Sunday, July 8, 2007

ಗೆಳೆಯರ ಪ್ರೀತಿಯ ಒಂದು ಕ್ಷಣ
ನನಗೆ ತುಂಬ ಖುಷಿಕೊಟ್ಟ ಕ್ಷಣ ಅದು. ನನ್ನನ್ನು ಪತ್ರಿಕೋದ್ಯಮಕ್ಕೆ ಕರೆತಂದ ಪರಮಗುರು ರವಿ ಬೆಳಗೆರೆ, ಈಗ ನಾನು ಕೆಲಸ ಮಾಡುತ್ತಿರುವ ಕನ್ನಡ ಪ್ರಭವನ್ನು ನಾನು ಮತ್ತಷ್ಟು ಪ್ರೀತಿಸುವುದಕ್ಕೆ ಕಾರಣರಾದ ಸಂಪಾದಕ ಎಚ್. ಆರ್. ರಂಗನಾಥ್, ನಾನು ತುಂಬ ಮೆಚ್ಚುವ ನಾಟಕಕಾರ ಮತ್ತು ನಿರ್ದೇಶಕ ಟಿ. ಎನ್. ಸೀತಾರಾಮ್ ನನ್ನ ಕತೆಗಳ ಸಂಕಲನವನ್ನು ಬಿಡುಗಡೆ ಮಾಡಿದರು.
ಮುಂದಿನದು ದೇವರಾ ಚಿತ್ತ...

14 comments:

Vikram Hathwar said...

ಜೋಗಿ-

ಮತ್ತೊಮ್ಮೆ ಕಂಗ್ರಾಟ್ಸ್!

ಪುಸ್ತಕ ಕೈಗೆ ಬಂದು ಎದೆಯೊಳಗೆ ಇಳಿದ ಮೇಲೇನೇ ನಿಮಗೆ ಥ್ಯಾಂಕ್ಸ್ ಹೇಳೋದು :-)

hpn said...

ಅಭಿನಂದನೆಗಳು!

rudregouda said...

ಸರ್ ಅಭಿನಂದನೆಗಳು

ಹೊನ್ನಾಳಿ ಚಂದ್ರಶೇಖರ್ said...
This comment has been removed by the author.
ಹೊನ್ನಾಳಿ ಚಂದ್ರಶೇಖರ್ said...

ಅಭಿನಂದನೆಗಳು, ನಿಮ್ಮ ಪುಸ್ತಕ ಓದಲು ಉತ್ಸುಕನಾಗಿದ್ದೇನೆ....

suptadeepti said...

ಜೋಗಿ ಸರ್,
ಮತ್ತೆ ಅಭಿನಂದನೆಗಳು. ನಮ್ಮ ಕಲ್ಪನೆಯ ಕೂಸುಗಳು ಅಕ್ಷರರೂಪ ಹೊತ್ತು, ಹೊತ್ತಿಗೆಯ ಹೊದಿಕೆಯೊಳಗೆ ಬೆಚ್ಚಗೆ ಕೂತು ವಿಶ್ವಪರ್ಯಟನೆಗೆ ಹೊರಟರೆ, ಖುಷಿ, ಗಾಬರಿ ಜೊತೆಜೊತೆಗೇ ಆಗುತ್ತವೆ. ಅಂಥ ಕ್ಷಣಗಳ ನೆನಪುಗಳು ಇನ್ನಷ್ಟು ಮತ್ತಷ್ಟು ಶೇಖರವಾಗುತ್ತಿರಲಿ ಎಂದು ಹಾರೈಸುತ್ತೇನೆ.

Mahantesh said...

abhinandanegaLu sir..

Anonymous said...

ಜೋಗಿ,

ಅಭಿನಂದನೆಗಳು!ರಂಗ,ರವೀ ಹಾಗೂ ಸೀತಾರಾಂ ಎಲ್ಲರೂ ಚೆನ್ನಾಗಿ ಮಾತನಾಡಿದ್ದು ನಿಜಕ್ಕೂ ಸಂತೋಷದ ವಿಷಯ.

ವೈಎನ್ಕೆ ಇದ್ದಿದ್ದರೆ ಎಷ್ಟು ಖುಷಿ ಪಡ್ತಿದ್ದರು ಗೊತ್ತಾ...

ನಿಮ್ಮಿಂದ ಮತ್ತಷ್ಟು ಕತೆಗಳು ಹೊರಬರಲಿ, ಮುಂಗಾರಿನ ಮಳೆ ಹನಿಗಳಂತೆ...

dinesh said...

ಜೋಗಿ ಸರ್, ನಿಮ್ಮಷ್ಟೇ ಸರಳತೆ ಮತ್ತು ನಿಮ್ಮಷ್ಟೇ ಆತ್ಮೀಯತೆ ನಿಮ್ಮ ಬರಹದಲ್ಲಿದೆ.ಮತ್ತೆ ಬರೆಯುವ ಕನಸನ್ನು ಚಿಗುರಿಸಿದ ಬರಹಗಳು ನಿಮ್ಮವು..ಧನ್ಯವಾದ ಸರ್...

M.K.Hegde said...

Jogi Sir,
congrats...
MK

ಗಿರೀಶ್ ರಾವ್, ಎಚ್ (ಜೋಗಿ) said...

ಪ್ರೀತಿಯಿಟ್ಟ, ಪ್ರೀತಿ ಕೊಟ್ಟ ಎಲ್ಲರಿಗೂ ಧನ್ಯವಾದ. ಕತೆಗಳು ಖ್ಯಾತಿಯನ್ನೋ ಹಣವನ್ನೋ ಸಂಪಾದಿಸಬೇಕಾಗಿಲ್ಲ. ಒಂದಷ್ಟು ಒಳ್ಳೆಯ ಗೆಳೆಯರನ್ನು ಕೊಟ್ಟರೆ ಸಾಕು. ಅಂಥ ಕೆಲಸ ಆಗಿದೆ ಎಂದು ಭಾವಿಸುತ್ತೇನೆ.
ಜೋಗಿ

ಸಿಂಧು Sindhu said...

ಪ್ರೀತಿಯ ಜೋಗಿ,

ನಿಮ್ಮ ಒಂದೊಂದೇ ಕತೆಗಳನ್ನು ಓದುತ್ತಿದ್ದೇನೆ.. ಒಂದೊಂದರಲ್ಲೂ ಎಷ್ಟು ಕತೆ.. ರೋಚಕತೆ,ಅಸಹಾಯಕತೆ,ರಂಜಕತೆ,ಸೂಕ್ಷ್ಮತೆ, ಇದು ಇನ್ನು ಸಾಕಿತ್ತು ಎನ್ನುವಂತೆ ಸಾಲುಗಳ ಕೊನೆಗೆ ದೊಡ್ಡ ಡಾಟ್ ಇಡುವ ನಿರ್ಲಿಪ್ತತೆ... ಎಲ್ಲ ಸೇರಿಸಿ ಒಂದೊಂದು ಪುಟ್ಟ ಕತೆ.. ತುಂಬ ಚೆನ್ನಾಗಿದೆ. ಇನ್ನೂ ಎಲ್ಲ ಓದಿಲ್ಲ..

ಓದಿದ್ದರಲ್ಲಿ ತುಂಬ ಇಷ್ಟವಾಗಿದ್ದು 'ನವಿಲೂರಿನ ಉಗ್ರನರಸಿಂಹಸ್ವಾಮಿಗಳ ಮನಸ್ಸಿನಲ್ಲಿ ಕಿಕ್ಕೇರಿ ನರಸಿಂಹಸ್ವಾಮಿಯ ಮಗ ಬದುಕಿ, ಅವರದೇ ಮಗ ಕುಮಾರಸ್ವಾಮಿ ತೀರಿಕೊಂಡ' ಕ್ಷಣ.. ಅಲ್ಟಿಮೇಟ್ ಅದು...
ಮಜಾ ಅನ್ನಿಸಿ ಸಿಕ್ಕಿದವರಿಗೆಲ್ಲ ಓದಿಸಿದ್ದು ಬಭ್ರುವಾಹನ..

'ನೊಂದ ನೋವನ್ನಷ್ಟೆ ಹಾಡಲೇಬೇಕೇನು, ಯಾರಿಗೂ ಬೇಡವೆ ಸಿರಿಮಲ್ಲಿಗೆ..' ಎಂಬಂತೆ - ಬದುಕಿನ ಎಲ್ಲ ಹರಿವುಗಳಲ್ಲಿ ಮಡುಗಟ್ಟಿರುವ ವಿಷಾದಗಳಿಗೆ, ತುಂಟತನ ಮತ್ತು ಕ್ಷಣಕ್ಷಣಕ್ಕೂ ಇನ್ನೇನೋ ಹೊಸದಿದೆ ಎಂಬ ಕುತೂಹಲಕಾರಿ ರೋಚಕತೆಯ ಹೊಳವು ಕೊಟ್ಟು ಹರಿಸುತ್ತೀರಿ.. ಈ ನದಿಯಲ್ಲಿ ಪ್ರವಾಹವಿಲ್ಲ, ಬತ್ತುವುದಿಲ್ಲ, ಸದಾ ಹರಿವು, ಸದಾ ಪ್ರೀತಿ..

ನಾವು ಓದುಗರಿಗೆ ಈಸು ಬೀಳಲು ತೆರೆದುಕೊಂಡ ನಿಮ್ಮ ಕಥಾಸರಿತಕ್ಕೆ ನೂರು ನಮನ.

ಮಹೇಶ ಎಸ್ ಎಲ್ said...

ಜೋಗಿ ಯವರೆ ಪುಸ್ತಕವನ್ನ ಇನ್ನು ಒದಿಲ್ಲ ಮೊನ್ನೆ ,
ಮೊನ್ನೆ ಹಾಯ್ ಬೆಂಗಳೂರ್! ನಲ್ಲಿ ರವಿ ಬೆಳಗೆರೆಯವರ ಕಾಲಂನಲ್ಲಿ ಪುಸ್ತಕ ಬೆಡುಗಡೆಯ ಪ್ರಸ್ತಾವನೆ ಇತ್ತು, ಹಾಯ್ ನಲ್ಲಿ ಜಾನಕಿ ಕಾಲಂ ನಮ್ಮೆಲ್ಲ ಗೆಳೆಯರ ಅಚ್ಚುಮೆಚ್ಚಿನ ಚರ್ಚಾವಸ್ತು ಇವತ್ತು ಪುಸ್ತಕ ಒದಿ ನಾಳೆ ಅದರ ಬಗ್ಗೆ ಬರೆಯುವೆ
ವಂದನೆಗಳೊಂದಿಗೆ

ಮಹೇಶ ಎಸ್ ಎಲ್ said...

ಜೋಗಿಯ ಕಥೆಗಳು ಓದುತ್ತಿರುವಂತೆ ಅನ್ನಿಸಿದ್ದು ಅಕ್ಷರಗಳಲ್ಲಿ,


ಸುಬ್ಬಣ್ಣ-;ಹತಾಶೆ ಅಹಂಕಾರ ಅವ್ಯಕ್ತ ಭಯ ಹೊಟ್ಟೆಕಿಚ್ಚು ನಮ್ಮೆಲ್ಲರಲ್ಲೂ ಇವೆ ಅದನ್ನ ಜೋಗಿಯವರು ಸುಬ್ಬಣ್ಣನ ಮೂಲಕ?


ಇಲ್ಲಿ ಭೀಮಸೇನಜೋಶಿಯವರು ಒಮ್ಮೆ ಅಭಿಮಾನವಾದರೆ ಮತ್ತೊಮ್ಮೆ ಹೊಟ್ಟೆಕಿಚ್ಚಿನ ಹರದಾರಿಯಾಗುತ್ತಾರೆ ಸುಬ್ಬಣ್ಣಹುಚ್ಚುಖೋಡಿಮನಸುಗಳ ಕೈಗನ್ನಡಿ.
ಗೋವಿಂದ ವಿಠಲ ಹರಿ ಹರಿ-; ದೇವರು ನಂಬಿಕೆ ಮನುಷ್ಯ ಮತ್ತು ಪ್ರೀತಿ , ಜೋಗಿಯವರು ಇಲ್ಲಿ ಇದನ್ನು ಅದ್ಭುತವಾಗಿ ಸಮ್ಮಿಲನಗೊಳಿಸಿದ್ದಾರೆ ನನಗನ್ನಿಸಿದ್ದು ಇಲ್ಲಿ ಮನುಷ್ಯ ದೇವರನ್ನು ಒಂದು ಕೆಲಸದಲ್ಲಿ ಕಂಡುಕೊಳ್ಳುವ ಪ್ರಯತ್ನವಾ .


ದೇವರು ಪ್ರೀತಿ ಇಲ್ಲವೆಂದ ಜೋಶಿಯವರು ಕರ್ತವ್ಯದ ನೆಪದಲ್ಲಿ ಎರಡನ್ನು ಒಂದೇ ಗುಕ್ಕಿನಲ್ಲಿ ಒಪ್ಪಿಕೊಳ್ಳುತ್ತಾರೆ ಜೋಗಿಯವರಿಗೆ ಸಲಾಂ
ವಿಶ್ವಸುಂದರಿ-; ಮನಸಿನ ಭಾವನೆಗಳೊಂದಿಗೆ ಜೋಗಿ ಸರ್ ಲೀಖನಿ ಅದ್ಭುತವಾಗಿ ಮಾತನಾಡಿದೆ.
ಇನ್ನೊಬ್ಬ-; ಊಹೂಂ ಇದು ನನ್ನ ಯೋಚನಾಲಹರಿಗೆ ನಿಲುಕದ್ದು, ಸಂಬಂಧಗಳ ಗಾಢತೆಯಾ? ಸ್ನೇಹಲೋಕದ ನಿಗೂಢತೆಯಾ?


ತನ್ನನ್ನೆ ತಾನು ಕಂಡುಕೊಳ್ಳುವ ವಿಚಿತ್ರ ಯತ್ನವಾ ಜೋಗಿ ಸರ್ ದಯವಿಟ್ಟು ಪರಿಹರಿಸಿ.
ಕನ್ನಡಿಯೊಳಗೆ ಗಳಗನಾಥರಿಲ್ಲ-; ಹಾಗಿದ್ದರೆ(ನನಗಷ್ಟೆ ಬದುಕಿದ್ದು ಇನ್ನೊಬ್ಬರ ಪಾಲಿಗೆ ಸತ್ತಂತಿದ್ದರೆ ನಾನು ನನಗೆ ಮಾತ್ರ ಕಾಣಿಸುತ್ತೆನಾ) ಗಮನವಿಟ್ಟು ಓದದಿದ್ದರೆ ಎಂದಿಗೂ ಅರ್ಥವಾಗದ ಮಾತು ಅನ್ನಿಸುತ್ತೆ, ಮನುಷ್ಯನ ಸ್ವಾರ್ಥಕ್ಕೆ ಕೊಡಬಹುದಾದ ಅತ್ಯುತ್ತಮ ಉದಾಹರಣೆ


ಭ್ರಮಾಲೋಕದಲ್ಲಿ ವಿಹರಿಸುವಾಗಲೆ ವಾಸ್ತವತೆಯೆಡೆಗೆ ಬದುಕು ಒದ್ದೊಡಿಸುವುದು ಅಂದ್ರೆ ಇದೇನಾ...... ನಮ್ಮ ಕಿಂದರಿಜೋಗಿಯ ಜೋಳಿಗೆಯಲ್ಲಿ ಇನ್ನು ಎನೇನು ಅಡಗಿದೆಯೊ
ಧನ್ಯವಾದಗಳೊಂದಿಗೆ