Saturday, July 21, 2007

ಒಂದು ಪುಟ್ಟ ಸಂಭ್ರಮ

(ಹಿರಿಯ ನಟ ಲೋಕನಾಥ್ ಮತ್ತು ದತ್ತಣ್ಣ- ಕಾಡಬೆಳದಿಂಗಳು ಚಿತ್ರಕ್ಕೆ ಜೀವಂತಿಕೆ ತುಂಬಿದವರು)
(ನನ್ನ ಮೆಚ್ಚಿನ ನಟಿ ಅನನ್ಯಾ ಕಾಸರವಳ್ಳಿ ಮತ್ತು ಭಾರ್ಗವಿ ನಾರಾಯಣ್)
(ಕೆ.ಎಂ.ವೀರೇಶ್ ಮತ್ತು ಉದಯ ಮರಕಿಣಿ ನಡುವೆ)

(ಲೋಕನಾಥ್ ಅಂಕಲ್ ಮತ್ತು ದತ್ತಣ್ಣ)

(ಒಂದು ಗಾಢವಿಷಾದದ ಗಳಿಗೆಯಲ್ಲಿ ದತ್ತಣ್ಣ)

ಆತ್ಮೀಯರೇ,
ಒಂದು ಸಂತೋಷದ ಸುದ್ದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನಾನು ಬರೆದ ಕತೆ -ಚಂದ್ರಹಾಸ,32- ಆಧರಿಸಿದ ಕಾಡ ಬೆಳದಿಂಗಳು ಚಿತ್ರಕ್ಕೆ ಅತ್ಯುತ್ತಮ ಸಾಮಾಜಿಕ ಪರಿಣಾಮ ಬೀರುವ ಚಿತ್ರ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಕೊಟ್ಟಿದೆ. ನಾನು ಮತ್ತು ಗೆಳೆಯ ಉದಯ ಮರಕಿಣಿ ಸೇರಿ ಚಿತ್ರಕತೆ ಸಂಭಾಷಣೆ ಬರೆದ ಚಿತ್ರ ಇದು. ಇದನ್ನು ನಿರ್ದೇಶಿಸಿದವರು ಗೆಳೆಯ ಲಿಂಗದೇವರು. ಹಾಗೇ ಈ ಚಿತ್ರಕ್ಕೆ ಮತ್ತೊಬ್ಬ ಮಿತ್ರ ಎಚ್ ಎಂ ರಾಮಚಂದ್ರ ಛಾಯಾಗ್ರಹಣ ನೀಡಿದ್ದಾರೆ. ಗೆಳೆಯರಾದ ಕೆಎಂ ವೀರೇಶ್ ಮತ್ತು ಇತರರು ಸೇರಿ ಇದನ್ನು ನಿರ್ಮಿಸಿದ್ದೇವೆ. ದೈನಿಕದ ಏಕತಾನತೆಯ ನಡುವೆ ನಮ್ಮದೇ ಖುಷಿಗೆಂದು ನಾವು ತೊಡಗಿಸಿಕೊಂಡ ಸಿನಿಮಾ ಇದು. ಇದನ್ನು ಪ್ರಶಸ್ತಿ ಆಯ್ಕೆ ಸಮಿತಿ ಗುರುತಿಸಿದ್ದು ಖುಷಿ ಕೊಟ್ಟಿದೆ.
ಹಾಗೇ ನನಗೆ ವೈಯಕ್ತಿಕವಾಗಿ ಅತ್ಯುತ್ತಮ ಕತೆ ಪ್ರಶಸ್ತಿ ಬಂದಿದೆ. ಈ ಎರಡೂ ಸಂಭ್ರಮಗಳನ್ನು ನಿಮ್ಮ ಜೊತೆ ಹಂಚಿಕೊಳ್ಳುವುದಕ್ಕೆ ಖುಷಿಯಾಗುತ್ತಿದೆ.
ನಾನಿಲ್ಲಿ ಮುಖ್ಯವಾಗಿ ನೆನಪಿಸಿಕೊಳ್ಳಬೇಕಾಗಿದ್ದು ಗೆಳೆಯ ರವಿ ಬೆಳಗೆರೆ ಅವರನ್ನು. ಈ ಕತೆ ಬರೆಯುವ ಒತ್ತಾಯ ತಂದವರೇ ಅವರು. ಅವರ ಪ್ರೀತಿ ಮತ್ತು ಒತ್ತಾಯ ಇಲ್ಲದೇ ಹೋಗಿದ್ದರೆ ನಾನಿದನ್ನಷ್ಟೇ ಅಲ್ಲ, ನನ್ನ ಕಥಾಸಂಕಲನದ ಅನೇಕ ಕತೆಗಳನ್ನು ಬರೆಯುತ್ತಲೇ ಇರಲಿಲ್ಲ.
-ಜೋಗಿ


27 comments:

mohan said...

dear jogi

congrats
nimma sambrama nammadoo koodaa
-g n mohan

Sree Harshavardhana said...

preetiya jogiyavare,

nijakkoo bahala santoshdha vishaya. nimma lekhanagalu haagoo chitra vimarshe gallannu mechchidda nanage, ee nimma chitravannu noduva bayake. haagaagi, dayavittu chitramandiradalli tere kaanisalu prayathnisi.

shubhaashayagalu haagu nimme mundina ella kaaryagaligoo shubha koruve.

Parameshwar said...

Sir, nimage mattomme ABHINANDANE. Pusthaka bidugade sambhramada jatheye UTTHAMA KATHEGAARA puraskaara garime. Namage ottottige eraderadu santhasada ghalige. Khushiyaaythu. Heegeye aagaaga puraskaara sigutthirali. nimma khushigaagi thayaarisida 'KAADA BELADINGALU' noduvaase nanagoo. Aase eederisuvira?

- Godlabeelu

Anonymous said...

yala nine!
konegu cinema loka seriye bitte alva!
allu ninna speciality bidalilla.
ninu prachanda buddivanta.ninna sadhane nanage estu kushi aagide endare nina kachchi hakona anstide.
ninna geleya nanu.. enanta ABHINANDISALI??!!
-KUNTINI

autumn nightingale said...

ಶುಭಾಶಯಗಳು ಜೋಗಿ ಯವರೆ

SHREE said...

ಜೋಗಿ ಸರ್, ಶುಭಾಶಯಗಳು, ಇನ್ನೂ ಕೂಡಾ ಹೀಗೆಯೇ ನಿಮ್ಮಿಂದ ಉತ್ತಮ ಕಥೆಗಳು, ಚಿತ್ರಗಳು ಬರಲಿ ಅಂತ ತುಂಬುಮನದ ಹಾರೈಕೆ. ನಂಗೆ ಕಾಡುಬೆಳದಿಂಗಳು ನೋಡಲಿಕ್ಕೆ ಸಿಕ್ಕಿಲ್ಲ... :(

Keshav Kulkarni said...

ಜೋಗಿಯವರೇ,
ತುಂಬು ಹೃದಯದ ಅಭಿನಂದನೆಗಳು.
ನನಗೆ ನಿಮ್ಮ ಸಿನಿಮಾದ ಡಿವಿಡಿ ಬೇಕು, ಅಗಷ್ಟಿನಲ್ಲಿ ಭಾರತಕ್ಕೆ ಬರುತ್ತಿದ್ದೇನೆ, ದಯವಿಟ್ಟು, ಡಿವಿಡಿ ಬಿಡುಗಡೆ ಮಾಡಿ, ನನ್ನಂಥ ಸಾವಿರಾರು ಜನ ಸಿನೆಮಾ ನೋಡಲು ಕಾಯುತ್ತಿರುತ್ತಾರೆ. ಪಿಚ್ಚರ್ ಬ್ಲಾಗಿನಲ್ಲಿ ನಿಮ್ಮ ಸಿನೆಮಾದ ವಿಮರ್ಶೆ ಓದಿದ್ದೆ ತುಂಬ ಹಿಂದೆ.

Actually, ಕನ್ನಡ ಸಿನಿಮಾಗಳ ಪ್ರಶಸ್ತಿ ವರದಿ ಓದಿದಾಗ, ಇದು ಕರ್ನಾಟಕ ಸರ್ಕಾರದ ಪ್ರಶಸ್ತಿಯೋ, FilmFare ಅವಾರ್ಡೋ ಒಂದು ಕ್ಷಣ ಗೊತ್ತಾಗಲಿಲ್ಲ.

ಕೇಶವ (www.kannada-nudi.blogspot.com)

Anonymous said...

ಕಂಗ್ರಾಟ್ಸ್...
ದೈನಂದಿನ `ಡೆಡ್ಲೈನ್' ಅವಸರದ ಮಧ್ಯೆಯೂ ನಿಮ್ಮ ಕ್ರಿಯಾಶೀಲತೆ ಅಚ್ಚರಿ ಮೂಡಿಸುವಂಥದು.
- ಆತೀಪಿ

Vikram Hathwar said...

Dear Jogi-

Congratss!!

elli saar, DVD?

Ayush Narayan said...

aththaye eeregu atheporthugu samaya thikunduye eeth maath bareyara

congrats

ayush Narayan from Kasaragod

Madhav said...

Jogi Sir,

modalige nimma chandrahaasa kateyannu aadarisi bandantaha chitra kaada beladingalige eradu raajya prashasti labhisiruvudu namage ateeva santosha tandide. innu heccina yashassina gari nimage nimma geleyarige eduraagali.
- madhava keerthy.

ಅನಿಕೇತನ said...

ಶುಭಾಶಯಗಳು ಜೋಗಿ ಯವರೆ

ಸಿಂಧು Sindhu said...

ಪುಟ್ಟ ಸಂಭ್ರಮ ಹರಡುವ ಆಪ್ತ ಖುಷಿಯಾಯಿತು..

ಕಾಡಬೆಳದಿಂಗಳು ಸಿನಿಮಾ ಎಲ್ಲಿ ನೋಡಲು ಸಿಗುತ್ತದೆ..
ನೀವ್ಯಾಕೆ, ಹತ್ತಿರದಲ್ಲಿ ಕಾಡ ನಡುವೆ ಒಂದು ಶೋ(ಟಿಕೆಟ್)ಅರೇಂಜ್ ಮಾಡಬಾರದು?

ನೋಡಲು ಕಾಯುತ್ತಿದ್ದೇನೆ..

ಸುಶ್ರುತ ದೊಡ್ಡೇರಿ said...

ಶುಭಾಷಯಗಳು ಜೋಗಿ ಸರ್.. ಸಿನಿಮಾ ನೋಡಲು ಕಾತರನಾಗಿದ್ದೇನೆ..

Sanath said...

ಜೋಗಿ ಸರ್,
ಅಭಿನಂದನೆಗಳು.

December Stud said...

ಜೋಗಿಯವರೆ,

ವಿಷಯ ತಿಳಿದು ಬಹಳ ಸಂತಸವಾಯಿತು. ಶುಭ ಹಾರೈಕೆಗಳು!!!

ಹರಟೆ ಮಲ್ಲ said...

ಜೋಗಿಯವರೆ, ತುಂಬ ಸಂತೋಷ.

ಈ ಚಿತ್ರ ಎಲ್ಲಿ ನೋಡಬಹುದು?

dinesh said...

ಜೋಗಿ ಸರ್, ಆದಷ್ಟು ಬೇಗನೆ ’ಕಾಡ ಬೆಳದಿಂಗಳು’ನೋಡುವ ಅವಕಾಶ ನಿಮ್ಮ ಅಭಿಮಾನಿಗಳಾದ ನಮಗೆ ಸಿಗಲಿ...

ಶೆಟ್ಟರು (Shettaru) said...

ಜೋಗಿ ಸರ್,

ಬಹಳ ಸಂತಸವಾಯಿತು. ಶುಭ ಹಾರೈಕೆಗಳು!!!

ಪ್ರವೀಣ್ ಮಾವಿನಸರ said...

ಬಹಳ ಖುಷಿಯಾಯಿತು.. ಇನ್ನಷ್ಟು ಪ್ರಶಸ್ತಿಗಳು ಹುಡುಕಿಕೊಂಡು ಬರಲಿ....

Anonymous said...

Preetiya Jogi,
Congratulations! Is the movie being released in regular theatres? Where can one see the movie?
Cheers!

Shailesh said...

dear jogi saar,
congratulations.. nimma ee kathe hai nalli odidaagle ghadavagi manassige thattithu.. eega chitravagide.. nodalu sadyavagilla.. ujire bidalu aagade.. attha nagara seralu manasillade.. elle badiku kattikolluttiruva namge ee tharahada vyathegalu samaanya..
mathomme abhinandanegalu

Anonymous said...

congratulations JOGI sir..
ENSAR NEEVU ELLELLOO IDDEERI
--
ELLO JOGAYYA NINNARAMANE?
NAA HINGE KELIDE.. SUMMANE!

ANDA HAGE JOGI KATHE ODUTHIDENE.. KELAVANNU HINDENE ODIDDE.
- KRISHNA BHAT, VIJAYA KARNATAKA, MANGALORE

ಅಹರ್ನಿಶಿ said...

ಜೋಗಣ್ಣ,
ಕಾಡ ಬೆಳದಿ೦ಗಳು website ನೋಡಿದ್ದೆ,ಈಗ ಸಿನಿಮಾ ಕೂಡ ನೋಡ್ಲೇಬೇಕು... ಅನಿಸುತಿದೆ ಯಾಕೊ ಇ೦ದು...ಜೋಗಿಯ ಮಾಯೆಯಲಿ ಮಿ೦ದು ನೆ೦ದು.ನಾವು ದೂರದ ಆಫ್ರಿಕಾ ಖ೦ಡ ದಲ್ಲಿದ್ದು..."ಜೋಗಿಜಾತ್ರೆ" ಯಲ್ಲಿ
"ಕಾಡ ಬೆಳದಿ೦ಗಳ" DVD ಹುಡುಕ್ತಾ ಇದೀವಿ.ಸಿಗ್ತಾ ಇಲ್ಲ ದಯವಿಟ್ಟು ಸಹಾಯ ಮಾಡ್ತೀರಾ..any way "ನಿಮ್ಮ ಪುಟ್ಟ ಸ೦ಭ್ರಮ"ಕ್ಕೆ ಶುಭ ಹಾರೈಕೆಗಳು.

kanasina mane said...

preethiya,

nimma churimuri kategalathe cinimau moodi barali, a nepadali baravanigeyale somaritana thorisabedi.congrats

Anonymous said...

Dear Jogi,

Congratulations. Heege neevu olleya kathegalannu hechchu hechchagi namage kodabeku

B S V Rao

shishir said...

These people, you've put in the photo, Jogi my man, are one of the best actors in the Kannada industry.. way to go! anyways, I am still not clear about how you managed Bhargavi naryan in that majestic pose! She looks like a proper mistress. I dare say, they are some talented actors!
Way to go..
----------------------------------------------------------------
If ever you felt you were at a loss because it was so hard to blog in KANNADA. Don't ever
fret again! There's http://quillpad.in/kannada/ just to do it for you!
Try it! Enjoy it!