Saturday, June 14, 2008

ದಶಾವತಾರಂ

ದಶಾವತಾರಗಳ
ಪೈಕಿ
ರಾಮನಿಗೆ ಏಕಪತ್ನಿ
ಕೃಷ್ಣನಿಗೆ ಬಹುಪತ್ನಿ
ಮಿಕ್ಕುಳಿದ ಅಷ್ಟಾವತಾರಗಳಿಗೆ
ಹೆಣ್ಣ ಹಂಗಿಲ್ಲ.

ರಾಮಚಂದ್ರನಿಗೆ
ಇದ್ದೊಬ್ಬಳೇ ಪತ್ನಿ
ಅನುಗಾಲವೂ
ಜತೆಗಿರಲಿಲ್ಲ.
ಕೃಷ್ಣ
ಹದಿನಾರುಸಾವಿರದ
ಎಂಟು
ಮಹಿಷಿಯರ ಕಟ್ಟಿಕೊಂಡರೂ
ಬೆಣ್ಣೆಯ ವ್ಯಾಮೋಹ
ಬಿಡಲಿಲ್ಲ.

ಈ ಕಾಲದ
ಬ್ರಹ್ಮಚಾರಿಗಳು
ಇನ್ನು ದೇವರೇ ಗತಿ
ಎಂದಾಗಲೆಲ್ಲ
ಇಂಥದ್ದೇ
ಏಕಾಂಗಿ ನೆನಪು.

ನಮ್ಮನಮ್ಮ
ಅವತಾರಗಳಲ್ಲೂ
ಮತ್ಸ್ಯರೂಪಿಯಾದಾಗ
ಜಾರತನ,
ಕೂರ್ಮಾವತಾರಿ ಆದಾಗ
ಹಿಂಜರಿಕೆ
ನೆತ್ತಿ ಮೇಲೆ ಹೊತ್ತು ಮೆರೆದರೆ
ವಾಮನ
ಹೊಸಿಲಾಚೆ ಕಾಲು
ಚಾಚಿದ್ದರೆ ನರಸಿಂಹ
ಅಮ್ಮನನ್ನೇ ಅನುಮಾನಿಸಿ
ಪರಶುರಾಮ,
ಎಲ್ಲ ತೊರೆದು
ಬುದ್ಧ
ಕುದುರೆಬಾಲಕ್ಕೆ ಜುಟ್ಟು
ಕಟ್ಟಿಕೊಂಡರೆ ಕಲ್ಕಿ.

ರಾಮನಾದವನಿಗೆ
ಕೃಷ್ಣಜನ್ಮ ಕಟ್ಟಿಟ್ಟ ಬುತ್ತಿ.
ಕೃಷ್ಣನಿಗೆ
ರಾಮತ್ವ ಪೂರ್ವಾರ್ಜಿತ
ಕರ್ಮ.

ಟಿಪ್ಪಣಿ-
ಈ ಕವಿತೆಯ ಕೊನೆಯ ಸಾಲುಗಳು ಹೀಗಿದ್ದವು.

ನೀನೊಲಿದರೆ
ಕೊರಡು ಕೊನರುವುದೆಂಬ
ಭರವಸೆಯೆ
ದಾರಿ
ದೀಪ

ಈ ಸಾಲುಗಳನ್ನು ಬರೆಯುವ ಹೊತ್ತಿಗೇ ಅನುಮಾನವಿತ್ತು. ಗೆಳೆಯ ನಾಗರಾಜ ವಸ್ತಾರೆ, ಅದು ಬೇಕಿತ್ತೇ ಅನ್ನುವ ಅನುಮಾನದ ಮೂಲಕ ಅದರ ನಿರರ್ಥಕತೆಯನ್ನು ಹೇಳಿದ್ದಾರೆ. ಹೀಗಾಗಿ ಈ ಸಾಲುಗಳನ್ನು ಕವಿತೆಯಿಂದ ಸರ್ಜರಿ ಮಾಡಿ ಬೇರ್ಪಡಿಸಲಾಗಿದೆ.

10 comments:

Anonymous said...

'ಉಹು ಇದು ಜೋಗಿ ಅಲ್ಲ ಇನ್ನ್ಯಾರದೋ ಆತ್ಮ ಅವರಲ್ಲಿ ಹೊಕ್ಕಿದೆ..' ಅಂದ್ರೆ ನಂಗೆ ನಿಮ್ ಪದ್ಯಗಳನ್ನ ಓದಿ ಸಿಕ್ಕಾಪಟ್ಟೆ ಖುಷಿ ಆಗ್ತಿದೆ ಅಂತ ನಿಮ್ಗೆ ಗೊತ್ತಾಗತ್ತಾ...

Anonymous said...

ನೆರೆಯಂತೆ ಪದ್ಯ ತರುತ್ತಿದ್ದೀರಿ. ನಿಮ್ಮ ಪದ್ಯತನ ನನಗೆ ಗೊತ್ತಿರಲಿಲ್ಲ. ಈ ದಶಾವತಾರಂನಲ್ಲಿ ಕೊನೆಯ ಸಾಲು- ನೀನೊಲಿದರೆ... ಭರವಸೆಯೆ ದಾರಿದೀಪ ಬೇಕಿತ್ತೆ? ಇದರ ಹಿಂದೆಯೇ ಪದ್ಯ ಸಂಪನ್ನ ಅನ್ನಿಸಿತು. ಮುಸ್ಸಂಜೆಗಳ ಮನ್ನಾ ಅದ್ಭುತವಾಗಿದೆ. ಮನಸ್ಸ್ಸು ಶಕಾರ ಅನ್ನುವುದು ಅನನ್ಯ. ನಿಮಗೆ ಮಾತ್ರ ಇದು ಸಾಧ್ಯ. ಹೀಗೆ ತೋಚಿಸಿಕೊಳ್ಳೋದು ಹೇಗೆ ಹೇಳಿ.

ವಸ್ತಾರೆ

Raghavendra Joshi said...

ಬಾಯಿ ಕಟ್ಟಿದೆ.
ಮಿದುಳು ಸತ್ತೋಗಿದೆ.
ವಿಮರ್ಶೆಯೆಂಬುದು ಹ್ಯಾಗೆ ಕೇಜಿ ಸ್ವಾಮೀ..
ಬರೀ ಸಾಷ್ಟಾಂಗ ನಮಸ್ಕಾರ!
-ರಾಘವೇಂದ್ರ ಜೋಶಿ.

Anonymous said...

jogi yaava kaada hokku bandu ishtellaa kavite tandiri? ondu original sparsha ide.
-g n mohan

autumn nightingale said...

ಸರ್ಜರಿ ಮಾಡಿದ್ದು ಒಳ್ಳೆಯದಾಯಿತು. ಕವಿತೆ ಚೆನ್ನಾಗಿದೆ...

ಸಿಂಧು Sindhu said...

ಆಷಾಢದ ಎಲ್ಲ ಲಕ್ಷಣಗಳೂ ಕಾಣಿಸಿಕೊಂಡಿದೆ.. :)
ಖುಶಿಯಾಗತ್ತೆ ಓದಕ್ಕೆ.
ಮಜವಾದ ಕವಿತೆ ಇದು.ಮತ್ತೆ ಮತ್ತೆ ಓದಿ ಖುಶಿಯಾಯಿತು.

ಹೌದು ವಸ್ತಾರೆಯವರ ಸಲಹೆ ಸರಿ. ಕೊನೆಯ ಸಾಲುಗಳು ಲವಲವಿಕೆಯ ಕವಿತೆಯ ಕಾಲಿಗೆ ಕಟ್ಟಿದ ಅನಾವಶ್ಯಕ ಗುಂಡಿನ(ಗುಂಡುಕಲ್ಲು ಮತ್ತೆ!) ಹಾಗಿತ್ತು.

ಪ್ರೀತಿಯಿಂದ
ಸಿಂಧು

B.Suresha said...

bahaLa dhina ninthidda jogimaneyalli maththe saddu!
Jogiya pennge maththe jaagaraNeyo?
Khushi.
Thilidha sathyagaLa maththondu maggulanna theredhu iduththiddiri.
adharindha aanandha!
keep writing JOGI
B.Suresha

ವಿನಾಯಕ ಕೆ.ಎಸ್ said...

devaranella karantara daatiyalle jaadisalu horattiddiraa antaa annisitu. jogiya hosa avaataaradalli bareda dashaavaataara sakkata majavaagide
vinayaka kodsara

Bhavana said...

kaviteya konege kattariyaadisidde sari. kavite superb.aagaga kaaneyaadru no. probs. baruvaaga inta kavite tandare saaku.
Bhaani23
Mysore.

sandhya said...

"Neenolidar.." aa paryada jote seradiddaru, swatantravada hanigavite agbodalwa girish?