Tuesday, June 10, 2008

ಸುಳಿಯಿದೆ, ಈಜುವುದು ಅಪಾಯಕಾರಿ

ವೈಶಾಖದ ರಾತ್ರಿಗಳಲ್ಲಿ
ಅಪರೂಪ ತಂಗಾಳಿ.
ವಸಂತಸೇನೆಯ ನೆನಪಿಗೆ
ಮನಸ್ಸು ಶಕಾರ

ಘಾಟಿ ರಸ್ತೆಯ ಆರಂಭಕ್ಕೆ ಸೂಚನೆ:
ಏರುಹಾದಿಗಳಲ್ಲಿ
ವಾಹನಗಳನ್ನು ಮುನ್ನಡೆಸಬೇಡಿರಿ’
ಇಳಿಯುವ ವಾಹನಗಳ ಬಗ್ಗೆ
ಅವಳಿಗೆ ನಿರಾಸಕ್ತಿ

ಹೆಬ್ಬೆರಳು ಎಡವಿ ನೆತ್ತರು ಒಸರಿದರೂ
ಕಣ್ಣಲ್ಲಿ ನೀರು.
ಆಹಾ ಎಂಥ ಸಂಬಂಧ.
ಆ ಬೆಟ್ಟದಲ್ಲಿ ಮೋಡಗುದ್ದಾಟ.
ಈ ಬಯಲಲ್ಲಿ
ಶ್ರಾವಣದ ಇಳಿನೀರು.

ಮುಟ್ಟಬೇಕು, ಮುಟ್ಟಿಯೂ
ಮುಟ್ಟದಂತಿರಬೇಕು.
ಮುಟ್ಟಬಾರದು, ಮುಟ್ಟದಿದ್ದರೂ
ಮುಟ್ಟಿದಂತಿರಬೇಕು
ಇವೆರಡರ ನಡುವೆ
ಮಾತೆ
ಜ್ಯೋತಿರ್ಲಿಂಗ
ಎಲ್ಲವೂ
ಕಣಿವೆಗೆ ಬಿದ್ದ ಉತ್ತರದ
ತುಡುಗು ಗಾಳಿಗೂಳಿ.

8 comments:

Anonymous said...

abbhaa... susthaaytu

:-o

malnadhudgi..

ಸುಧನ್ವಾ said...

ರಾಮಾನುಜನ್ ಕವಿತೆಗಳದ್ದೇ ಲಯ, ಶೈಲಿ ಅಲ್ವಾ? ಬರೀತಿರಿ.

Anonymous said...

ಹೆಬ್ಬೆರಳು ಎಡವಿ ನೆತ್ತರು ಒಸರಿದರೂ
ಕಣ್ಣಲ್ಲಿ ನೀರು.
ಆಹಾ ಎಂಥ ಸಂಬಂಧ.
ಆ ಬೆಟ್ಟದಲ್ಲಿ ಮೋಡಗುದ್ದಾಟ.
ಈ ಬಯಲಲ್ಲಿ
ಶ್ರಾವಣದ ಇಳಿನೀರು...
ishtavada salugalu..

kadu noda hoda jogi kaviteyodane banda hagide...
swagata..
-alemari

thamboori said...

ಪ್ರಶಸ್ತಿ ಬಂದ ಖುಷಿಯಲ್ಲಿ ಬರೆದ ಕವನವಾ?

ಪ್ರದ್ಯುಮ್ನ ಭಟ್ said...

welcome........BACKKKK

Anonymous said...

nimma manassemba markatakike namonnamaha
-G N Mohan

ಸಿಂಧು Sindhu said...

ಪ್ರಿಯ ಜೋಗಿ,

ಪುನರಾಗಮನ ಖುಶಿಯಾಯ್ತು. ಕಾಡ ಬೆಳದಿಂಗಳಲ್ಲವೇ -ಕೃಷ್ಣಪಕ್ಷ ಮುಗಿಯುತ್ತಲೂ ತನ್ನ ಪಾಡಿಗೆ ತಾನು ಹೊಳೆದೇ ಹೊಳೆದೀತು ಎಂಬ ಅನಿಸಿಕೆಯಿತ್ತು. ಅದಕ್ಕಿಂತ ಹೆಚ್ಚಾಗಿ ಬರಹಪ್ರೀತಿಯ ಮನಸ್ಸು ಬರೆಯದೆ, ಬರೆದದ್ದನ್ನು ಹಂಚದೆ ಹೇಗೆ ಸುಮ್ಮನಿದ್ದೀತು ಎಂಬ ಕುತೂಹಲವಿತ್ತು..

ವೈಶಾಖದ ಬಿಸಿಯಲ್ಲಿ ಬೀಸಿಬಂದ ತಂಗಾಳಿ ಈ ಜೇಷ್ಟದಲ್ಲಿ ತಂಪು ಮಳೆಯೇ ಸುರಿಸುತ್ತದೆ ಅಲ್ಲವಾ-ಆಷಾಢದ ಬಿರುಮಳೆಗೆ ಮುನ್ನವೇ..?

ಪ್ರೀತಿಯಿಂದ
ಸಿಂಧು

ಗಿರೀಶ್ ರಾವ್, ಎಚ್ (ಜೋಗಿ) said...

-ನಾಲ್ಕಾರು ಪೋಲಿ ಸಾಲುಗಳನ್ನು ಇಷ್ಟಪಟ್ಟದ್ದು ನಿಮ್ಮ ಪ್ರೀತಿಯನ್ನು ತೋರಿಸುತ್ತದೆ. ಥ್ಯಾಂಕ್ಸ್.
-ಕಾಡ ಬೆಳದಿಂಗಳ ಜೊತೆ ನೆನಪಿಸಿಕೊಂಡಿದ್ದಕ್ಕೆ ಥ್ಯಾಂಕ್ಸ್ ಸಿಂಧು. ನನ್ನ ಮೆಚ್ಚಿನ ರೂಪಕ ಅದು.
-ಸುಸ್ತಾಗುವುದು ಮತ್ತು ದಣಿಯುವುದು ಲವಲನಿಕೆಯ ಲಕ್ಷಣ ಎಂದು ಎಲ್ಲೋ ಓದಿದ ನೆನಪು, ಮಲೆನಾಡ ಹುಡುಗೀ.
-ರಾಮಾನುಜನ್ ನನ್ನ ಮೆಚ್ಚಿನ ಕವಿ, ಸುಧನ್ವಾ.
-ಅಲೆಮಾರಿಗೊಂದು ಅಲೆಮಾರಿ ಧನ್ಯವಾದ.
-ಕವನ ಬರೆದ ಖುಷಿಗೆ ಪ್ರಶಸ್ತಿ ಬಂತು ತಂಬೂರಿ
-ಥ್ಯಾಂಕ್ಯೂ ಬ್ರದರ್, ಪ್ರದ್ಯುಮ್ನ
-ಡಿಯರ್ ಮೋಹನ್, ಮನಸೇ ಮನಸಿನ ಮನಸಾ ನಿಲ್ಲಿಸುವುದು.

-ಜೋಗಿ