿಸಿದರೆ
ಅಲೆ.
ಅರರೆ ಎಷ್ಟೊಂದು ಚೆಂದ.....
ಪ್ರಿಯ ಜೋಗಿ,
ನಿಮ್ಮ ಬ್ಲಾಗಿನಲ್ಲಿ ಕವಿತೆಗಳ ಸೋನೆಮಳೆ...
ಈ ಕವಿತೆ ತುಂಬ ಇಷ್ಟ ಆಯಿತು.
..ತೇಲಿದರೆ ಕಡಲಾಸೆ
ಮುಳುಗಿದರೆ ಒಡಲಾಳ..
ಪ್ರೀತಿಯಿಂದ
ಸಿಂಧು
jogi i like u soooo much
i like ur janaki kalum, kavi samaya, neeenu mathhu ninna nagu......
nija hela ni bareda kelavondu nange artha aagala.....
neee ista ago mukya karana ade.....
mathe NADIYA NENAPINA HANGU.... NIJAVAGLU NADIIGE NENAPINA HANGIDYA JOGI.....?
Post a Comment