Wednesday, July 11, 2007

ನಿನ್ನ ನೀನು ಮರೆತರೇನು ಸುಖವಿದೆ?


ನಿನ್ನಯ ತಾವರೆ ತೆರ­ನ­ಡಿ­ಗ­ಳಲಿ
ಎನ್ನ­ದೆಂಬ ಈ ತನು­ಮ­ನ­ಗ­ಳನು
ಚೆನ್ನ­ಕೇ­ಶವ ಇರಿ­ಸುತ ಒಂದು
ಬಿನ್ನಹ ಕುಸು­ಮ­ವ­ನಿದ ನೀಡಿ­ರು­ವೆನು..

ಬಹುಶಃ ಮಾಸ್ತಿ­ಯ­ವ­ರ­ದ್ದಿ­ರ­ಬೇಕು ಈ ಪದ್ಯ. ಇದನ್ನು ಓದಿ­ದಾ­ಗೆಲ್ಲ ನಮ್ಮ ಬಿನ್ನ­ಹ­ಗ­ಳನ್ನೂ ಅರ್ಪಿ­ಸು­ವು­ದಕ್ಕೆ ಯಾರಾ­ದರೂ ಇದ್ದಿ­ದ್ದರೆ ಚೆನ್ನಾ­ಗಿತ್ತು ಅನ್ನಿ­ಸು­ತ್ತದೆ. ನಮಗೆ ಯಾರೂ ಇಲ್ಲ­ವಲ್ಲ ಅನ್ನುವ ಅನಾ­ಥ­ಪ್ರಜ್ಞೆ ಕಾಡು­ತ್ತದೆ. ತುಂಬ ಗಾಢ­ವಾಗಿ ಯಾರನ್ನು ನಂಬ­ಬೇಕು ಅನ್ನುವ ಜಿಜ್ಞಾಸೆ ಎದು­ರಾ­ಗು­ತ್ತದೆ.
ನಾಸ್ತಿ­ಕರ ಸಂಕ­ಷ್ಟ­ಗ­ಳಲ್ಲಿ ಇದೂ ಒಂದು. ಮೊದಲೇ ನಮ್ಮ ದೇಶದ ತುಂಬ ದೇವರು. ನಾಸ್ತಿ­ಕ­ರಿಗೆ ಹೇಳಿ­ಮಾ­ಡಿ­ಸಿದ ದೇಶ ಇದ­ಲ್ಲವೇ ಅಲ್ಲ. ಇಲ್ಲಿ ಯಾವ ಬೀದಿಗೆ ಹೋದರೂ ಅಲ್ಲೊಂದು ದೇವ­ಸ್ಥಾನ. ಕಲೆ­ಯನ್ನೂ ಸೌಂದ­ರ್ಯ­ವನ್ನೂ ಹುಡು­ಕಿ­ಕೊಂಡು ಹೊರ­ಟ­ವನು ಕೊನೆಗೆ ತಲು­ಪು­ವುದು ದೇವ­ಸ್ಥಾ­ನಕ್ಕೇ. ಅಷ್ಟೇ ಯಾಕೆ ಅತ್ಯು­ತ್ತಮ ನ್ಯಾಯಾಂಗ ವ್ಯವಸ್ಥೆ ಬೇಕಿ­ದ್ದರೂ ದೇವ­ಸ್ಥಾ­ನವೇ ಗತಿ. ಯಾರ­ನ್ನಾ­ದರೂ ನಂಬಿ­ಸ­ಬೇ­ಕಾ­ದರೂ ಆ ದೇವ­ರನ್ನೇ ಎಳೆದು ತರ­ಬೇಕು. `ದೇ­ವ­ರಾಣೆ ನಾನು ಹಾಗೆ ಮಾಡಿಲ್ಲ ಮಾರಾಯ' ಅಂದು­ಬಿ­ಡು­ತ್ತಾರೆ. ಈತ ದೇವ­ರನ್ನೇ ನಂಬು­ವು­ದಿಲ್ಲ. ಹೀಗಾಗಿ ಅವನ ಆಣೆಗೆ ಯಾವ ಲೆಕ್ಕ?
ಯಾರೋ ಬರು­ತ್ತಾರೆ; ತಿರು­ಪ­ತಿಗೆ ಹೋಗಿ ಬಂದೆ ಅಂತ ಲಾಡು ಕೊಡು­ತ್ತಾರೆ. ತಿರು­ಪತಿ ತಿಮ್ಮ­ಪ್ಪ­ನಿಗೆ ಮುಡಿ­ಯನ್ನೂ ಅದು­ವ­ರೆಗೆ ಸಂಪಾ­ದಿ­ಸಿದ ದುಡ್ಡಿನ ಒಂದು ಭಾಗ­ವನ್ನೂ ಕೊಟ್ಟು ಬಂದಿ­ರು­ತ್ತಾರೆ. ಕೊಂಚ ಇಕ­ನಾ­ಮಿಕ್ಸು ಗೊತ್ತಿ­ದ್ದ­ವ­ನಿಗೂ ಕರ್ನಾ­ಟ­ಕದ ಸಂಪ­ತ್ತಿನ ಬಹು­ಪಾಲು ಹೋಗಿ ಸೇರು­ವುದು ಆಂಧ್ರದ ತಿರು­ಪ­ತಿಗೆ, ಮಂತ್ರಾ­ಲ­ಯಕ್ಕೆ ಮತ್ತು ಮಹಾ­ರಾ­ಷ್ಟ್ರದ ಶಿರ­ಡಿಗೆ ಅನ್ನು­ವುದು ಅರ್ಥ­ವಾ­ಗು­ತ್ತದೆ.
ನಾಸ್ತಿ­ಕನ ನಿಜ­ವಾದ ಸಮಸ್ಯೆ ಇದ್ಯಾ­ವುದೂ ಅಲ್ಲ. ಅತ್ಯಂತ ದುಃಖದ ಗಳಿ­ಗೆ­ಗ­ಳಲ್ಲಿ ಯಾರ ಹತ್ತಿರ ನೋವು ಹಂಚಿ­ಕೊ­ಳ್ಳ­ಬೇಕು ಅನ್ನುವ ಪ್ರಶ್ನೆ ಕೇವಲ ನಾಸ್ತಿ­ಕ­ನನ್ನು ಮಾತ್ರ ಕಾಡ­ಬ­ಲ್ಲದು. ಪರಮ ಆಸ್ತಿ­ಕ­ನಾ­ದ­ವನು `ನೀನೇ ಅನಾಥ ಬಂಧು, ಕಾರುಣ್ಯ ಸಿಂಧು' ಅಂತ ದೇವರ ಹತ್ತಿರ ತನ್ನ ಅಹ­ವಾಲು ಹೇಳಿ­ಕೊ­ಳ್ಳ­ಬಲ್ಲ. ನಾನೇಕೆ ಪರ­ದೇಶಿ, ನಾನೇಕೆ ಬಡ­ವನೋ, ಶ್ರೀನಿಧೇ ಹರಿ­ಯೆ­ನಗೆ ನೀನಿ­ರುವ ತನಕ ಎಂದು ನೆಮ್ಮ­ದಿ­ಯಿಂದ ಇರ­ಬಲ್ಲ. ಅಷ್ಟೇ ಯಾಕೆ ತೀರಾ ತಲೆ­ಕೆ­ಟ್ಟರೆ ` ನಿನ್ನಂಥ ಸ್ವಾಮಿ ಎನ­ಗುಂಟು, ನಿನ­ಗಿಲ್ಲ. ನಿನ್ನಂಥ ದೊರೆ ಎನ­ಗುಂಟು ನಿನ­ಗಿಲ್ಲ. ನಿನ್ನಂಥ ತಂದೆ ಎನ­ಗುಂಟು ನಿನ­ಗಿಲ್ಲ. ನಿನ್ನ­ರಸಿ ಲಕುಮಿ ಎನ್ನ ತಾಯಿ, ನಿನ್ನ ತಾಯಿಯ ತೋರೋ' ಎಂದು ಹಾಡ­ಬಲ್ಲ. ಅಲ್ಲ ಕಣಯ್ಯಾ, ನಾನು ಕಷ್ಟ­ಬಂ­ದರೆ ಬೇಡಿ­ಕೊ­ಳ್ಳೋ­ದಕ್ಕೆ ನೀನಿ­ದ್ದೀಯ. ನಿಂಗೇ ಕಷ್ಟ­ಬಂ­ದರೆ ಯಾರಿ­ದ್ದಾ­ರಪ್ಪಾ ಅನ್ನೋ ಲಾ ಪಾಯಿಂಟು ಹಾಕಿ ದೇವ­ರನ್ನೇ ಅನಾ­ಥ­ಪ್ರ­ಜ್ಞೆ­ಯಲ್ಲಿ ಒದ್ದಾ­ಡುವ ಹಾಗೆ ಮಾಡುವ ಕಿಲಾಡಿ ದಾಸ­ರಿ­ದ್ದಾರೆ. ಇಲ್ಲಿ ಗಮ­ನಿ­ಸ­ಬೇ­ಕಾದ್ದು ಇಷ್ಟು; ನಿನ್ನಂಥ ಸ್ವಾಮಿ ಎನ­ಗುಂಟು ಅಂತ ಈ ದಾಸರು ನಂಬಿ­ದ್ದಾರೆ.
ಎಷ್ಟೋ ಸಲ ದಾಸ­ನಾ­ಗ­ಬೇಕು ಅನ್ನಿ­ಸು­ತ್ತದೆ. ಒಡೆ­ಯ­ನಾ­ಗು­ವು­ದ­ಕ್ಕಿಂತ ದಾಸ­ನಾ­ಗು­ವುದೇ ಸುಖ. ದಾಸ­ನಾ­ದರೆ ಒಡೆ­ಯ­ನೊಬ್ಬ ಹೇಳಿದ ಕೆಲಸ ಮಾಡಿ­ಕೊಂಡು ಇದ್ದ­ರಾ­ಯಿತು. ಅದೇ ಒಡೆ­ಯ­ನಾ­ದರೆ ಎಲ್ಲರ ಕೆಲ­ಸ­ಗ­ಳನ್ನೂ ಮಾಡ­ಬೇಕು. ಈ ಹರಿ­ದಾ­ಸರು ಸಾಮಾ­ನ್ಯ­ರೇ­ನಲ್ಲ. ದಾಸ­ದಾ­ಸರ ಮನೆಯ ದಾಸಾ­ನು­ದಾಸ ಅಂತ ತಮ್ಮನ್ನು ಕರೆ­ದು­ಕೊ­ಳ್ಳುವ ನೆಪ­ದಲ್ಲಿ, ದೇವ­ರನ್ನೇ ಭಕ್ತರ ಮನೆಯ ದಾಸ­ರ­ನ್ನಾಗಿ ಮಾಡಿ­ದ್ದಾರೆ. ದೇವರು ಭಕ್ತಿ­ಯಿಂದ ಕೇಳಿ­ದರೆ ಏನು ಬೇಕಾ­ದರೂ ಮಾಡು­ತ್ತಾ­ನಂತೆ. ಅಂಥ ಭಕ್ತರು ಸಹಸ್ರ ಸಹಸ್ರ ಸಂಖ್ಯೆ­ಯ­ಲ್ಲಿ­ದ್ದರೆ ದೇವರ ಗತಿ­ಯೇ­ನಾ­ಗ­ಬೇಕು ಹೇಳಿ? ಈ ಭಕ್ತ­ದಾ­ಸರ ಬೇಡಿ­ಕೆ­ಗ­ಳನ್ನು ಪೂರೈ­ಸುತ್ತಾ ಅವನ ಆಯು­ಷ್ಯವೇ ಮುಗಿ­ದು­ಹೋ­ಗ­ಬೇಕು. ಅದೃ­ಷ್ಟ­ವ­ಶಾ್ ದೇವ­ರಿಗೆ ಆಯುಷ್ಯ ನಿಗ­ದಿ­ಯಾ­ಗಿಲ್ಲ ಬಿಡಿ.
ಮೊನ್ನೆ ಯಾರೋ ದೊಡ್ಡ ದನಿ­ಯಲ್ಲಿ ಹಾಡು­ತ್ತಿ­ದ್ದರು; ಬಾಗಿ­ಲನು ತೆರೆದು ಸೇವೆ­ಯನು ಕೊಡೋ ಹರಿಯೇ. ಬಾಗಿ­ಲನ್ನೂ ಅವನೇ ತೆರೆ­ಯ­ಬೇಕು, ಸೇವೆ­ಯನ್ನೂ ಅವನೇ ಕೊಡ­ಬೇಕು ಎಂದರೆ ಹೇಗೆ? ಇದನ್ನೆ ಮುಂದಿ­ಟ್ಟು­ಕೊಂಡು ಇನ್ಯಾರೋ ಉಡು­ಪಿ­ಯಲ್ಲಿ ಕನ­ಕನ ಕಿಂಡಿ ಮೊದಲೇ ಇತ್ತು. ಅಲ್ಲಿ ಕಿಂಡಿ­ಯಿ­ಲ್ಲದೇ ಹೋಗಿ­ದ್ದರೆ ಆ ಕಿಂಡಿ­ಗೊಂದು ಬಾಗಿಲು ಇಲ್ಲದೇ ಹೋಗಿ­ದ್ದರೆ ಕನ­ಕ­ದಾ­ಸರು ಬಾಗಿ­ಲನು ತೆರೆದು ಅಂತ ಯಾಕೆ ಹಾಡು­ತ್ತಿ­ದ್ದರು. ಅವರು `ಗೋ­ಡೆ­ಯನು ಒಡೆದು ಸೇವೆ­ಯನು ಕೊಡೋ ಹರಿಯೇ' ಅಂತ ಹಾಡ­ಬೇ­ಕಿ­ತ್ತಲ್ಲ ಅಂತ ವಾದಿ­ಸು­ತ್ತಿ­ದ್ದರು. ಅದ­ರಲ್ಲೂ ಒಂಥ­ರದ ತರ್ಕ­ಬ­ದ್ಧ­ತೆ­ಯಿದೆ ಅಲ್ವೇ?
ಇನ್ನೊಂದು ಥರದ ಸಂವಾ­ದಿ­ಗ­ಳಿ­ದ್ದಾರೆ. ಅವ­ರದು ದೇವರ ಹತ್ತಿ­ರವೂ ಉಲ್ಟಾ ಥಿಯರಿ; ಕರು­ಣಾ­ಕರ ನೀನೆಂ­ಬು­ವು­ದ್ಯಾ­ತಕೋ ಭರ­ವಸೆ ಇಲ್ಲೆ­ನೆಗೆ. ಕರು­ಣಾ­ಕರ ನೀನಾ­ದರೆ ಈಗಲೇ ಕರ­ಪಿ­ಡಿ­ದೆ­ನ್ನನು ನೀ ಕಾಯೋ. ಈ ಥರದ ಅವ­ಸ­ರ­ದ­ವ­ರನ್ನು ಕಂಡು ಮತ್ತೊಂ­ದಷ್ಟು ಮಂದಿ ಬೇರೆ ಥರದ ವಾದ ಶುರು­ಮಾ­ಡಿ­ದರು; ತಲ್ಲ­ಣಿ­ಸ­ದಿರು ಕಂಡ್ಯ ತಾಳು ಮನವೆ. ಎಲ್ಲ­ರನು ಸಲ­ಹು­ವನು, ಇದಕೆ ಸಂಶ­ಯ­ವಿಲ್ಲ.
ಆದರೆ ಇವ­ರೆಲ್ಲ ದೇವ­ರನ್ನು ವರ್ಣಿ­ಸು­ವು­ದನ್ನು ಕಂಡರೆ ದೇವ­ರಾ­ಗು­ವುದು ಎಷ್ಟು ಕಷ್ಟದ ಕೆಲಸ ಅಂತ ಯಾರಿ­ಗಾ­ದರೂ ಅನ್ನಿ­ಸದೇ ಇರ­ಲಿ­ಕ್ಕಿಲ್ಲ; ಕಲ್ಲಿ­ನಲಿ ಹುಟ್ಟಿ ತಾ ಕೂಗುವ ಕಪ್ಪೆಗೆ ಅಲ್ಲಿ­ಗ­ಲ್ಲಿಗೆ ಆಹಾರ ಇತ್ತ­ವರು ಯಾರು? ಎಂಬ ಪ್ರಶ್ನೆಗೆ ಉತ್ತರ; ದೇವರು. ಒಂಥರ ಪತ್ರ­ಕ­ರ್ತರು ಮತ್ತು ಪೊಲೀ್ ಡಿಪಾ­ರ್‌­ಮೆಂ­ಟಿನ ಕೆಲಸ ದೇವ­ರದು. ಪರ­ಮ­ಪ­ದ­ದೊ­ಳಗೆ ವಿಷ­ಧ­ರನ ತಲ್ಪ­ದ­ಲಿ ಸಿರಿ­ಸ­ಹಿತ ಕ್ಪೀರ­ವಾ­ರಿ­ಧಿ­ಯೊ­ಳಿ­ರ­ಲು­­ಕ­ರಿ­ರಾಜ ಕಷ್ಟ­ದಲಿ ಆದಿ­ಮೂಲಾ ಎಂದು­­ಕ­ರೆ­ಯ­ಲಾ­ಕ್ಪಣ ಬಂದು ಒದ­ಗಿ­ದೆಯೋ ನದ­ಹ­ರಿ­ಯೆ­ ಎನ್ನು­ತ್ತಲೇ ಸಮ­ಯಾ­ಸ­ಮ­ಯ­ವುಂಟೆ ಭಕ್ತ­ವ­ತ್ಸಲ ನಿನಗೆ ಅನ್ನು­ತ್ತಾರೆ ದಾಸರು. ದೇವರು ಒಂಥರ ಎಟಿಎಂ ಇದ್ದ ಹಾಗೆ. ಎನಿ ಟೈ್ ಮ್ಯಾ್! ಭಕ್ತ­ವ­ತ್ಸ­ಲ­ನೆಂಬ ಬಿರುದು ಪೊತ್ತ­ಮೇಲೆ ಭಕ್ತ­ರಾ­ಧೀ­ನ­ನಾ­ಗಿ­ರ­ಬೇ­ಡವೇ ಸಾ್!
ಇನ್ನೊಂದು ತಮಾಷೆ ಕೇಳಿ; ಇನ್ಫೋ­ಸಿ­್­ನಲ್ಲಿ ಕೆಲಸ ಮಾಡು­ವ­ವ­ರನ್ನು ಕಂಡ ಖಾಸಗಿ ಕಂಪೆ­ನಿಯ ಮಂದಿ ಮೆಚ್ಚಿ, ಬೆರ­ಗಾ­ಗು­ವು­ದಿತ್ತು. ಅಂಥ ಕೆಲಸ ನಮಗೂ ಸಿಗ­ಬಾ­ರದೇ ಅನ್ನು­ವು­ದಿತ್ತು. ಅಂಥ ಕಲ್ಪ­ನೆ­ಯನ್ನು ದೇವ­ರಿಗೂ ಅನ್ವ­ಯಿ­ಸಿ­ದರೆ?
`ಏನು ಧನ್ಯಳೋ ಲಕುಮಿ, ಎಂಥ ಮಾನ್ಯ­ಳೋ ಸಾನು­ರಾ­ಗ­ದಿಂದ ಹರಿಯ ತಾನೇ ಸೇವೆ ಮಾಡು­ತಿ­ಹ­ಳು­ ಸಾನು­ರಾ­ಗ­ದಿಂದ, ವಿತ್ ಲವ್ ಸೇವೆ ಮಾಡು­ವುದೇ ಧನ್ಯ­ತೆಯೇ ಹಾಗಿ­ದ್ದರೆ?
**­*­**
ಸದ್ಯಕ್ಕೆ ಈ ತಮಾ­ಷೆ­ಯ­ನ್ನೆಲ್ಲ ಬಿಟ್ಟು ನಾಸ್ತಿ­ಕರ ಕಷ್ಟ­ಗ­ಳನ್ನು ಯೋಚಿ­ಸೋಣ. ನಮಗೆ ನಂಬು­ವು­ದಕ್ಕೆ ದೇವ­ರಿಲ್ಲ. ಮನು­ಷ್ಯರು ಈ ದೇವರ ಹಾಗೆ ಕರೆದ ತಕ್ಪಣ ಬಂದೊ­ದ­ಗು­ವು­ದಿಲ್ಲ. ಎಂಥ ಆತ್ಮೀಯ ಗೆಳೆ­ಯ­ನಿಗೂ ಸಮ­ಯಾ­ಸ­ಮಯ ಇದ್ದೇ ಇರು­ತ್ತದೆ. ಕಟ್ಟಿ­ಕೊಂಡ ಹೆಂಡತಿ ಕೂಡ ಸಾನು­ರಾ­ಗ­ದಿಂದ ಸೇವೆ ಮಾಡು­ತ್ತಾಳೆ ಅಂತ ನಿರೀ­ಕ್ಪಿ­ಸಿ­ದರೆ ಅಂಥ­ವ­ರನ್ನು ಎಂಸೀ­ಪಿ­ಗಳು ಅನ್ನು­ತ್ತಾರೆ ಮಹಿ­ಳಾ­ವಾ­ದಿ­ಗಳು.
ಹಾಗಿ­ದ್ದರೆ ನಾಸ್ತಿ­ಕರು ಯಾರನ್ನು ನೆಚ್ಚಿ­ಕೊ­ಳ್ಳ­ಬೇಕು? ಕರೆಂಟು ಹೋದ ನಡು­ರಾ­ತ್ರಿ­ಯಲ್ಲಿ ಧಿಗ್ಗ­ನೆದ್ದು ಕೂತಾಗ, ದಾರಿಯ ತೋರೋ ಗೋಪಾಲ ಎಂದು ಯಾರನ್ನು ಕೇಳ­ಬೇಕು? ಟೀವಿ­ಯ­ಲ್ಲೊಂದು ಅತ್ಯಂತ ಕೆಟ್ಟ ಕಾರ್ಯ­ಕ್ರಮ ಬಂದಾಗ `ಬಂ­ದ­ದ್ದೆಲ್ಲ ಬರಲಿ, ಗೋವಿಂ­ದನ ದಯೆ ನನ­ಗಿ­ರಲಿ' ಎಂದು ಯಾವ ಗೋವಿಂ­ದ­ನನ್ನು ನೆನೆ­ಯ­ಬೇಕು?
ನಾಸ್ತಿ­ಕರ ಕಷ್ಟ ಒಂದೆ­ರ­ಡಲ್ಲ. ಅವ­ರಿಗೆ ತಕ್ಪಣ ಬೇಕಾ­ಗಿ­ರು­ವುದು ನಂಬು­ವು­ದ­ಕ್ಕೊಬ್ಬ ದೇವರು. ಯಾರೂ ನಂಬದ, ಯಾರನ್ನೂ ನಂಬದ ನಿಜದ ದೇವರು!
ಮತ್ತೆ ಮಾಸ್ತಿ­ಯ­ವರ ಹಾಡಿ­ನತ್ತ ಮರ­ಳಿ­ದರೆ ಮತ್ತೆ­ರಡು ಸಾಲು ಹೀಗಿದೆ;
ಬಿನ್ನ­ಹ­ವಿದು ನಿನ್ನ­ಡಿ­ಗ­ಳ­ಲಿ­ರಲಿ
ಎನ್ನಯ ತನು­ಮನ ನಿನ್ನ ಅರಿ­ಯಲಿ
ಎನ್ನದು ಎನ್ನು­ವು­ದೆ­ಲ್ಲವು ಸಂತತ
ಚೆನ್ನ­ಕೇ­ಶವ ನಿನ್ನೊಳು ನಿಲಲಿ.

6 comments:

ಸುಪ್ರೀತ್.ಕೆ.ಎಸ್. said...

>>>ಅಲ್ಲ ಕಣಯ್ಯಾ, ನಾನು ಕಷ್ಟಬಂದರೆ ಬೇಡಿಕೊಳ್ಳೋದಕ್ಕೆ ನೀನಿದ್ದೀಯ. ನಿಂಗೇ ಕಷ್ಟಬಂದರೆ ಯಾರಿದ್ದಾರಪ್ಪಾ ಅನ್ನೋ ಲಾ ಪಾಯಿಂಟು ಹಾಕಿ ದೇವರನ್ನೇ ಅನಾಥಪ್ರಜ್ಞೆಯಲ್ಲಿ ಒದ್ದಾಡುವ ಹಾಗೆ ಮಾಡುವ ಕಿಲಾಡಿ ದಾಸರಿದ್ದಾರೆ.>>


ಹೌದು, ನಾಸ್ತಿಕರಿಗೆ ನಂಬಿಕಸ್ತರು ಯಾರು? ಯಾರೂ ನಾಸ್ತಿಕರಾಗಲು ಸಾಧ್ಯವೇ ಇಲ್ಲವೆ?

Ashok Shettar said...

idella sariye,aadare neevu sahityada kuritu bareyuvaga namage kaanasiguva sookshma olanotagalu,grahikeya aala mattu chintaneya sankeerna vinyasagalu adara horataada barahagalalli ashtagi kaanasiguvadilla ansutte.Ishte, nimage sahitya saraswati olididdaale.Neevu naastikaragiddagyoo...

SHREE said...

> ವಿತ್ ಲವ್ ಸೇವೆ ಮಾಡು­ವುದೇ ಧನ್ಯ­ತೆಯೇ ಹಾಗಿ­ದ್ದರೆ?>

- ಖಂಡಿತ. ಯಾವ ಕೆಲಸ ಮಾಡಬೇಕಾದರೂ ಮನಸಿದ್ದು, ಪ್ರೀತಿಯಿಟ್ಟು ಮಾಡಿದರೆ ಮಾತ್ರ ಸ್ವಂತ ಆತ್ಮಕ್ಕೆ :) ತೃಪ್ತಿ ಸಿಗ್ತದೆ... ಬೇರೆಯವರ ತೃಪ್ತಿಗಿಂತ ಅದು ಹೆಚ್ಚು Important ತಾನೆ? (ನನ್ನ ಪ್ರಕಾರ)

- ಹಾಗೆನೇ ಬೇರೆಯವರ ತೃಪ್ತಿಗೋಸ್ಕರ ವಿದೌಟ್ ಲವ್ ಕೆಲಸ ಮಾಡಬೇಕಾಗ್ತದೆ ಬದುಕಲ್ಲಿ, ಬೇಕಿರುವುದೆಲ್ಲಾ ಸಿಗಬೇಕು ಅಂತ ಕೂತರೆ ಜಗತ್ತೇನು ಮಾವನ ಮನೆಯಾ ಬೇಕಂದಿದ್ದೆಲ್ಲಾ ಬೇಕಾದಹಾಗೆ ಸಿಗಲಿಕ್ಕೆ? good things are always in short supply! :) :) :)

ಗಿರೀಶ್ ರಾವ್, ಎಚ್ (ಜೋಗಿ) said...

ಶೆಟ್ಟರ್ ಸರ್,
ನೀವು ಓದ್ತಿದ್ದೀರಿ ಅಂತ ಗೊತ್ತಾದ ಮೇಲೆ ನಿಜಕ್ಕೂ ಭಯವಾಗ್ತಿದೆ ಸರ್. ಎಷ್ಟು ವರ್ಷ ಆಯ್ತು ಸರ್ ನಿಮ್ಮನ್ನು ನೋಡಿ, ಮಾತಾಡಿ. ರವಿಯವರ ಆಫೀಸಿಗೆ ಹೋದಾಗೆಲ್ಲ ನಿಮ್ಮ ಫೋಟೋ ನೋಡ್ತೀನಿ.
ಹೇಗಿದ್ದೀರಿ ಸರ್. ಹೊಸ ಕವನ ಬರೆದಿದ್ದೀರಾ
ನಿಮ್ಮ ಚಿಂತನೆ ಮತ್ತು ಕವಿತೆಯ ಉಗ್ರ ಅಭಿಮಾನಿ ನಾನು,
ಜೋಗಿ

ashok shettar said...

ThanQ girish,
Infact i have a great liking for your writings primarily because they invariably catch small but vital nuances of literary works which the 'academic criticism'generally tends to miss.KSHAMISU TANDE,the second collection of my poems which is published by kannada sahitya parishat will be released next month.Needless to say i will be pretty curious to know your views on that.But most urgently 'Ee JOGIYA KATHEGALU pustaka odabekalla' anta ravi belagerege msg madidde monne.I wil see if it has come to the samaja pustakalaya here.I have read most of your (really)short but dense stories that have been published in Hi Bangalore.There could be some which i haven't read....

Anonymous said...

Jogiyavare,

I samasyegaLu muMceyU nimage baMdiddallavE? Some of your articles give such a nostalgic feeling.deja vu). Feels like either you have told this elsewhere or written it.

Not that it doesnt sound bad the second time.

jogi kathegaLu USP chennaagide.

Guru K.