Monday, June 23, 2008

ಹರೆಯ ಉಕ್ಕಿದಾಕೆಗೆ ಹಿತವಚನ ಎಂಬಂತೆ..

ಅವನ
ನೆನಪೂ ಭಾರವಾಗಿ
ಕಂಡ ದಿನ
ಶಕುಂತಳೆ
ಉಂಗುರ ಕಳಕೊಂಡದ್ದೂ
ಸಾರ್ಥಕ

ನಿನ್ನ
ಉತ್ಕಟ ಬಯಕೆಗಳನ್ನು
ನಿಯಂತ್ರಿಸುವುದು
ತಪ್ಪು ಎಂದು ಗೊತ್ತಾದ
ದಿನ
ನೀನು ಮುದುಕಿಯಾಗುವೆ.

ಅವನ ತುಟಿ
ಕಚ್ಚುವ ಕ್ಷಣ
ಮುತ್ತುಗದ ಹೂವರಳಿದ
ತೋಟ ಕಣ್ಮುಂದೆ ಸುಳಿಯದೇ ಹೋದರೆ
ನೀನು ಪ್ರೀತಿಸಿದ್ದು ವ್ಯರ್ಥ

ಜಗತ್ತಿನ ಎಲ್ಲ ನಿಯಮಗಳನ್ನು
ಮೀರಿದ್ದು
ಅಂಗಾಂಗದ
ಪುಲಕ
ಎನ್ನುವುದನ್ನು ತಿಳಿದುಕೊಳ್ಳದೇ
ಇದ್ದವಳ
ಬಯಕೆ ಅಹಲ್ಯೆಯಂತೆ
ಕಲ್ಲಾಗುವುದು.

ರಾವಣನೂ ಕದ್ದೊಯ್ಯದ
ಲಕ್ಷ್ಮಣನೂ ಹಂಬಲಿಸದ
ಊರ್ಮಿಳೆ
ಆಗು ಅಂತ
ಯಾರಾದರೂ ಹೇಳಿದರೆ
ಸುಟ್ಟು ಹೋಗು.

13 comments:

Anonymous said...

ಇಲ್ಲಿರುವ ಸಾಲುಗಲೆಲ್ಲ ನಮ್ಮ ಕಲ್ಪನೆಗೂ ಮಿಗಿಲಾದದ್ದು:) ತುಂಬಾ ಇಷ್ಟಾ ಆಯ್ತು:)

Anonymous said...

jogi

iruvudellava bittu kaviteyedege tudivude jeevana....alva. nimma kavite namma olagannu bataabayalaagisuttide. ee kavana nanna kavana sahaa
-g n mohan

Anonymous said...

ಚಂದವಿದೆ. ಅಷ್ಟೇ ಪುರಾವೆ ಪುರಾಣಗಳ ಭಾರವಿದೆ. ರಾವಣ ಕದ್ದೊಯ್ಯದ, ಲಕ್ಷ್ಮಣ ಹಂಬಲಿಸದ `ಅವಳು' ಇಡೀ ಪದ್ಯವನ್ನು ಧ್ವನಿಸುತ್ತಾಳೆ. ಹುರ್ರೇ!!

ನೀವು ನಿಮ್ಮೊಳಗಿನ ಪದ್ಯಕಾರನನ್ನು ಈ ತನಕ ಬಿಗಿ ಹಿಡಿದು ಪ್ರಮಾದ ಮಾಡಿದ್ದೇಕೆ?

-ವಸ್ತಾರೆ

Anonymous said...

ಜೋರ್ ಕ ಜಟ್ಕ, ಧೀರೆಸೆ ಲಗೆ!

-ಚಂದಿನ

Anonymous said...

ನಕ್ಸಲೈಟರ ರಣಕಹಳೆಯನ್ನ
ಕಮ್ಮುನಿಸ್ಟರು ಊದಿದಂತಿದೆ..!
ಚೆನ್ನಾಗಿದೆ.
-ರಾಘವೇಂದ್ರ ಜೋಶಿ.

Anonymous said...

ವ್ಹಾ ಎಷ್ಟು ಚೆನ್ನಾಗಿದೆ ಸಾರ್. ನಿಜಕ್ಕೂ 'ಕಲ್ಪನೆ' ಎನ್ನುವುದು ಕವಿಗೆ ಮಾತ್ರ ಒಲಿಯುವ ಸರಸ್ವತಿ.
"ಜಗತ್ತಿನ ಎಲ್ಲ ನಿಯಮಗಳನ್ನು
ಮೀರಿದ್ದು
ಅಂಗಾಂಗದ
ಪುಲಕ
ಎನ್ನುವುದನ್ನು ತಿಳಿದುಕೊಳ್ಳದೇ
ಇದ್ದವಳ
ಬಯಕೆ ಅಹಲ್ಯೆಯಂತೆ
ಕಲ್ಲಾಗುವುದು."
ತುಂಬಾ ಇಷ್ಟ ಪಟ್ಟ ಸಾಲುಗಳು. ನಿಜಕ್ಕೂ ಕಿಕ್ ಕೊಡುವ ಸಾಲುಗಳು ಎಂದ್ರೆ ಕೊನೆಯವು. "ಕಲ್ಪನೆಗಳು ಸುಳ್ಳು ಎಂದು ಯಾರಾದರೂ ಹೇಳಿದ್ರೆ ... ಸುಟ್ಟು ಹೋಗಲಿ..."

dinesh said...

ತುಂಬಾ ಚೆನ್ನಾಗಿದೆ...

ಹರೀಶ್ ಕೇರ said...

Bright.
I remembered NEELU.
- Harish kera

Anonymous said...

surprise aaglilla, santosha ashte. kelavaru kavite bareede idru kavitva irutte. neevu aa saalinavaru.

-Vicky.

Keshav.Kulkarni said...

ಲಂಕೇಶರ ನಂತರ ಇಷ್ಟೊಂದು ಚಂದದ ನೀಲುಗಳನ್ನು ಓದಿದ್ದುಉ ಈಗಲೇ!

ಕೇಶವ

ರಾಧಿಕಾ ವಿಟ್ಲ said...

ನಿಜಕ್ಕೂ ಅದ್ಭುತ ಸಾಲುಗಳು.
- ರಾಧಿಕಾ

ಶಾಂತಲಾ ಭಂಡಿ (ಸನ್ನಿಧಿ) said...

ಪ್ರೀತಿಯ ಜೋಗಿ...
ಕವಿತೆಯ ಸಾಲುಗಳಲ್ಲಿ ಸ್ತ್ರೀಪರ ಸಂವೇದನೆಯಿದೆ. ನಿಜವಾಗಿಯೂ ಇಷ್ಟವಾಯ್ತು.
"ಗಂಗೆಯ ಕಷ್ಟವು ಗೌರಿಗೆ ತಿಳಿಯದು
ಹೆಂಗಸಿನ ಕಷ್ಟವು ಗಂಡಸಿಗೆ"
ಆದರಿಲ್ಲಿ ಎಲ್ಲವೂ ಸ್ತ್ರೀಪರಸಾಲುಗಳೇ ಶೋಭಿಸುತ್ತಿವೆ. ವಂದನೆ. ತುಂಬ ಚಂದದ ಕವಿತೆ.

ವಸಂತ್ ಗಿಳಿಯಾರ್ said...

ಎಷ್ಟು ಚಂದದ ಸಾಲುಗಳು ....
ನಿಮ್ಮ ಪದದ ಅಂಗಡಿಯಿಂದ ನನಗೊಂದಿಷ್ಟು
ಪದಗಳನ್ನ ಕಡ ಕೊರ್ಪೆರಾ?