Friday, June 13, 2008

ಋತುಸಂಹಾರ

ಚಾರ್ಮಾಡಿ ಘಾಟಿಯಿಂದ
ಕೆ

ಗೆ

ಳಿ
ಯು
ತ್ತಾ
ಬಂದ ಹಾಗೆ ಸೆಕೆ.
ಕಡಲಿಗೆ ಅಗ್ನಿ ನಾಲಗೆ
ಗಾಳಿಗೆ ಬೆಂಕಿಬೆರಳು.

ಯಾವ ಘಾಟಿ ರಸ್ತೆ
ಇಳಿದರೂ
ನಡುಹಾದಿಯಾಚೆ
ಸುಡುಕೆಂಡ


ದ ಹಾಗೆಲ್ಲಾ
ರಿ


ಒಳಗೊಳಗೆ ತಂಗಾಳಿ
ತೀಡಿ
ಅಂಗಾಂಗ ಚಂದನ
ಗಂಧಘಮಘಮ

ಪ್ರಸ್ತಭೂಮಿ
ಮಾತ್ರ
ಸದಾ
ಸಮಶೀತೋಷ್ಣವಲಯ.

ಮಧುಮಲೆಯ ತುತ್ತತುದಿಗೆ
ಏರಿ ನೋಡಿದರೆ
ಅದರಾಚೆ
ಕೈಗೆಟುಕುವಂತೆ
ಕ್ಷೀರಪಥ

ಎಲ್ಲವೂ
ಅಯೋಮಯ

9 comments:

Raghavendra Joshi said...

ಎಲ್ಲಿಂದೆಲ್ಲಿಗೋ ಹಾರುವ ಶಬ್ಧಗಳ ನಡುವೆಯೂ
ಟೆಕ್ನಿಕಲ್ ಟಚ್ಚಿದೆ..!

Anonymous said...

hats off
-g n mohan

Navilugari said...
This comment has been removed by the author.
Navilugari said...

ನಿಜ, ಕರಾವಳಿಯಲ್ಲಿ ವಿಪರೀತ ಸೆಖೆ ಇತ್ತು..ಆದ್ರೆ ಈಗ ಆ ಋತು ಸಂಹಾರವಾಗಿದೆ ;-)
ಈಗ ..
ಕೆಳಗಿಳಿಯುತ್ತ ಬಂದ ಹಾಗೆ..
ಮಳೆಯ ತುಂತುರ ಚಿವುಟು
ಕಡಲತ್ತ ಚಾಚುವ ಇಂದಷ್ಟೆ ಹುಟ್ಟಿದ
ಪುಟ್ಟ ತೊರೆಗಳೊನಪು..
ಗಾಳಿಯೊಡಲಲ್ಲೆಲ್ಲ
ಹನಿಯ ತಂಪು, ಮಣ್ಣ ಕಂಪು... :-)

Anonymous said...

ಜೋಗಿ ಸಾರ್..
ಪದ್ಯ ಚೆನ್ನಾಗಿದೆ..
ತುಂಬಾ ದಿನಗಳ ಹಿಂದೆ... ಲಂಕೇಶ್ ರೂಪಕ ಕವಿಗಳು ಸರಣಿಯಲ್ಲಿ ಹೀಗೆ ತಾಂತ್ರಿಕವಾಗಿ ಭಿನ್ನ ಪ್ರಯೋಗಗಳನ್ನು ಮಾಡಿದ್ದ ಕವಿಗಳನ್ನು ಪರಿಚಯಿಸಿದ್ದರು.ಅವರೆಲ್ಲಾ ಪದ್ಯದಲ್ಲೇ ಕಾರಂಜಿಯನ್ನು ಬರೆದಿದ್ದರು.
ಕನ್ನಡದಲ್ಲೀ ಇಂಥ ಪ್ರಯೋಗಗಳು ಆಗಿದ್ದಾವ?
ಏನೇ ಇರಲಿ.. ಜೋಗಿ ಜೋಳಿಗೆಯಲ್ಲಿ ಕಥೆಯಷ್ಟೇ ಅಲ್ಲ.. ಕವಿತೆಗಳೂ ಇವೆ ಎಂಬುದು ಸ್ಪಷ್ಟವಾಯಿತು.. ಮತ್ತಷ್ಟು ಪದ್ಯಗಳು ಹೊರಬರಲಿ...

ಳಿ
ದು
ಬರಲಿ
ಹ... ರಿ... ದು ..
ಬರಲಿ...
-ಅಲೆಮಾರಿ

ಶ್ರೀನಿಧಿ.ಡಿ.ಎಸ್ said...

:) ಒಂಥರ ಮಜವಾಗಿದೆ! ತೀರಾ ವಿಮರ್ಶೆ ಮಾಡುವಷ್ಟೆಲ್ಲ ಗೊತ್ತಿಲ್ಲ ನಂಗೆ! ಖುಶಿಯಾಯ್ತು ಓದಿ.

ಮೃಗನಯನೀ said...

:-o

ಸಿಂಧು Sindhu said...

ಓದಿ ತುಂಬ ಖುಶಿಯೆನಿಸಿತು.
ಘಟ್ಟ ಹತ್ತಿ ಕೆಳಗೆ ಇಳಿದ ಅನುಭವವೇ ಆಯ್ತು.
"ಮಲೆಯ ಮೇಲೇರಿದಾಗ
ಕೈಗೆಟುಕುವಂತೆಇರುವ ಕ್ಷೀರಪಥ" ದ ಭಾವಾಭಿವ್ಯಕ್ತಿ ತುಂಬ ಇಷ್ಟವಾಯ್ತು.

ಪ್ರೀತಿಯಿಂದ
ಸಿಂಧು

Deepasmitha said...

kavite bareda shaili tumbaa chennaagittu. naanobba hosa blogger, nannadu http://www.ini-dani.blogspot.com/ kannaDa mattu english'inalli. Odi vimarshisi.