Saturday, July 12, 2008

ಫಸ್ಟ್ ಹಾಫ್


ಗೆಳೆಯ ರವಿ ಬೆಳಗೆರೆಗೆ ಐವತ್ತು. ಲೇಖಕರಿಗೆ ಕ್ರಿಯಾಶೀಲರಿಗೆ ಐವತ್ತೆಂದರೆ ಏರುಜವ್ವನ. ಐವತ್ತರ ತನಕದ ಬಾಲಲೀಲೆ, ಹುಡುಗಾಟ , ತಾರುಣ್ಯದ ಸೆಳೆತಗಳಿಂದ ಪಾರಾಗುವ ವಯಸ್ಸಲ್ಲದೇ ಹೋದರೂ, ಇವೆಲ್ಲದರ ಜೊತೆಗೇ ತನ್ನನ್ನು ತಾನು ಮೀರುವುದಕ್ಕೆ ಹಂಬಲಿಸುವ ವಯಸ್ಸಂತೂ ಹೌದು.
ಫಸ್ಚ್ ಹಾಫ್ ಭರ್ಜರಿಯಾಗಿದ್ದಾಗಲೇ ನೆಕ್ಸ್ಟ್ ಹಾಫ್ ರೋಚಕವಾಗಿರುತ್ತದೆ. ಮೊದಲ ಇನ್ನಿಂಗ್ಸಿನಲ್ಲಿ ಬಾರಿಸಿದ ರನ್ನುಗಳೇ ಎರಡನೆಯ ಇನ್ನಿಂಗ್ಸನ್ನು ಕುತೂಹಲಕಾರಿ ಆಗಿಸುವುದು. ಫಸ್ಟ್ ಹಾಫ್ ಹೇಗಿತ್ತು ಎಂದು ತಿಳಿದುಕೊಳ್ಳಬಯಸುವವರಿಗೆ ಇಲ್ಲಿದೆ, ಒಂದು ಸುಂದರ ಪುಸ್ತಕ- ಫಸ್ಟ್ ಹಾಫ್.
ಶರತ್ ಕಲ್ಕೋಡ್ ಸಂಪಾದಕತ್ವದಲ್ಲಿ, ನಿವೇದಿತಾ ಅಕ್ಕರೆ ಮತ್ತು ಶ್ರಮದೊಂದಿಗೆ, ರವಿ ಅಜ್ಜೀಪುರ ಪುಟವಿನ್ಯಾಸಗೊಂದಿಗೆ ಸಿದ್ಧವಾಗಿರುವ ಪುಸ್ತಕದ ಪುಟಗಳನ್ನು ನೋಡುತ್ತಲೇ ದಂಗಾಗಿಬಿಟ್ಟೆ. ನಿವೇದಿತಾ ಪುಸ್ತಕ ಮಾಡುತ್ತಿದ್ದೇವೆ ಅಂದಾಗ ಅದೂ ಇನ್ನೊಂದು ನೂರಿನ್ನೂರು ಪುಟಗಳ ಪುಸ್ತಕವಾಗುತ್ತೆ ಅಂದುಕೊಂಡಿದ್ದೆ. ಆದರೆ ಅದು ಪ್ರತಿ ಮನೆಯ ಕಪಾಟನ್ನು ಚೆಂದವಾಗಿಸಬಲ್ಲ, ಪ್ರತಿ ಟೇಬಲ್ಲಿಗೂ ಕಳೆಕೊಡಬಲ್ಲ, ಮತ್ತೆ ಮತ್ತೆ ಓದಬಲ್ಲ ಕೃತಿಯಾಗುತ್ತೆ ಅನ್ನುವ ಅರಿವಿರಲಿಲ್ಲ.
ಪುಸ್ತಕದ ಮುಖಪುಟ ಇಲ್ಲಿದೆ. ಅಭಿನಂದನ ಗ್ರಂಥ ಎಂದು ಕರೆಯುವುದಕ್ಕೆ ಮನಸ್ಸಾಗುತ್ತಿಲ್ಲ. ಅದು ರವಿಯನ್ನು ಪ್ರೀತಿಸುವ ಎಲ್ಲರ ಅಕ್ಕರೆಯೂ ಒಂದೆಡೆ ಸೇರಿದ ಚಾಕಲೇಟ್ ಬುಟ್ಟಿ.
ಮುಖಪುಟವೇ ಎಲ್ಲಾ ಹೇಳುತ್ತದೆ, ನೋಡಿರಲ್ಲ.

3 comments:

Anonymous said...

Jogi is back!.
Regarding the new book by Ravi belagere I have few concerns.

Does the book contain anything new that has not yet been told/known to Karnataka people?. The point of asking is, Hi Bangalore has created enormous number of readers all over the country and few abroad as well. By a large number of Ravi anna's writings, most of his life-story is already revealed. I wonder does the book convey some new stuffs or the same old ones?.

The reason for my concern is, I know Ravi belagere personally and met him few times as well (needless to say, he knows me as well). I am sure people would be more interested in knowing anything new than the old ones.

Regards
Dr.D.M.Sagar

ರಾಘವೇಂದ್ರ ಜೋಶಿ said...

ಪುಸ್ತಕದ ಬಗ್ಗೆ ಕೇಳಿ ತುಂಬ ಖುಶಿಯಾಯಿತು.ಮೇಲಿನ ಕಮೆಂಟು ಸಮರ್ಥನೀಯವಾದುದು.
ನಮಗೆಲ್ಲಾ ರವೀ ಸಾರ್ ಒಂಥರಾ ಓಪನ್ ಸೀಕ್ರೆಟ್ ಆಗಿ ಹೋಗಿದ್ದಾರೆ.
ಅವರ ಈ ’first half’ನಲ್ಲಿ ಅವರೊಂದಿಗೆ ಓಡಾಡಿದವರು,ನೋಡಿದವರು,
ಬಿದ್ದವರು,ಎದ್ದವರು-ಹೀಗೆ ಎಲ್ಲರೂ ತಮ್ಮ ತಮ್ಮ ಅನಿಸಿಕೆಗಳನ್ನ
ಹಂಚಿಕೊಂಡರೆ ಎಷ್ಟು ಚೆಂದ!
ಒಟ್ಟಿನಲ್ಲಿ ಬುಟ್ಟಿ ಗಟ್ಟಿಯಾಗಿ ಹೆಣೆದುಬರಲಿ ಎಂಬ ಹಾರೈಕೆಯೊಂದಿಗೆ...
-ರಾಘವೇಂದ್ರ ಜೋಶಿ.

ಶಾಂತಲಾ ಭಂಡಿ said...

ಪ್ರೀತಿಯ ಜೋಗಿ...
ಚಾಕಲೇಟಿನಂತಹ ಸಿಹಿ ಸುದ್ದಿ ಹಂಚಿಕೊಂಡಿದ್ದಕ್ಕೆ ನಿಮಗೆ ಧನ್ಯವಾದಗಳು.
ರವಿಬೆಳೆಗೆರೆಯವರೆಂದರೆ ಪ್ರತಿ ಮನ ಮನೆಗಳಲ್ಲಿಯೂ ಒಬ್ಬರಾಗಿರುವಂಥವರು ಇಂದು.
ಒಮ್ಮೆಯೂ ಅವರನ್ನು ಕಂಡಿಲ್ಲವಾದರೂ ತಮ್ಮ ಬರಹಗಳಿಂದಲೇ ಹತ್ತಿರವಾಗಿಬಿಡುತ್ತಾರವರು.
ರವಿಬೆಳೆಗೆರೆಯವರ ಐವತ್ತನೆಯ ಹುಟ್ಟುಹಬ್ಬಕ್ಕೆ ಶುಭಾಶಯಗಳು. ‘ಫಸ್ಟ್ ಹಾಫ್’ ಎಂಬ ಚಾಕಲೇಟ್ ಬುಟ್ಟಿ ತರುತ್ತಿರುವುದಕ್ಕೆ, ತರುತ್ತಿರುವವರಿಗೆ , ಅಭಿವಂದನೆಗಳು,ಅಭಿನಂದನೆಗಳು.