Wednesday, July 2, 2008

ಆಷಾಢಕ್ಕೆ ಮುನ್ನ ಅರಳಿತು ಮೇಫ್ಲವರ್

ಪಂಚ್ ಕಜ್ಜಾಯ
ಪ್ರಕಾಶ-ಕ

ಟೀನಾ ಝೋನ್


ಮೇ ಫ್ಲವರ್ ನಗುಚಿತ್ತಾರದ ಮನೆ

ಗೆಳೆಯ ಜಿ ಎನ್ ಮೋಹನ್ ಏನಾದರೊಂದು ಮಾಡುತ್ತಲೇ ಇರುತ್ತಾರೆ. ಏನು ಮಾಡಿದರೂ ಮೆಚ್ಚುಗೆ ಆಗುವಂತೆ ಮಾಡುತ್ತಾರೆ. ಹಾಗಂತ ಅದನ್ನು ತಾವೊಬ್ಬರೇ ಮಾಡುವುದಿಲ್ಲ, ಎಲ್ಲರೂ ಒಳಗೊಳ್ಳುವ ಹಾಗೆ ಮಾಡುತ್ತಾರೆ.
ಅವರ ಹೊಸ ಸಾಹಸದ ಹೆಸರು ಮೇ ಫ್ಲವರ್ ಮೀಡಿಯಾ ಹೌಸ್. ಯಮುನಾಬಾಯಿ ರಸ್ತೆಯ ಪುಟ್ಟ ಮನೆಯೊಂದರಲ್ಲಿ ಮೇ ಫ್ಲವರ್ ಅರಳಿದೆ. ಅಲ್ಲೇನು ಮಾಡುತ್ತೀರಿ ಅನ್ನುವ ಕುತೂಹಲಕ್ಕೆ ಮತ್ತೆ ಅವರದೇ ತುಂಟ ಉತ್ತರ.
ಮೊನ್ನೆ, ಸೋಮವಾರ ಈ ಮೇ ಫ್ಲವರ್ ಗೆಳೆಯರಿಗೆ ತೆರೆದುಕೊಂಡಿತು. ಕೂತು ಮಾತಾಡುವುದಕ್ಕೆ, ಒಳ್ಳೆಯ ಸಿನಿಮಾ ನೋಡುವುದಕ್ಕೆ ಕಾವ್ಯದ ಕುರಿತು ಚರ್ಚಿಸುವುದಕ್ಕೆ, ಹರಟೆ ಕೊಚ್ಚುವುದಕ್ಕೆ, ಪಟ್ಟಾಂಗಕ್ಕೆ - ಹೀಗೆ ಎಲ್ಲಾ ಬೌದ್ಧಿಕ ಸೃಜನಶೀಲ ಚಟುವಟಿಕೆಗಳಿಗೆ ಅದೀಗ ಸಂಗಮಸ್ಥಾನ.
ಮನೆಯೊಳಗಣ ಸೊಬಗನ್ನು ಸವಿಯುವುದಕ್ಕಾದರೂ ನೀವಲ್ಲಿಗೆ ಹೋಗಬೇಕು. ಹೋಗುವಾಗ ಎಚ್ಚರಿಕೆ- ಕೈಯಲ್ಲೊಂದು ಪುಸ್ತಕ, ಮನಸ್ಸಲ್ಲೊಂದು ಒಳ್ಳೆಯ ಅಲೋಚನೆ, ಸುಪ್ತಮನಸ್ಸಿನಲ್ಲೊಂದು ಕವಿತೆಯ ಸಾಲು ಇರಲಿ.
ಕೂಡಿ ಕಲೆತು ಬೆಳೆಯುವುದಕ್ಕೊಂದು ನೆಲೆ ಒದಗಿಸಿಕೊಟ್ಟ ಮೋಹನತಾಣ, ಅವರನ್ನೂ ಸಮೃದ್ಧವಾಗಿಸಲಿ.

12 comments:

ಶ್ರೀದೇವಿ ಕಳಸದ said...

ಓಹ್‌.... ಬರೆಯುವವರಿಗೊಂದು ಒಳ್ಳೆ ಸುದ್ದಿ ಅಂದಹಂಗಾಯ್ತು... ಸಮಯ ಸಿಕ್ಕಾಗ ಹೋಗಬಹುದು ಅಲ್ವೇ?

Adike said...

ಪ್ರಿಯ ಮೋಹನ್ ಜೀ,

ಸೂಪರ್ ಐಡಿಯಾ....ಚಿತ್ರ, ವರದಿ ನೋಡಿದಾಗ ಮೇ ಫ್ಲವರ್ ನೊಳಗೆ ಹೋಗಿ ಬಂದ ಅನುಭವವಾಯಿತು. ೀ ಸಾರಿ ಬೆಂಗಳೂರಿಗೆ ಬಂದಾಗ ಒಂದು ಹೊತ್ತು, ಅಲ್ಲ-ಒಂದು ದಿನ ಅಲ್ಲೇ.

- ನಾ. ಕಾರಂತ ಪೆರಾಜೆ
ಪುತ್ತೂರು - 574 201
karanth2005@gmail.com

Anonymous said...

It is very nice....
-venky raghavendra, Newyork

Anonymous said...

Idu kUda different Agide,
Nimma uLidella kalasagaLante...

Jogimane hokku Photo gaLannu nODiddAytu. Innu Khuddu baruvudondu bAki.
KhanDita baruve.

~ Chetana Teerthahalli

Anonymous said...

Thanks & Congrats
-Satish Chapparike

mohan said...

jogi,
nimma preetige, adara reetige thanks
-g n mohan

onkar said...

It is not only innovative marvellous also. best of luck mohan. More over you have answered somany FAQ's.

Pailoor said...

ಗೊಂಥನಮೇರ!

ಪೈಲೂರು

ವಿ.ಮಧುಸೂದನ್ said...

ಕ್ರಿಯಾಶೀಲತೆಗೆ ಮತ್ತೊಂದು ಹೆಸರು ಜಿಎನ್. ಮೋಹನ್ ಎಂಬ ನಂಬಿಕೆಯನ್ನು ಮತ್ತೆ ನಿರೂಪಿಸಲು ಮುಂದಾಗಿದ್ದಾರೆ ಮೋಹನ್ ಸರ್, ಅವರ ವಿನೂತನ ಪ್ರಯತ್ನಕ್ಕೆ ಶುಭವಾಗಲಿ, ಅವರ ವಿಶಿಷ್ಟ ಪ್ರಯತ್ನಗಳು ನಮಗೆ ಆದರ್ಶವಾಗಲಿ. ಮೊದಲ ಸುಳಿವು ಕೊಟ್ಟ ಜೋಗಿ ಅವರಿಗೆ ವಂದನೆಗಳು.

-ಅರಕಲಗೂಡು ವಿ.ಮಧುಸೂದನ್

vismaya said...

ಮೋಹನ್ ಅಂದ್ರೆ ಡಿಫರೆಂಟ್. ಅವರು ಏನ್ಮಾಡಿದ್ರೂ ಎಲ್ಲರೂ ಮೆಚ್ಚುವ ಹಾಗೆ, ಅಹುದಹುದು ಎನ್ನುವ ಹಾಗೆ ಮಾಡುತ್ತಾರೆ. ಕ್ಯೂಬಾದ ಪುಸ್ತಕದ ನನ್ನುಡಿಯಿಂದ ಹಿಡಿದು, ಪ್ರಶ್ನೆಗಳಿರುವುದು ಷೇಕ್ಸ್ ಪಿಯರಿನಿಗೆ ಎನ್ನುವ ವಿಭಿನ್ನ ಶೈಲಿಯ ಕವಿತೆ ವಾಚನವನ್ನು ತರುವವರೆಗೆ ಅವರ ಪ್ರತಿಯೊಂದು ಹೆಜ್ಜೆಯೂ ವಿಭಿನ್ನ. ಈಗ ಮೇಫ್ಲವರ್ ಸಾಹಸ, ಶಹಬ್ಬಾಸ್ ಮೋಹನ್ ಜಿ... ಒಮ್ಮೆ ಮಾತ್ರ ಅಲ್ಲ ಸಮಯ ಸಿಕ್ಕಾಗಲೆಲ್ಲ ನಾನು ಮತ್ತು ನನ್ನ ಮಗಳು 'ನದಿ' ನಿಮ್ಮ ಮೇಫ್ಲವರ್ ನಲ್ಲಿ ಹಾಜರ್.

gangadharaiah.s said...

simply wonderful-gangadharaiah.s

gosuba said...

ಹೌದು, ಮೋಹನ್ ಅವರ ಬರವಣಿಗೆ ಎಂತಹವರನ್ನೂ ಆಕರ್ಷಿಸುತ್ತೆ.. ಅವರು ರಾಮೋಜಿ ಫಿಲಂ ಸಿಟಿಯಲ್ಲಿ ಇದ್ದಾಗಲೂ ಅವರು ಹಾಸ್ಯ ಭರಿತವಾಗಿ ಕವನಗಳು ಬರೆದಿದ್ದು ಉಂಟು. ಕಳೆದ ಎರಡು ವರ್ಷಗಳ ಹಿಂದೆ ಅವರು ಕನ್ನಡ ನ್ಯೂಸ್ ಡೆಸ್ಕ್ ಸಹದ್ಯೋಗಿಗಳಿಗೆ ಯುಗಾದಿ ಹಬ್ಬವನ್ನು ಆಯೋಜಿಸಿದ್ದರು.ಆ ಸಂದರ್ಭದಲ್ಲಿ ಅವರೆಷ್ಟು ತಯಾರಾಗಿ ಬಂದಿದ್ದರೆಂದರೆ ಪ್ರತಿಯೊಬ್ಬರ ಬಗ್ಗೆ ಒಂದೊಂದು ಕವನ ಬರೆದಿದ್ದರು. ಅದೂ ಒಂದು ಕ್ಷಣ ಎಲ್ಲರಿಗೂ ಅಚ್ಚರಿ ಉಂಟು ಮಾಡಿತು.ಅಷ್ಟೆ ಅಲ್ಲ ಕೆಲವರಂತೂ ನಾಚಿ ನೀರಾಗಿ ಹೋದರು. ಪ್ರೇಮಿಗಳ, ಆತ್ಮೀಯ ಸ್ನೇಹಿತರ ಬಗ್ಗೆ, ಗೆಳೆಯ ಗೆಳತಿಯರ ನಡುವಿನ ಒಡನಾಟವನ್ನು ಹಾಸ್ಯಭರಿತವಾಗಿ ಬಿಚ್ಚಿಟ್ಟು ಬೆಚ್ಚಿ ಬೀಳಿಸಿದವರು ಇದೇ ಮೋಹನ್ ಸಾರ್‍...