
ಗೆಳೆಯರೇ,
ನಮ್ಮ ಪಾಲಿಗೆ ಗಾಂಧೀಜಿ ನಾವು ಮುಟ್ಟಲಾರದ ಒಂದು ಸ್ಥಿತಿ ಮತ್ತು ಗತಿ. ಹೀಗಾಗಿ ನಾವು ಗಾಂಧೀಜಿಯನ್ನು ಗೇಲಿ ಮಾಡುತ್ತಲೇ ಬಂದೆವು, ಕುಡುಕರ ಗುಂಪು ಕುಡಿಯದ ಗೆಳೆಯನನ್ನು ಛೇಡಿಸುವ ಹಾಗೆ. ಸಜ್ಜನ ಮಿತ್ರರನ್ನು ಹುರುಪಿನ ಪೋಲಿ ಗೆಳೆಯರು ರೇಗಿಸುವ ಹಾಗೆ. ಸಿಗರೇಟು ಸುಡುವವರು, ಕಾಫಿ ಕೂಡ ಕುಡಿಯದವನನ್ನು ತಮಾಷೆ ಮಾಡಿದ ಹಾಗೆ. ಆದರೆ ಒಳಗೊಳಗೇ ಎಲ್ಲರಿಗೂ ಗಾಂಧಿಯಂತಾಗುವ ಆಶೆ. ಆ ನಿಷ್ಠುರತೆಯನ್ನು ದೊರಕಿಸಿಕೊಳ್ಳುವ ಆಸೆ. ಅದು ಸಾಧ್ಯವಾಗುವ ಮಾತಲ್ಲ ಅಂತ ಗೊತ್ತಿದ್ದರೂ ಆ ಆಸೆ.
ಗೆಳೆಯ ಜಿ ಎನ್ ಮೋಹನ್ ಗಾಂಧಿ ಜಯಂತಿಯ ನೆನಪಿಗೊಂದು ಗಾಂಧೀ ಮಾತು ಕಳಿಸಿದ್ದಾರೆ. ಅದನ್ನು ನಿಮ್ಮೆಲ್ಲರಿಗೆ ದಾಟಿಸುತ್ತಿದ್ದೇನೆ.
ಗಾಂಧಿ ನಮ್ಮ ವಿದ್ಯೆಯಾಗಲಿ. ಸಜ್ಜನಿಕೆಯಾಗಲಿ, ದಿಟ್ಟತನವಾಗಲಿ.
3 comments:
Just a thought from my naughty hat:
ನಿಮ್ಮ "ಶಕುಂತಲೆ"ಯ post ಮತ್ತು ಈ "ಗಾಂಧಿ"ಯ post ಎರಡನ್ನೂ ಒಂದಾದ ಮೇಲೊಂದರಂತೆ ಓದಿದಾಗ ನನಗನಿಸಿದ್ದು: ಗಾಂಧಿ = ಶಾಪ!? ಯಾಕೆಂದ್ರೆ....
"ಶಕುಂತಲೆ" ಲೇಖನದಲ್ಲಿ "ಶಾಪ ಎನ್ನುವುದು ಒಂದು ಸ್ಥಿತಿ ಮತ್ತು ಗತಿ" ಎಂದಿದ್ದೀರಿ.
"ಗಾಂಧಿ" ಲೇಖನದಲ್ಲಿ "ನಮ್ಮ ಪಾಲಿಗೆ ಗಾಂಧೀಜಿ ನಾವು ಮುಟ್ಟಲಾರದ ಒಂದು ಸ್ಥಿತಿ ಮತ್ತು ಗತಿ."
ನಕ್ಕು ಬಿಡಿ, ಹಾಗೇ ಸುಮ್ಮನೇ....!
namma palige Gandhiji naau muttalagada ondu sthiti gati endu Pholosaphically heluvvaru, innondu kadege nakku bidi hage summane endu salahe maduvavar sthiti gati enu?
ಗಾಂಧೀಜಿಯವರನ್ನು ನಾವು ಒಂದು ಸವಾಲಾಗಿ ನೋಡಿದ್ದರಿಂದಲೇ ಅವರ ದಾರಿಯಿಂದ ಹೊರಳಿ ದೂರ ಹೋದೆವೇನೋ..
ಅವರ ಎಲ್ಲ ವೈರುಧ್ಯಗಳ ನಡುವೆಯೂ ಭಾರತಕ್ಕೆ ಅವರೊಂದು ಶಕ್ತಿಯಾಗಿ ಒದಗಿದ್ದನ್ನು ಮರೆಯಬಾರದು. ಪೂಜೆ, ಅನುಸರಣ ಬೇಕಿಲ್ಲ, ಪ್ರೀತಿ ಸಲ್ಲಲೇಬೇಕು.
Post a Comment