ನೀವು ಎಂದಾದರೂ ಮಡಿಕೇರಿಯಿಂದ ಸುಳ್ಯ ಮಾರ್ಗವಾಗಿ ಸುಬ್ರಹ್ಮಣ್ಯಕ್ಕೆ ಹೋಗಿದ್ದರೆ ನಾನು ಹೇಳುವುದು ನಿಮಗೆ ಕಣ್ಣಿಗೆ ಕಟ್ಟಿದಂತೆ ಅರ್ಥವಾಗುತ್ತದೆ. ಈ ಪ್ರದೇಶಗಳಲ್ಲಿ ನೀವು ಓಡಾಡಿದವರು ಆಗಿರದೇ ಇದ್ದರೂ ಕಾಡಿನ ನಿಬಿಢತೆಯ ಪರಿಚಯ ಇದ್ದವರೂ ಇದನ್ನು ಗ್ರಹಿಸುವುದು ಕಷ್ಟವಾಗಲಿಕ್ಕಿಲ್ಲ ಎನ್ನುವುದು ನನ್ನ ಭಾವನೆ.
ಮಡಿಕೇರಿಯಿಂದ ಸಂಪಾಜೆ ಘಾಟಿರಸ್ತೆಯ ಮೂಲಕ ನೀವು ಸುಲಭವಾಗಿ ಸುಳ್ಯ ತಲುಪಬಹುದು. ಸುಳ್ಯದಿಂದ ನೆಲ್ಲೂರು ಕೆಮ್ರಾಜೆ, ಗುತ್ತಿಗಾರು ಮಾರ್ಗವಾಗಿ ಸುಬ್ರಹ್ಮಣ್ಯಕ್ಕೆ ಹೋಗುವ ಹಾದಿಯಲ್ಲಿ ದಟ್ಟವಾದ ಕಾಡು ಸಿಗುತ್ತದೆ. ಇವತ್ತು ಈ ಕಾಡಿನ ನಡುವೆ ಸಾಕಷ್ಟು ಮನೆಗಳೂ ಅಡಕೆ ತೋಟಗಳೂ ಕಾಣಿಸುತ್ತವೆಯಾದರೂ ಸುಮಾರು ಐವತ್ತು ವರುಷಗಳ ಹಿಂದೆ ಇಲ್ಲಿ ಅಷ್ಟಾಗಿ ಮನೆಗಳಿರಲಿಲ್ಲ. ಮಳೆಗಾಲದಲ್ಲಿ ಬಿಡದೇ ಸುರಿಯುವ ಮಳೆ, ಬೇಸಗೆಯಲ್ಲಿ ಥರಥರ ಒಣಗಿಸಿ ತರಗೆಲೆ ಮಾಡುವ ಬಿಸಿಲು ಮತ್ತು ಮಳೆಗಾಲ ಶುರುವಾದೊಡನೆ ಅಮರಿಕೊಳ್ಳುತ್ತಿದ್ದ ಮಲೇರಿಯಾ ಈ ಪ್ರದೇಶವನ್ನು ವಾಸಿಸಲು ಅಪಾಯಕಾರಿಯನ್ನಾಗಿ ಮಾಡಿದ್ದವು. ಚಳಿಗಾಲದಲ್ಲಂತೂ ಹತ್ತು ಗಂಟೆಯ ತನಕ ಮಂಜು ದಟ್ಟೈಸಿಕೊಂಡಿರುತ್ತಿತ್ತು.
ಈ ಪ್ರದೇಶಗಳಲ್ಲಿ ಅನೇಕ ಬುಡಕಟ್ಟುಗಳಿಗೆ ಸೇರಿದವರು ವಾಸಿಸುತ್ತಿದ್ದರು. ಇವರು ಯಾವ ಬುಡಕಟ್ಟಿಗೆ ಸೇರಿದವರು ಅನ್ನುವುದು ಈಗ ಯಾರಿಗೂ ನೆನಪಿಲ್ಲ. ಕರ್ರಗೆ ಬಿಳಿಚಿಕೊಂಡಿರುತ್ತಿದ್ದ ಇವರು ಆ ಕಾಡಿನ ಕ್ರೌರ್ಯಕ್ಕೆ ಸಿಕ್ಕಿ ಬದುಕಿ ಉಳಿದದ್ದೇ ಒಂದು ಪವಾಡ. ಇವರು ಬೇಸಾಯಗಾರರಲ್ಲ. ಮಾಡುವುದಕ್ಕೆ ಉದ್ಯೋಗವೂ ಇರಲಿಲ್ಲ. ಬಿದಿರಿನ ಬುಟ್ಟಿ ಹೆಣೆಯುವುದೂ ಇವರಿಗೆ ಗೊತ್ತಿರಲಿಲ್ಲ. ಹೀಗಾಗಿ ಇವರ ಆಹಾರವೆಂದರೆ ಕಾಡು ಪ್ರಾಣಿಗಳು ಮತ್ತು ಗೆಡ್ಡೆಗೆಣಸು.
ಅದು ಹೇಗೋ ಏನೋ ಈ ಬುಡಕಟ್ಟಿಗೆ ಸೇರಿದ ಗಂಡಸರು ಕರ್ರಗೆ ಪೀಚಲು ಪೀಚಲಾಗಿದ್ದರೆ, ಹೆಂಗಸರು ಮಾತ್ರ ಮೈಕೈ ತುಂಬಿಕೊಂಡು ಕಂಗೊಳಿಸುತ್ತಿದ್ದರು. ಕಾಡಿನಲ್ಲಿ ಅವರನ್ನು ಥಟ್ಟನೆ ಕಂಡರೆ ಬೇಲೂರು ಹಳೆಬೀಡಿನ ಶಿಲ್ಪಕನ್ನಿಕೆಯರಿಗೆ ಜೀವ ಬಂದು ತಿರುಗಾಡುತ್ತಿರುವಂತೆ ಕಾಣಿಸುತ್ತಿದ್ದರು ಎಂದೂ ಅನೇಕರು ಬರೆದಿದ್ದಾರೆ.
ಈ ಪ್ರದೇಶಗಳಲ್ಲಿ ಹಿಂಸ್ರಪಶುಗಳ ಕಾಟವೇನೂ ಇರಲಿಲ್ಲ. ಕಾಡಿನಲ್ಲಿ ಜಿಂಕೆ, ಮೊಲ, ಕಡವೆ, ಕಾಡೆಮ್ಮೆಗಳ ಸಂತತಿ ವಿಪುಲವಾಗಿತ್ತು. ಹೀಗಾಗಿ ಹುಲಿ, ಚಿರತೆ, ತೋಳ ಮತ್ತು ಕಿರುಬಗಳಿಗೆ ಆಹಾರಕ್ಕೇನೂ ಕೊರತೆಯಿರಲಿಲ್ಲ. ಆದ್ದರಿಂದ ಅವುಗಳು ಕಾಡಿನಲ್ಲೇ ಅಲೆದಾಡಿಕೊಂಡಿರುತ್ತಿದ್ದ ಈ ಬುಡಕಟ್ಟು ಜನಾಂಗದ ಮಂದಿಗೆ ಯಾವ ತೊಂದರೆಯನ್ನೂ ಮಾಡುತ್ತಿರಲಿಲ್ಲ. ಅಕಸ್ಮಾತ್ ಕಾಡಿನಲ್ಲಿ ಹುಲಿಯೊಂದು ಎದುರಾದರೆ ಇವರೂ ಅಂಜಿ ಓಡುತ್ತಿದ್ದಿಲ್ಲ. ಹುಲಿಯೇ ಮನುಷ್ಯರನ್ನು ಕಂಡ ಸಂಕೋಚದಲ್ಲಿ ತೆಪ್ಪಗೆ ಹೊರಟುಹೋಗುತ್ತಿತ್ತು.
******
ಇಂಥ ನಿರ್ಭಯದ ಕಾಡು ಇದ್ದಕ್ಕಿದ್ದಂತೆ ಎಲ್ಲರ ಗಮನ ಸೆಳೆಯುವುದಕ್ಕೆ ಕಾರಣ ಸ್ವಾತಂತ್ರ ಬಂದದ್ದೇ ಇರಬೇಕು. ಆಗಷ್ಟೇ ಪಂಚವಾರ್ಷಿಕ ಯೋಜನೆಗಳು ಶುರುವಾಗಿದ್ದವು. ಕೃಷಿಗೆ ಆದ್ಯತೆ ಕೊಡಬೇಕೆಂದು ಸರ್ಕಾರ ಹೇಳಲಾರಂಭಿಸಿತ್ತು. ಅದರ ಜೊತೆಗೇ ಹೈನುಗಾರಿಕೆಯ ಕುರಿತೂ ಬೇರೆ ಬೇರೆ ರಾಷ್ಟ್ರಗಳ ಉದಾಹರಣೆಯನ್ನು ಮುಂದಿಟ್ಟು ಅನೇಕರು ಮಾತಾಡತೊಡಗಿದ್ದರು. ಹೈನುಗಾರಿಕೆ ಭಾರತದಂಥ ಕೃಷಿಪ್ರದಾನ ರಾಷ್ಟ್ರದಲ್ಲಿ ಅತ್ಯಂತ ಲಾಭದಾಯಕ ಉದ್ಯಮ ಎಂದು ಜನ ನಂಬತೊಡಗಿದ್ದರು. ಅದೇ ಸುಮಾರಿಗೆ ಸುಳ್ಯದಲ್ಲೂ ಅನೇಕರು ಹೆಚ್ಚಿನ ಸಂಖ್ಯೆಯಲ್ಲಿ ಹಸುಗಳನ್ನೂ ಎಮ್ಮೆಗಳನ್ನೂ ಸಾಕುತ್ತಾ ಹೈನುಗಾರಿಕೆಯನ್ನು ದೊಡ್ಡ ಮಟ್ಟದಲ್ಲೇ ಆರಂಭಿಸಿದ್ದರು.
ಅಂಥವರ ಪೈಕಿ ಕೇನ್ಯ ರಾಮಣ್ಣ ಶೆಟ್ಟರೂ ಒಬ್ಬರು.
ಅವರು ಬ್ರಿಟಿ್ ಅಧಿಪತ್ಯದಲ್ಲಿ ಉದ್ಯೋಗದಲ್ಲಿದ್ದವರು. ಗಾಂಧೀಜಿಯ ಕರೆಗೆ ಓಗೊಟ್ಟು ಕೆಲಸಕ್ಕೆ ರಾಜೀನಾಮೆ ಕೊಟ್ಟು ಕೃಷಿಕರಾದವರು. ಹೈನುಗಾರಿಕೆಯ ಕುರಿತು ಅವರ ಆಸಕ್ತಿ ಕುದುರುತ್ತಿದ್ದಂತೆ ಹಾಸನಕ್ಕೆ ಹೋಗಿ ಹತ್ತೆಂಟು ಎಮ್ಮೆಗಳನ್ನೂ ಸುಬ್ರಹ್ಮಣ್ಯದ ಆಸುಪಾಸಿನಿಂದ ಹತ್ತಿಪ್ಪತ್ತು ಹಸುಗಳನ್ನೂ ಕೊಂಡುತಂದು ದೊಡ್ಡ ಮಟ್ಟದಲ್ಲಿ ಹಾಲು ಉತ್ಪಾದನೆ ಆರಂಭಿಸಿಯೇ ಬಿಟ್ಟರು.
ಅವರ ಸಮಸ್ಯೆ ಶುರುವಾದದ್ದೇ ಆಗ.
ಹಾಲು ಉತ್ಪಾದನೆಯೇನೋ ದೊಡ್ಡ ಮಟ್ಟದಲ್ಲೇ ಆಯಿತು. ಕೊಂಡು ತಂದ ದನಗಳಿಂದ ದಿನಕ್ಕೆ ನೂರು ನೂರೈವತ್ತು ಲೀಟರ್ ಹಾಲು ದೊರಕತೊಡಗಿತು. ಆದರೆ ಆ ಹಾಲನ್ನು ಏನು ಮಾಡುವುದು ಅನ್ನುವ ಪ್ರಶ್ನೆಗೆ ಸರ್ಕಾರದ ಹತ್ತಿರ ತಕ್ಪಣ ಉತ್ತರವಿರಲಿಲ್ಲ.
ಸರ್ಕಾರ ಹೈನುಗಾರಿಕೆ ಆರಂಭಿಸಿ ಎಂದು ಘೋಷಣೆ ಕೊಟ್ಟಿತ್ತೇ ವಿನಾ ಯಾರಾದರೊಬ್ಬರು ಅದನ್ನು ತಕ್ಪಣವೇ ಕಾರ್ಯರೂಪಕ್ಕೆ ತರುತ್ತಾರೆ ಎಂದು ಊಹಿಸಿರಲೇ ಇಲ್ಲ. ಯಾರಾದರೊಬ್ಬರು ಯಾವುದೋ ಒಂದು ಮೂಲೆಯಲ್ಲಿ ಹೈನುಗಾರಿಕೆ ಆರಂಭಿಸಿದರೆ ಆ ಹಾಲನ್ನು ಕೊಂಡುಕೊಂಡು ಸರ್ಕಾರ ಕೂಡ ಏನೂ ಮಾಡುವ ಹಾಗಿರಲಿಲ್ಲ. ಆಗಿನ್ನೂ ಕ್ಪೀರಕ್ರಾಂತಿಯ ಕನಸೂ ಸರ್ಕಾರಕ್ಕೆ ಬಿದ್ದಿರಲಿಲ್ಲ.
ರಾಮಣ್ಣ ಶೆಟ್ಟರು ಆಗ ನಿಜಕ್ಕೂ ಹತಾಶರಾದರು. ಕೊಂಡು ತಂದ ಜಾನುವಾರುಗಳನ್ನು ಸುಮ್ಮನೆ ಸಾಕುವುದು ಅವರಿಗಂತೂ ಸಾಧ್ಯವಿರಲಿಲ್ಲ. ಆಗೆಲ್ಲ ಈಗಿನಂತೆ ಹಾಲು ಸ್ಥಳೀಯವಾಗಿ ಮಾರಾಟವಾಗುತ್ತಲೂ ಇರಲಿಲ್ಲ. ಪ್ರತಿಯೊಂದು ಮನೆಯಲ್ಲೂ ಒಂದೊ ಎರಡೋ ಕರಾವು ಇದ್ದೇ ಇರುತ್ತಿತ್ತು. ಒಂದು ವೇಳೆ ಒಂದೆರಡು ಮನೆಗಳಿಗೆ ಹಾಲುಬೇಕಿದ್ದರೂ ಅದನ್ನು ಕೊಂಡುಹೋಗಿ ಕೊಡುವುದು ತುಂಬ ದುಬಾರಿಯಾಗುತ್ತಿತ್ತು. ಹೀಗಾಗಿ ರಾಮಣ್ಣ ಶೆಟ್ಟರು ಹಸುಗಳನ್ನೆಲ್ಲ ಮಾರುವುದಕ್ಕೆ ನಿಶ್ಟಯಿಸಿದರು. ಆದರೆ ಅವರು ಕೊಂಡ ಅರ್ಧಬೆಲೆಗೂ ಅವುಗಳನ್ನು ಕೊಳ್ಳುವವರು ಅವರಿಗೆ ಸಿಗಲಿಲ್ಲ. ರಾಮಣ್ಣ ಶೆಟ್ಟರ ಕ್ಷೀರಕ್ರಾಂತಿ ಆ ಪ್ರದೇಶದಲ್ಲೆಲ್ಲಾ ಪ್ರಚಾರವಾಗಿತ್ತು.
ಆಗ ಅವರಿಗೆ ಹೊಳೆದ ಉಪಾಯವೆಂದರೆ ಹಸುಗಳನ್ನೆಲ್ಲ ಒಯ್ದು ಗುತ್ತಿಗಾರಿಗೋ ಎಡಮಂಗಲಕ್ಕೋ ಕೊಲ್ಲಮೊಗ್ರುವಿಗೋ ಸಮೀಪವಿರುವ ಹುಲ್ಲುಗಾವಲಿನಲ್ಲಿ ಬಿಟ್ಟುಬಿಡುವುದು. ಅಲ್ಲಿ ಯಥೇಚ್ಛವಾಗಿ ದನಗಳಿಗೆ ಮೇವು ಸಿಗುವುದಂತೂ ಖಾತ್ರಿ. ಅಲ್ಲೊಂದು ಗೋಮಾಳವನ್ನು ಕಟ್ಟಿ ಸುತ್ತಲೂ ಬೇಲಿಹಾಕಿಸಿ ಬಿಟ್ಟುಬಿಟ್ಟರೆ ಹಸುಗಳೂ ಎಮ್ಮೆಗಳೂ ಖರ್ಚಿಲ್ಲದೇ ಮೇವು ತಿಂದುಕೊಂಡು ಇರುತ್ತವೆ. ಅವುಗಳ ವಂಶಾಭಿವೃದ್ಧಿಯೂ ಆಗುತ್ತದೆ. ಮುಂದೆ ಸರ್ಕಾರದ ಯೋಚನೆ ಕೈಗೆಟುಕುವಂತಾದಾಗ ಅವುಗಳನ್ನು ವಾಪಸ್ಸು ಹೊಡೆದುಕೊಂಡು ಬಂದರಾಯಿತು.
ಈ ಯೋಚನೆ ಬಂದಿದ್ದೇ ತಡ ರಾಮಣ್ಣ ಗೌಡರು ಗುತ್ತಿಗಾರಿನ ಕಡೆಗೆ ಪಯಣ ಬೆಳೆಸಿದರು. ಸುಳ್ಯದಿಂದ ಸುಮಾರು ಮೂವತ್ತು ಮೈಲಿ ದೂರದಲ್ಲಿ ಅವರಿಗೊಂದು ಸೊಗಸಾದ ಹುಲ್ಲುಗಾವಲು ಕಂಡಿತು. ಅದರ ಆಸುಪಾಸಿನಲ್ಲಿ ಬುಡಕಟ್ಟು ಜನಾಂಗಕ್ಕೆ ಸೇರಿದ ಆರೆಂಟು ಮನೆಗಳಿದ್ದವು. ಆ ಜಾಗದ ಪಕ್ಕದಲ್ಲೇ ಸಣ್ಣದೊಂದು ತೊರೆಯೂ ಹರಿಯುತ್ತಿತ್ತು. ಅಲ್ಲೇ ತನ್ನ ಗೋವುಗಳನ್ನು ಸಾಕುತ್ತಿದ್ದರೆ ಮುಂದೊಂದು ದಿನ ಆ ಜಾಗವೂ ತನ್ನದಾಗುತ್ತದೆ ಎಂಬ ದುರಾಸೆಯೂ ಶೆಟ್ಟರನ್ನು ಕಾಡಿರಬೇಕು. ಬುಡಕಟ್ಟು ಜನಾಂಗಕ್ಕೆ ಸೇರಿದ ಕೊಲ್ಲಿ ಎಂಬವನನ್ನು ಸಂಬಳಕ್ಕೆ ಗೊತ್ತುಮಾಡಿಕೊಂಡು ಅಲ್ಲೊಂದು ವಿಶಾಲವಾದ ಹುಲ್ಲುಗಾವಲಿಗೆ ಬೇಲಿ ಹಾಕಿಸಿ. ಮಳೆ ಬಂದಾಗ ದನಗಳಿಗೆ ನಿಲ್ಲುವುದಕ್ಕೊಂದು ವಿಶಾಲವಾದ ಚಪ್ಪರ ಹಾಕಿಸಿಕೊಟ್ಟು ರಾಮಣ್ಣಗೌಡರು ತಮ್ಮ ಎಮ್ಮೆ ಮತ್ತು ಹಸುಗಳನ್ನು ಆ ಗೋಮಾಳಕ್ಕೆ ತಂದೇಬಿಟ್ಟರು.
ಅದು ಸುಮಾರು ಹತ್ತೆಕರೆ ವಿಸ್ತಾರದ ಗೋಮಾಳ. ಅದಕ್ಕೆ ಬೇಲಿ ಹಾಕಿಸುವುದಕ್ಕೇ ಅವರಿಗೆ ಸುಮಾರು ಖರ್ಚಾಗಿತ್ತು. ಹಸುಗಳನ್ನು ಸಾಕುವುದಕ್ಕಿಂತ ಹೆಚ್ಚಾಗಿ ಅವರನ್ನು ಆಕರ್ಷಿಸಿದ್ದು ಆ ಜಾಗವನ್ನು ತಾವು ಹೊಡೆದುಕೊಳ್ಳಬಹುದು ಎಂಬ ದುರಾಸೆ.
ಹೀಗೆ ಅಲ್ಲಿಗೆ ತಮ್ಮ ಜಾನುವಾರುಗಳನ್ನು ತಂದುಬಿಟ್ಟ ರಾಮಣ್ಣ ಶೆಟ್ಟರು ಅದರ ಉಸ್ತುವಾರಿಯನ್ನು ತಮ್ಮ ಏಕೈಕ ಮಗನಾದ ಸುಬ್ಬಣ್ಣ ಶೆಟ್ಟಿಗೆ ಒಪ್ಪಿಸಿದರು.
ಎಡವಟ್ಟಾದದ್ದು ಅಲ್ಲೇ.
*****
ಸುಬ್ಬಣ್ಣ ಶೆಟ್ಟಿ ಮೆಟ್ರಿಕತನಕ ಓದಿದ್ದ. ಮುಂದೆಯೂ ಓದುವ ಆಸೆಯಿಟ್ಟುಕೊಂಡಿದ್ದ. ಮಂಗಳೂರಿಗೆ ಹೋಗಿ ಓದು ಮುಂದುವರಿಸಿದರೆ ತನ್ನ ಉಕ್ಕುತ್ತಿರುವ ಯೌವನಕ್ಕೂ ನ್ಯಾಯ ಸಲ್ಲಿಸಬಹುದು ಎಂಬ ಸಣ್ಣ ಆಸೆ ಇಟ್ಟುಕೊಂಡಿದ್ದ ಸುಬ್ಬಣ್ಣನನ್ನು ರಾಮಣ್ಣ ಶೆಟ್ಟರು ಬೈದು ಕೃಷಿಕಾಯಕಕ್ಕೆ ನೂಕಿದ್ದರು. ಓದಿ ಮಗ ಯಾರ ಚಾಕರಿಯನ್ನೂ ಮಾಡಬೇಕಾಗಿಲ್ಲ ಎನ್ನುವುದು ಅವರ ಆಲೋಚನೆಯಾಗಿತ್ತು. ಒಲ್ಲದ ಮನಸ್ಸಿನಿಂದ ಗದ್ದೆ, ತೆಂಗಿನತೋಟ ನೋಡಿಕೊಳ್ಳುತ್ತಿದ್ದ ಸುಬ್ಬಣ್ಣಶೆಟ್ಟಿಯನ್ನು ಕರೆದು ರಾಮಣ್ಣ ಶೆಟ್ಟರು ಗುತ್ತಿಗಾರು ಸಮೀಪದ ಗೋಮಾಳವನ್ನು ನೋಡಿಕೊಳ್ಳಬೇಕೆಂದು ತಾಕೀತು ಮಾಡಿದರು. ತಿಂಗಳಿಗೆ ಒಂದು ಸಲವಾದರೂ ಅಲ್ಲಿಗೆ ಹೋಗಿ ಬರಬೇಕೆಂದು ಕಟ್ಟುನಿಟ್ಟಾಗಿ ಆಜ್ಞಾಪಿಸಿದರು.
ರಾಮಣ್ಣ ಶೆಟ್ಟರ ಹತ್ತಿರ ಒಂದು ಹಳೆಯ ಮಿಲಿಟ್ರಿ ಜೀಪಿತ್ತು. ಅದನ್ನವರು ತೀರಾ ಕಡಿಮೆ ಬೆಲೆಗೆ ಕೊಂಡುಕೊಂಡಿದ್ದರು. ಅದು ಟ್ರಾಕ್ಟರ್ನಷ್ಟೇ ವೇಗವಾಗಿ ಓಡುತ್ತಿತ್ತು. ಅಲ್ಲಲ್ಲಿ ಕೆಟ್ಟು ನಿಲ್ಲುತ್ತಿತ್ತು. ಆಗೆಲ್ಲ ಅದನ್ನು ತಳ್ಳಿ ಸ್ಟಾರ್ಟ್ ಮಾಡಬೇಕಾಗುತ್ತಿತ್ತು. ಹೀಗಾಗಿ ಅದಕ್ಕೊಬ್ಬ ಡ್ರೈವರ್ನನ್ನೂ ಶೆಟ್ಟರು ನೇಮಿಸಿದ್ದರು. ಸುಬ್ಬಣ್ಣ ಶೆಟ್ಟಿ ಆ ಜೀಪಿನಲ್ಲಿ ತಿಂಗಳಿಗೊಮ್ಮೆ ಗೋಮಾಳಕ್ಕೆ ಹೋಗಿ ಬರಬೇಕಾಗಿತ್ತು. ಅವನ ಜೀವನದಲ್ಲಿ ಅತ್ಯಂತ ನಿಷ್ಪ್ರಯೋಜಕ ಕೆಲಸವೆಂದರೆ ಅದು ಎಂದು ಸುಬ್ಬಣ್ಣ ರೈ ಅಂದುಕೊಂಡಿದ್ದ. ಹತ್ತಾರು ಬಾರಿ ರಾಮಣ್ಣ ಶೆಟ್ಟರಿಂದ ಹೇಳಿಸಿಕೊಳ್ಳದೇ ಆತ ಅತ್ತ ಕಡೆ ತಲೆಹಾಕುತ್ತಿರಲಿಲ್ಲ. ಇಂಥ ಮಗನನ್ನು ಹೇಗಪ್ಪಾ ದಾರಿಗೆ ತರುವುದು ಎಂದು ಯೋಚಿಸುತ್ತಿದ್ದ ರಾಮಣ್ಣ ರೈಗಳಿಗೆ ಕತ್ತಲಕಾಡಿನ ನಡುವೆ ಬೆಳಕಿನ ಕೋಲಿನಂತೆ ಕಾಣಿಸಿದ್ದು ಸುಬ್ಬಣ್ಣ ಶೆಟ್ಟಿಯ ಬದಲಾದ ವರ್ತನೆ.
*****
ಸುಬ್ಬಣ್ಣ ಇದ್ದಕ್ಕಿದ್ದಂತೆ ತಿಂಗಳಿಗೆರಡು ಸಾರಿ ಗೋಮಾಳಕ್ಕೆ ಹೋಗಿಬರಲು ಆರಂಭಿಸಿದ್ದ. ಹೋದವನು ಒಂದೆರಡು ದಿನ ಅಲ್ಲೇ ಇದ್ದುಬಿಡುತ್ತಿದ್ದ. ವಾಪಸ್ಸು ಬರುವಾಗ ಮತ್ತಷ್ಟು ಉತ್ಸಾಹದಿಂದ ನಳನಳಿಸುತ್ತಿದ್ದ. ಅಂತೂ ಮಗನಿಗೆ ಹಳ್ಳಿಯ ಹುಚ್ಚು ಹತ್ತಿತು, ಇನ್ನು ಪರವಾಗಿಲ್ಲ ಅಂದುಕೊಂಡು ರಾಮಣ್ಣ ಶೆಟ್ಟರು ತಮ್ಮ ಮಗನ ಬದಲಾದ ವರ್ತನೆಯನ್ನು ಕಂಡಕಂಡವರ ಹತ್ತಿರ ಹೇಳಿಕೊಂಡು ಹೆಮ್ಮೆ ಪಟ್ಟುಕೊಂಡರು.
ಸುಬ್ಬಣ್ಣ ಬದಲಾದದ್ದಕ್ಕೆ ಕಾರಣವಿತ್ತು. ಗೋಮಾಳ ನೋಡಿಕೊಳ್ಳಲು ರಾಮಣ್ಣಶೆಟ್ಟರು ನೇಮಿಸಿದ ಕೊಲ್ಲಿ ಎಂಬ ಬುಡಕಟ್ಟು ಜನಾಂಗದ ವಯೋವೃದ್ದನಿಗೊಬ್ಬಳು ಸುಂದರಿ ಮಗಳಿದ್ದಳು. ಆ ಜನಾಂಗದ ಎಲ್ಲರಿಗಿಂತ ಒಂದು ಕೈ ಮಿಗಿಲು ಅನ್ನಿಸುವಷ್ಟು ಆಕೆ ಮೈಕೈ ತುಂಬಿಕೊಂಡು ಕಂಗೊಳಿಸುತ್ತಿದ್ದಳು. ಸುಬ್ಬಣ್ಣ ಶೆಟ್ಟಿ ಅವಳಿಗೆ ಮೈಮರೆತಿದ್ದ. ಕೊಲ್ಲಿಯನ್ನು ಯಾವುದೋ ಕೆಲಸಕ್ಕೆ ಕಳಿಸಿಯೋ, ಆಕೆಯನ್ನು ಜೀಪಿನಲ್ಲಿ ಕಾಡಿನ ಮತ್ತೊಂದು ಮೂಲೆಗೆ ಕರೆದೊಯ್ದೋ ಸುಬ್ಬಣ್ಣ ಆಕೆಯ ಜೊತೆ ಚಕ್ಕಂದವಾಡತೊಡಗಿದ್ದ. ಆಕೆಯೂ ಹಳ್ಳಿಯಿಂದ ಪಾರಾಗಿ ಪಟ್ಟಣ ಸೇರುವುದಕ್ಕೆ ಇದೊಂದು ಅಪೂರ್ವ ಅವಕಾಶ ಎಂದುಕೊಂಡು ಆತನನ್ನು ಸಂಪೂರ್ಣವಾಗಿ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದಳು.
ಈ ಮಧ್ಯೆ ಮಗನ ಕಾಡಿನ ನಿಷ್ಠೆಯನ್ನು ಅಪಾರ್ಥ ಮಾಡಿಕೊಂಡ ಶೆಟ್ಟರು ಅವನಿಗೊಂದು ಮದುವೆ ಗೊತ್ತುಮಾಡಿದರು. ಸುಬ್ಬಣ್ಣ ಅದನ್ನೂ ವಿರೋಧಿಸಲಿಲ್ಲ. ಕಾಡಿನಲ್ಲೊಂದು ನಾಡಿನಲ್ಲೊಂದು ಹೆಣ್ಣು ಸಿಕ್ಕರೆ ತನ್ನ ವಂಚಿತ ನಗರಜೀವನದ ವೈವಿಧ್ಯಮಯ ಆಸೆಗಳನ್ನು ಪೂರೈಸಿಕೊಳ್ಳಬಹುದು ಎಂದು ಅವನಿಗೂ ಅನ್ನಿಸತೊಡಗಿತ್ತು. ಅದಕ್ಕೆ ತಕ್ಕಂತೆ ನಿರ್ವಿಘ್ನವಾಗಿ ಅವನ ಮದುವೆಯೂ ನಡೆದುಹೋಯಿತು. ತಿಂಗಳಿಗೆ ನಾಲ್ಕು ಬಾರಿ ಕೊಲ್ಲಿಯ ಮಗಳನ್ನು ಭೇಟಿಯಾಗುತ್ತಿದ್ದ ಸುಬ್ಬಣ್ಣ ಈಗೀಗ ತಿಂಗಳಿಗೆರಡು ಭೇಟಿಗೆ ತೃಪ್ತನಾದ.
ಈ ಮಧ್ಯೆ ಮತ್ತೊಂದು ಅನಾಹುತ ಸಂಭವಿಸಿತು. ಕೊಲ್ಲಿಯ ಮಗಳು ಗರ್ಭಿಣಿಯಾಗಿದ್ದಳು. ಅದನ್ನು ಕಂಡುಹಿಡಿದವಳು ಕೊಲ್ಲಿಯಲ್ಲ. ಅವನ ಹೆಂಡತಿ ಎಂದೋ ತೀರಿಕೊಂಡಿದ್ದಳು. ಆದರೆ ಆ ಮನೆಗೆ ಆಗಾಗ ಬಂದುಹೋಗುತ್ತಿದ್ದ ಪಕ್ಕದ ಹಾಡಿಯ ಕೊಲ್ಲಿಯ ಚಿಕ್ಕಮ್ಮ ಕೊಲ್ಲಿಗೆ ಈ ಆಘಾತಕಾರಿ ಸುದ್ದಿಯನ್ನು ತಿಳಿಸಿದಳು.
ಅವರ ಜನಾಂಗದಲ್ಲಿ ಅದು ಅಂಥ ಅಪರಾಧವೇನೂ ಆಗಿರಲಿಲ್ಲ. ಆದ್ದರಿಂದ ಕೊಲ್ಲಿ ಮಗಳನ್ನು ಗದರುವುದಕ್ಕೇನೂ ಹೋಗಲಿಲ್ಲ. ಬದಲಾಗಿ ಮಗಳನ್ನಿಟ್ಟುಕೊಂಡು ವ್ಯಾಪಾರ ಮಾಡಲು ನಿರ್ಧರಿಸಿದ. ಮುಂದಿನ ಸಾರಿ ಸುಬ್ಬಣ್ಣ ಶೆಟ್ಟಿ ಬಂದಾಗ ಏನು ಮಾಡಬೇಕೆಂದು ಮಗಳಿಗೆ ತಿಳಿಸಿಹೇಳಿದ.
ಮಗಳು ಅಪ್ಪನ ಮಾತನ್ನು ಮೀರಲಿಲ್ಲ. ಸುಬ್ಬಣ್ಣ ಶೆಟ್ಟಿಗೆ ತಾನು ಗರ್ಭಿಣಿಯಾದ ಸಂಗತಿಯನ್ನು ತಿಳಿಸಿದಳು. ತಮ್ಮ ಬುಡಕಟ್ಟಿನ ಸಂಪ್ರದಾಯದ ಪ್ರಕಾರ ತನ್ನನ್ನು ಕೂಡಿಕೆ ಮಾಡಿಕೊಳ್ಳಬೇಕೆಂದಳು. ಆವತ್ತು ಆಕೆಯಿಂದ ಅದು ಹೇಗೋ ತಪ್ಪಿಸಿಕೊಂಡು ಸುಬ್ಬಣ್ಣ ಶೆಟ್ಟಿ ಒಂದೇ ಉಸಿರಲ್ಲಿ ಸುಳ್ಯಕ್ಕೆ ಕಾಲುಕಿತ್ತ. ಮತ್ತೆಂದೂ ಗೋಮಾಳದ ಕಡೆಗೆ ತಲೆಹಾಕದಿರಲು ನಿರ್ಧರಿಸಿದ.
ರಾಮಣ್ಣ ಶೆಟ್ಟರಿಗೆ ಇದು ಮತ್ತೊಂದು ಸಮಸ್ಯೆಯಾಗಿ ಕಂಡಿತು. ಮದುವೆ ಮಾಡಿದ ತಕ್ಪಣ ಮಗ ಹೆಂಡತಿಯ ಗುಲಾಮನಾಗಿ ಕರ್ತವ್ಯವಿಮುಖನಾದ ಎಂದವರು ಭಾವಿಸಿದರು. ಮಗನನ್ನು ಮತ್ತೆ ಮತ್ತೆ ಮಾಳದ ಕಡೆ ಹೋಗುವಂತೆ ಒತ್ತಾಯಿಸಿದರು. ಅವನು ಹೋಗದಿದ್ದರೇ ತಾನೇ ಹೋಗುವುದಾಗಿ ಬೆದರಿಕೆ ಹಾಕಿದರು.
ಈ ಮಧ್ಯೆ ಇನ್ನೊಂದು ಅಪಾಯ ಎದುರಾಯಿತು. ಕೊಲ್ಲಿ ಮತ್ತು ಅವನ ಮಗಳು ಒಂದು ದಿನ ರಾಮಣ್ಣ ಶೆಟ್ಟರ ಮನೆಯಂಗಳದಲ್ಲಿ ಪ್ರತ್ಯಕ್ಪರಾದರು. ಆವತ್ತು ಅದೃಷ್ಟವಶಾತ್ ರಾಮಣ್ಣ ಶೆಟ್ಟರು ಮನೆಯಲ್ಲಿರಲಿಲ್ಲ. ಸುಬ್ಬಣ್ಣ ಶೆಟ್ಟಿಯ ಹೆಂಡತಿ ತವರಿಗೆ ಹೋಗಿದ್ದಳು. ತಕ್ಪಣ ಸುಬ್ಬಣ್ಣ ಶೆಟ್ಟಿ ಕೊಲ್ಲಿಯ ಕೈಗೊಂದಷ್ಟು ದುಡ್ಡು ತುರುಕಿ ಮುಂದಿನವಾರವೇ ಬಂದು ಮಗಳಿಗೊಂದು ಗತಿ ಕಾಣಿಸುವುದಾಗಿ ಹೇಳಿದ. ಇಷ್ಟು ದಪ್ಪ ಹೊಟ್ಟೆ ಹೊತ್ತುಕೊಂಡು ಅವನ ಕಣ್ಣಿಗೆ ಒಂದಿಡೀ ಸಮಸ್ಯೆಯಂತೆ ಕಾಣಿಸುತ್ತಿದ್ದ ಕೊಲ್ಲಿಯ ಮಗಳನ್ನೂ ಕರೆದು ಏನೋ ಉಸುರಿದ.
******
ಇದಾದ ಮೇಲೆ ಘಟನೆಗಳು ವೇಗವಾಗಿ ನಡೆದವು. ಒಂದು ವಾರದಲ್ಲಿ ಗೋಮಾಳಕ್ಕೆ ಬರುವುದಾಗಿ ಹೇಳಿದ ಸುಬ್ಬಣ್ಣ ರೈ ಮಾರನೇ ದಿನವೇ ಅಲ್ಲಿಗೆ ಜೀಪಿನಲ್ಲಿ ಹೋದ. ಅಲ್ಲಿ ಅಪ್ಪನಿಗೂ ಹೇಳದೇ ತನಗಾಗಿ ಕಾಯುತ್ತಾ ಕೂತಿದ್ದ ಕೊಲ್ಲಿಯ ಮಗಳನ್ನು ಜೀಪಿಗೆ ಹತ್ತಿಸಿಕೊಂಡು ಮರಳಿ ಬರುವ ದಾರಿಯಲ್ಲಿ ಅವಳ ಕತ್ತು ಹಿಸುಕಿ ಕೊಂದ. ಸುಬ್ಬಣ್ಣ ಶೆಟ್ಟಿಯೂ ಜೀಪು ಡ್ರೈವರ್ ಗುರುವಪ್ಪನೂ ಅವಳ ಹೆಣವನ್ನು ಹಾದಿಯಲ್ಲಿ ಸಿಗುವ ಕೆರೆಯೊಂದಕ್ಕೆ ಕಲ್ಲುಕಟ್ಟಿ ಎಸೆದರು.
ಇದಾದ ಒಂದು ವಾರದ ನಂತರ ಸುಬ್ಬಣ್ಣ ಶೆಟ್ಟಿ ಗೋಮಾಳಕ್ಕೆ ಹೋದ. ಮಗಳು ನಾಪತ್ತೆಯಾದ ದುಃಖದಲ್ಲಿ ಕೊಲ್ಲಿ ಕುಸಿದುಹೋಗಿದ್ದ. ಅವನಿಗೆ ಸುಬ್ಬಣ್ಣ ಶೆಟ್ಟಿಯ ಮೇಲೂ ಅನುಮಾನಗಳಿದ್ದವು. ಅದೇ ಅನುಮಾನ ಮತ್ತು ಸಿಟ್ಟಲ್ಲಿ ಆತ ಒಂದಷ್ಟು ಕೂಗಾಡಿದ. ರಾಮಣ್ಣ ರೈಯವರಿಗೆ ಇದನ್ನೆಲ್ಲ ತಿಳಿಸುವುದಾಗಿಯೂ ತನ್ನ ಮಗಳನ್ನು ಸುಬ್ಬಣ್ಣ ಶೆಟ್ಟಿಯೇ ಕಾಣೆಯಾಗಿಸಿದ್ದಾನೆಂದೂ ಅರಚಾಡಿದ. ಸುಬ್ಬಣ್ಣ ಶೆಟ್ಟಿ ಮತ್ತು ಡ್ರೈವರ್ ಸೇರಿ ಕೊಲ್ಲಿಯನ್ನು ಅವನ ಗುಡಿಸಲಲ್ಲೇ ಕೊಂದರು. ಅದು ಬೇಸಗೆಯ ಕಾಲವಾದ್ದರಿಂದ ಅವನ ಗುಡಿಸಲಿಗೆ ಬೆಂಕಿ ಹಚ್ಚಿದರು. ಕೊಲ್ಲಿಯ ಅರ್ಧಸುಟ್ಟು ಕರಕಲಾಗಿದ್ದ ಶವವನ್ನು ಮೂರು ದಿನಗಳ ನಂತರ ಅವನ ಬುಡಕಟ್ಟಿನ ಮಂದಿ ತಮ್ಮ ಶಾಸ್ತ್ರೋಕ್ತ ದಫನ್ ಮಾಡಿದರು.
ಒಂದು ಪ್ರೇಮ ಪ್ರಕರಣ ಎರಡು ಕೊಲೆಯಲ್ಲಿ ಅಂತ್ಯವಾಯಿತು.
******
ಇಲ್ಲಿಗೆ ಎಲ್ಲವೂ ಮುಗಿದುಹೋಗಬೇಕಾಗಿತ್ತು.
ಮತ್ತೆ ಆ ಪ್ರದೇಶಕ್ಕೆ ಸುಬ್ಬಣ್ಣ ಶೆಟ್ಟಿ ಕಾಲಿಡದೇ ಹೋಗಿದ್ದರೆ ಬಹುಶಃ ಮುಗಿಯುತ್ತಿತ್ತೋ ಏನೋ? ಎರಡು ಕೊಲೆಯಲ್ಲಿ ಭಾಗವಹಿಸಿದ್ದ, ಸುಬ್ಬಣ್ಣ ಶೆಟ್ಟಿಯ ಗುಟ್ಟುಗಳೆಲ್ಲ ಗೊತ್ತಿದ್ದ ಡ್ರೈವರ್ ಗುರುವಪ್ಪ ತನ್ನ ಜಾಣತನ ತೋರಿಸಲಿಕ್ಕೆ ಆರಂಭಿಸದೇ ಹೋಗಿದ್ದರೂ ಎಲ್ಲ ಮುಗಿಯುತ್ತಿತ್ತೋ ಏನೋ?
ಆದರೆ ಹಾಗಾಗಲಿಕ್ಕೆ ಇಬ್ಬರೂ ಬಿಡಲಿಲ್ಲ.
ಗುರುವಪ್ಪ ತಾನು ಬಾಯ್ಮುಚ್ಚಿಕೊಂಡಿರುವುದಕ್ಕಾಗಿ ಪ್ರತಿತಿಂಗಳೂ ಸಾವಿರ ರುಪಾಯಿಯನ್ನು ಸುಬ್ಬಣ್ಣ ಶೆಟ್ಟಿಯಿಂದ ಪೀಕಿಸತೊಡಗಿದ. ಅಷ್ಟೊಂದು ದುಡ್ಡನ್ನು ಅಪ್ಪನಿಂದ ಕೇಳುವುದು ಸಾಧ್ಯವಾಗದೇ ಸುಬ್ಬಣ್ಣ ನಾನಾ ಕಡೆ ಸಾಲ ಮಾಡಬೇಕಾಗಿ ಬಂತು. ಈ ಡ್ರೈವರ್ ಗುರುವಪ್ಪನನ್ನೂ ಮುಗಿಸಬೇಕು ಎಂದು ಆಗಾಗ ಆತನಿಗೆ ಅನ್ನಿಸಿತ್ತು. ಆದರೆ ತನಗಿಂತ ಬಲಾಢ್ಯನಂತೆ ಕಾಣುತ್ತಿದ್ದ ಆತನನ್ನು ಕೊಲ್ಲುವುದಕ್ಕೆ ಸುಬ್ಬಣ್ಣನಿಗೆ ಧೈರ್ಯ ಬಂದಿರಲಿಲ್ಲ.
ಈ ನಡುವೆ, ಕೊಲ್ಲಿಯ ಕೊಲೆ ನಡೆದು ಎಂಟು ತಿಂಗಳಾಗಿತ್ತು. ಸುಬ್ಬಣ್ಣ ಶೆಟ್ಟಿ, ತನ್ನ ಹೆಂಡತಿ ಮತ್ತು ಮೂರು ತಿಂಗಳ ಮಗುವಿನ ಜೊತೆ ಗೋಮಾಳಕ್ಕೆ ಹೋದ. ಅಲ್ಲಿ ಒಂದು ಪುಟ್ಟ ಮನೆ ಕಟ್ಟುವ ಯೋಚನೆಯೂ ಅವನಿಗೆ ಬಂದಿತ್ತು. ಒಂದಿಡೀ ದಿನ ಅಲ್ಲಿದ್ದು ಗೋಮಾಳದ ಅಂಚಲ್ಲಿ ಅಲೆದಾಡುತ್ತಾ ಗಂಡ, ಹೆಂಡತಿ ಮತ್ತು ಮಗು ವಾಪಸ್ಸು ಹೊರಡುವ ತಯಾರಿಯಲ್ಲಿದ್ದರು. ಯಥಾಪ್ರಕಾರ ಜೀಪು ಕೈಕೊಟ್ಟಿದೆಯೆಂದು ಗುರುವಪ್ಪು ರಿಪೇರಿಯಲ್ಲಿ ತೊಡಗಿಕೊಂಡಿದ್ದ. ಅದನ್ನು ಆಸಕ್ತಿಯಿಂದ ನೋಡುತ್ತಾ ಸುಬ್ಬಣ್ಣ ನಿಂತಿದ್ದ. ಹೆಂಡತಿ ಮತ್ತು ಮಗು ಅಲ್ಲೇ ಅಡ್ಡಾಡುತ್ತಾ ಅಟವಾಡುತ್ತಿದ್ದರು.
ಇದ್ದಕ್ಕಿದ್ದಂತೆ ಮಗು ಅಳತೊಡಗಿತು.
ಕಾಡಿನಲ್ಲಿ ಅಳಬಾರದು ಎನ್ನುವ ಮೂಲ ನಿಯಮ ಮಗುವಿಗಷ್ಟೇ ಅಲ್ಲ, ಸುಬ್ಬಣ್ಣನಿಗೂ ಗೊತ್ತಿರಲಿಲ್ಲ. ಅಳುವ ಮಗುವನ್ನು ಎತ್ತಿಕೊಳ್ಳಲೆಂದು ತಾಯಿ ಹತ್ತಿರ ಬರುತ್ತಿದ್ದಂತೆ ಸುಬ್ಬಣ್ಣ ತಿರುಗಿ ನೋಡಿದ. ಅವನು ಕಣ್ಮುಚ್ಚಿ ಕಣ್ತೆಗೆಯುವಷ್ಟರಲ್ಲಿ ಒಂದು ಆಕೃತಿ ಪೊದೆಯಿಂದ ಛಂಗನೆ ಜಿಗಿದು ಅವನ ಮಗುವನ್ನೂ ಹೆಂಡತಿಯನ್ನೂ ಬಾಯಲ್ಲಿ ಕಚ್ಚಿಕೊಂಡು ನೆಗೆದುಹೋಯಿತು. ಮರುಕ್ಪಣ ಅವನ ಹೆಂಡತಿ ಮತ್ತು ಮಗುವಿದ್ದ ಜಾಗದಲ್ಲಿ ಯಾರೂ ಇರಲಿಲ್ಲ. ಆತ ಗಾಬರಿಯಿಂದ ಥರ ಥರ ನಡುಗುತ್ತಾ ಹಾಹಾಕಾರ ಮಾಡುತ್ತಾ ಜೀಪನ್ನೂ ಅಲ್ಲೇ ಬಿಟ್ಟು ಡ್ರೈವರನ ಜೊತೆ ಪರಾರಿಯಾದ.
ಮಾರನೆಯ ದಿನ ರಾಮಣ್ಣ ಶೆಟ್ಟರೂ ಮಗನ ಮತ್ತು ಡ್ರೈವ್ ಜೊತೆ ಅಲ್ಲಿಗೆ ಆಗಮಿಸಿದರು. ಬುಡಕಟ್ಟು ಜನಾಂಗದವರ ಜೊತೆ ಸೇರಿ ಇಡೀ ಕಾಡನ್ನು ಜಾಲಾಡಿದರು. ಸೊಸೆಯ ಮೊಮ್ಮಗುವಿನ ಪತ್ತೆ ಹತ್ತಲಿಲ್ಲ. ಅವರು ನಿರಾಸೆಯಲ್ಲಿ ಹೊರಟು ಹೋದರು. ಸುಬ್ಬಣ್ಣ ಮತ್ತು ಡ್ರೈವರ್ ಅಲ್ಲೇ ಉಳಿದುಕೊಂಡರು.
ನಡುರಾತ್ರಿಯ ಹೊತ್ತಿಗೆ ಸುಬ್ಬಣ್ಣ ದೇಹಬಾಧೆ ತೀರಿಸಿಕೊಳ್ಳಲಿಕ್ಕೆ ಗುಡಿಸಲಿನಿಂದ ಹೊರಗೆ ಬಂದ. ಕುಳಿತುಕೊಂಡು ನಿದ್ದೆಗಣ್ಣಲ್ಲಿ ಉಚ್ಚೆಹೊಯ್ಯುತ್ತಿದ್ದವನಿಗೆ ತನ್ನಮುಂದೆ ಆಕೃತಿಯೊಂದು ನಿಂತದ್ದು ಕಾಣಿಸಿತಷ್ಟೇ. ಮರುಕ್ಪಣವೇ ಅದು ಭೀಕರವಾಗಿ ಗರ್ಜಿಸಿ ಸುಬ್ಬಣ್ಣನನ್ನು ಹೆಗಲಿಗೆ ಹಾಕಿಕೊಂಡು ಕಾಡಿನೊಳಗೆ ಓಡಿಹೋಯಿತು. ಆ ಗರ್ಜನೆಗೆ ಎದ್ದು ಕೂತ ಡ್ರೈವರ್ ಗುರುವಪ್ಪ ಉಟ್ಟಬಟ್ಟೆಯಲ್ಲೇ ಒಂದು ಎರಡು ಮಾಡಿಕೊಂಡು ಅದೇ ವಾಸಲೆಯಲ್ಲೇ ಗುಡಿಸಲಿನಿಂದ ಹೊರಬರಲಾಗದೆ ರಾತ್ರಿ ಬೆಳಗು ಮಾಡಿದ. ಬೆಳಗಾಗುತ್ತಲೇ ಭಯಗ್ರಸ್ತನಾಗಿ ಓಡಿ ಹೋಗಿ ಜೀಪು ಹತ್ತಿಕೊಂಡು ಶರವೇಗದಿಂದ ಸುಳ್ಯದ ಕಡೆ ಧಾವಿಸಿದ.
ಗುತ್ತಿಗಾರು ಸುಳ್ಯದ ರಸ್ತೆಯಲ್ಲಿ ಸಿಗುವ ಕೆರೆಯೊಂದರಲ್ಲಿ ಅವನ ಜೀಪು ಮುಕ್ಕಾಲು ಭಾಗ ಮುಳುಗಿದ್ದುದನ್ನು ಮೂರು ದಿನಗಳ ನಂತರ ಯಾರೋ ನೋಡಿ ರಾಮಣ್ಣ ಶೆಟ್ಟರಿಗೆ ವರದಿ ಮಾಡಿದರು. ಅವರು ಬಂದು ಜೀಪು ಎತ್ತಿಸುವ ಹೊತ್ತಿಗೆ ಗುರುವಪ್ಪನ ಶವವನ್ನು ಕೆರೆಯ ಮೀನುಗಳು ತಿಂದು ಮುಗಿಸಿದ್ದವು.
ಗುರುವಪ್ಪ ಜೀಪಿನೊಂದಿಗೆ ಬಿದ್ದು ಸತ್ತ ಕೆರೆಯೂ ಸುಬ್ಬಣ್ಣ ಮತ್ತು ಗುರುವಪ್ಪ ಸೇರಿ ಕೊಲ್ಲಿಯ ಮಗಳನ್ನು ಕಲ್ಲುಕಟ್ಟಿ ಎಸೆದ ಕೆರೆಯೂ ಒಂದೇ ಆಗಿದ್ದದ್ದು ಮಾತ್ರ ಕಾಕತಾಳೀಯ.
*****
ಆ ಪ್ರದೇಶದಲ್ಲಿ ಮತ್ತೆಂದೂ ಹುಲಿ ಕಾಣಿಸಿಕೊಂಡದ್ದನ್ನು ಯಾರೂ ಕಾಣಲಿಲ್ಲ. ಸತ್ತ ಕೊಲ್ಲಿಯೇ ದೆವ್ವವಾಗಿ ಹುಲಿಯ ರೂಪದಲ್ಲಿ ಬಂದು ಸೇಡು ತೀರಿಸಿಕೊಂಡ ಎಂದು ಅನೇಕರು ಮಾತಾಡಿಕೊಂಡರು. ಕ್ರಮೇಣ ಈ ಸುದ್ದಿ ರಾಮಣ್ಣ ಶೆಟ್ಟರ ಕಿವಿಗೂ ಬಿತ್ತು. ಇದ್ದೊಬ್ಬ ಮಗನನ್ನು ಕಳಕೊಂಡ ದುಃಖದಲ್ಲಿ ಶೆಟ್ಟರು ಐಹಿಕ ವ್ಯಾಪಾರಗಳಲ್ಲಿ ಆಸಕ್ತಿ ಕಳಕೊಂಡು ಕೃಶರಾಗುತ್ತಾ ಬಂದರು.
ಒಂದು ದಿನ ಇದ್ದಕ್ಕಿದ್ದಂತೆ ಕಾಣೆಯಾದರು. ಅವರನ್ನು ಹುಡುಕಿಕೊಂಡು ಬಂದವರಿಗೆ ಅವರ ಮನೆಯ ಅಂಗಳದಲ್ಲಿ ಹುಲಿಯ ಹೆಜ್ಜೆಗುರುತುಗಳು ಕಾಣಿಸಿದ್ದುವಂತೆ.
ಆ ಕಾಲದ ದಿನಪತ್ರಿಕೆಗಳಲ್ಲಿ ಸುಳ್ಯದ ಮಂದಿ ಒಂದುವಾರ ಕಾಲ ಹುಲಿಭೀತಿಯಿಂದಾಗಿ ಮನೆಯಿಂದ ಹೊರಗೆ ಬರದೇ ಕಾಲಕಳೆದ ಬಗ್ಗೆ ವರದಿ ಬಂದಿದ್ದನ್ನು ಈಗಲೂ ನೂರು ಸಮೀಪಿಸುತ್ತಿರುವ ಮಂದಿ ನೆನಪಿಸಿಕೊಳ್ಳುತ್ತಾರೆ.
Friday, April 27, 2007
Tuesday, April 24, 2007
ಪಯಣದಲಿ ಜೊತೆಯಾಗಿ ನಾನಿಲ್ಲವೆ?

ಪ್ರಖರ ಸಂಜೆಗಳು ಅಪಾಯಕಾರಿ. ಅವು ಸೀದಾ ನಮ್ಮನ್ನು ಬಾಲ್ಯಕ್ಕೆ ಕೊಂಡೊಯ್ಯುತ್ತವೆ. ಮುಂಜಾನೆಯ ಮಂದ ಬೆಳಕು ಹುಟ್ಟಿನಂತೆ, ಮಧ್ಯಾಹ್ನದ ಸುಡುಸುಡು ಬಿಸಿಲು ಸಾವಿನಂತೆ ನಮ್ಮನ್ನು ತಲುಪಿದರೆ ಸಂಜೆಯ ಇಳಿಬಿಸಿಲಿಗೋ ಹಳೆಯ ನೆನಪುಗಳ ಹ್ಯಾಂಗೋವರ್. ಒಂದು ಪ್ರಖರ ಬೆಳಕಿನ ಸಂಜೆಗೆ ನಿಮ್ಮನ್ನು ಒಡ್ಡಿಕೊಂಡು ನೋಡಿ ಬೇಕಿದ್ದರೆ; ಜಲಪಾತದಲ್ಲಿ ಜಾರಿದಂತೆ ಕನಿಷ್ಠ ಹತ್ತು ವರುಷ ಹಿಂದಕ್ಕೆ ಹೊರಟು ಹೋಗುತ್ತೀರಿ. ಹಿಂದೆಂದೋ ಒಂದು ದಿನ ಇಂಥದ್ದೇ ಸಂಜೆಯಲ್ಲಿ ಧ್ಯಾನಿಸಿದ್ದೋ, ಪ್ರೇಮಿಸಿದ್ದೋ ಬರಿದೆ ಅಡ್ಡಾಡಿದ್ದೋ ನಿನ್ನೆಯಷ್ಟೆ ಓದಿದ ಕವಿತೆಯಷ್ಟು ನಿಚ್ಚಳವಾಗಿ ನೆನಪಾಗುತ್ತದೆ.
ಬಹುಶಃ ಅದಕ್ಕೇ ಇರಬೇಕು, ನಾವು ಬಹಳಷ್ಟು ಮಂದಿ ಸಂಜೆಗಳನ್ನು ನಿರಾಕರಿಸುತ್ತೇವೆ. ಹಳ್ಳಿಗಳಲ್ಲಿ ಸಂಜೆಗೂ ಮಧ್ಯಾಹ್ನಕ್ಕೂ ವ್ಯತ್ಯಾಸವೇ ಇರುವುದಿಲ್ಲ. ಮಲೆನಾಡಿನಲ್ಲಂತೂ ನೋಡನೋಡುತ್ತಿದ್ದ ಹಾಗೇ ಬಂಗಾರದ ಸಂಜೆ ಇರುಳೊಳಗೆ ಬಚ್ಚಿಟ್ಟುಕೊಂಡಿರುತ್ತದೆ. ಸಂಜೆಯ ಗುಣವೇ ಅದು. ಯಾವತ್ತೂ ಅದು ನಿಮಗೆ ಇಡಿಯಾಗಿ ಸಿಗುವುದಿಲ್ಲ. ಒಂದು ಒಳ್ಳೆಯ ಹವಳಗೆಂಪಿನ ಸಂಜೆ ನಿಮ್ಮ ಕೈಸೇರಬೇಕಿದ್ದರೆ ಜನ್ಮಾಂತರದ ಪುಣ್ಯ ಬೇಕು.
ಇಂಥ ಸಂಜೆಯ ಬಗ್ಗೆ ಯಾರೂ ಕವಿತೆ ಬರೆದಿಲ್ಲ. ಸಂಜೆಯ ರಾಗಕೆ ಬಾನು ಕೆಂಪೇರಿದೆ.. ಎನ್ನುವ ಸಾಲು ಓದಿ ಆಹಾ, ಸಂಜೆಯ ಮೇಲೊಂದು ಹಾಡು ಸಿಕ್ಕಿತು ಎಂದು ಖುಷಿಯಾದರೆ ಅಷ್ಟರಲ್ಲೇ ಅದು ಮುಸ್ಸಂಜೆಯ ಹಾಡಾಗಿ ರೂಪಾಂತರ ಹೊಂದುತ್ತದೆ-ತಿಂಗಳು ಮೂಡಿ ಬೆಳಕಿನ ಕೋಡಿ ಚೆಲ್ಲಾಡಿದೆ! ಬೇರೆ ಕವಿತೆಗಳನ್ನು ನೋಡಿದರೆ ಸಂಜೆಯ ಬಗ್ಗೆ ಕವಿತೆಗಳಿವೆಯೇ ಹೊರತು ಸಂಜೆಯೇ ಕವಿತೆಯಾಗಿ ರೂಪುಗೊಂಡಿಲ್ಲ. ಯಾಕೆ ಕವಿಗಳಿಗೆ ಸಂಜೆಯ ಬಗ್ಗೆ ಅಷ್ಟೊಂದು ಅವಜ್ಞೆ!
ಸಂಜೆಗೊಂದು ಕನಸಿನ ಗುಣವಿದೆ. ಸಂಜೆಗೊಂದು ನಿರ್ಲಿಪ್ತತೆಯಿದೆ. ಅದು ಇರುಳಿನ ಹಾಗೆ ನಿರ್ಲಜ್ಜವಲ್ಲ. ಮುಂಜಾನೆಯ ಹಾಗೆ ನಿಗೂಢವೂ ಅಲ್ಲ. ಹಳೆಯ ಗೆಳೆಯನ ಹಾಗೆ ಸಂಜೆ ಹಾಜರಾಗುತ್ತದೆ. ಅದಕ್ಕೆ ನಿಮ್ಮ ವಿಶೇಷ ಗಮನ ಬೇಕಿಲ್ಲ. ಕರೆದು ಕೂರಿಸುವ ಅಗತ್ಯವಿಲ್ಲ, ಸತ್ಕರಿಸಬೇಕಾದ ಅವಶ್ಯಕತೆಯೂ ಇಲ್ಲ.
ಅಂಥ ಸಂಜೆಗಳಲ್ಲೇ ಪೂರ್ವಜನ್ಮ ನೆನಪಾಗುತ್ತದೆ. ಕಳೆದು ಹೋದ ದಿನಗಳು ನೆನಪಿಗೆ ಬರುತ್ತವೆ. ಹಳೆಯ ಪ್ರೇಮ ಕಣ್ಣೆದುರು ಕುಣಿಯುತ್ತದೆ. ಸುಮ್ಮನೆ ಒಂದು ಮುತ್ತು ಸಂಜೆಗೆ ಮೈಮನವನ್ನೊಡ್ಡಿ ಕುಳಿತುಕೊಳ್ಳಿ.
******
ಅಂಥ ಸಂಜೆಯಲ್ಲೇ ಕಾಡುವ ಹಾಡು ಇದು.
ಹತ್ತು ವರುಷದ ಹಿಂದೆ ಮುತ್ತೂರ ತೇರಿನಲಿ
ಅತ್ತಿತ್ತ ಸುಳಿದವರು ನೀವಲ್ಲವೆ?
ಹತ್ತಿರದ ಹೆಣ್ಣೆಂದು ಮತ್ತೆ ಮುತ್ತೂರಿನಲಿ
ಒಪ್ಪಿ ಕೈಹಿಡಿದವರು ನೀವಲ್ಲವೆ?
ಅವರ ಮದುವೆಯಾಗಿ ಹತ್ತು ವರುಷಗಳು ಸಂದಿವೆ. ಅದೊಂದು ಮುತ್ತು ಸಂಜೆಗೆ ಮೈಯೊಡ್ಡಿ ಕುಳಿತ ಆಕೆಗೆ ಮುತ್ತೂರ ತೇರು ನೆನಪಾಗುತ್ತದೆ, ಅಲ್ಲಿ ಅತ್ತಿತ್ತ ಸುಳಿದವರು ನೆನಪಾಗುತ್ತಾರೆ.
ಸಂಜೆಯ ನೆಪವಿಲ್ಲದೇ ಹೋದರೆ ಅದು ಯಾಕಾದರೂ ನೆನಪಾಗಬೇಕು? ಅವರು ಎದುರೇ ಕೂತಿರುವಾಗ ಹಳೆಯದನ್ನು ಆಕೆ ನೆನಪಿಸಿಕೊಂಡು ಯಾಕೆ ಸುಮ್ಮಾನ ಪಡಬೇಕು. ಬೆಟ್ಟಗಳ ಬೆನ್ನಿನಲಿ ಬೆಟ್ಟಗಲ ದಾರಿಯಲಿ ಕಟ್ಟಿಕೊಂಡು ಅಲೆದ ಕ್ಪಣಗಳನ್ನು ವರ್ತಮಾನದ ತಂತಿಗೆ ಯಾಕಾದರೂ ತೂಗುಹಾಕಬೇಕು.
ಅವನಾದರೂ ಅಷ್ಟೇ; ತಿಟ್ಟಿನಲಿ ಮುಂದಾಗಿ, ಕಣಿವೆಯಲಿ ಹಿಂದಾಗಿ ನಡೆದವನು. ತಿಟ್ಟು ಹತ್ತುವ ಹೊತ್ತಿಗೆ ಆಕೆಯ ಕೈಹಿಡಿದು ಏರಿಸಿ, ಕಣಿವೆಯಲ್ಲಿ ಬೆನ್ನಹಿಂದಿನ ಭಯಕ್ಕೆ ಆಸರೆಯಾಗಿ, ಸೆರಗೆಳೆದು ನಿಲ್ಲಿಸಿ, ಜಡೆಯೆಳೆದು ನೋಯಿಸಿ, ತೊತ್ತೆಂದು ಜರೆದು, ಮುತ್ತೆಂದು ಕರೆದು ಮೊದಲಿರುಳ ಹೊಂಗಸನ ಮುನ್ನೀರ ದಾಟಿಸಿದವನು.
ಹತ್ತು ವರುಷದ ದಾಂಪತ್ಯದ ಚಿತ್ರ ಇಷ್ಟು ಸೊಗಸಾಗಿ ಮೂವತ್ತಾರು ಸಾಲುಗಳಲ್ಲಿ ಮೂಡಿದ್ದು ಎಂಥ ಅಚ್ಚರಿ. ಕವಿತೆಯ ಬೆಡಗೇ ಅದು. ಯಾರೋ ಒಬ್ಬರು ತಮ್ಮ ಮಧುರ ದಾಂಪತ್ಯದ ನೆನಪನ್ನು ಸಾವಿರ ಪುಟಗಳಲ್ಲಿ ಬರೆಯಬಹುದು. ಆ ಸಾವಿರ ಪುಟಗಳ ಅನುಭವ ಅವರೊಬ್ಬರದೇ ಆಗಿರುತ್ತದೆ. ಆದರೆ ಇಲ್ಲಿ ಹಾಗಲ್ಲ; ಮೂವತ್ತಾರು ಸಾಲುಗಳ ಕವಿತೆಯಲ್ಲಿ ಮೂಡಿದ ಅನುಭವ ಎಲ್ಲರದ್ದೂ ಆಗಿಬಿಡುತ್ತದೆ. ಮದುವೆ ಆಗದವನೂ ಅದನ್ನು ಸವಿಯಬಲ್ಲ.
ಬಾಗಿಲಿಗೆ ಬಂದವರು ಬೇಗ ಬಾ ಎಂದವರು
ಬಂದುದೇಕೆಂದವರು ನೀವಲ್ಲವೆ?
ನೋಡು ಬಾ ಎಂದವರು ಬೇಡ ಹೋಗೆಂದವರು
ಎಂದಿಗೂ ಬಿಡದವರು ನೀವಲ್ಲವೆ?
ಇಲ್ಲಿಯ ಕೊನೆಯ ಸಾಲನ್ನು ವರ್ತಮಾನಕ್ಕೆ ತಂದರೆ ವಿನಂತಿಯಾಗುತ್ತದೆ; ಎಲ್ಲಿದೆಯೋ ಅಲ್ಲೇ ಇಟ್ಟು ನೋಡಿದರೆ ಪ್ರೀತಿಯಾಗುತ್ತದೆ. ಹಾಗೇ ಒಂದೇ ಮಾತಲ್ಲಿ ಆಸೆ ಮತ್ತು ತೃಪ್ತಿ ಎರಡನ್ನೂ ಹೇಳಿದ್ದಾರೆ ಕವಿ; ನೀನೇ ಸಾಕೆಂದವರು, ನೀನೇ ಬೇಕೆಂದವರು, ಚಿತ್ತದಲಿ ನಿಂತವರು ನೀವಲ್ಲವೆ?
ಸಾಕು ಅನ್ನುವುದು ತೃಪ್ತಿ, ಬೇಕು ಎನ್ನುವುದು ದಾಹ. ಎರಡೂ ದಾಂಪತ್ಯದಲ್ಲಿ ಹೇಗೆ ಫಲಿಸಿದೆ ನೋಡಿ.
ಆತ ತುರುಬಿಗಿಟ್ಟ ಮಲ್ಲಿಗೆಯನ್ನು ಆಕೆ ನೆನಪಿಸಿಕೊಳ್ಳುವ ರೀತಿ ನೋಡಿ. ಹೂ ಮುಡಿಸುವುದು ಗಂಡಸಿಗೆ ಗೊತ್ತಿಲ್ಲದ ಕೆಲಸ. ಹೆಣ್ಣಿನಷ್ಟು ನಾಜೂಕಾಗಿ ಆತ ಎಂದೂ ಹೂಮುಡಿಸಲಾರ; ಮಲ್ಲಿಗೆಯ ದಂಡೆಯನು ತುರುಬಿನಲಿ ಗಿಡಿದವರು.. ಅಂತಾಳೆ ಆಕೆ.
ಹೀಗೆ ಹತ್ತು ವರುಷದ ದಾಂಪತ್ಯದ ನೆನಪು ಕೊನೆಯಲ್ಲಿ ವರ್ತಮಾನದ ಜಗಲಿಗೆ ಬರುತ್ತದೆ. ಆಕೆ ಕೇಳುತ್ತಾಳೆ;
ಪಯಣದಲಿ ಜೊತೆಯಾಗಿ ನಾನಿಲ್ಲವೆ?
******
ಈ ಹಾಡಿಗೂ ಸಂಜೆಗೂ ಏನು ಸಂಬಂಧವೋ ಗೊತ್ತಿಲ್ಲ. ಆದರೆ ಪ್ರತಿ ಸಂಜೆಯಲ್ಲೂ ಇದು ನೆನಪಾಗುತ್ತದೆ.
ಮುಸ್ಸಂಜೆಯ ಮುಂದೆ ಬೆತ್ತಲೆ ನಿಂತ ಸಂಜೆಯೆಂಬ ಗರುಡಗಂಭಕ್ಕೆ ಮನ ಜೋತುಬೀಳುತ್ತದೆ.

ಟಿಪ್ಪಣಿ- ಇದು ಕಾಡಬೆಳದಿಂಗಳು ಚಿತ್ರಕ್ಕೆ ಲೊಕೇಶನ್ ಹುಡುಕುವುದಕ್ಕೆ ಬಸರಿಕಟ್ಟೆಗೆ ಹೊರಟ ದಾರಿಯಲ್ಲಿ ವೀರೇಶ್ ಕೆಮರಾಕ್ಕೆ ಸೆರೆಸಿಕ್ಕ ಸಂಜೆ. ಆಮೇಲೆ ನೆಲ್ಲಿಹಡ್ಲು ನಾಗಭೂಷಣ್ ಅವರ ನೆರವಿನಿಂದ ಅದೇ ಆಸುಪಾಸಲ್ಲಿ ಶೂಟಿಂಗು ಮುಗಿಸಿದ್ದೂ ಆಯ್ತು. ಈ ಸಂಜೆ ಮರೆಯಲಾರದ ಪ್ರಖರ ಸಂಜೆಗಳಲ್ಲಿ ಒಂದು. ನೆನಪಿನಂತೆ ಹರಿವ ನದಿ. ಮನಸಿನಂತೆ ಹಬ್ಬಿದ ಸಂಜೆಬಿಸಿಲು. ಪಯಣವೋ ನಿಲುಗಡೆಯೋ ತಿಳಿಯದ ಭಾವ.
Monday, April 23, 2007
ಮುಚ್ಚಿದ ಮುಷ್ಟಿಯಲ್ಲಿ ಮುರಿದ ಹೆಬ್ಬೆರಳಿತ್ತು!

ವೋ.....ವ್.... ವೊವ್.. ವೊವ್.. ವೋ...ವ್..
ಆ ಅಪರಾತ್ರಿಯ ಆರ್ತನಾದಕ್ಕೆ ವಿದ್ಯಾಶಂಕರನಿಗೆ ಥಟ್ಟನೆ ಎಚ್ಚರವಾಯಿತು. ಯಾರೋ ತನ್ನ ತಲೆಯ ಹತ್ತಿರ ನಿಂತಿದ್ದಾರೆ ಅನ್ನಿಸತೊಡಗಿತು. ಮಲಗಿದಲ್ಲಿಂದ ಹೊರಳಿ ನೋಡುವುದಕ್ಕೆ ಧೈರ್ಯವಾಗಲಿಲ್ಲ. ಹೊದ್ದುಕೊಂಡಿದ್ದ ಕಂಬಳಿಯ ಒಳಗಿನಿಂದಲೇ ಕೈಗೆ ಟಾರ್ಚು ಸಿಗುತ್ತದೇನೋ ಅಂತ ತಡಕಾಡಿದ. ತಲೆಯ ಹತ್ತಿರ ಕುಳಿತ ಆಕೃತಿ ಮಿಸುಕಾಡಿದಂತೆ ಅನ್ನಿಸಿತು. ಹಾಗನ್ನಿಸುವ ಹೊತ್ತಿಗೆ ಕೈಗೆ ಟಾರ್ಚು ಸಿಕ್ಕಿತು.
ಹೊರಗೆ ಗಾಢಾಂಧಕಾರ. ಕರೆಂಟು ಹೋಗಿ ಬಹಳ ಹೊತ್ತಾಗಿತ್ತೆಂದು ಕಾಣಿಸುತ್ತದೆ. ಕತ್ತಲನ್ನೆಲ್ಲ ಯಾರೋ ತಂದು ಮನೆಯೊಳಗೆ ರಾಶಿ ಹಾಕಿದ್ದಾರೆ ಅನ್ನಿಸುವಂತಿತ್ತು. ವಿದ್ಯಾಶಂಕರನ ಕೈಗೆ ಟಾರ್ಚ್ ಲೈಟು ಸಿಗುವ ಹೊತ್ತಿಗೆ ರೆಕ್ಕೆಗಳನ್ನು ಭಯಂಕರ ಸದ್ದಿನೊಂದಿಗೆ ಫಟಫಟಿಸುತ್ತಾ ಬೃಹದಾಕಾರದ ಬಾವಲಿಯೊಂದು ಎಲ್ಲಿಗೋ ಹಾರಿಹೋಯಿತು.
ಆ ಸದ್ದಿಗೆ ವಿದ್ಯಾ ಮತ್ತೊಮ್ಮೆ ಬೆಚ್ಚಿಬಿದ್ದ.ಕೈಗೆ ಟಾರ್ಚು ಸಿಗುತ್ತಲೇ ವಿದ್ಯಾಶಂಕರ ಥಟ್ಟನೆ ಹೊದ್ದುಕೊಂಡಿದ್ದ ಕಂಬಳಿ ಕಿತ್ತೆಸೆದ. ಅದೇ ಅವನು ಮಾಡಿದ ತಪ್ಪು.
ಹೊದಿಕೆ ಕಿತ್ತೆಸೆಯುತ್ತಿದ್ದಂತೆ ಬೀದಿಯ ಕೊನೆಯಲ್ಲಿ ನಾಯಿ ಮತ್ತೊಮ್ಮೆ ವಿಕಾರವಾಗಿ ಅರಚಿತು. ನಾಯಿಗಳು ಸಾಮಾನ್ಯವಾಗಿ ಬೊಗಳುತ್ತವೆಯೇ ಹೊರತು ಊಳಿಡುವುದಿಲ್ಲ. ಹಾಗೆ ಊಳಿಡಬೇಕಿದ್ದರೆ ಅವುಗಳಿಗೂ ಭಯವಾಗಿರಬೇಕು ಮತ್ತು ಅವುಗಳ ಕಣ್ಣಿಗೆ ವಿಚಿತ್ರ ಆಕೃತಿಗಳು ಗೋಚರವಾಗಿರಬೇಕು. ಅದು ನೆನಪಾಗುತ್ತಿದ್ದಂತೆ ವಿದ್ಯಾಶಂಕರನ ರೋಮಗಳು ಸೆಟೆದುನಿಂತವು. ಏನಾದರಾಗಲಿ ಅಂದುಕೊಂಡು ಟಾರ್ಚಿನ ಸ್ವಿಚ್ಚು ಅದುಮಿದ.
ಟಾರ್ಚು ಹತ್ತಿಕೊಳ್ಳಲಿಲ್ಲ !
ಶಂಕರ ತನಗೆ ಅರಿವಿಲ್ಲದೆ ಮೆತ್ತಗೆ ಚೀರಿಕೊಂಡ. ಕತ್ತಲೆಯಲ್ಲಿ ಆ ಸ್ವರ ಕರಗಿಹೋಯಿತು. ಅದೇ ಹೊತ್ತಿಗೆ...ಅತ್ಯಂತ ಕರ್ಕಶ ಧ್ವನಿಯಲ್ಲಿ ಪಕ್ಕದಲ್ಲೇ ಯಾರೋ ನಕ್ಕಂತಾಯಿತು.

ಅದೇ ಕೊನೆ.
ಅಲ್ಲಿಂದಾಚೆ ಮೂರು ವರುಷಗಳ ಕಾಲ ವಿದ್ಯಾಶಂಕರ ನಿದ್ದೆ ಮಾಡಲಿಲ್ಲ!
ಅದೇ ಆರಂಭ!
-2-
ಅದು ಬೆಳಗಾವಿಯ ರಾಯಭಾಗ ತಾಲೂಕಿನ ಒಂದು ಹಳ್ಳಿ. ಜಲಾಲಬಾಗಕ್ಕೆ ಹತ್ತಿರವಿದ್ದ ಆ ಹಳ್ಳಿಗೆ ಹೆಸರೇ ಇರಲಿಲ್ಲ. ಅಲ್ಲಿದ್ದ ಒಂದೇ ಒಂದು ದೊಡ್ಡ ಮನೆಯೆಂದರೆ ವಿದ್ಯಾಶಂಕರನದು. ಆತ ತಕ್ಕಮಟ್ಟಿಗೆ ಅನುಕೂಲವಂತ. ಆತನ ತಾತಮುತ್ತಾತಂದಿರು ಆಗರ್ಭ ಶ್ರೀಮಂತರು. ಅವರು ಮಾಡಿಟ್ಟ ಆಸ್ತಿಯನ್ನು ಶಂಕರ ಅನುಭವಿಸುತ್ತಿದ್ದನೇ ಹೊರತು, ಆತ ಒಂದು ಚಿಕ್ಕಾಸನ್ನೂ ಸಂಪಾದಿಸುವುದಕ್ಕೆ ಹೋಗಲಿಲ್ಲ. ಅವನ ಈ ಸೋಮಾರಿ ಪ್ರವೃತ್ತಿಗೆ ಬೇಸತ್ತು ಅವನ ಹೆಂಡತಿಯೂ ತವರಿಗೆ ವಾಪಸ್ಸಾದಳು. ಆದರೆ ಅವನ ಅತೀವ ಕಾಮಲಾಲಸೆಯೇ ಹೆಂಡತಿಯನ್ನು ಮನೆಯಿಂದ ಓಡಿಸಿದೆ ಅಂತ ಆಸುಪಾಸಿನ ಜನ ಮಾತಾಡಿಕೊಳ್ಳುತ್ತಿದ್ದರು.

ಶಂಕರನಲ್ಲಿ ಅದೆಂಥ ದೈತ್ಯ ಶಕ್ತಿಯಿತ್ತೋ ಗೊತ್ತಿಲ್ಲ, ಆತ ದಿನಕ್ಕೆ ಏಳೆಂಟು ಸಾರಿ ಹೆಂಡತಿಯನ್ನು ಪ್ರೀತಿ ಮಾಡುತ್ತಿದ್ದನಂತೆ. ಅವನ ಈ ವ್ಯಸನವನ್ನು ಕೇಳಿದವರು ಆತ ವಾಮಾಚಾರಿಯಾಗಲು ಲಾಯಕ್ಕು ಎನ್ನುತ್ತಿದ್ದರು.
ಶಂಕರನಿಗೊಬ್ಬ ಮಂಕುಬಡಿದ ಅಣ್ಣನಿದ್ದ. ಹೇಳಿದ ಕೆಲಸ ಮಾಡುತ್ತಾ, ಕೆಲಸವಿಲ್ಲದಾಗ ಸದಾ ಜಗಲಿಯ ಮೇಲೆ ಕೂರುತ್ತಿದ್ದ ಆತ ಒಂದು ದಿನ ಎಲ್ಲಿಗೋ ಹೊರಟುಹೋದ. ಹೀಗಾಗಿ ಆ ವಾಡೆಯಂಥ ಮನೆಯಲ್ಲಿ ಉಳಿದವನು ಶಂಕರ ಒಬ್ಬನೇ. ಆತ ಅಲ್ಲಿಂದ ಯಾವತ್ತೂ ಹೊರಗೆ ಬಂದವನಲ್ಲ. ಯಾರ ಜೊತೆಗೂ ಬೆರೆತವನೂ ಅಲ್ಲ.
ಇದ್ದಕ್ಕಿದ್ದಂತೆ ಶಂಕರನ ಮನೆಯೊಳಗೆ ವಿಚಿತ್ರ ಘಟನೆಗಳು ನಡೆಯತೊಡಗಿದವು. ಆತ ಮಲಗಿದ ತಕ್ಷಣ ಯಾರೋ ಅವನ ಕತ್ತು ಹಿಸುಕಿದಂತಾಗುತ್ತಿತ್ತು. ಎದೆಯ ಮೇಲೆ ಕುಳಿತು ಮುಖಕ್ಕೆ ಏನನ್ನೋ ಒತ್ತಿಹಿಡಿದಂತಾಗುತ್ತಿತ್ತು. ಅದೆಲ್ಲ ಭ್ರಮೆ ಅಂದುಕೊಂಡು ಆತ ಧೈರ್ಯ ತಂದುಕೊಂಡು ನಿದ್ದೆಹೋಗಲಿಕ್ಕೆ ಯತ್ನಿಸಿ ಒಂದು ವಾರ ಕತ್ತುನೋವಿಂದ ಮಲಗಿದ್ದೂ ಆಯ್ತು.ಈ ಕತೆ ನನಗೆ ಗೊತ್ತಾದದ್ದು ನಾನು ಚಿಕ್ಕೋಡಿ ತಾಲೂಕಿನ ಬೇಡ್ಕಿಹಾಳದಲ್ಲಿರುವ ನನ್ನ ಸ್ನೇಹಿತನ ಮನೆಗೆ ಹೋದಾಗ.
ಚಿಕ್ಕೋಡಿ ರಾಯಭಾಗದ ಪಕ್ಕದ ತಾಲೂಕು. ಅಲ್ಲಿನ ಒಂದೇ ಒಂದು ಸ್ಥಳೀಯ ಪತ್ರಿಕೆಯಲ್ಲಿ ವಿದ್ಯಾಶಂಕರನ ದೆವ್ವದ ಬಂಗಲೆಯ ಸುದ್ದಿ ಬಂದಿತ್ತು. ಅಲ್ಲಿ ರಾತ್ರಿ ಹೋಗಿ ಇರುವುದಕ್ಕೆ ಯತ್ನಿಸಿ ಹೆದರಿ ಓಡಿಬಂದವರ ಕತೆಯನ್ನೂ ವರದಿಗಾರ ಬರೆದಿದ್ದ. ಅದಕ್ಕಿಂತ ಹೆಚ್ಚಾಗಿ ಬೈಲಹೊಂಗಲದಿಂದ ದೆವ್ವದ ಗುಟ್ಟು ತಿಳಿಯುವುದಕ್ಕೆ ಬಂದ ವಿಜ್ಞಾನದ ಮೇಷ್ಟ್ರು ಪರಮಶಿವಯ್ಯ ಅವರನ್ನು ದೆವ್ವ ಕತ್ತು ಹಿಸುಕಿ ಕೊಂದುಹಾಕಿದ ಕತೆಯೂ ಅಲ್ಲಿತ್ತು. ಪೋಲೀಸರು ದೆವ್ವದ ಕತೆಯನ್ನು ನಂಬದೆ ವಿದ್ಯಾಶಂಕರನ ಮೇಲೆ ಕೇಸು ಜಡಿದಿದ್ದರು.ಬೇಕಿದ್ದರೆ ಪೋಲಿಸರೇ ಒಂದು ರಾತ್ರಿ ನನ್ನ ಮನೆಯೊಳಗೆ ಇದ್ದು ನೋಡಲಿ ಎಂದು ವಿದ್ಯಾಶಂಕರ ಕೋರ್ಟಿಗೆ ಸವಾಲು ಹಾಕಿದ್ದ. ತಾನೇ ತಾನಾಗಿ ಬಂದ ವಿಜ್ಞಾನದ ಅಧ್ಯಾಪಕರು ಸತ್ತು ಬಿದ್ದಿದ್ದಕ್ಕೆ ಅವರೇ ಹೊಣೆಯೇ ಹೊರತು ತಾನಲ್ಲ ಎಂದು ಅವನ ಕಡೆಯ ವಕೀಲರು ವಾದಿಸಿದ್ದರು. ವಿದ್ಯಾಶಂಕರ ಆರೋಪ ಮುಕ್ತನಾಗುವ ಎಲ್ಲ ಸಾಧ್ಯತೆಯೂ ಇತ್ತು.
ನನ್ನ ಕುತೂಹಲಕ್ಕೆ ಕಾರಣವಾದ ಮತ್ತೊಂದು ಸಂಗತಿಯೆಂದರೆ ಆವತ್ತು ರಾತ್ರಿ ಇನ್ಸ್ ಪೆಕ್ಟರ್ ಆರ್. ಎಸ್. ಶಹಾಪೂರ ಅವರು ವಿದ್ಯಾಶಂಕರನ ಮನೆಯೊಳಗೆ ಒಂಟಿಯಾಗಿ ಕೂರುವುದಾಗಿ ಹೇಳಿಕೆ ಕೊಟ್ಟದ್ದು. ನನಗೆ ಶಹಪೂರ ಚೆನ್ನಾಗಿ ಪರಿಚಿತರು. ಮುಂಬಯಿಯಲ್ಲಿ ನಾವು ಮೂರು ವರ್ಷ ಜೊತೆಗಿದ್ದವರು. ಅದನ್ನು ಓದಿದ ತಕ್ಷಣ ನಾನು ಶಹಾಪೂರರನ್ನು ನೋಡಬೇಕೆಂದು ಇಚ್ಚಿಸಿದೆ. ನನ್ನ ಸ್ನೇಹಿತನ ಜೊತೆಗೆ ಇಬ್ಬರೂ ಜಲಾಲಭಾಗಕ್ಕೆ ಹೊರಟೆವು.
ಅಲ್ಲಿಗೆ ತಲುವುವ ಹೊತ್ತಿಗೆ ಮನೆಮುಂದೆ ದೊಡ್ಡದೊಂದು ಜನಸಂದಣಿಯೇ ನೆರೆದಿತ್ತು. ಅದೊಂದು ನೂರಿಪ್ಪತ್ತು ಗುಡಿಸಲುಗಳ ಪುಟ್ಟ ಹಳ್ಳಿ. ಅಲ್ಲಿದ್ದ ಏಕೈಕ ದೊಡ್ಡಮನೆಯಂದರೆ ವಿದ್ಯಾಶಂಕರನದ್ದು. ಆತನ ಹಿರಿಯರು ಆ ನಿರ್ಜನ ಪ್ರದೇಶದಲ್ಲಿ ಅಷ್ಟು ದೊಡ್ಡ ವಾಡೆಯಂಥ ಮನೆ ಯಾಕೆ ಕಟ್ಟಿದರು ಎಂದು ಆಶ್ಚರ್ಯಪಡುತ್ತಲೇ ನಾನು ಶಹಾಪೂರರನ್ನು ನೋಡಿದೆ.
ಅವರಿಗೆ ನನ್ನನ್ನು ನೋಡಿ ಅತೀವ ಆಶ್ಚರ್ಯವಾಯಿತು. ಜೊತೆಗೆ ಸಂತೋಷವೂ ಆಯ್ತು. ಮಾತುಕತೆಯ ನಂತರ ನಾವಿಬ್ಬರೂ ಆ ರಾತ್ರಿಯನ್ನು ಮನೆಯೊಳಗೆ ಕಳೆಯುವುದೆಂದು ತೀರ್ಮಾನಿಸಿದೆವು. ನನ್ನ ಹಾಗೂ ದೆವ್ವಗಳ ಸಂಬಂಧ ಅವರಿಗೂ ಗೊತ್ತಿತ್ತು. ನೀವು ಉಳಿದವರಂತೆ ಉಡಾಫೆಯಾಗಿ ಮಾತಾಡುವುದಿಲ್ಲ. ಗೊತ್ತಿಲ್ಲದೆ ಯಾವುದನ್ನೂ ತಳ್ಳಿಹಾಕುವುದಿಲ್ಲ ಎಂದು ಅವರು ನನ್ನ ಬಗ್ಗೆ ಮೆಚ್ಚುಗೆ ಸೂಚಿಸಿದ್ದರು.
ವಿದ್ಯಾಶಂಕರನ ಮನೆಯಿದ್ದದ್ದು ವಿಶಾಲವಾದ ಬಯಲಿನಂಥ ಜಾಗದಲ್ಲಿ. ಅಲ್ಲಿ ಸುತ್ತಮುತ್ತ ಒಂದೇ ಒಂದು ಮರಮಟ್ಟೂ ಇರಲಿಲ್ಲ. ಮನೆಯಿಂದ ಒಂದು ಫರ್ಲಾಂಗು ದೂರದಲ್ಲಿ ಒಂದು ಅರೆಮುಚ್ಚಿದ ಕೆರೆಯಿತ್ತು. ಅದರ ಸುತ್ತ ಕಾಡುಮರಗಳು ಬೆಳೆದಿದ್ದವು. ಕೆರೆಯ ನೀರು ಯಾರೂ ಬಳಸದೆ ಪಾಚಿಗಟ್ಟಿತ್ತು. ಅದರಾಚೆಗೆ ತುಂಬ ದೂರದಲ್ಲಿ ಗುಡಿಸಲುಗಳಿದ್ದವು.
-3-
ನಾನು ಮತ್ತು ಶಹಾಪೂರ ಮನೆಯೊಳಗೆ ಕಾಲಿಟ್ಟದ್ದು ಸಂಜೆ. ಇಬ್ಬರೂ ಇಡೀ ಮನೆಯನ್ನೊಮ್ಮೆ ಸುತ್ತಾಡಿದೆವು. ಎಲ್ಲಾದರೂ ಅನುಮಾನಾಸ್ಪದವಾದದ್ದೇನಾದರೂ ಕಾಣುತ್ತದೆಯೋ ಎಂದು ಗಮನಿಸುತ್ತಾ ಹೋದೆವು. ಕೆಲವು ಹಳೆಯ ಮನೆಗಳಲ್ಲಿ ನೆಲಮಾಳಿಗೆಗಳಿರುತ್ತವೆ. ಅವುಗಳಿಗೆ ಗುಪ್ತ ಬಾಗಿಲುಗಳಿರುತ್ತವೆ. ಅವು ಮನೆಯಲ್ಲಿ ವಾಸಮಾಡುವವರಿಗೇ ಗೊತ್ತಿರುವುದಿಲ್ಲ. ಅವುಗಳ ಒಳಗೆ ಹೆಗ್ಗಣಗಳು ಸೇರಿಕೊಂಡು ಗಲಾಟೆ ಮಾಡುವುದುಂಟು. ಹಿಂದೊಂದು ಸಾರಿ ಇಂಥದ್ದೆ ಒಂದು ದೊಡ್ಡ ಮನೆಯ ನೆಲಮಾಳಿಗೆಯಲ್ಲಿ ನಾಯಿಯೊಂದು ಸೇರಿಕೊಂಡಿತ್ತು. ರಾತ್ರಿಯೆಲ್ಲ ಅದು ಬೊಗಳುತ್ತಿರುವುದನ್ನು ಮನೆಯವರು ನಾಯಿದೆವ್ವ ಎಂದುಕೊಂಡಿದ್ದರು.

ವಿದ್ಯಾಶಂಕರನ ಮನೆಯಲ್ಲಿ ಅಂಥ ಅನುಮಾನಾಸ್ಪದ ಸಂಗತಿಗಳು ನನ್ನ ಕಣ್ಣಿಗೆ ಬೀಳಲಿಲ್ಲ. ಶಹಾಪೂರರ ಪೊಲೀಸ್ ಕಣ್ಣಿಗೂ ಬೀಳಲಿಲ್ಲ. ನಮ್ಮ ಜೊತೆಗೆ ಒಳಬಂದ ವಿದ್ಯಾಶಂಕರ ಮುಸ್ಸಂಜೆಯಾಗುತ್ತಿದ್ದಂತೆ ಹೊರಟುಹೋದ. ಕತ್ತಲು ಕವಿಯುತ್ತಿದ್ದಂತೆ ಮನೆಯೊಳಗೆ ನಾವಿಬ್ಬರೇ ಉಳಿದುಬಿಟ್ಟೆವು.ಉಸಿರುಕಟ್ಟಿದಂತಾಗುವುದಕ್ಕೆ ಏನೇನು ಕಾರಣ ಇರಬಹುದು ಎಂದು ಊಹಿಸುತ್ತಾ ಕುಳಿತೆ. ಕೆಲವು ಮನೆಗಳಲ್ಲಿ ಗಾಳಿಯ ಸಂಚಾರವಿಲ್ಲದೆ ಒಂದೊಂದು ಕೋಣೆಯಲ್ಲಿ ಉಸಿರುಗಟ್ಟಿದಂತಾಗುವುದು ಶಕ್ಯವಿತ್ತು. ಮನೆಯ ಪಕ್ಕದಲ್ಲಿ ಹುಣಸೇ ಮರವಿದ್ದರೆ ಹೀಗಾಗುವುದುಂಟು. ಹುಣಸೇ ಮರದ ಎಲೆಗಳು ರಾತ್ರಿ ಮುಚ್ಚಿಕೊಳ್ಳುವುದರಿಂದ ಅಲ್ಲಿ ಆಮ್ಲಜನಕ ಉತ್ಪತ್ತಿಯಾಗುವುದಿಲ್ಲ. ಅದಕ್ಕೆ ಹುಣಸೇ ಮರದ ಕೆಳಗೆ ರಾತ್ರಿ ಮಲಗುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅದೇ ಕಾರಣಕ್ಕೆ ಹುಣಸೇ ಮರದಲ್ಲಿ ದೆವ್ವಗಳು ವಾಸಿಸುತ್ತವೆ ಎಂಬ ನಂಬಿಕೆ ಬಂದಿರಲಿಕ್ಕೂ ಸಾಕು.ಶಹಾಪೂರರಿಗೂ ಅಂಥ ಕಾರಣಗಳು ಹೊಳೆಯಲಿಲ್ಲ.
ಕತ್ತಲು ಕೋರೈಸುತ್ತಿತ್ತು.
ನಾವಿಬ್ಬರು ನಮ್ಮೊಡನೆ ತಂದಿದ್ದ ಚಪಾತಿ ತಿಂದು ಮುಗಿಸಿದೆವು. ಅದೂ ಇದೂ ಮಾತನಾಡುತ್ತಾ ಮಲಗುವ ಕೋಣೆಯಲ್ಲಿ ಕುಳಿತುಕೊಂಡೆವು. ಅಲ್ಲೊಂದು ದೊಡ್ಡ ಮಂಚವಿತ್ತು. ಅದರ ಪಕ್ಕದಲ್ಲೇ ಒಂದು ದೊಡ್ಡ ಟೇಬಲ್ಲು. ಅದರ ಮೇಲೊಂದು ಲಾಟೀನು ಇಟ್ಟುಕೊಂಡು ಇಬ್ಬರೂ ಕುಳಿತೆವು. ಉದ್ದೇಶಪೂರ್ವಕವಾಗಿಯೇ ಇಬ್ಬರೂ ನಡುರಾತ್ರಿಯಾಗುತ್ತಿದ್ದಂತೆ ಮೌನವಾಗಿರಬೇಕು ಎಂದು ತೀರ್ಮಾನಿಸಿದ್ದೆವು.
ಪ್ರಯಾಣದ ಸುಸ್ತಿಗೋ ಆ ಮೌನದಿಂದಲೋ ಏನೋ ನನಗೆ ಸಣ್ಣಗೆ ನಿದ್ದೆ ಹತ್ತಿತು. ಎಷ್ಟು ಹೊತ್ತು ನಿದ್ದೆ ಮಾಡಿದ್ದೆನೋ ಗೊತ್ತಿಲ್ಲ.ಇದ್ದಕ್ಕಿದ್ದಂತೆ ಎಚ್ಚರವಾಗಿ ಕಣ್ತೆರೆದು ನೋಡಿದರೆ ಇಡೀ ಕೋಣೆ ಕತ್ತಲಲ್ಲಿತ್ತು. ಒಂದು ಕ್ಷಣ ನನಗೇ ಭಯವಾಯ್ತು. ನಾನು ಎಲ್ಲಿದ್ದೇನೆ ಅನ್ನುವುದೇ ಗೊತ್ತಾಗಲಿಲ್ಲ. ಮೆತ್ತಗೆ ಶಹಾಪೂರ್ ಎಂದು ಉಸುರಿದೆ. ಯಾರೂ ಓಗೊಡಲಿಲ್ಲ. ಯಾರೋ ನನ್ನ ಮುಂದೆ ಕುಳಿತಿದ್ದಾರೆ ಅನ್ನುವ ವಿಲಕ್ಷಣ ಭಯವೊಂದು ನನ್ನನ್ನು ಆವರಿಸಿಬಿಟ್ಟಿತು. ಏನು ಮಾಡಿದರೂ ಅದರಿಂದ ಪಾರಾಗುವುದು ಸಾಧ್ಯವಾಗಲಿಲ್ಲ.
ದೆವ್ವದ ವಿಚಾರದಲ್ಲಿ ನಮ್ಮನ್ನು ಕಂಗೆಡಿಸುವುದು ಇಂಥ ಭಯವೇ. ಒಮ್ಮೆ ಭಯ ಹುಟ್ಟಿದರೆ ಸಾಕು ಎಲ್ಲವೂ ದೆವ್ವದ ಕೆಲಸದಂತೆಯೇ ಕಾಣತೊಡಗುತ್ತದೆ. ನನಗೆ ಆದದ್ದೂ ಅದೇ. ನಖಶಿಖಾಂತ ನಡುಗುತ್ತಾ ನಾನು ಜೋಬಿಗೆ ಕೈಹಾಕಿ ಬೆಂಕಿಪೊಟ್ಟಣ ಹೊರಗೆ ತೆಗೆಯಬೇಕು ಅನ್ನುವಷ್ಟರಲ್ಲಿ ದೂರದಲ್ಲಿ ಒಂದು ಬೆಂಕಿಯ ಕಿಡಿ ಕಂಡಂತಾಯಿತು. ಕೆಂಪಗೆ ಚುಕ್ಕಿಯಿಟ್ಟಂತೆ ಅದು ಕಾಣಿಸುತ್ತಿತ್ತು. ನಾನು ಅದುರಿಬಿದ್ದು ಜೋರಾಗಿಯೇ ಶಹಾಪೂರ್ ಎಂದು ಕೂಗಿಕೊಂಡೆ.
ಆಗ ಗೊತ್ತಾಯಿತು, ಆ ಕೆಂಪು ಬೆಂಕಿ ಶಹಾಪೂರರ ಸಿಗರೇಟಿನದು ಎಂದು. ಅವರು ಎದ್ದು ಟಾಯ್ಲೆಟ್ಟಿಗೆ ಹೋಗಿದ್ದರು. ಸಕ್ಕರೆ ಕಾಯಿಲೆಯಿಂದ ನರಳುತ್ತಿದ್ದುದರಿಂದ ತುಂಬ ಹೊತ್ತು ದೇಹಬಾಧೆ ತೀರಿಸಿಕೊಳ್ಳದೆ ಕುಳಿತಿರುವುದು ಅವರಿಗೆ ಸಾಧ್ಯವಾಗುತ್ತಿರಲಿಲ್ಲ.
ನಾನು ಕೂಗಿದ್ದೇ ತಡ ಹೊರಗಿಟ್ಟಿದ್ದ ಕಂದೀಲು ತೆಗೆದುಕೊಂಡು ಬಂದೇ ಬಿಟ್ಟರು. ಏನಾಯಿತು ಅಂತ ಕೇಳಿದರು.. ನೀವಿಲ್ಲಿ ಕಾಣಿಸಲಿಲ್ಲ ನೋಡಿ.. ಅದಕ್ಕೇ ಕರೆದೆ ಎಂದು ನಾನು ಸಮಾಧಾನ ಹೇಳಿದೆ.
ಅವರು ಸಿಗರೇಟಿನ ಕೊನೆಯ ದಮ್ಮೆಳೆದು ಅದನ್ನು ಪಕ್ಕಕ್ಕೆಸೆದು ಲಾಟೀನನ್ನು ಟೇಬಲ್ ಮೇಲಿಟ್ಟಿದ್ದರೋ ಇಲ್ಲವೋ, ದೂರದಲ್ಲಿ ವಿಕಾರ ಸ್ವರದಲ್ಲಿ ನಾಯಿಯೊಂದು ಊಳಿಡುವ ಸದ್ದು ಕೇಳಿಸಿತು. ಫಟಫಟಿಸುತ್ತಾ ಅನಾಥ ಪಕ್ಷಿಯೊಂದು ಅನಂತ ಆಕಾಶದಲ್ಲಿ ಹಾರಿಹೋಯಿತು. ಅದೇ ಹೊತ್ತಿಗೆ ಟೇಬಲ್ ಮೇಲಿಟ್ಟಿದ್ದ ಲಾಟೀನು ಪಕಪಕನೆ ಅಲ್ಲಾಡಿ ನಂದಿಹೋಯಿತು.
ಇದೇನ್ರೀ ಹೀಗಾಯ್ತು... ಕೇಳಿದೆ.ನನ್ನ ಮಾತು ಮುಗಿಯುವುದರೊಳಗಾಗಿ ಕಿಟಕಿಯೊಂದು ರಪ್ಪನೆ ತೆರೆದುಕೊಂಡು ಮುಚ್ಚಿಕೊಂಡಿತು.ಗಾಳಿಗಿರಬೇಕು ಅನ್ನುತ್ತಾ ಶಹಾಪೂರರು ತಮ್ಮ ಜೋಬಿನಿಂದ ಬೆಂಕಿಪೊಟ್ಟಣ ತೆಗೆದು ಕಡ್ಡಿಗೀರಿದರು.
ಹತ್ತಿಕೊಳ್ಳಲಿಲ್ಲ. ಬಹುಶಃ ಟಾಯ್ಲೆಟ್ಟಿಗೆ ಹೋದಾಗ ಅಲ್ಲಿ ಬೀಳಿಸಿದ್ದರು ಅಂತ ಕಾಣುತ್ತೆ. ನಾನು ನನ್ನ ಕೈಲಿದ್ದ ಬೆಂಕಿಪೊಟ್ಟಣದಲ್ಲಿ ದೀಪ ಹಚ್ಚಲು ಯತ್ನಿಸಿದೆ. ನನ್ನ ಬೆಂಕಿಪೊಟ್ಟಣದ ಕಡ್ಡಿಗಳೂ ಒದ್ದೆಯಾದಂತೆ ಟುಸ್ಸೆನ್ನುತ್ತಿದ್ದವು.ಅದೇ ಹೊತ್ತಿಗೆ ನನ್ನ ಮುಂದಿನ ಟೇಬಲ್ಲು ಅಲ್ಲಾಡಿತು. ಅದರ ಮೇಲಿಟ್ಟಿದ್ದ ಆರಿದ ಲಾಂದ್ರ ಟಣ್ಣೆಂದು ನೆಲಕ್ಕೆ ಬಿದ್ದು ಅದರ ಗಾಜು ಒಡೆದ ಸದ್ದು ಕೇಳಿಸಿತು.
ಶಹಾಪೂರ ನಿಧಾನ ಅಂದೆ ನಾನು. ಆ ಕಡೆಯಿಂದ ಉತ್ತರ ಬರಲಿಲ್ಲ. ಶಹಾಪೂರ ಎಲ್ಲಿದ್ದೀರಿ ಕೇಳಿದೆ. ಯಾವ ಉತ್ತರವೂ ಇಲ್ಲ.ಸುತ್ತಲೂ ಕುರುಡುಗತ್ತಲೆ. ನಾನು ನನ್ನ ಪಕ್ಕದಲ್ಲೇ ಇಟ್ಟುಕೊಂಡಿದ್ದ ಟಾರ್ಚನ್ನಾದರೂ ಉರಿಸೋಣ ಎಂದುಕೊಂಡು ಪಕ್ಕಕ್ಕೆ ಕೈಹಾಕಿದೆ. ಟಾರ್ಚು ಅಲ್ಲಿರಲಿಲ್ಲ.ಅಷ್ಟು ಹೊತ್ತಿಗೆ ನನ್ನ ಮುಂದೆ ಯಾರೋ ದೊಪ್ಪೆಂದು ಬಿದ್ದ ಸದ್ದು ಕೇಳಿಸಿತು. ನಾನು ಶಹಾಪೂರ್ ಎಲ್ಲಿದ್ದೀರಿ ಎಂದು ಕುರುಡನಂತೆ ಅರಚುತ್ತಾ, ಅಲೆಯುತ್ತಾ ತಡಕಾಡಿದೆ.
ಯಾವ ಸದ್ದೂ ಇರಲಿಲ್ಲ. ಇದ್ದಕ್ಕಿದ್ದಂತೆ ಮೂಗಿಗೆ ತಣ್ಣನೆಯ ಗಾಳಿ ಹೊಡೆದಂತಾಯಿತು. ಕಮಟು ಮಣ್ಣಿನ ವಾಸನೆ ಅಡರಿಕೊಂಡಿತು. ಅದರ ಮರುಗಳಿಗೆಯೇ ಯಾರೋ ನನ್ನ ಮೇಲೆ ಬಿದ್ದಂತಾಯಿತು. ನನ್ನ ಕತ್ತು ಅದುಮುತ್ತಿದ್ದಾರೆ ಅನ್ನಿಸಿತು. ಇದ್ಯಾಕೆ ಶಹಾಪೂರ್ ಹೀಗೆ ಮಾಡುತ್ತಿದ್ದಾರೆ ಅಂದುಕೊಂಡು ಕತ್ತನ್ನು ಬಳಸಿದ ಕೈಯನ್ನು ಬಿಗಿಯಾಗಿ ಹಿಡಿದುಕೊಂಡೆ. ಒಂದಷ್ಟು ಹೊತ್ತು ಹೋರಾಟ ನಡೆಯಿತು. ಇದ್ದಕ್ಕಿದ್ದಂತೆ ಏನೋ ಲಟಕ್ಕನೆ ಮುರಿದ ಸದ್ದು ಕೇಳಿಸಿತು. ಅದೇ ನಾನು ಕೇಳಿದ ಕೊನೆಯ ಸದ್ದು.
-4-
ಎಚ್ಚರಾಗುವ ಹೊತ್ತಿಗೆ ನಾನು ಹಾಸಿಗೆಯ ಮೇಲೆ ಮಲಗಿದ್ದೆ. ಶಹಾಪೂರ ಪಕ್ಕದಲ್ಲಿದ್ದರು. ನನ್ನ ಬಟ್ಟೆ ಪೂರ್ತಿಯಾಗಿ ಹರಿದುಹೋಗಿತ್ತು. ಕೆಸರು ಮೆತ್ತಿಕೊಂಡು ನಾನು ವಿಕಾರವಾಗಿ ಕಾಣಿಸುತ್ತಿದೆ. ನನ್ನ ಬಲ ಅಂಗೈ ಮಡಿಚಿಕೊಂಡಿತ್ತು.ಎಲ್ಲವನ್ನೂ ನೆನಪಿಸಿಕೊಳ್ಳಲಿಕ್ಕೆ ಯತ್ನಿಸುತ್ತಿದ್ದಂತೆ ಶಹಾಪೂರ್ ನನ್ನ ಕತ್ತು ಹಿಸುಕಲಿಕ್ಕೆ ಯತ್ನಿಸಿದ್ದೂ ನೆನಪಿಗೆ ಬಂತು.

ಅವರ ಮುಖ ನೋಡಿದೆ.ನೀವು ಸತ್ತೇ ಹೋಗಿದ್ದೀರಿ ಅಂತ ತಿಳ್ಕೊಂಡೆ. ನಾನು ಹೇಗೋ ರಾತ್ರಿಯೇ ಹೊರಬಿದ್ದೆ. ನಿಮ್ಮನ್ನು ಕರೆದರೂ ನೀವು ಬರಲಿಲ್ಲ. ಮನೆಯ ಚಿಲಕ ಹೊರಗಿನಿಂದ ಹಾಕಿತ್ತು. ಹಿಂದಿನ ಬಾಗಿಲು ತೆಗೆದು ಓಡಿದೆ. ಸದ್ಯ ಅಷ್ಟೇ ಆಯ್ತಲ್ಲ ಅಂದರು ಶಹಾಪೂರ.
ನಾನು ಏನೊಂದೂ ಅರ್ಥವಾಗದೇ ಪಿಳಿಪಿಳಿ ನೋಡಿದೆ. ಏನು ನಡೆಯಿತು ಅನ್ನುವುದು ಪೂರ್ತಿ ಸ್ಪಷ್ಟವಾಗಲಿಲ್ಲ. ಬಲಗೈಯಲ್ಲೇನೋ ಇದೆ ಎನ್ನಿಸಿ ಮುಷ್ಟಿ ಬಿಡಿಸಿ ನೋಡಿದರೆ ಅಲ್ಲೊಂದು ಮುರಿದ ಹೆಬ್ಬೆರಳು.
ಅಂತೂ ಅಲ್ಲಿ ದೆವ್ವವಿದೆ ಅನ್ನುವುದು ಖಚಿತವಾಯಿತು. ಹಗಲಲ್ಲಿ ಕೋಣೆಯಲ್ಲಿ ಮತ್ತಷ್ಟು ಹುಡುಕಾಟ ನಡೆಸಿದೆವು. ನೆಲದ ಮೇಲೆ ಕೆಸರ ಹೆಜ್ಜೆ ಗುರುತುಗಳು ಕಂಡವು. ಬಾಗಿಲಿಗೆ ಸಿಕ್ಕಿಕೊಂಡಿದ್ದ ಹೆಂಗಸಿನ ತಲೆಗೂದಲಿನಷ್ಟು ಉದ್ದದ, ಆದರೆ ಅಷ್ಟು ನಯವಲ್ಲದ ಕೂದಲುಗಳು ಸಿಕ್ಕಿದವು. ಈ ನಡುವೆ ನಮಗೊಂದಷ್ಟು ಮಾಹಿತಿಗಳೂ ಸಿಕ್ಕಿದವು. ಶಹಾಪೂರರು ತಮ್ಮ ಮೇಲಧಿಕಾರಿಗಳ ಜೊತೆ ಮಾತಾಡಿ, ನ್ಯಾಯಾಧೀಶರ ಜೊತೆ ಮಾತಾಡಿ ಒಂದು ತೀರ್ಮಾನಕ್ಕೆ ಬಂದರು.
-5-
ವಿದ್ಯಾಶಂಕರನ ಮನೆಯಿಂದ ಫರ್ಲಾಂಗು ದೂರದಲ್ಲಿರುವ ಕೆರೆಯಿಂದ ದೆವ್ವ ಬರುತ್ತದೆ ಅನ್ನುವುದು ನಮಗೆ ಖಚಿತವಾಗಿತ್ತು. ಆ ಪಾಳುಬಿದ್ದ ಕೆರೆಯ ಮಣ್ಣೂ ಮನೆಯೊಳಗೆ ಸಿಕ್ಕಿದ ಮಣ್ಣೂ ಒಂದೇ ಆಗಿತ್ತು. ನ್ಯಾಯಾಧೀಶರ ಸಮ್ಮುಖದಲ್ಲಿ ಕೆರೆಯನ್ನು ಅಗೆಸಿದಾಗ ಸಿಕ್ಕಿದ್ದು ಒಂದು ಅಸ್ಥಿಪಂಜರ. ಅದರ ತಲೆಕೂದಲು ಮಾತ್ರ ಉದ್ದ ಬೆಳೆದಿತ್ತು.ನೋಡಿ, ಅದರ ಬಲಗೈ ಹೆಬ್ಬೆರಳು ತುಂಡಾಗಿದೆ ಮತ್ತು ಅದು ಇಲ್ಲಿದೆ.. ಎನ್ನುತ್ತಾ ಶಹಾಪೂರರು ಆ ರಾತ್ರಿ ನನ್ನ ಕೈಗೆ ಸಿಕ್ಕಿ ತುಂಡಾದ ಹೆಬ್ಬೆರಳಿನ ಮೂಳೆಯನ್ನು ತೋರಿಸಿದರು.

ಅದು ಆ ಅಸ್ಥಿಪಂಜರದ ಹೆಬ್ಬೆರಳಿಗೆ ಸರಿಯಾಗಿ ಹೊಂದುತ್ತಿತ್ತು.
ತನಿಖೆಯ ನಂತರ ಗೊತ್ತಾದದ್ದು ಇಷ್ಟು-ವಿದ್ಯಾಶಂಕರನ ಅಣ್ಣ ಓಡಿಹೋಗಿರಲಿಲ್ಲ. ಅವನನ್ನು ವಿದ್ಯಾಶಂಕರನೇ ಕೊಲೆ ಮಾಡಿ ಆ ಕೆರೆಯಲ್ಲಿ ಹೂತುಹಾಕಿದ್ದ. ಆತ ಪೆದ್ದ ಎಂಬ ಕಾರಣಕ್ಕೆ ಅವನಿಗೆ ವಿದ್ಯಾಶಂಕರ ಮದುವೆ ಮಾಡಿರಲಿಲ್ಲ. ಆದರೆ ಆಸೆ ಕೆರಳಿದಾಗೆಲ್ಲ ಆತ ವಿದ್ಯಾಶಂಕರನ ಹೆಂಡತಿಯ ಮೇಲೇರಿ ಹೋಗುತ್ತಿದ್ದ. ಆಕೆಗೂ ಅದು ಆಪ್ಯಾಯಮಾನವಾಗಿತ್ತೋ ಏನೋ. ಒಂದು ಬಾರಿ ಅವರಿಬ್ಬರೂ ವಿದ್ಯಾಶಂಕರನ ಕೈಗೆ ಸಿಕ್ಕಿಬಿದ್ದರು. ಅಣ್ಣನನ್ನು ಆತ ಕೆರೆಯ ಬಳಿ ಒಯ್ದು ಜೀವಂತ ಸಮಾಧಿ ಮಾಡಿದ.ತನ್ನನ್ನು ಉಸಿರುಗಟ್ಟಿ ಸಾಯಿಸೋದಕ್ಕೆ ಯತ್ನಿಸಿದ ತಮ್ಮನನ್ನು ಉಸಿರುಗಟ್ಟಿ ಸಾಯಿಸೋದಕ್ಕೆ ಅಣ್ಣನ ದೆವ್ವ ಯತ್ನಿಸುತ್ತಿತ್ತು ಅನ್ನುವುದನ್ನು ನ್ಯಾಯಾಲಯ ಒಪ್ಪಲಿಲ್ಲ. ವಿಜ್ಞಾನ ಅಧ್ಯಾಪಕರ ಕೊಲೆಗೆ ವಿದ್ಯಾಶಂಕರನಿಗೆ ಶಿಕ್ಷೆಯಾಗಲಿಲ್ಲ.
ಆದರೆ ಅಣ್ಣನ ಕೊಲೆಯ ಅಪರಾಧಕ್ಕಾಗಿ ಆತನಿಗೆ ಜೀವಾವಧಿ ಶಿಕ್ಷೆಯಾಯಿತು.
ಚಿತ್ರ- ಕತೆಗಾರ ನಾಗರಾಜ ವಸ್ತಾರೆ ಸಂಗ್ರಹ. ನಾಗರಾಜ ವಸ್ತಾರೆ ಇಂಥ ಹಳೆ ಮನೆಗಳ ಬಗ್ಗೆ ಕನ್ನಡಪ್ರಭದಲ್ಲಿ -ಹಳೆಮನೆ ಕತೆ- ಎಂಬ ಸೊಗಸಾದ ಲೇಖನಮಾಲೆ ಬರೆದಿದ್ದಾರೆ. ಆರ್ಕಿಟೆಕ್ಚರ್ ಬಗ್ಗೆ ಹೀಗೂ ಬರೆಯಬಹುದಾ ಎಂದು ನಾವೆಲ್ಲ ಬೆರಗಾದ ಬರಹಗಳು ಅವು. ಅಂದಹಾಗೆ ನಾಗರಾಜ ವಸ್ತಾರೆ ಕಥಾಸಂಕಲನ -ಹಕೂನ ಮಟೂಟ- ಓದಿ. ಅವರು ಮನೆ ಕಟ್ಟುವ ಹಾಗೆ ಕತೆ ಕಟ್ಟುತ್ತಾರೆ. ಕಟ್ಟುಕತೆ ಅನ್ನುವ ಮಾತಿಗೆ ಹೊಸ ಅರ್ಥ ಬಂದಂತಿದೆ ಅಲ್ಲವೇ?
Wednesday, April 18, 2007
ಎಡಕುಮೇರಿಯ ಸುರಂಗದಲ್ಲಿ...

ಕ್ರೀ.......ಚ್!
ಆಕೆ ಚೀರಿಕೊಂಡ ಸದ್ದು ಸಾಕಷ್ಟು ಸ್ಪಷ್ಟವಾಗಿಯೇ ಕೇಳಿಸಿತು!
ನಾನು ಮಲಗಿದ್ದ ಆ ಪುಟ್ಟ ಗುಡಿಸಲಿನಿಂದ ಹೊರಗೆ ಬಂದು ನೋಡಿದೆ. ಮಾದೇವನ ಗುಡಾರದಿಂದ ನೀಲಿ ಹೊಗೆ ಏಳುತ್ತಿತ್ತು. ಆಗಷ್ಟೇ ಹುಣ್ಣಿಮೆಯ ಚಂದ್ರ ಮೂಡಿದ್ದ. ಇಡೀ ಪ್ರದೇಶ ಹಗಲೂ ಅಲ್ಲದ ರಾತ್ರಿಯೂ ಅಲ್ಲದ ವಿಚಿತ್ರ ಬಣ್ಣದಲ್ಲಿ ಮೀಯುತ್ತಿತ್ತು. ದೂರದ ಮಸಕು ಬೆಟ್ಟಗಳ ಮೇಲೆ ಬೆಳುದಿಂಗಳ ಚಾದರ ಹೊದ್ದುಕೊಂಡು ನಿಂತಿದ್ದ ಹೆಸರಿಲ್ಲದ ಮರಗಳ ಗುಂಪು ಕ್ಪಣಕ್ಕೊಂದು ರೂಪು ತಳೆಯುತ್ತಿತ್ತು. ಕಡ್ಡಿಗೀರಿ ಗಡಿಯಾರ ನೋಡಿದೆ. ನಡುರಾತ್ರಿ ದಾಟಿ ಇಪ್ಪತ್ತು ನಿಮಿಷಗಳು. ಮತ್ತೊಮ್ಮೆ ಚೀರಿದ ಸದ್ದು ಕೇಳಿಸುತ್ತದೋ ಏನೋ ಎಂದುಕೊಂಡು ಅಲುಗಾಡದೆ ನಿಂತಿದ್ದೆ. ಸರಿಯಾಗಿ ನಲುವತ್ತು ಸೆಕೆಂಡುಗಳ ನಂತರ ಮತ್ತೆ ಮೈನವಿರೇಳಿಸುವ, ಬೆನ್ನು ಹುರಿಯುದ್ಧಕ್ಕೂ ಭಯದ ಛಳುಕೊಂದನ್ನು ಮೂಡಿಸುವ ಸದ್ದೊಂದು ಮತ್ತೆ ಕೇಳಿಸಿತು. ಆ ಸದ್ದು ಮೊದಲು ಕೇಳಿದ ಆರ್ತನಾದದಂತಿರಲಿಲ್ಲ. ಯಾರೋ ಚೀರಿಕೊಂಡಂತೆಯೂ ಇರಲಿಲ್ಲ. ಗಮನವಿಟ್ಟು ಕೇಳಿದೆ.
ಜೋರಾಗಿ ನಕ್ಕು ಬಿಟ್ಟೆ. ಅದು ರೈಲು ಇಂಜಿನ್ನಿನ ಸದ್ದು. ಅಂದರೆ ಮಂಗಳಾ ಎಕಪ್ರೆಸ್ ಮಾದೇವನ ಗುಡಾರವನ್ನು ದಾಟಿ ಹೋಗುತ್ತಿದೆ. ಕ್ರಮೇಣ ಸುರಂಗದಿಂದ ರೈಲು ಹೊರಗೆ ಬಂದ ಸದ್ದೂ, ಅದು ಬಾಗಿದಂತಿರುವ ರೇಲು ಹಳಿಗಳ ಮೇಲೆ ಚಲಿಸುವಾಗ ಘರ್ಷಣೆಯಿಂದಾದ ಕ್ರೀಚ್ ಕ್ರೀಚ್ ಸದ್ದುಗಳೂ ಕಿವಿಗೆ ಬಿದ್ದವು. ಹೊರಗೆ ಬಂದು ನಿಂತೆ. ಕಂಬಳಿ ಹುಳುವಿನ ಹಾಗೆ ಕಪ್ಪಗಿನ ರೇಲು ನಿರಾತಂಕ ಸಾಗುತ್ತಿತ್ತು.
ಆಗ ಇದ್ದಕ್ಕಿದ್ದಂತೆ ಕಾಣಿಸಿತು ಆ ಆಕೃತಿ!
ಅದು ಅಸ್ಪಷ್ಟವಾಗಿ ರೇಲಿನ ಹಿಂದೆ ಓಡಿಹೋಗುತ್ತಿತ್ತು. ನನಗೆ ಮಾದೇವನ ಕತೆ ನೆನಪಾಯಿತು.
-ಮಾದೇವನ ಕತೆ-
ನಾನು ಮಾದೇವನನ್ನು ಹುಡುಕಿಕೊಂಡು ಬರುವುದಕ್ಕೆ ಬೇರೆ ಕಾರಣಗಳೇ ಇರಲಿಲ್ಲ. ಎಡಕುಮೇರಿಯ ಆಸುಪಾಸಿನಲ್ಲೆಲ್ಲ ರಾತ್ರಿಹೊತ್ತು ಭೀಕರ ಆರ್ತನಾದ ಕೇಳಿ ಬರುತ್ತದೆಂದೂ ಜನರೆಲ್ಲ ಹೆದರಿಹೋಗಿದ್ದಾರೆಂದೂ ನೆಟ್ಟಣ ಎಂಬಲ್ಲಿರುವ ಭಾರತೀಯ ರಬ್ಬರ್ ಸಂಶೋಧನಾ ಕೇಂದ್ರದಲ್ಲಿ ಅಧಿಕಾರಿಯಾಗಿರುವ ಗೆಳೆಯ ಕೃಷ್ಣಪ್ರಸಾದ ಪತ್ರ ಬರೆದಿದ್ದ. ಇಂಥ ವಿಚಾರಗಳಲ್ಲಿ ನಮಗಿಬ್ಬರಿಗೂ ಆಸಕ್ತಿ. ಇಬ್ಬರೂ ನಾಸ್ತಿಕರಾಗಿದ್ದರೂ ರಾತ್ರಿಯ ನಿಗೂಢತೆಯಲ್ಲಿ ನಂಬಿಕೆ ಇಟ್ಟವರು. ದೇವರಿಲ್ಲದೆ ಇದ್ದರೂ ದೆವ್ವಗಳಿಗೆ ಎಂದು ನಂಬುವುದಕ್ಕೆ ಯತ್ನಿಸುತ್ತಿದ್ದವರು. ನಮಗೆ ದೆವ್ವ ಕಾಣುವುದು ಬೇಕಿತ್ತು. ಅದರ ರೋಚಕತೆ ಬೇಕಿತ್ತು. ಕಪ್ಪುಕಾಡಿನ ಕತ್ತಲಲ್ಲಿ ಒಂಟಿಯಾಗಿ ನಡೆಯುತ್ತಾ ಬೆನ್ನ ಹಿಂದೆ ದೆವ್ವವೊಂದು ಹಿಂಬಾಲಿಸಿಕೊಂಡು ಬರುತ್ತಿದೆ, ಯಾವ ಹೊತ್ತಿಗೆ ಬೇಕಾದರೂ ನಿಮ್ಮ ಬೆನ್ನ ಮೇಲೆ ಕೈ ಹಾಕುತ್ತದೆ ಎಂಬ ರೋಮಾಂಚ ಯಾರಿಗೆ ತಾನೆ ಬೇಕಿರುವುದಿಲ್ಲ ಹೇಳಿ? ಅಂಥ ಪುಳಕಕ್ಕಾಗಿಯೇ ನಾವು ಸುತ್ತಾಡದ ಕಾಡಿಲ್ಲ, ಓಡಾಡದ ಸ್ಥಳಗಳಿಲ್ಲ. ಆದರೆ ದುರದೃಷ್ಟವಶಾ್ ನಮ್ಮ ಕಣ್ಣಿಗಂತೂ ದೆವ್ವ ಬಿದ್ದಿರಲಿಲ್ಲ. ಅದು ದೇವಗಣದ ಮನುಷ್ಯರಿಗೆ ಕಾಣಿಸುವುದಿಲ್ಲ ಎಂದು ಚಂದ್ರಜೋಯಿಸರು ಹೇಳಿ ನಮ್ಮನ್ನು ನಿರಾಶೆಗೊಳಿಸಲು ಯತ್ನಿಸಿದ್ದರು. ಆದರೂ ನಮ್ಮದು ದೇವಗಣ ಎನ್ನುವುದು ದೆವ್ವಗಳಿಗೆ ಗೊತ್ತಾಗಲಿಕ್ಕಿಲ್ಲ ಎಂಬ ಭರವಸೆಯಲ್ಲಿ ನಮ್ಮ ಹುಡುಕಾಟ ಮುಂದುವರಿಸಿದ್ದೆವು.
ಕೃಷ್ಣಪ್ರಸಾದನ ಪತ್ರ ಬಂದ ಮೂರು ವಾರಗಳ ನಂತರ ನಾನು ನೆಟ್ಟಣಕ್ಕೆ ಹೋದೆ. ಅವನ ಮನೆಯಿರುವುದು ಕಾಡಿನ ನಡುವೆ. ಅಲ್ಲಿ ರಬ್ಬರು ತೋಟ ಮಾಡಿಕೊಂಡಿದ್ದ. ಒಂದು ಫೋನು ಕೂಡ ಇಲ್ಲದ ಕುಗ್ರಾಮ ಅದು. ಅಲ್ಲಿಗೆ ನಾನು ಹೋಗುವ ಹೊತ್ತಿಗೆ ಆತ ಯಾವುದೋ ಸಂಶೋಧನಾ ಸಮ್ಮೇಳನಕ್ಕೆಂದು ಕೊಟ್ಟಾಯಂಗೆ ಹೋಗಿದ್ದ. ಬರುವುದು ಒಂದು ವಾರವಾಗುತ್ತೆ ಅಂತ ಅವನ ಮನೆಯ ಕೆಲಸದಾಳು ಹೇಳಿದ. ಹೀಗಾಗಿ ಅವನು ಪತ್ರದಲ್ಲಿ ಕೊಟ್ಟ ಸೂಚನೆಗಳನ್ನು ಕಣ್ಣಮುಂದಿಟ್ಟುಕೊಂಡು ನಾನೊಬ್ಬನೇ ಮಾದೇವನನ್ನು ಹುಡುಕಿಕೊಂಡು ಹೊರಟೆ.
ಅದಕ್ಕೆ ಕೆಲವೇ ವರುಷಗಳ ಹಿಂದಷ್ಟೇ ಬೆಂಗಳೂರು-ಮಂಗಳೂರು ನಡುವೆ ರೇಲು ಸಂಚಾರ ಆರಂಭವಾಗಿತ್ತು. ಮಂಗಳೂರಿನಿಂದ ಬೆಂಗಳೂರಿಗೆ ಮುನ್ನೂರು ಕಿಲೋಮೀಟರು ಅಂತರವಿದ್ದರೂ, ರೇಲು ಮೂವತ್ತಾರು ಸುರಂಗಗಳನ್ನೂ ಕಡಿದಾದ ಬೆಟ್ಟಗಳ ತಪ್ಪಲನ್ನೂ ಆಳವಾದ ಕಣಿವೆಗಳ ಹಾದಿಯನ್ನೂ ಕ್ರಮಿಸಬೇಕಾಗಿತ್ತು. ಅದರಲ್ಲೂ ಅರಸೀಕೆರೆಯಿಂದ ಮುಂದೆ ಸುಬ್ರಹ್ಮಣ್ಯದ ತನಕ ತೀರಾ ಕಡಿದಾದ ರಸ್ತೆ. ಅಲ್ಲಿ ರೇಲು ತೆವಳಿಕೊಂಡು ಚಲಿಸಬೇಕಿತ್ತು. ಒಂದೊಂದು ಬಾರಿ ತೀರಾ ಮಳೆಬಿದ್ದರೆ ರೇಲು ಅಲ್ಲೇ ದಿನಗಟ್ಟಲೆ ನಿಂತುಬಿಡುವುದೂ ಇತ್ತು. ಅಲ್ಲದೆ, ಅಕ್ಕಪಕ್ಕದ ಗುಡ್ಡ ಜರಿದು ಕಲ್ಲೂ ಮಣ್ಣೂ ಹಳಿಗಳ ಮೇಲೆ ಸಂಗ್ರಹವಾಗುತ್ತಿತ್ತು. ಹೀಗಾಗಿ ಎಷ್ಟೋ ದಿನ ರೇಲು ಸಂಚಾರವೇ ಇರುತ್ತಿರಲಿಲ್ಲ. ಅದರಿಂದಾಗಿ ಯಾರೂ ರೇಲು ಹತ್ತುವ ಧೈರ್ಯ ಮಾಡುತ್ತಿರಲೇ ಇಲ್ಲ. ಬಸ್ಸೇ ಆರಾಮ ಎಂದುಕೊಂಡು ಬಸ್ಸಲ್ಲೇ ಹೋಗಿಬರುತ್ತಿದ್ದರು.
ಈ ರೇಲುರಸ್ತೆಯಲ್ಲಿರುವ ಒಂದು ಪುಟ್ಟ ಸ್ಟೇಶನ್ನಿನ ಹೆಸರು ಯಡಕುಮೇರಿ. ಅಲ್ಲಿ ಟ್ರೇನು ಸ್ವಲ್ಪ ಹೊತ್ತು ನಿಂತು ಹೋಗುವುದು ಪದ್ಧತಿ. ಒಂದು ವೇಳೆ ರಸ್ತೆಯಲ್ಲಿ ಅಡೆತಡೆಗಳಿದ್ದು ರೇಲು ಹೋಗುವುದು ದಿನಗಟ್ಟಲೆ ತಡವಾಗುತ್ತಿದ್ದರೆ ರೇಲಿನಲ್ಲಿರುವವರಿಗೆ ತಿಂಡಿತೀರ್ಥ ಸರಬರಾಜು ಮಾಡುವುದಕ್ಕೆ ಅಲ್ಲೊಂದು ಹೊಟೆಲೂ ಇತ್ತು.

ಯಡಕುಮೇರಿಯಿಂದ ಆರು ಮೈಲಿ ದೂರದಲ್ಲೊಂದು ಒಂದೂವರೆ ಫರ್ಲಾಂಗು ಉದ್ದದ ಸುರಂಗವಿದೆ. ಆ ರೇಲ್ವೆ ಹಳಿಯಲ್ಲಿರುವ ಸುರಂಗಳ ಪೈಕಿ ಅದೇ ದೀರ್ಘವಾದದ್ದು. ಆದರೆ ಆ ಸುರಂಗ ಎಷ್ಟು ಕಿರಿದಾಗಿತ್ತೆಂದರೆ ರೇಲು ಬಂದರೆ ಬದಿಗೊತ್ತಿ ನಿಲ್ಲುವುದಕ್ಕೆ ಅಲ್ಲಿ ಜಾಗವೇ ಇರಲಿಲ್ಲ.ಸಾಮಾನ್ಯವಾಗಿ ಓಡಾಡುವವರಿಗೆ ತೊಂದರೆಯಾಗದಿರಲಿ ಎಂದು ಸುರಂಗದೊಳಗೆ ಅಲ್ಲಲ್ಲಿ ನಿಲ್ಲುವುದಕ್ಕೆ ಜಾಗ ಮಾಡಿರುತ್ತಾರೆ. ಅದೆಲ್ಲ ಮಣ್ಣು ಕುಸಿದು, ಪೊದೆಗಳು ಬೆಳೆದು ಮುಚ್ಚಿಹೋಗಿತ್ತು.
ಆ ಸುರಂಗದಿಂದ ಆ ಪ್ರದೇಶದ ಜನರಿಗೊಂದು ಉಪಕಾರವಾಗಿತ್ತು. ಅದನ್ನು ದಾಟಿ ಅವರು ನಡೆದುಕೊಂಡೇ ಸುಬ್ರಹ್ಮಣ್ಯಕ್ಕೋ ಶಿರಾಡಿಗೋ ಹೋಗಿ ಬರಬಹುದಾಗಿತ್ತು.ಹೀಗಾಗಿ ಅವರೆಲ್ಲ ಆ ಮಾರ್ಗವಾಗಿಯೇ ನಡೆದುಕೊಂಡು ಹೋಗುತ್ತಿದ್ದರು. ಆ ದಾರಿಯಲ್ಲಿ ಬರುವ ರೈಲಿಗೆ ಹೊತ್ತುಗೊತ್ತುಗಳೇ ಇರಲಿಲ್ಲ. ಮಳೆ ಮತ್ತು ಡ್ರೈವರನ ಮರ್ಜಿಗೆ ಅನುಸಾರವಾಗಿ ಅದು ನಡೆಯುತ್ತಿತ್ತೇ ವಿನಾ, ವೇಳಾಪಟ್ಟಿಯೆಂಬುದೇ ಅದಕ್ಕಿರಲಿಲ್ಲ. ಹೀಗಾಗಿ ಸುರಂಗದೊಳಗೆ ಕಾಲಿಡುವವರು ಎಷ್ಟು ಎಚ್ಚರಿಕೆ ವಹಿಸಿದರೂ ಸಾಕಾಗುತ್ತಿರಲಿಲ್ಲ. ತಿಂಗಳಿಗೆ ಒಬ್ಬರೋ ಇಬ್ಬರೋ ಸಾಯುತ್ತಲೇ ಇದ್ದರು.
ಈ ಮಧ್ಯೆ ಇನ್ನೊಂದು ರಗಳೆಯೂ ಎದುರಾಯಿತು. ಪಕ್ಕದ ರಬ್ಬರು ತೋಟಕ್ಕೆ ಬರುವ ಕೂಲಿ ಹೆಂಗಸರ ಜೊತೆ ಮಲಗುವುದಕ್ಕೆ ಆ ಸುರಂಗವನ್ನು ತೋಟದವರ ಮಕ್ಕಳು ಬಳಸತೊಡಗಿದರು. ಇದು ಯಾವ ಮಟ್ಟಕ್ಕೆ ಹೋಗಿಯಿತೆಂದರೆ ಅರೆಬೆತ್ತಲೆಯಾಗಿದ್ದ ಜೋಡಿಶವವೊಂದು ರಕ್ತಸಿಕ್ತ ಸ್ಥಿತಿಯಲ್ಲಿ ಸುರಂಗದ ಮಧ್ಯಭಾಗದಲ್ಲಿ ಒಮ್ಮೆ ಪತ್ತೆಯಾಯಿತು. ಆ ಶವ ಗುರುತು ಕೂಡ ಹಿಡಿಯಲಾಗದ ಸ್ಥಿತಿಯಲ್ಲಿತ್ತು. ಆ ಬಗ್ಗೆ ಪತ್ರಿಕೆಗಳಲ್ಲಿ ವರದಿಗಳು ಬಂದವು. ಜನ ರೊಚ್ಚಿಗೆದ್ದರು. ಸುರಂಗದೊಳಗೆ ಲೈಟು ಹಾಕಿಸಬೇಕು ಎಂಬ ಅವಿವೇಕಿ ಉಪಾಯಗಳನ್ನು ಕೆಲವರು ಕೊಟ್ಟರು. ಇದಕ್ಕೆಲ್ಲ ಪರಿಹಾರ ಕಂಡುಕೊಳ್ಳುವ ಕೊನೆಯ ಪ್ರಯತ್ನವಾಗಿ ಸುರಂಗ ಎರಡೂ ಬದಿಯಲ್ಲಿ ಒಬ್ಬ ಕಾವಲುಗಾರನನ್ನು ರೇಲ್ವೆ ಇಲಾಖೆ ನೇಮಿಸಿತು. ಹಾಗೆ ನೇಮಕವಾದವನು ನಮ್ಮ ಕಥಾನಾಯಕ ಮಾದೇವ.
ಮಾದೇವ ಬೆಳಗಾವಿಯವನು. ಬಯಸು ಸೀಮೆಯಲ್ಲಿದ್ದ ಅವನಿಗೆ ಕಾಡು ಕಂಡೇ ಗೊತ್ತಿರಲಿಲ್ಲ. ಹೀಗಾಗಿ ಧುತ್ತೆಂದು ಕಾಡಿನ ನಡುವೆ ಕೆಲಸ ಮಾಡಬೇಕಾಗಿ ಬಂದಾಗ ಅವನು ಕೆಲಸ ಬಿಡುವುದೆಂದೇ ತೀರ್ಮಾನಿಸಿದ್ದ. ಆದರೆ ಅವನ ಮನೆಯ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿರಲಿಲ್ಲ. ಬೆಳಗಾಂನ ತನ್ನ ಹಳ್ಳಿಗೆ ಹೋಗಿ ಬದುಕುವ ಸ್ಥಿತಿಯಲ್ಲೂ ಅವನು ಇರಲಿಲ್ಲ. ಹೀಗಾಗಿ ಆತ ಅನಿವಾರ್ಯವಾಗಿ ಅಲ್ಲಿ ಕೆಲಸ ಮಾಡಬೇಕಾಯ್ತು.
ಅಲ್ಲಿ ಮಾಡುವುದಕ್ಕೇನೂ ಇರಲಿಲ್ಲ. ದಿನಕ್ಕೊಮ್ಮೆ ಬಂದು ಹೋಗುವ ಒಂದೇ ಒಂದು ರೈಲಿಗಾಗಿ ಕಾಯುವುದು ಬಿಟ್ಟರೆ ಬೇರೆ ಕೆಲಸವೇ ಇರಲಿಲ್ಲ. ಒಮ್ಮೆ ರೈಲು ಬಂದು ಹೋದರೆ ಮತ್ತೆ ಇಪ್ಪತ್ತು ಗಂಟೆಗಳ ಕಾಲ ಬರೋದಿಲ್ಲ ಅನ್ನೋದು ಅವನಿಗೆ ಖಾತ್ರಿಯಾಗಿತ್ತು. ಕ್ರಮೇಣ ಅವನು ಸುರಂಗದಾಟಿ ಹೋಗುವವರ ಕೈಲಿ ಒಂದು ರುಪಾಯಿಯೋ ಐವತ್ತು ಪೈಸೆಯೋ ಲಂಚ ತೆಗೆದುಕೊಂಡು ಅವರನ್ನು ಹೋಗಲು ಬಿಡುತ್ತಿದ್ದ. ಗುಡ್ಡ ಬಳಸಿಕೊಂಡು ಜೀಪಿನಲ್ಲಿ ಹೋದರೆ ಐದಾರು ರುಪಾಯಿ ಖರ್ಚಾಗುತ್ತಿದ್ದುದರಿಂದ ಅವರು ಒಂದು ರುಪಾಯಿ ಲಂಚ ಕೊಟ್ಟು ಹೋಗುವುದೇ ಲಾಭ ಎಂದುಕೊಂಡಿದ್ದರು. ಅದರಿಂದ ಮಾದೇವನಿಗೆ ಕಾಫಿ ಖರ್ಚು ಗಿಟ್ಟುತ್ತಿತ್ತು.
ಆಗಲೇ ಆತನಿಗೆ ಜಲಜಳ ಪರಿಚಯವಾದದ್ದು. ಆಕೆ ರಬ್ಬರು ತೋಟಕ್ಕೆ ಕೆಲಸಕ್ಕೆ ಬರುತ್ತಿದ್ದ ಧಾರವಾಡದ ಹುಡುಗಿ. ಅವಳ ಕುಟುಂಬ ಬರ ತಾಳಲಾರದೆ ಯಡಕುಮೇರಿಗೆ ಬಂದಿತ್ತು. ಅಲ್ಲಿ ರಬ್ಬರು ತೋಟದಲ್ಲಿ ಕೆಲಸ ಮಾಡಿಕೊಂಡಿತ್ತು. ಎಲ್ಲ ಹುಡುಗಿಯರ ಹಾಗೆ ಜಲಜ ರಬ್ಬರು ತೋಟಕ್ಕೆ ಹೋಗದೇ ಬೀಡಿ ಕಟ್ಟುವುದನ್ನು ಆರಂಭಿಸಿದಳು. ಅದರಿಂದ ತಿಂಗಳಿಗೆ ಐನೂರೋ ಸಾವಿರವೋ ಸಂಪಾದನೆ ಮಾಡುತ್ತಿದ್ದಳು. ಕಟ್ಟಿದ ಬೀಡಿಯನ್ನು ಕೊಂಡುಹೋಗಿ ಬೀಡಿಬ್ರಾಂಚಿಗೆ ಕೊಡಬೇಕಾದರೆ ಆಕೆ ಸುರಂಗ ದಾಟಿ ಹೋಗಬೇಕಾಗಿತ್ತು. ದಿನಕ್ಕೊಂದು ಬಾರಿ ಸುರಂಗ ದಾಟಿ ಹೋಗುತ್ತಿದ್ದ ಆಕೆ ಮಾದೇವನನ್ನು ಸೆಳೆದಳು. ಮಾದೇವನಿಗೂ ಮದುವೆ ಆಗಿರಲಿಲ್ಲ. ಹೀಗಾಗಿ ಅವನೂ ಆಕೆಯನ್ನು ಮದುವೆಯಾಗುವ ಆಮಿಷವೊಡ್ಡಿ ತನ್ನ ಬಲೆಗೆ ಕೆಡವಿಕೊಂಡ.
ಬಲೆಗೆ ಕೆಡವಿಕೊಂಡ ಎನ್ನುವುದಕ್ಕಿಂತ ಪ್ರೀತಿಸಿದ ಎನ್ನುವುದೇ ವಾಸಿ. ಅವನ ಉದ್ದೇಶ ಕೆಟ್ಟದಾಗಿರಲಿಲ್ಲ. ಆತ ಆಕೆಗೆ ಮೋಸ ಮಾಡುವ ಉದ್ದೇಶ ಹೊಂದಿರಲಿಲ್ಲ.ಹದಿಹರೆಯದ ಗುರಿಯಿಲ್ಲದ ಪ್ರೀತಿಯಂತೆ ಅವನ ಪ್ರೀತಿಯೂ ಇತ್ತು. ಆಕೆಗೂ ಅದು ಬೇಕಾಗಿತ್ತು.
ಆದರೆ ಅದು ಕೊನೆಯಾದದ್ದು ದುರಂತದಲ್ಲಿ. ಆಗಸ್ಟ್ ತಿಂಗಳ ಒಂದು ಭಾನುವಾರ ಮಧ್ಯಾಹ್ನ ಜಲಜ ಇದ್ದಕ್ಕಿದ್ದಂತೆ ನಾಪತ್ತೆಯಾದಳು. ಸುರಂಗದ ಒಳಗೆ ಸಾಗಿಹೋದ ಆಕೆ ಹೊರಗೆ ಬರಲಿಲ್ಲ. ಊರಿನವರಿಗೂ ಆಕೆಯ ತಂದೆಗೂ ಅನುಮಾನ ಬಂದದ್ದು ಮಾದೇವನ ಮೇಲೆ. ಅವನೇ ಏನೋ ಮಾಡಿರಬೇಕು ಎಂದುಕೊಂಡು ಅವರೆಲ್ಲ ಮಾದೇವನ ಮೇಲೆ ಏರಿಬಂದರು. ಈ ಮಧ್ಯೆ ಪೊಲೀಸರಿಗೂ ಸುದ್ದಿ ತಲುಪಿ ಅವರು ಹುಡುಕಾಟ ಆರಂಭಿಸಿದರು. ಕೊನೆಗೆ ಸುರಂಗದ ಮಧ್ಯಭಾಗದಲ್ಲಿ ಗೋಡೆಯ ಪಕ್ಕ ಬೆಳೆದಿದ್ದ ಪೊದೆಯೊಳಗೆ ಜಲಜಳ ಬಟ್ಟೆಗಳು ಸಿಕ್ಕಿದವು. ಅವುಗಳು ರಕ್ತಸಿಕ್ತವಾಗಿದ್ದವು. ಮಾದೇವನನ್ನು ಪೋಲಿಸರು ಒಯ್ದರು. ಶವ ಸಿಗದೇ ಇದ್ದಕಾರಣ, ಯಾವುದೇ ಸಾಕ್ಪಿಯಿಲ್ಲದ ಕಾರಣ ಮಾದೇವನಿಗೆ ಶಿಕ್ಪೆಯಾಗಲಿಲ್ಲ. ಜಲಜ ರೇಲಿಗೆ ಸಿಕ್ಕಿ ಸತ್ತಿದ್ದಾಳೆ ಎಂದು ಕೋರ್ಟಿನಲ್ಲಿ ತೀರ್ಮಾನವಾಯಿತು.
ಅಲ್ಲಿಗೆ ಒಂದು ಅಧ್ಯಾಯ ಮುಕ್ತಾಯವಾಯಿತು ಅಂತ ಎಲ್ಲರೂ ಅಂದುಕೊಂಡರು. ಆದರೆ ಹಾಗಾಗಲಿಲ್ಲ. ಸುರಂಗದೊಳಗಿನಿಂದ ಹೋಗುವವರಿಗೆ ಮಧ್ಯಭಾಗದಲ್ಲಿ ಯಾವುದೋ ಆಕೃತಿ ಕಣ್ಣಿಗೆ ಬೀಳುತ್ತದೆ ಎಂಬ ವದಂತಿಗಳು ಹಬ್ಬಿದವು. ಗುಂಪಾಗಿ ಹೋದವರು ಕೂಡ ಅದನ್ನೇ ಹೇಳುತ್ತಾ ಭಯಪಟ್ಟು ಓಡಿಬಂದು ಜ್ವರ ಹಿಡಿದು ತಿಂಗಳುಗಟ್ಟಲೆ ಮಲಗಿದರು. ಅಂತೂ ಆ ಸುರಂಗದೊಳಗೆ ಜಲಜಳ ಪ್ರೇತ ಓಡಾಡುತ್ತದೆ ಎಂಬ ಪ್ರತೀತಿ ಎಲ್ಲ ಕಡೆಯಲ್ಲೂ ಹಬ್ಬಿತು.
ಅದೇ ದೆವ್ವ ಒಂದು ದಿನ ಮಾದೇವನಿಗೂ ಕಣ್ಣಿಗೆ ಬಿತ್ತು. ಆ ದೆವ್ವ ಜಲಜಳದೇ ಅನ್ನುವುದು ಮಾದೇವನಿಗೆ ತಕ್ಪಣವೇ ಗುರುತು ಹತ್ತಿತು. ಗುರುತು ಹತ್ತಿದ್ದೇ ತಡ ಆತ ಆ ಜಲಜಳ ಪ್ರೇಮದಲ್ಲಿ ಮತ್ತೆ ಬಿದ್ದ. ಆ ದೆವ್ವವನ್ನೇ ಜಲಜಳೆಂಬಂತೆ ಪ್ರೀತಿಸತೊಡಗಿದ. ಶೂನ್ಯದ ಜೊತೆ ಮಾತಾಡತೊಡಗಿದ. ತನ್ನ ಕೆಲಸ ಮಾಡುವುದನ್ನೇ ಮರೆತ. ಅದೇ ಅವಧಿಯಲ್ಲಿ ಅಲ್ಲೊಂದು ರೇಲು ಅಪಘಾತವೂ ಘಟಿಸಿತು. ಆ ಅಪಘಾತದಲ್ಲಿ ಹದಿನಾರು ಮಂದಿ ತೀರಿಕೊಂಡರು. ಆ ಅಪಘಾತಕ್ಕೆ ಮಾದೇವನ ಬೇಜವಾಬ್ದಾರಿಯೇ ಕಾರಣ ಎಂದು ಹೇಳಿ ಇಲಾಖೆ ಅವನನ್ನು ಸಸ್ಪೆಂಡು ಮಾಡಿತು. ಆದರೆ ಅಮೇಲೆ ಕೂಡ ಮಾದೇವ ಆ ಜಾಗ ಬಿಟ್ಟು ಕದಲಲಿಲ್ಲ. ಅಲ್ಲೇ ಕುಳಿತುಕೊಂಡು ಜಲಜಳಿಗಾಗಿ ಕಾಯುತ್ತಿದ್ದ. ಆತ ಜಲಜಳ ಜೊತೆ ಮಾತಾಡುವುದನ್ನು ಕಂಡಿದ್ದೇವೆ ಎಂದು ತೀರಾ ನಂಬಿಕಸ್ತರೂ ಕೃಷ್ಣಪ್ರಸಾದನಿಗೆ ಹೇಳಿದ ನಂತರವೇ ಆತ ನನಗೆ ಕಾಗದ ಬರೆದಿದ್ದು. ನಾನು ಬೆಂಗಳೂರಿನಿಂದ ಒಬ್ಬನೇ ಬಂದು ಕೃಷ್ಣಪ್ರಸಾದನ ಗೈರು ಹಾಜರಿಯಲ್ಲಿ ಮಾದೇವನನ್ನು ಹುಡುಕಿಕೊಂಡು ಹೊರಟಿದ್ದು.
ನಾನು ಆ ಜಾಗ ತಲುಪುವ ಹೊತ್ತಿಗೆ ಸಂಜೆ ಇಳಿದಿತ್ತು. ಸುರಂಗದ ಕೊನೆ ಕಣಿವೆಯ ಕೆಳಭಾಗದಲ್ಲಿದ್ದು ಎರಡೂ ಬದಿಯಲ್ಲಿ ಗುಡ್ಡಗಳಿದ್ದವು. ಗುಡ್ಡದ ಒಂದು ತುದಿಯಲ್ಲಿ ಖಾಲಿ ಗುಡಿಸಲು ಒಂದಿತ್ತು. ಅದು ಜಲಜಳಿದ್ದ ಮನೆಯಂತೆ. ಸುರಂಗದ ಬಾಯಿಯ ಹತ್ತಿರ ಮಾದೇವ ಗುಡಾರ ಇತ್ತು. ನಾನು ಆ ಇಳಿಸಂಜೆಯಲ್ಲಿ ಮಾದೇವನ ಗುಡಾರದ ಹತ್ತಿರ ಹೋಗಿ ಅವನಿಗಾಗಿ ಹುಡುಕಾಡಿದೆ. ಅವನು ಕಾಣಿಸಲಿಲ್ಲ. ಎಲ್ಲೋ ಹೋಗಿರಬಹುದು, ಬೆಳಗ್ಗೆ ನೋಡೋಣ ಎಂದುಕೊಂಡು ಗುಡ್ಡ ಹತ್ತುತ್ತಿದ್ದಂತೆ ಕೆಳಗಡೆಯಿಂದ ಯಾರೋ ನಕ್ಕ ಸದ್ದು ಕೇಳಿಸಿತು. ತಿರುಗಿ ನೋಡಿದರೆ ಸಂಜೆಗಪ್ಪಿನಲ್ಲಿ ಮಾದೇವನ ಆಕೃತಿ ಅಸ್ಪಷ್ಟ ಕಂಡಿತು. ಅವನೇ ಮಾದೇವ ಇರಬೇಕು ಎಂದು ನಾನಂದುಕೊಂಡೆ. ನಿನ್ನ ಹತ್ತಿರ ಮಾತಾಡಬೇಕು, ಬೆಳಗ್ಗೆ ಬರುತ್ತೇನೆ ಎಂದು ಹೇಳಿದೆ. ಆ ಆಕೃತಿ ಮತ್ತೆ ನಕ್ಕು ಕ ಬೀಸಿತು.
ಅದೇ ರಾತ್ರಿ ನನಗೆ ಆ ಕ್ರೀ..ಚ್ ಸದ್ದು ಕೇಳಿಸಿದ್ದು. ಅದಾದ ನಂತರ ರೇಲು ಭೀಕರ ಸದ್ದು ಮಾಡುತ್ತಾ ಹಾದು ಹೋದದ್ದು.
-2-
ಬೆಳಗ್ಗೆ ಯಥಾಪ್ರಕಾರ ಎದ್ದು ನಾನು ಮಾದೇವನ ಗುಡಾರದ ಹತ್ತಿರ ಹೋದೆ. ಅಲ್ಲಿ ಕೆಲಸ ಮಾಡುವುದು ನಿಜಕ್ಕೂ ಸ್ವರ್ಗಸಮಾನ ಎನ್ನಿಸಿತು. ಹಸಿರು ನಳನಳಿಸುವ ಬೆಟ್ಟಗಳು, ಜುಳುಜುಳು ಹರಿಯುವ ನೀರಝರಿ, ಬಣ್ಣಬಣ್ಣದಹಕ್ಕಿಗಳು, ಎಂತೆಂಥದೋ ಹೂವುಗಳು.. ಇಡೀ ಪ್ರಕೃತಿ ಕಣ್ಣುತಣಿಸುವಂತಿತ್ತು.
ಮಾದೇವನ ಗುಡಾರದ ಬಳಿಗೆ ಹೋಗಿ ನಾನು ಅವನನ್ನು ಒಂದೆರಡು ಸಾರಿ ಕರೆದೆ. ಯಾರೂ ಬಾಗಿಲು ತೆರೆಯಲಿಲ್ಲ. ಎಲ್ಲಿಗೋ ಹೋಗಿರಬಹುದು ಅಂದುಕೊಂಡು ಮೆತ್ತಗೆ ಬಾಗಿಲು ತಳ್ಳಿದೆ. ಒಳಗೆ ಕತ್ತಲು ತುಂಬಿತ್ತು. ಜೇಡರ ಬಲೆ ಮುತ್ತಿಕೊಂಡು ಆ ಗುಡಾರದೊಳಗೆ ಇತ್ತೀಚೆಗೆ ಯಾರೂ ಕಾಲಿಡಲೇ ಇಲ್ಲವೇನೋ ಎಂಬಂತಿತ್ತು. ಹಾಗಿದ್ದರೆ ಮಾದೇವ ಎಲ್ಲಿ ಮಲಗುತ್ತಾನೆ, ನಿನ್ನೆ ಅವನನ್ನು ನಾನು ಇಲ್ಲೇ ತಾನೇ ನೋಡಿದ್ದು. ಆವನು ಬೇರೆ ಮನೆ ಮಾಡಿಕೊಂಡಿದ್ದಾನಾ ಎಂದು ಯೋಚಿಸುತ್ತಾ ಆ ಗುಡಾರದಂಥ ಮನೆಯ ಕಿಟಕಿ ತೆರೆದೆ.
ಆ ಬೆಳಕಿನಲ್ಲಿ ನನಗೆ ಕಂಡದ್ದುಮನೆಯ ಚಾವಣಿಯಿಂದ ನೇತಾಡುತ್ತಿದ್ದ ಒಂದು ಅಸ್ಥಿಪಂಜರ ಮಾತ್ರ. ನಾನು ಒಂದೇ ಉಸಿರಿಗೆ ಹೊರಗೆ ಓಡಿದೆ. ಅದೇ ಉಸಿರಲ್ಲಿ ಬೆಂಗಳೂರಿಗೆ ಕಂಬಿಕಿತ್ತೆ. ಈಗಲೂ ಒಮ್ಮೊಮ್ಮೆ ರಾತ್ರಿ ಕನಸಲ್ಲಿ ಆ ಅಸ್ಥಿಪಂಜರ ಬರುತ್ತದೆ. ನಾನು ವಿಹ್ವಲನಾಗುತ್ತೇನೆ. ಮತ್ತೆ ಆ ಜಾಗಕ್ಕೆ ಹೋಗೋಣ ಅನ್ನುತ್ತದೆ ಮನಸ್ಸು.
ನಾನು ಬೆಂಗಳೂರಿಗೆ ಬಂದು ಒಂದು ತಿಂಗಳಾದ ನಂತರ ಕೃಷ್ಣಪ್ರಸಾದನ ಕಾಗದ ಬಂತು. ನೀನು ಊರಿಗೆ ಬರುವ ಹೊತ್ತಿಗೆ ನಾನು ಇರಲಾಗಲಿಲ್ಲ.ಅರ್ಜೆಂಟಾಗಿ ಕೇರಳಕ್ಕೆ ಹೋಗಬೇಕಾಗಿ ಬಂತು. ನೀನು ಬಂದು ಹೋಗಿದ್ದು ಗೊತ್ತಾಯಿತು. ಆದರೆ ಈಗ ಬಂದು ಏನೂ ಉಪಯೋಗವಿಲ್ಲ. ಮಾದೇವ ಆವತ್ತೇ ತನ್ನೂರಿಗೆ ಹೊರಟು ಹೋದ ಅಂತ ಕಾಣುತ್ತದೆ. ಇತ್ತೀಚೆಗೆ ನಾನು ಅವನನ್ನು ನೋಡಲೇ ಇಲ್ಲ ಎಂದು ಆತ ಬರೆದಿದ್ದ. ಅದನ್ನು ನಾನು ಈಗಲೂ ಜೋಪಾನವಾಗಿಟ್ಟುಕೊಂಡಿದ್ದೇನೆ. ಆ ನೆನಪುಗಳ ಅಸ್ಥಿಪಂಜರದ ಜೊತೆಗೆ.
(ಪುತ್ತೂರಿನಿಂದ ಬೆಂಗಳೂರಿಗೆ ಮಂಗಳಾ ಎಕ್ಸ್ ಪ್ರೆಸ್ ಟ್ರೇನಿನಲ್ಲಿ ಬರುತ್ತಾ ಒಮ್ಮೆ ಎಡಕುಮೇರಿಯಲ್ಲಿ ಟ್ರೇನು ಎರಡೂವರೆ ದಿನ ನಿಂತೇ ಬಿಟ್ಟಿತ್ತು. ಅಲ್ಲಿರುವ ಪುಟ್ಟ ಹೊಟೆಲಿನ ತಿಂಡಿ ಖಾಲಿಯಾಗಿ, ಅಂಗಡಿಯ ಬಿಸ್ಕತ್ತುಗಳು ಅಷ್ಟೂ ಖರ್ಚಾಗಿ ಆಮೇಲೆ ನಾವು ಹಸಿ ಈರುಳ್ಳಿ ಮತ್ತು ಅಲಸಂದೆ ತಿನ್ನುತ್ತಾ ಕಾಲಕಳೆದದ್ದು ಮರೆಯದ ನೆನಪು. ಆ ನೆನಪಿಗೆ ಹುಟ್ಟಿದ್ದು ಈ ಕತೆ)
Friday, April 13, 2007
ಒಲಿಸಿಕೊಂಡವಳೇ ಕೊಲಿಸಿದಳೆ?

ನೀವು ಬೆಂಗಳೂರಿನಿಂದ ಮಂಗಳೂರಿಗೆ ಹೊರಟರೆ, ನಿಮಗಿರುವುದು ಎರಡೂ ಮತ್ತೊಂದು ದಾರಿ. ಹಾಸನದಿಂದ ಬೇಲೂರು, ಮೂಡಿಗೆರೆ ಮಾರ್ಗವಾಗಿ ಚಾರ್ಮುಡಿ ಘಾಟಿಯ ಮೂಲಕ ಹೋಗುವುದು ಒಂದು. ಹಾಸನದಿಂದ ನೇರವಾಗಿ ಹೋಗಿ ಶಿರಾಡಿ ಘಾಟಿ ಇಳಿದು ಹೋಗುವುದು ಇನ್ನೊಂದು. ತೀರ ತಲೆಕೆಟ್ಟರೆ ಬಿಸಲೆ ಘಾಟಿ ಹಾದು, ಸುಬ್ರಹ್ಮಣ್ಯದ ಹತ್ತಿರ ಮತ್ತೆ ಮರಳಿ ಗುಂಡ್ಯಕ್ಕೆ ಬಂದು ಉಪ್ಪಿನಂಗಡಿ ಸೇರುವುದಕ್ಕೆ ಅಡ್ಡಿಯಿಲ್ಲ.
ಶಿರಾಡಿ ಘಾಟಿ ಇಳಿದು ನೆಲ್ಯಾಡಿಗೆ ಕಾಲಿಡುವ ಮೊದಲು ಅತ್ತಿತ್ತ ತಿರುಗಾಡಿದರೆ ನಿಮಗೆ ಸಿಕ್ಕುವ ಅರಸಿನಮಕ್ಕಿ, ವಳಾಲು, ಕೊಕ್ಕಡ ಮುಂತಾದ ಊರುಗಳ ಆಸುಪಾಸಿನಲ್ಲಿ ಕೇರಳದಿಂದ ಬಂದ ಕೊಚ್ಚಿ ಕ್ರಿಶ್ಚಿಯನ್ನರು ರಬ್ಬರ್ ತೋಟ ಮಾಡಿಕೊಂಡಿದ್ದಾರೆ. ಜೊತೆಗೇ ಟಾಪಿಯೋಕಾ ಎಂದು ಬೆಂಗಳೂರಿನ ಮಂದಿ ಕರೆಯುವ ಮರಗೆಣಸು ಬೆಳೆಯುತ್ತಾರೆ.
ನೆಲ್ಯಾಡಿಯಿಂದ ಸುಮಾರು ನಲುವತ್ತು ಮೈಲಿ ಮುಂದಕ್ಕೆ ಮಂಗಳೂರಿಗೆ ಹೋಗುವ ದಾರಿಯಲ್ಲಿ ಸಾಗಿದರೆ ರಸ್ತೆಯ ಎರಡೂ ಬದಿಯಲ್ಲಿ ನೀವು ಇಟ್ಟಿಗೆ ಗೂಡುಗಳನ್ನು ಕಾಣಬಹುದು. ಅಲ್ಲೆಲ್ಲಾ ಜೇಡಿಮಣ್ಣು ವಿಪುಲವಾಗಿ ಸಿಕ್ಕುತ್ತಿದ್ದುದರಿಂದಲೂ ಮುರಕಲ್ಲುಗಳಿಗೆ ವಿಪರೀತ ಬೆಲೆ ಇದ್ದುದರಿಂದಲೂ ಇಟ್ಟಿಗೆಗಳಿಗೆ ಅಪಾರ ಬೇಡಿಕೆಯಿತ್ತು. ಹೀಗಾಗಿ ಹೆಜ್ಜೆಗೊಂದರಂತೆ ಇಟ್ಟಿಗೆ ಗೂಡುಗಳು ಹುಟ್ಟಿಕೊಂಡಿದ್ದವು.
ನಾನೊಮ್ಮೆ ಮಂಗಳೂರಿಗೆ ಹೋಗುವ ದಾರಿಯಲ್ಲಿ ಅಡ್ಯಾರಿನ ಬಳಿ ಇಂಥ ಇಟ್ಟಿಗೆ ಗೂಡುಗಳನ್ನು ನೋಡಿ ಅವುಗಳ ಫೊಟೋ ತೆಗೆಯಲೆಂದು ಕಾರು ನಿಲ್ಲಿಸಿದೆ. ಅಷ್ಟು ಹೊತ್ತಿಗಾಗಲೇ ಹಾಲೋ ಬ್ಲಾಕ್ ಎಂಬ ಹೊಸ ಥರದ ಸಿಮೆಂಟು ಇಟ್ಟಿಗೆ ಪ್ರಸಿದ್ಧವಾಗಿತ್ತು. ಬಹಳಟ್ಟು ಇಟ್ಟಿಗೆ ಗೂಡುಗಳು ಪಾಳುಬಿದ್ದಿದ್ದವು. ಅವು ಮಳೆಗಾಳಿಬಿಸಿಲಿಗೆ ಸಿಕ್ಕಿ ವಿಚಿತ್ರ ಬಣ್ಣಕ್ಕೆ ತಿರುಗಿದ್ದವು. ಫೋಟೋಗ್ರಾಫರನ ಸ್ವರ್ಗ ಎನ್ನಬಹುದಾದ ಜಾಗ ಅದು.
ಅಲ್ಲಿ ತಿರುಗಾಡುವಾಗಲೇ ನನಗೆ ಆಗ ಅಗಾಧವಾದ ಇಟ್ಟಿಗೆ ಗೂಡು ಕಂಡಿದ್ದು.ಅದು ಒಂದು ದೊಡ್ಡ ಮನೆಯಷ್ಟಿತ್ತು. ಮೇಲ್ಗಡೆ ಮಂಗಳೂರು ಹೆಂಚು ಹೊದಿಸಿದ್ದ ಒಂದು ಹೆಂಚಿನ ಗೂಡೂ ಅಲ್ಲಿತ್ತು.

ಅಲ್ಲಿ ಶಿವಣ್ಣ ಹೆಂಚು ತಯಾರಿಸುತ್ತಿದ್ದ ಅಂತ ಆಮೆಲೆ ಗೊತ್ತಾಯಿತು.ಪಕ್ಕದಲ್ಲೇ ಇದ್ದ ಮತ್ತೊಂದು ಅಗಾಧ ಗಾತ್ರದ ಇಟ್ಟಿಗೆ ಗೂಡಿನೊಳಗೆ ಒಣಗಿ ಕಪ್ಪಾದ, ಸುಟ್ಟು ಕರಕಲಾದ ಇಟ್ಟಿಗೆಗಳು ಅಡ್ಡಾದಿಡ್ಡಿಯಾಗಿ ಬಿದ್ದಿದ್ದವು. ಅದು ಅದನ್ನು ಯಾಕೆ ಹೇಗೆ ಪಾಳುಬಿಟ್ಟಿದ್ದಾರೆ ಅನ್ನುವುದು ಗೊತ್ತಾಗಲಿಲ್ಲ. ಅದನ್ನೇಕೆ ಪಾಳು ಬಿಟ್ಟಿದ್ದಾರೆ. ಅಲ್ಲಿರುವ ಇಟ್ಟಿಗೆಗಳ್ನನೇಕೆ ಯಾರೂ ಬಳಸುತ್ತಿಲ್ಲ ಎಂದು ವಿಚಾರಿಸಿದಾಗಲೇ ಅಲ್ಲಿರುವ ಕೆಲವರು ನನಗೆ ರಮೇಶನ ಹೆಸರು ಹೇಳಿದ್ದು. ಅವನ ಮನೆಯ ವಿಳಾಸ ಕೊಟ್ಟದ್ದು.
ಆ ವಿಳಾಸ ತೆಗೆದುಕೊಂಡು ನಾನು ರಮೇಶನ ಮನೆಗೆ ಹೋದೆ. ಆತ ಕುಳ್ಳಗಿನ ತೆಳ್ಳಗಿನ ಹುಡುಗ. ಆಗಷ್ಟೇ ಮದುವೆಯಾಗಿದ್ದ. ಅರಸೀಕೆರೆಯವನಾಗಿದ್ದರೂ ಅಡ್ಯಾರಿನಲ್ಲೇ ಸೆಟ್ಲಾಗಿದ್ದ. ಅವನೇ ನನಗೆ ಈ ಕತೆ ಹೇಳಿದ್ದು.
ರಮೇಶ ಹೇಳಿದ ಕತೆ
ನಾನು ಮನೆಬಿಟ್ಟು ಓಡಿಬಂದದ್ದು ಯಾವುದಾದರೂ ಹೊಟೆಲ್ನಲ್ಲಿ ಕೆಲಸ ಮಾಡುವುದಕ್ಕೆಂದು. ಆದರೆ ನನ್ನ ಅದೃಷ್ಟ ಚೆನ್ನಾಗಿತ್ತು. ಬಂದವನಿಗೆ ಸಿಕ್ಕಿದ್ದು ಶಿವಣ್ಣ. ಒಂದು ಸಾರಿ ಹೊಟೆಲಿಗೆ ಚಾ ಕುಡಿಯಲು ಬಂದಿದ್ದವನು, ಆ ಹೊಟೆಲ್ ಮಾಲಿಕರ ಹತ್ತಿರ ನಾನು ಕೆಲಸಕ್ಕಾಗಿ ಅಂಗಲಾಚುತ್ತಿರುವುದನ್ನು ನೋಡಿದ. ನನ್ನನ್ನು ಕರೆದು ತನ್ನ ಜೊತೆಗೆ ಕರೆದೊಯ್ದ. ಆವತ್ತಿನಿಂದ ನನ್ನನ್ನು ತಮ್ಮನ ಹಾಗೆ ನೋಡಿಕೊಂಡ. ಅವನನ್ನು ನಾನು ಶಿವಣ್ಣ ಎಂದೇ ಕರೆಯುತ್ತಿದ್ದೆ.ಆತ ನನ್ನನ್ನು ತಮ್ಮಾ ಎನ್ನುತ್ತಿದ್ದ.
ಶಿವಣ್ಣನ ಇಟ್ಟಿಗ ಗೂಡಿನಲ್ಲಿ ನಲುವತ್ತೋ ಐವತ್ತೋ ಮಂದಿ ಕೆಲಸ ಮಾಡಿಕೊಂಡಿದ್ದರು. ಅವರೆಲ್ಲ ದಿನಗೂಲಿ ನೌಕರರು. ವಾರಕ್ಕೊಂದು ರಜಾ ಹಾಕಿ, ಕೊಟ್ಟ ಸಂಬಳವನ್ನು ಕುಡಿದು ಹಾಳುಮಾಡುತ್ತಿದ್ದವರು. ಅವರ ಪೈಕಿ ಯಾರಿಗೂ ಅಕ್ಪರ ಜ್ಞಾನವೂ ಇರಲಿಲ್ಲ. ಅಂಥವರ ನಡುವೆ ನನಗೊಂದು ಗೌರವವಾದ ಸ್ಥಾನವಿತ್ತು. ನಾನು ಎಸ್ಸೆಸ್ಸೆಲ್ಸಿವರೆಗೆ ಓದಿದ್ದರಿಂದ ಶಿವಣ್ಣ ಅವರ ಲೆಕ್ಕ ಬರೆಯುವ ಜವಾಬ್ದಾರಿಯನ್ನು ನನಗೆ ವಹಿಸಿದ್ದ.
ಇಟ್ಟಿಗೆ ಗೂಡಿಗೆ ಕೆಲಸಕ್ಕೆ ಬರುತ್ತಿದ್ದವರ ಪೈಕಿ ಐತಪ್ಪ ಎನ್ನುವ ಮುದುಕನೊಬ್ಬನಿದ್ದ. ಅವನು ಶಿವಣ್ಣನ ಅಪ್ಪನ ಕಾಲದಿಂದಲೇ ಕೆಲಸಕ್ಕಿದ್ದವನಂತೆ. ಸದ್ಯಕ್ಕೆ ಕೆಲಸ ಮಾಡುವ ತಾಕತ್ತಿಲ್ಲದಿದ್ದರೂ ಬಂದು ಹೋಗುತ್ತಿದ್ದ. ಶಿವಣ್ಣನೂ ಕರುಣೆಯಿಂದ ಅವನಿಗೆ ಸಂಬಳ ಕೊಡುತ್ತಿದ್ದ. ಶಿವಣ್ಣ ಸಂಬಳ ಕೊಡುತ್ತಿದ್ದದ್ದು ಐತಪ್ಪನ ಮೇಲಿನ ಕರುಣೆಯಿಂದ ಅಲ್ಲ, ಅವನ ಮಗಳು ಚಂಪಾಳ ಮೇಲಿನ ಪ್ರೀತಿಯಿಂದ ಅನ್ನೋದು ನನಗೆ ಆಮೇಲೆ ಗೊತ್ತಾಯಿತು.
ಶಿವಣ್ಣ ಆಕೆಯನ್ನು ಮನಸಾರೆ ಪ್ರೀತಿಸುತ್ತಿದ್ದ.
ಆ ಪ್ರೇಮಕತೆಗೆ ಸಾಕ್ಪಿಯಾಗಿದ್ದವನು ನಾನೊಬ್ಬನೇ. ಆರಂಭದಲ್ಲಿ ಒಬ್ಬನೇ ಅಡುಗೆ ಮಾಡಿಕೊಂಡು ಊಟ ಮಾಡುತ್ತಿದ್ದ ಶಿವಣ್ಣ ಕ್ರಮೇಣ ಚಂಪಾಳ ಮನೆಗೆ ಊಟಕ್ಕೆ ಹೋಗತೊಡಗಿದ. ಐತಪ್ಪನಿಗೆ ಆಗೀಗ ಕರೆದು ಭಕ್ಪೀಸು ಕೊಡುತ್ತಿದ್ದ. ಚಂಪಾಳೇನಾದರೂ ಅತ್ತಿತ್ತ ಸುಳಿದರೆ ಪುಲಕಿತನಾಗುತ್ತಿದ್ದ. ಅವಳಿಂದ ಅದೆಂಥದೋ ಒಂದು ಸಂತೋಷವನ್ನು ಆತ ಪಡೆಯುತ್ತಿದ್ದ. ಚಿಕ್ಕವನಾದ ನನಗೆ ಅದೇನು ಅನ್ನೋದು ಗೊತ್ತಿರಲಿಲ್ಲ. ಅದು ಗೊತ್ತಾದದ್ದು ಆ ಊರಿಗೆ ಮ್ಯಾಥ್ಯೂ ಬಂದ ನಂತರ.
ಮ್ಯಾಥ್ಯೂ ಕೇರಳದವನು. ಗೋವಾಕ್ಕೂ ಹೋಗಿ ಬಂದಿದ್ದನಂತೆ. ನಿರರ್ಗಳವಾಗಿ ಇಂಗ್ಲೀಷು ಮಾತಾಡುತ್ತಿದ್ದ. ತುಂಬ ದಿವಿನಾಗಿ ಸಿಂಗರಿಸಿಕೊಳ್ಳುತ್ತಿದ್ದ. ಅವನು ಪಕ್ಕ ಸುಳಿದರೆ ಅದೆಂಥದ್ದೋ ಪರಿಮಳ ಘಮ್ಮೆನುತ್ತಿತ್ತು. ಅದಕ್ಕಿಂತ ಹೆಚ್ಚಾಗಿ ಆತ ಎಲ್ಲರಂತೆ ಬೀಡಿ ಸೇದುತ್ತಿರಲಿಲ್ಲ. ಇಷ್ಟುದ್ದದ ಕಪ್ಪು ಸಿಗರೇಟು ಸೇದುತ್ತಿದ್ದ. ಅದಿಲ್ಲದೇ ಹೋದರೆ ಪೈಪ್ ಸೇದುತ್ತಿದ್ದ. ಅಡ್ಯಾರಿನ ಉರಿಬಿಸಿಲಿಗೂ ಜಗ್ಗದೆ ಕಲ್ಲು ಕಟ್ಟೆಯ ಮೇಲೆ ಕುಳಿತುಕೊಂಡು ಆತ ಪೈ್ ಸೇದುತ್ತಾ ಚಹಾ ಕುಡಿಯುವುದನ್ನು ನಾನೂ ಅನೇಕ ಸಲ ಬೆರಗಿನಿಂದ ನೋಡಿದ್ದೆ.
ಆತ ಆ ಊರಿಗೆ ಬಂದದ್ದು ಒಂದು ತೋಟದ ಮಾಲಿಕನಾಗಿ. ಅಲ್ಲೇ ಪಕ್ಕದಲ್ಲಿದ್ದ ತೋಟವೊಂದನ್ನು ಆತ ದುಬಾರಿ ಬೆಲೆ ಕೊಟ್ಟು ಕೊಂಡುಕೊಂಡಿದ್ದನಂತೆ. ಆ ತೋಟಕ್ಕೆ ಹೋಗಬೇಕಾದರೆ ನಮ್ಮ ಇಟ್ಟಿಗೆ ಗೂಡಿನ ಮೇಲೆ ಹಾದು ಹೋಗಬೇಕಾಗಿತ್ತು. ಹಾಗೆ ಹಾದು ಹೋಗುವಾಗಲೆಲ್ಲ ಆತ ಕಣ್ಣಿಗೆ ಬೀಳುತ್ತಿದ್ದ. ಆರಂಭದಲ್ಲಿ ನಡೆದುಕೊಂಡು ಹೋಗುತ್ತಿದ್ದವನು ಸ್ವಲ್ಪೇ ದಿನಕ್ಕೆ ಒಂದು ಬುಲೆಟ್ ಕೊಂಡುಕೊಂಡ. ಅದರ ಮೇಲೆ ಅವನ ಸವಾರಿ ಹೋಗುವುದನ್ನು ನಾವು ಸಖೇದಾಶ್ಚರ್ಯದಿಂದ ನೋಡುತ್ತಾ ನಿಂತಿರುತ್ತಿದ್ದೆವು.
ಈ ನಡುವೆ ಯಾಕೋ ಶಿವಣ್ಣ ಮಂಕಾಗತೊಡಗಿದ. ಅವನ ಸಮಸ್ಯೆಯೇನೆಂಬುದು ಸ್ವತಃ ನನಗೂ ತಿಳಿಯುತ್ತಿರಲಿಲ್ಲ. ಕೆಲಸದಲ್ಲಿ ಮೊದಲಿನಂತೆ ಆಸಕ್ತಿಯಿರಲಿಲ್ಲ. ನಾನು ಲೆಕ್ಕದ ಪುಸ್ತಕ ಮುಂದಿಟ್ಟರೆ ಮಂಕಾಗಿ ಅದನ್ನೇ ನೋಡುತ್ತಿದ್ದು ಸರಿ ಎನ್ನುತ್ತಿದ್ದ. ಮೊದಲಿನ ಹಾಗೆ ಪ್ರಶ್ನೆಗಳನ್ನು ಕೇಳುತ್ತಿರಲಿಲ್ಲ. ಬಹುಶಃ ಆತನಿಗೆ ನನ್ನ ಮೇಲೆ ಸಿಟ್ಟು ಬಂದಿರಬಹುದು, ಅಥವಾ ನಾನು ಹಣ ನುಂಗಿದ್ದೇನೆ ಎಂಬ ಗುಮಾನಿ ಇರಬಹುದು ಎಂಬ ಅನುಮಾನ ನನಗೆ ಬಂತು. ಯಾಕೆಂದರೆ ಕೆಲವರು ನನ್ನ ಹತ್ತಿರ ಹಾಗೆ ಮಾತಾಡಿದ್ದರು. ಒಳ್ಳೆ ಲಾಭ ಬರೋ ಕೆಲಸಾನೇ ಹಿಡಿದಿದ್ದಿ ಎನ್ನುತ್ತಿದ್ದರು. ನನಗಿಂತ ಮೊದಲು ಕೆಲಸಕ್ಕಿದ್ದವನು ಕೆಲಸಕ್ಕೆ ಬಾರದವರ ಹೆಸರೆಲ್ಲ ಸೇರಿಸಿ ಹಣ ಹೊಡೆಯುತ್ತಿದ್ದನಂತೆ. ಆತನಿಗೆ ನನ್ನ ಮೇಲೆ ಅಸಮಾಧಾನವಿದ್ದರೆ ಒಂದು ಬಾರಿ ಅವನೊಡನೆ ಅದನ್ನು ಇತ್ಯರ್ಥ ಮಾಡಿಕೊಳ್ಳಬೇಕು ಎಂದುಕೊಂಡೆ. ಆದರೆ ಶಿವಣ್ಣ ನನಗೆ ಒಂಟಿಯಾಗಿ ಸಿಗಲೇ ಇಲ್ಲ. ಇಟ್ಟಿಗೆ ಗೂಡಿಗೆ ಬರುವುದನ್ನೂ ಕಮ್ಮಿ ಮಾಡಿದ್ದ. ಹೊಸ ಆರ್ಡರುಗಳನ್ನೂ ನಾನೇ ನಿಭಾಯಿಸಬೇಕಾಗಿತ್ತು.
ಈ ಮಧ್ಯೆ ನಾನು ಒಂದೆರಡು ಬಾರಿ ಚಂಪಾಳನ್ನು ಮ್ಯಾಥ್ಯೂ ತನ್ನ ಬುಲೆಟ್ನಲ್ಲಿ ಕೂರಿಸಿಕೊಂಡು ಹೋಗುವುದನ್ನು ನೋಡಿದ್ದೆ. ಶಿವಣ್ಣನಿಗೆ ಇದರಿಂದ ಅಸಮಾಧಾನವಾಗಿರಬಹುದು ಎಂದುಕೊಂಡೂ ಇದ್ದೆ. ಹೀಗೇ ಒಂದು ಮಧ್ಯಾಹ್ನ ನಾನು ಚಂಪಾ ಮತ್ತು ಮ್ಯಾಥ್ಯೂ ಅಂಟಿಕೊಂಡು ಹೋಗುತ್ತಿರುವುದನ್ನು ನೋಡುತ್ತಿದ್ದಂತೆ ಹೆಗಲ ಮೇಲೆ ಯಾರೋ ಕೈಯಿಟ್ಟಂತಾಯಿತು. ತಿರುಗಿದರೆ ಶಿವಣ್ಣ ನಿಂತಿದ್ದ.ಗಂಭೀರವಾಗಿದ್ದ. ನಾನು ಏನೋ ಹೇಳಬೇಕು ಅನ್ನುವಷ್ಟರಲ್ಲಿ ಅಲ್ಲಿಂದ ಹೊರಟೇಹೋದ.
ಆ ರಾತ್ರಿ ನಾನು ಹೇಗಾದರೂ ಮಾಡಿ ಶಿವಣ್ಣನ ಜೊತೆ ಮಾತಾಡಬೇಕೆಂದು ಅವನ ರೂಮಿಗೆ ಹೋದೆ. ಬೀಗ ಹಾಕಿತ್ತು. ಐತಪ್ಪನ ಮನೆಗೆ ಊಟಕ್ಕೆ ಹೋಗಿರಬಹುದು ಎಂದು ಪಕ್ಕದ ರೂಮಿನಾತ ಹೇಳಿದ. ಐತಪ್ಪನ ಮನೆ ಸಮೀಪಿಸುತ್ತಿದ್ದಂತೆ ಹೊರಗಡೆ ನಿಲ್ಲಿಸಿದ್ದ ಬುಲೆಟ್ ಕಣ್ಣಿಗೆ ಬಿತ್ತು. ಮನೆಯೊಳಗಡೆ ಮಂದಬೆಳಕಿತ್ತು. ನಾನು ಒಂದು ಕ್ಪಣ ಆ ಕತ್ತಲಲ್ಲಿ ಅಲ್ಲೆ ನಿಂತೆ. ಒಳಗೆ ಹೋಗಲೋ ಬೇಡವೋ ಎಂಬ ಅನುಮಾನದಲ್ಲಿ ಕಾದೆ. ಅಷ್ಟು ಹೊತ್ತಿಗೆ ಬಾಗಿಲು ತೆರೆಯಿತು. ಒಳಗಿನಿಂದ ಮ್ಯಾಥ್ಯೂ ಹೊರಬಂದ. ಅವನನ್ನು ತಬ್ಬಿಕೊಂಡಂತೆ ಚಂಪಾ ನಿಂತಿದ್ದಳು. ನಾನು ಒಂದು ಕ್ಪಣ ಅದುರಿಹೋದೆ. ಇದನ್ನು ಶಿವಣ್ಣ ನೋಡಿದರೆ ಎಂದು ಭಯವಾಯ್ತು.
ಚಂಪಾ ಆತನನ್ನು ಬೀಳ್ಕೊಟ್ಟು ಒಳಗೆ ಹೋದಳು. ನಾನು ಅಲ್ಲೇ ಗರಬಡಿದವನಂತೆ ನಿಂತಿದ್ದೆ.
ಅಷ್ಟರಲ್ಲಿ ಯಾರೋ ನನ್ನನ್ನು ಜೋರಾಗಿ ಅಲುಗಾಡಿಸಿದಂತಾಯಿತು. ಬೆಚ್ಚಿಬಿದ್ದು ಹಿಂತಿರುಗಿದರೆ ಕತ್ತಲಲ್ಲೊಂದು ಆಕೃತಿ ಪಿಸುಗುಟ್ಟಿತು "ಯಾರು ನೀನು'. ಆ ಕತ್ತಲಲ್ಲೂ ಆ ಉಡುಗಿದ ದನಿ ಶಿವಣ್ಣನದು ಅನ್ನೋದು ನನಗೆ ಗೊತ್ತಾಯಿತು. ನಾನು ರಮೇಶ ಅಂದೆ. ಶಿವಣ್ಣ ಮರುಮಾತಾಡದೆ ನನ್ನ ಕೈ ಹಿಡಿದು ಅಲ್ಲಿಂದ ದರದರ ಎಳೆದುಕೊಂಡು ಹೋದ. ಕತ್ತಲಲ್ಲಿ ಎಡವುತ್ತಾ ಅವನ ಹಿಂದೆ ಸಾಗಿದೆ. ಸುಮಾರು ಅರ್ಧ ಮೈಲಿ ಹಾಗೆ ನಡೆದಿರಬಹುದು. ಅಲ್ಲೊಂದು ಕಡೆ ಶಿವಣ್ಣ ಕುಸಿದು ಕುಳಿತ. ನಾನೂ ಕುಳಿತೆ. ಶಿವಣ್ಣ ಮಾತಾಡದೇ ಬಿಕ್ಕಿ ಬಿಕ್ಕಿ ಅಳತೊಡಗಿದ. ತನ್ನ ಪ್ರೇಮದ ಕತೆಯನ್ನು ಬಿಕ್ಕುತ್ತಲೇ ಹೇಳಿದ. ಚಂಪಾ ಒಳ್ಳೆಯವಳೆಂದೂ ಆ ಮ್ಯಾಥ್ಯೂ ಆಕೆಯನ್ನು ಬುಟ್ಟಿಗೆ ಹಾಕಿಕೊಂಡಿದ್ದಾನೆಂದೂ ಹಲುಬಿದ. ಆತ ಅಳುತ್ತಿರುವುದನ್ನು ನೋಡಿದ ನನಗೆ ಮ್ಯಾಥ್ಯುವನ್ನು ಸಾಯಿಸಬೇಕೆನ್ನುವಷ್ಟು ಸಿಟ್ಟು ಬಂತು. ನಾನೂ ದೊಡ್ಡವನಾಗಿರಬೇಕಿತ್ತು ಅಂದುಕೊಂಡೆ.
ಅತ್ತು ಅತ್ತು ಸಮಾಧಾನವಾದ ನಂತರ ಶಿವಣ್ಣ ಎದ್ದು ನಿಂತ. ಇನ್ನೊಂದು ವಾರ ನಾನು ಯಾರಿಗೂ ಕಾಣಿಸಿಕೊಳ್ಳುವುದಿಲ್ಲವೆಂದೂ ಇಟ್ಟಿಗೆ ಗೂಡು ಮತ್ತು ಹೆಂಚಿನ ಮನೆಯ ಜವಾಬ್ದಾರಿ ನನ್ನದೆಂದೂ ಹೇಳಿದ. ಆತನ ಮನಸ್ಸಲ್ಲಿ ಯಾವುದೋ ಯೋಜನೆ ರೂಪುಗೊಳ್ಳುತ್ತಿದ್ದಂತಿತ್ತು.
ಅದಾದ ಮೂರನೆಯ ದಿನಕ್ಕೆ ನಾನು ಒಬ್ಬನೇ ಲೆಕ್ಕ ಬರೆಯುತ್ತಾ ಹೆಂಚುಗೂಡಿನ ಪಕ್ಕದಲ್ಲಿರುವ ಕೋಣೆಯಲ್ಲಿ ಕುಳಿತಿದ್ದೆ. ಶಿವಣ್ಣ ರಾತ್ರಿಯೆಲ್ಲ ಕೆಲಸವಿದ್ದಾಗ ಮಲಗುತ್ತಿದ್ದ ಕೋಣೆ ಅದು. ಇದ್ದಕ್ಕಿದ್ದಂತೆ ನನ್ನ ಮುಂದೆ ಯಾರೋ ನಿಂತಂತಾಯಿತು. ತಲೆಯೆತ್ತಿ ನೋಡಿದರೆ ಶಿವಣ್ಣ. ನಾನು ತಲೆಯೆತ್ತಿ ನೋಡುತ್ತಿದ್ದಂತೆ ಆತ ಅಲ್ಲಿಂದ ತಿರುಗಿ ಹೋದ. ನಾನು ಲೆಕ್ಕದ ಪುಸ್ತಕ ಬದಿಗಿಟ್ಟೆ. ಶಿವಣ್ಣ ಆ ಅಪರಾತ್ರಿ ಯಾಕೆ ಬಂದ? ಬಂದವನು ಯಾಕೆ ಮಾತಾಡದೇ ಹೊರಟುಹೋದ? ಆತ ನನಗೇನಾದರೂ ಹೇಳುವುದಿತ್ತೇ? ಒಂದೂ ತೋಚದೇ ಆತನನ್ನೇ ಹಿಂಬಾಲಿಸಿದೆ.
ಶಿವಣ್ಣ ತಿರುಗಿಯೂ ನೋಡದೇ ಮುಂದೆ ಮುಂದೆ ಹೋಗುತ್ತಿದ್ದ. ನಾನು ಅಚ್ಚರಿಯಿಂದ ಹಿಂಬಾಲಿಸಿದೆ. ಆತ ಕತ್ತಲಲ್ಲಿ ನಡೆಯುತ್ತಿದ್ದವನು ನನ್ನ ಕಣ್ಣಮುಂದಿನಿಂದ ಇದ್ದಕ್ಕಿದ್ದಂತೆ ಮಾಯವಾದ. ನಾನೂ ಅವಸರದಲ್ಲಿ ಕೈಯಲ್ಲಿ ಟಾರ್ಚ್ ಇಲ್ಲದೆ ಹೊರಟಿದ್ದೆ. ಶಿವಣ್ಣ ಎಲ್ಲಿಗೆ ಹೋದ ಅನ್ನುವುದೂ ತಿಳಿಯಲಿಲ್ಲ. ಇದ್ದಕ್ಕಿದ್ದಂತೆ ನನ್ನ ಸುತ್ತಲೂ ದಟ್ಟ ಕತ್ತಲೆ ಕವಿದಂತಾಯಿತು. ನಾನು ಗಾಬರಿಯಲ್ಲಿ ಓಡೋಡಿ ನನ್ನ ಕೋಣೆ ತಲುಪಿದೆ.
ಆವತ್ತಿಡೀ ನನಗೆ ನಿದ್ದೆ ಬರಲಿಲ್ಲ. ಬೆಳಗ್ಗೆ ಎದ್ದವನೇ ಶಿವಣ್ಣನ ರೂಮಿಗೆ ಹೋದೆ. ಆತ ಅಲ್ಲಿರಲಿಲ್ಲ. ಮತ್ತೊಂದೆರಡು ಬಾರಿ ಹೋದಾಗಲೂ ಶಿವಣ್ಣ ಸಿಗಲಿಲ್ಲ. ಕೊನೆಗೊಂದು ದಿನ ಚಂಪಾಳ ಮನೆಗೂ ಹುಡುಕಿಕೊಂಡು ಹೋದೆ. ಆಕೆ ಯಾವ ಶಿವಣ್ಣ ಎಂದು ಸಿಟ್ಟಾಗಿ ಕೇಳಿ ಬಾಗಿಲು ಮುಚ್ಚಿಕೊಂಡಳು.
ಆ ರಾತ್ರಿ ನಾನು ಮತ್ತೆ ಹೆಂಚಿನ ಗೂಡಿಗೆ ಹೋದೆ. ಅಲ್ಲಿ ಒಂಟಿಯಾಗಿ ಕೂತಿದ್ದೆ. ಗೂಡು ಧಗಧಗ ಉರಿಯುತ್ತಿತ್ತು. ಅಲ್ಲಿ ಸ್ವಲ್ಪ ಹೊತ್ತಿದ್ದು ಲೆಕ್ಕ ಬರೆಯುವ ರೂಮಿಗೆ ಬಂದೆ.
ಆ ರಾತ್ರಿ ಮತ್ತೆ ಶಿವಣ್ಣ ಕಾಣಿಸಿಕೊಂಡ. ಹಿಂದಿನ ದಿನದಂತೆಯೇ. ಇವತ್ತು ಬಿಡಬಾರದು ಎಂದುಕೊಂಡು ಅವನನ್ನೇ ಹಿಂಬಾಲಿಸಿದೆ. ಆತ ಹಿಂದಿನ ದಿನದಂತೆಯೇ ಮುಂದೆ ಮುಂದೆ ಹೋದ. ನಾನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದೆ. ನೋಡನೋಡುತ್ತಿದ್ದಂತೆಯೇ ಆತ ಹೆಂಚಿನ ಗೂಡಿನ ಬೆಂಕಿಯೆದುರು ನಿಂತ. ಅವನ ಮೈ ಎಷ್ಟು ಪಾರದರ್ಶಕವಾಗಿತ್ತೆಂದರೆ ಅದರೊಳಗಿಂತ ಬೆಂಕಿ ಕಾಣಿಸುತ್ತಿತ್ತು. ನಾನು ಇನ್ನೇನು ಚೀರಿಕೊಳ್ಳಬೇಕೆನ್ನುವಷ್ಟರಲ್ಲಿ ಆತ ಬೆಂಕಿಯ ಒಳಗೇ ಹೊರಟುಹೋದ.
ನಾನು ಕುಸಿದುಬಿದ್ದೆ.
2
ಅಷ್ಟು ಹೇಳಿ ರಮೇಶ ಕತೆ ನಿಲ್ಲಿಸಿದ. ಆ ಘಟನೆಯ ನಂತರ ಆತ ಒಂದು ತಿಂಗಳು ಹಾಸಿಗೆ ಹಿಡಿದಿದ್ದನಂತೆ. ಬೆಂಕಿ ನೋಡಿದಾಗಲೆಲ್ಲ ಅದರೊಳಗೆ ಯಾರೋ ಹೊಕ್ಕಿದಂತೆ ಕಾಣಿಸುತ್ತಿತ್ತಂತೆ. ಶಿವಣ್ಣ ಬೆಂಕಿಯೊಳಗೆ ಹೋದ ಎಂದು ಆತ ಹೇಳುವುದನ್ನು ಯಾರೂ ಸೀರಿಯಸ್ಸಾಗಿ ತೆಗೆದುಕೊಳ್ಳಲಿಲ್ಲ. ಆದರೆ ಆ ಊರಿಗೆ ಹೊಸದಾಗಿ ಬಂದಿದ್ದ ಪೊಲೀಸ್ ಪೇದೆಯೊಬ್ಬ ಶಿವಣ್ಣ ಮಾಯವಾದದ್ದಕ್ಕೂ ರಮೇಶನ ಮಾತಿಗೂ ಸಂಬಂಧ ಇರಬಹುದು ಅಂದುಕೊಂಡು ಆತ ರಮೇಶನಿಗೆ ಕಾಣಿಸಿಕೊಂಡ ಹೆಂಚಿನ ಗೂಡನ್ನು ಕೆದಕಿನೋಡಿದಾಗ ಅರೆಸುಟ್ಟ ಮನುಷ್ಯರ ಎಲುಬುಗಳು ಸಿಕ್ಕವಂತೆ.
ಮುಂದೆ ಆತ ಇಡೀ ಪ್ರಕರಣದ ಬೆನ್ನುಹತ್ತಿದ. ಮ್ಯಾಥ್ಯು ಆರೋಪಿ ಸ್ಥಾನದಲ್ಲಿ ನಿಂತ. ಅಷ್ಟು ಹೊತ್ತಿಗಾಗಲೇ ಆತ ಆ ಊರು ಬಿಟ್ಟು ಕೇರಳಕ್ಕೆ ಓಡಿ ಹೋಗಿದ್ದ.ಅದಾದ ಕೆಲವು ದಿನಗಳ ನಂತರ ಚಂಪಾ ಒಮ್ಮೆ ಹೆಂಚಿನ ಗೂಡಿನ ಬಳಿ ಕಾಣಿಸಿಕೊಂಡವಳು, ಆ ನಂತರ ಕಾಣೆಯಾದಳು. ಆಕೆಯನ್ನು ಶಿವಣ್ಣನ ದೆವ್ವವೇ ಕೊಂದಿರಬೇಕೆಂದು ಭಾವಿಸಿದ ಊರಿನ ಮಂದಿ ಆ ಇಟ್ಟಿಗೆ ಗೂಡಿನತ್ತ ಸುಳಿಯುವುದನ್ನೂ ಬಿಟ್ಟುಬಿಟ್ಟರು.
ಈಗಲೂ ರಾತ್ರಿ ಹೊತ್ತು ಆ ಇಟ್ಟಿಗೆ ಗೂಡು ತನ್ನಿಂತಾನೇ ಹತ್ತಿ ಉರಿಯುತ್ತದಂತೆ. ಅದರ ಮುಂದೆ ಶಿವಣ್ಣ ಅನಾಥನಂತೆ ನಿಂತಿರುತ್ತಾನಂತೆ. ಯಾರಾದರೂ ನೋಡಿದರೆ ಬೆಂಕಿಯೊಳಗೆ ನಡೆದುಹೋಗುತ್ತಾನಂತೆ. ಒಂದೊಂದು ರಾತ್ರಿ ಅಲ್ಲಿ ಒಂದು ಗಂಡೂ ಒಂದು ಹೆಣ್ಣೂ ಜಗಳವಾಡುವ ಶಬ್ದ ಕೇಳಿಬರುತ್ತದಂತೆ.
ಬೇಕಿದ್ದರೆ ನೀವೇ ನೋಡಿ ಎಂದು ಮಾರನೆ ದಿನ ಬೆಳಗ್ಗೆ ಆ ಪಾಳುಬಿದ್ದ ಇಟ್ಟಿಗೆ ಗೂಡಿನ ಬಳಿಗೆ ನನ್ನನ್ನು ಕರೆದೊಯ್ದ ರಮೇಶ, ಆಗಷ್ಟೇ ಆರಿದಂತಿದ್ದ ಕೆಂಡವನ್ನೂ ಇನ್ನೂ ನವಿರಾಗಿರುವ ಬೂದಿಯನ್ನೂ ತೋರಿಸಿದ. ಗೂಡು ಮುಟ್ಟಿನೋಡಿ ಅಂದ. ಮುಟ್ಟಿದೆ.
ಆ ಮಂಜು ಬೀಳುತ್ತಿರುವ ಮುಂಜಾನೆಯಲ್ಲೂ ಆಗಷ್ಟೇ ಉರಿದು ಆರಿದ ಅಗ್ನಿಕುಂಡದ ಥರ ಗೂಡು ಬೆಚ್ಚಗಿತ್ತು.
ನನಗೆ ಯಾಕೋ ಭಯವಾಯಿತು.

(ಈ ಕತೆ ನನಗೆ ಎಲ್ಲಿ ಸಿಕ್ಕಿತೋ ಗೊತ್ತಿಲ್ಲ. ಒಂದು ಅಪರಾತ್ರಿಯಲ್ಲಿ ನಾನು ಮತ್ತು ದಟ್ಸ್ ಕನ್ನಡದ ಶಾಮಸುಂದರ್ ಜೊತೆಗೆ ಕೂತುಕೊಂಡಿದ್ದಾಗ ನೆನಪಿಗೆ ಬಂತು. ಅದನ್ನು ಶಾಮ್ ಒತ್ತಾಯಿಸಿ ಬರೆಸಿಕೊಂಡರು. ಹೀಗಾಗಿ ಇದು ಶಾಮ್ ಗೆ ಅರ್ಪಣೆ)
Thursday, April 12, 2007
ನಮ್ಮೂರ ಬಂಡಿಯಲಿ ನಿಮ್ಮೂರ ಬಿಟ್ಟಾಗ....
ಬಂಡಿಹೊಳೆಯು ಸಣ್ಣ ಹಳ್ಳಿ; ನೂರೈವತ್ತೆರಡು ಮನೆಗಳು ಇರುತ್ತವೆ. ಜನಸಂಖ್ಯೆ ಸ್ವಲ್ಪ ಹೆಚ್ಚು ಕಡಿಮೆ ಒಂಬೈನೂರು. ಪೂರ್ವದಿಕ್ಕಿಗೆ ಬೆಟ್ಟದ ಸಾಲು. ಉಳಿದ ದಿಕ್ಕುಗಳಲ್ಲಿ ಹೇಮಾವತಿ ನದಿ ಈ ಊರಿನ ಎಲ್ಲೆಯೆಂದು ಹೇಳಬಹುದು. ಊರಿನ ಸುತ್ತಲೂ ಪೈರುಪಚ್ಚೆಗಳಿಂದ ತುಂಬಿದ ಹೊಲಗದ್ದೆಗಳೂ ಹಸುರು ಹುಲ್ಲಿನ ಗೋಮಾಳಗಳೂ ಪ್ರಕೃತಿಯ ದಿನಕ್ಕೊಂದು ವಿಧವಾದ ಸೊಬಗಿನ ನೋಟವೂ ನಮ್ಮೂರಿನ ಕಳೆಯನ್ನು ಹೆಚ್ಚಿಸಿದ್ದವು. ಊರಿನ ಸುತ್ತಲೂ ಕಳ್ಳಿಬೂತಾಳೆಗಳ ಬಲವಾದ ಬೇಲಿಗಳಿದ್ದವು. ಇತ್ತೀಚೆಗೆ ಅದು ಕಮ್ಮಿಯಾಗುತ್ತಿದೆ. ಹೊರ ಊರುಗಳಿಂದ ಬರುವ ದಾರಿಗಳಲ್ಲಿ ಹೇಮಗಿರಿಯಿಂದ ಬರುವ ದಾರಿಯೇ ಸ್ವಲ್ಪ ಸುಮಾರಾಗಿತ್ತು. ಇದೇ ಹೆದ್ದಾರಿ. ಈ ಮಾರ್ಗವಾಗಿ ಬರುವಾಗ ಬಲಗಡೆ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನವು ಸಿಕ್ಕುವುದು. ಇದನ್ನು ಕಟ್ಟಿ ನೂರಾರು ವರ್ಷಗಳಾದವು. ಆಳಿದ ಮಹಾಸ್ವಾಮಿಯವರರಾದ ಮುಮ್ಮಡಿ ಕೃಷ್ಣರಾಜ ಒಡೆಯರವರ ತಾಯಿಯವರಾದ ಮಾತೃಶ್ರೀ ದೇವರಾಜಮ್ಮಣ್ಣಿಯವರು ಈ ದೇವಸ್ಥಾನವನ್ನು ಕಟ್ಟಿಸಿ ಇದರ ಸೇವೆಗಾಗಿ ವೃತ್ತಿಗಳನ್ನು ಬಿಟ್ಟಿರುವರು. ಈ ಪುಣ್ಯಾತ್ಮರ ವಿಗ್ರಹವೂ ಅವರ ಜ್ಞಾಪಕಾರ್ಥವಾಗಿ ಇದೇ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವುದು.
ಊರಿನ ದಕ್ಪಿಣ ಭಾಗದಲ್ಲಿ ಸ್ವಲ್ಪ ದೂರವಾಗಿ ಏಳೂರಮ್ಮನ ತೋಪು ಮತ್ತು ಗುಡಿಗಳಿವೆ. ಪೂರ್ವಕಾಲದಲ್ಲಿ ಇಲ್ಲಿಗೆ ಸುತ್ತುಮುತ್ತಲಿನ ಏಳೂರು ಶಿಡಿ ತೇರುಗಳು ಬಂದು ದೊಡ್ಡ ಜಾತ್ರೆಯಾಗಿ ಕುಸ್ತಿ ದೊಂಬರಾಟ ಎಲ್ಲ ಆಗುತ್ತಿದ್ದವಂತೆ. ಈಗ ಏನೂ ಇಲ್ಲ. ಗುಡಿಯ ಮುಂದೆ ಏಳು ಕಲ್ಲುಗಳಿವೆ. ಒಳಗೆ ಏಳು ದೇವರುಗಳಿವೆ. ನಮ್ಮೂರಿನಲ್ಲಿ ಐದಾರು ಮನೆಗಳು ಬ್ರಾಹ್ಮಣರದು. ಉಳಿದದ್ದೆಲ್ಲಾ ಒಕ್ಕಲು ಮಕ್ಕಳದು. ಬಡಗಿಗಳು ಅಕ್ಕಸಾಲಿಗಳು, ವಾದ್ಯದವರು, ಅಗಸರು, ಕುಂಬಾರರ ಒಂದೆರಡು ಮನೆಗಳಿದ್ದವು.ಊರ ಹೊರಗೆ ದಕ್ಪಿಣ ದಿಕ್ಕಿನಲ್ಲಿ ಹದಿನಾರು ಗುಡಿಸಲುಗಳಿದ್ದವಲ್ಲ ಅವೆಲ್ಲಾ ಹೊಲೆಯರದು. ಇವರು ತಮ್ಮ ಗುಡಿಸಲುಗಳ ಮಧ್ಯೆ ಒಂದು ಹೆಂಚಿನ ಮನೆಯನ್ನು ಕಟ್ಟಿ ಅದರಲ್ಲಿ ಮಾಯಮ್ಮ ದೇವರನ್ನಿಟ್ಟು ಪೂಜಿಸುತ್ತಿದ್ದರು.
ಊರಿನ ಹವಾಗುಣವು ಆರೋಗ್ಯವಾಗಿದ್ದಿತು. ವ್ಯವಸಾಯವೇ ಮುಖ್ಯವಾಗಿದ್ದುದರಿಂದ ತಿಪ್ಪೇಗುಂಡಿಗಳು ಊರಿಗೆ ಸಮೀಪವಾಗಿದ್ದವು. ಹಳೇ ಸಂಪ್ರದಾಯದ ಬೀದಿಗಳೂ ಕೆಲವಿದ್ದವು. ಬೆಳಕಿಗೆ ಅನುಕೂಲ ಕಮ್ಮಿ. ದನಕರುಗಳನ್ನು ಮನೆಯೊಳಗೆ ಕಟ್ಟುತ್ತಿದ್ದರು. ಇತ್ತೀಚೆಗೆ ಗ್ರಾಮಪಂಚಾಯ್ತಿ ಏರ್ಪಾಡಾಗಿ ಮೇಲಿನ ಕಷ್ಟಗಳೆಲ್ಲ ನಿವಾರಣೆಯಾಗುತ್ತಲಿವೆ. ಬಾಲ್ಯದಲ್ಲಿ ನೋಡಿದ ಬಂಡಿಹೊಳೆಯು ಈಗೀಗ ಗುಣಮುಖನಾದ ರೋಗಿಯು ಹಾಸಿಗೆಯಿಂದೆದ್ದು ತಿರುಗಾಡುವಂತೆ ಕಾಣುತ್ತಿದ್ದಿತು. ಊರೊಳಗೆ ಕಾಹಿಲೆ ಹರಡಿದಾಗ ಆರು ಮೈಲಿ ಆಚೆಗಿರುವ ವೈದ್ಯರು ಬಂದು ಔಷಧಿಗಳನ್ನು ಕೊಡುತ್ತಿದ್ದರು. ರೈತರು ವ್ಯವಸಾಯಕ್ಕಾಗಿ ಊರಿಗೆ ದೂರವಾದ ಬೈಲುಗಳಲ್ಲೇ ಹೆಚ್ಚಾಗಿ ಕೆಲಸ ಮಾಡುತ್ತಿದ್ದುದರಿಂದ ಅನಾರೋಗ್ಯಕ್ಕೆ ಅವಕಾಶವು ಕಮ್ಮಿಯಾಗಿತ್ತು.
*****
ಅರ್ಚಕ ಬಿ. ರಂಗಸ್ವಾಮಿ ಯಾರು? ಈ ವ್ಯಕ್ತಿಯ ಬಗ್ಗೆ ಯಾಕೆ ಯಾರೂ ಬರೆದಿರಲಿಲ್ಲ. 1933ರಲ್ಲಿ ಪ್ರಕಟವಾದ ಈ ಕೃತಿಯ ಬಗ್ಗೆ ಯಾವ ವಿಮರ್ಶೆಯೂ ಯಾಕೆ ಬಂದಿಲ್ಲ. ಇದು ಬೇರೆ ಬೇರೆ ವಿಶ್ವವಿದ್ಯಾಲಯಗಳ ಜಾನಪದ ವಿದ್ಯಾರ್ಥಿಗಳಿಗೆ ಆಕರಗ್ರಂಥವಾಗಿದೆ ಎನ್ನುವ ಮಾತು ಮುನ್ನುಡಿಯಲ್ಲಿದೆ. ಆದಕೆ ಕೇವಲ ಆಕರಗ್ರಂಥವಾಗಿ ಉಳಿಯುವಂಥ ಕೃತಿಯೇ ಇದು. ನವರತ್ನರಾ್ ಅವರ ಕೆಲವು ನೆನಪುಗಳು, ಎಂ. ಆರ್. ಶ್ರೀಯವರ ರಂಗಣ್ಣನ ಕನಸಿನ ದಿನಗಳು, ಬಿಜಿಎಲ್ ಸ್ವಾಮಿ ಬರೆದ ಹಸುರುಹೊನ್ನು ಕೃತಿಗಳಂತೆ ಇದೂ ಕೂಡ ಯಾಕೆ ಪ್ರಸಿದ್ಧವಾಗಲಿಲ್ಲ.
ಉತ್ತರಗಳನ್ನು ಮರೆತುಬಿಡೋಣ. ಕೆ. ಆರ್. ಪೇಟೆ ತಾಲೂಕಿನ ಬಂಡಿಹೊಳೆ ಎಂಬ ಗ್ರಾಮದ ಕುರಿತು ಅರ್ಚಕ ಬಿ. ರಂಗಸ್ವಾಮಿ ಬರೆದಿರುವ ಈ 200 ಪುಟಗಳ ಪುಸ್ತಕವನ್ನು ತೀನಂಶ್ರೀ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಜೀಶಂಪ ಮುಂತಾದವರು ಮೆಚ್ಚಿಕೊಂಡಿದ್ದರು ಅನ್ನುವುದು ಅವರು ಬರೆದ ಪತ್ರದಿಂದ ಗೊತ್ತಾಗುತ್ತದೆ. ಗೊರೂರು 1933ರಲ್ಲೇ ಇದನ್ನು ಆಕಸ್ಮಿಕವಾಗಿ ಓದಿ ಸಂತೋಷಪಟ್ಟದ್ದನ್ನು ಲೇಖಕರಿಗೆ ಬರೆದು ತಿಳಿಸಿದ್ದೂ ಪುಸ್ತಕದ ಕೊನೆಯಲ್ಲಿದೆ. ಅವೆಲ್ಲ ಶಿಫಾರಸುಗಳನ್ನು ಮರೆತು ಕೂಡ ಸುಖವಾಗಿ ಓದಿಸಿಕೊಂಡು ಹೋಗುವ ವಿಚಿತ್ರ ಗುಣ ಈ ಪುಸ್ತಕಕ್ಕೇ ಅದು ಹೇಗೋ ದಕ್ಕಿಬಿಟ್ಟಿದೆ.
*******
ನಮ್ಮೂರಿನ ವಾರ್ಷಿಕ ಉತ್ಪನ್ನವು ನಾಲ್ಕು ತಿಂಗಳಿಗೆ ಸಾಕಾಗುವಂತಿತ್ತು. ಮೂರು ತಿಂಗಳು ಕೂಲಿಯಿಂದ ಜೀವನ. ಇನ್ನುಳಿದ ತಿಂಗಳಲ್ಲಿ ಇದ್ದ ಗದ್ದೆ ಹೊಲ ಮಾರಿ ಜೀವನ. ಬೆಳೆಯು ಕಮ್ಮಿಯಾದ ವರ್ಷ ನಮ್ಮೂರಿನ ಪಾಡು ದೇವರಿಗೇ ಪ್ರೀತಿ. ಹರಕು ಬಟ್ಟೆಯು ಸಾರ್ವತ್ರಿಕವಾಗಿತ್ತು. ತಲೆಗೆ ಎಣ್ಣೆ ಕಾಣದವರೂ ಎರಡು ಹೊತ್ತು ಊಟವಿಲ್ಲದೇ ಇರುವವರೂ ಅನೇಕರಿದ್ದರು. ಇನ್ನೇನೂ ಉಳಿದಿಲ್ಲವೆಂದು ತಿಳಿದ ಮೇಲೆ ಕಾಫಿತೋಟಕ್ಕೆ ಹೋಗಿ ಸೇರುವ ವಾಡಿಕೆ. ಒಟ್ಟಿನ ಮೇಲೆ ಬಡತನವು ಅಸಾಧ್ಯವಾಗಿ ಸಂತೋಷದಿಂದ ನಗುವುದೂ ಮಾಮೂಲು ಮೀರಲಾಗದೇ ವಿನಾನಿಜವಾದ ಸನ್ನಿವೇಶದಿಂದ ಇರಲಿಲ್ಲ. ಕೊಟ್ಟ ಕಾಳುಗಳನ್ನು ಕಟ್ಟಿಕೊಳ್ಳಲು ತಮಗೆ ಬಟ್ಟೆಯಿಲ್ಲದುದರಿಂದ ಕಷ್ಟಪಡುವವರನ್ನೂ ನಾಚಿಕೊಳ್ಳುವವರನ್ನೂ ನೋಡಿತು ಈ ಕಣ್ಣು, ಮರುಗಿತು ಈ ಮನವು.
******
ಇದು ಮತ್ತೊಂದು ಚಿತ್ರ. ಹಳ್ಳಿಯ ಜೀವನದ ಎರಡೂ ಮುಖಗಳನ್ನೂ ರಂಗಸ್ವಾಮಿ ಕಂಡಂತೆ ತುಂಡರಿಸಿ ನಮ್ಮ ಮುಂದಿಟ್ಟಿದ್ದಾರೆ. ಆದಷ್ಟೂ ತಮ್ಮ ಸಹಾನುಭೂತಿ, ಮರುಕ ಮತ್ತು ಭಾವುಕತೆಗಳನ್ನು ಬದಿಗಿಟ್ಟು ಬರೆದಿದ್ದಾರೆ. ಇಂಥ ಪ್ರಬಂಧಗಳನ್ನು ಬರೆಯುವ ಹೊತ್ತಿಗೆ ಒಂದೋ ಅಹಂಕಾರ ಇಲ್ಲವೇ ಆತ್ಮಾನುಕಂಪ ಲೇಖಕರನ್ನು ಬಾಧಿಸುವುದಿದೆ. ಇವೆರಡರ ನೆರಳೂ ಬೀಳದಂತೆ ಬರೆಯಹೊರಟಾಗ ಅದು ವರದಿಯಾಗುವ ಅಪಾಯವೂ ಇದೆ. ಆದರೆ ರಂಗಸ್ವಾಮಿ ತಮ್ಮೂರನ್ನೂ ಸಾಧ್ಯವಾದಷ್ಟೂ ನಿರುದ್ವಿಗ್ನವಾಗಿ ನಿರುಮ್ಮಳವಾಗಿ ನೋಡಿದ್ದಾರೆ. ತಾವೂ ಕೂಡ ಅದೇ ಹಳ್ಳಿಯ ಒಂದು ಭಾಗ ಎಂಬಂತೆ ಅನುಭವಿಸಿದ್ದನ್ನು ಬರೆದಿದ್ದಾರೆ.
******
ಹಿಂದಣವರು ತಿಳಿದಿದ್ದ ಆತ್ಮೀಯ ತೃಪ್ತಿ, ಆಧ್ಯಾತ್ಮಿಕ ಶಾಂತಿಯೇ ಮುಖ್ಯಲಕ್ಪಣವಾದ ನಾಗರಿಕತೆಯು ಈಗ ಇರಲಿಲ್ಲ. ಮೊದಲ ಕಾಲದವರು ಒಬ್ಬೊಬ್ಬರಿದ್ದರಲ್ಲ ಅವರು ಮಂಡಿಯಿಂದ ಮೇಲೆ ದಟ್ಟಿ ಸುತ್ತಿದ್ದರು. ಆದರದು ಸ್ವಚ್ಛವಾಗಿತ್ತು. ಅವರ ಮೈಕಟ್ಟು ತೇರಿನ ಹೂರ್ಜಿ ಹಗ್ಗದಂತೆ ಗಟ್ಟಿಯಾಗಿಯೂ ವಿಭಕ್ತವಾಗಿಯೂ ಪುಷ್ಟವಾಗಿಯೂ ಇತ್ತು. ಮುಖದಲ್ಲಿ ಆರ್ಯಜನಾಂಗ ಸೂಚಕವಾದ ಗಂಧವಿಭೂತಿ ನಾಮದ ಚಿನ್ಹೆಗಳು ಅವರ ಅಂತಸ್ತೃಪ್ತಿಯನ್ನು ತುಂಬಿಕೊಂಡ ಮುಖಕುಂಭಕ್ಕೊತ್ತಿದ ಮುದ್ರೆಯಂತೆ ಕಾಣುತ್ತಿದ್ದವು. ಒಟ್ಟಿನ ಮೇಲೆ ಸರಳ ಜೀವನ ದೇಹಪಟುತ್ವ, ಶುಚಿತ್ವ ಸಾಮಾನ್ಯವಾಗಿ ಇಹಪರಗಳ ಜ್ಞಾನ ಇವೆಲ್ಲ ಹಳೇ ನಾಗರಿಕತೆಯ ಹಳ್ಳಿಗನ ಲಕ್ಪಣಗಳಾಗಿದ್ದಿತು. ಇತ್ತೀಚೆಗೆ ಘನಗಾಬರಿಯ ನಾಗರಿಕತೆ ಬಂದಿದೆ.
ಅರ್ಧ ಶತಮಾನಕ್ಕೆ ಹಿಂದೆ ಕೂಲಿ ಮಠಗಳಿದ್ದವು. ಆಗ ಜೈಮಿನಿ ಭಾರತ, ಅಮರಕೋಶ, ರಾಮಾಯಣ, ಅಡ್ಡ, ಹಾಗ, ಮುಪ್ಪಾಗದ ಲೆಕ್ಕಗಳು ಇವೆಲ್ಲಾ ಬಳಕೆಯಲ್ಲಿದ್ದವು. ಆಗಿನ ಕಾಲದ ಹಳಬರು ಅನೇಕವಾಗಿ ಬಾಯಲ್ಲಿ ಹೇಳುತ್ತಿದ್ದರು. ಇತ್ತೀಚೆಗೆ ನೂತನ ರೀತಿಯ ಪಾಠಶಾಲೆ ಬಂದಿದೆ. ಸಮುದ್ರದ ಏರಿಳಿತದಂತೆ ಒಂದು ಸಲ ಅತ್ಯುನ್ನತ ಸ್ಥಿತಿಗೆ ಬರುತ್ತದೆ.
ಬ್ರಾಹ್ಮಣರ ಮನೆ ನಾಲ್ಕೈದು ಮಾತ್ರವೆಂದು ಹೇಳಿದೆಯಷ್ಟೇ. ಇವರು ಸ್ನಾನ ಜಪ ದೇವರಪೂಜೆಯಲ್ಲೇ ವಿಶೇಷ ಆಸಕ್ತರಾಗಿದ್ದರು. ಶ್ರುತಿಸ್ಮೃತಿಗಳ ವಿಚಾರದಲ್ಲಿ ಸಂದೇಹ ಬಂದರೆ ಮಸೂರಿಗೆ ಹೋಗಿ ಪಂಡಿತರಿಂದ ಸರಿಯಾದ ವಿಷಯ ತಿಳಿದುಕೊಂಡು ಬರುತ್ತಿದ್ದರು. ಅಕಸ್ಮಾತ್ತು ಯಾರಾದರೂ ತಪ್ಪು ಮಾಡಿದರೆ ಇಬ್ಬರು ಬ್ರಾಹ್ಮಣರು ವಿಧಿಸಿದ ತೀರ್ಮಾನವನ್ನು ಒಪ್ಪಿಕೊಂಡು ತಪ್ಪಿನಿಂದ ಬಿಡುಗಡೆಯಾಗಬೇಕಿತ್ತು. ಮದುವೆ ಸಮಯದಲ್ಲಿ ಮತತ್ರಯ, ಸ್ಥಳ, ಪರಸ್ಥಳ, ಕಾವೇರಿ ಸಂಧ್ಯಾಮಂಟಪ ಮುಂತಾದವುಗಳಿಗೆ ತಾಂಬೂಲವೆತ್ತುತ್ತಿದ್ದರು. ಕಾವೇರಿ ಸಂಧ್ಯಾಮಂಟಪದ ತಾಂಬೂಲವನ್ನು ಯಾಕೆ ಎತ್ತಬೇಕೆಂಬ ಚರ್ಚೆ ಪ್ರತಿ ಮದುವೆಯಲ್ಲೂ ಇತ್ತು. ಒಂದು ಸಲ ಪುರೋಹಿತರಿಗೆ ತಾಂಬೂಲ ಕೊಡುವುದನ್ನು ಮರೆತರು. ` ಓಹೋ ಬ್ರಹಸ್ಪತಿ ಪೀಠಕ್ಕೆ ಅವಮಾನವಾಗಿ ಹೋಯ್ತು' ಎಂದು ಪುರೋಹಿತರು ಆಗಲೇ ಮೂಟೆ ಹೆಗಲಿಗೆ ಹಾಕಿದ್ದರು. ಅವರನ್ನು ಸಮಾಧಾನ ಮಾಡುವ ಹೊತ್ತಿಗೆ ಸಾಕಾಗಿ ಹೋಯ್ತು.
******
ನಾಸ್ಟಾಲ್ಜಿಯ ಯಾರೆಷ್ಟೇ ಕೆಟ್ಟದು ಎಂದರೂ ಅದರಿಂದ ತಪ್ಪಿಸಿಕೊಳ್ಳುವುದು ಕಷ್ಟ. ರಂಗಸ್ವಾಮಿ ಪುಸ್ತಕವನ್ನು ಓದುತ್ತಾ ಇದ್ದರೆ ಕಾಲದ ಕಾಲುವೆಯಲ್ಲಿ ಹಿಂದಕ್ಕೆ ಪ್ರಯಾಣ ಮಾಡಿದಂತೆ ಭಾಸವಾಗುತ್ತದೆ. ಬೆಂಗಳೂರಿನ ಜನಜಂಗುಳಿ, ಟೀವಿ, ಸಿನಿಮಾ, ಮೆಜೆಸ್ಟಿಕ್ಕಿನ ಗದ್ದಲ, ಕ್ರಿಕೆ್ ಮ್ಯಾಚು ಎಲ್ಲವನ್ನೂ ಮರೆತುಬಿಡಬೇಕು ಅನ್ನಿಸುತ್ತದೆ. ಊರ ತುಂಬ ದನಕರುಗಳು, ಗಾಳಿ ಮಳೆ ಬಿಸಿಲಿಗೆ ಜಪ್ಪಯ್ಯ ಎನ್ನದೆ ನಿಂತ ಮಾವಿನ ತೋಪು, ಆಷಾಢದ ಗಾಳಿಗೆ ಮನೆಯೊಳಗೆ ನುಗ್ಗಿಬರುವ ಕಸಕಡ್ಡಿ ಮರಳು ಮಣ್ಣು, ಬೇಸಗೆಯಲ್ಲೂ ತಣ್ಣಗಿರುವ ಹೊಳೆ, ಚಪ್ಪಲಿ ಹಾಕದ ಕಾಲಿಗೆ ಹಿತವಾಗಿ ಒದಗುವ ಹಳ್ಳಿಯ ನೆಲ, ಮುದ್ದೆ, ಅನ್ನ, ಸಾರು, ಚಟ್ನಿಯ ಊಟ. ಜಗಲಿಯಲ್ಲಿ ಗಾಳಿಗೆ ಕಾಯುತ್ತಾ ಮಲಗಿ ಸುಖಿಸುವ ಅಪರಾಹ್ಣ, ಶಾಲೆಯಲ್ಲಿ ಕನ್ನಡದಲ್ಲಿ ಪಾಠ ಓದುತ್ತಾ ಕನ್ನಡ ಹಾಡು ಹೇಳುವ ಮಕ್ಕಳು, ಹಬ್ಬ ಬಂದಾಗ ಹೊಸ ಬಟ್ಟೆ ತೊಟ್ಟು ಕುಣಿಯುವ ಮಕ್ಕಳು, ಹೊಳೆದಂಡೆಯಲ್ಲಿ ಗುಟ್ಟಾಗಿ ಜಿನುಗುವ ಪ್ರೀತಿ, ಧೋ ಎಂದು ಸುರಿಯವ ಮಳೆಗೆ ಸೋರುವ ಮನೆಯೊಳಗೆ ಆಡುವ ಆಟ...
ನಾಗರಿಕತೆ ಎಲ್ಲವನ್ನೂ ಮರೆಸುತ್ತದೆ. ಹಳ್ಳಿಗಳಲ್ಲೇ ಉಳಿದುಬಿಟ್ಟವರಿಗೆ ಇವು ಲಕ್ಪುರಿಯಲ್ಲ. ಆದರೆ ನಗರಕ್ಕೆ ಬಂದು ಬೀರುಬಾರುಗಳ, ಕ್ರೆಡಿಟ್ ಕಾರ್ಡುಗಳ, ಏಸಿ ರೂಮುಗಳ, ಚಿಕ್ ಬಿರಿಯಾನಿಗಳ ಲೋಕಕ್ಕೆ ಸಂದವರಿಗೆ ಹಳ್ಳಿಯ ಕಷ್ಟಕಾರ್ಪಣ್ಯದ ದಿನಗಳ ನೆನಪೇ ಒಂದು ಲಕ್ಪುರಿ. ಆದರೆ ಅಂಥ ವ್ಯಕ್ತಿ ಕೊಂಚ ಸೃಜನಶೀಲನೂ ಮಾನವೀಯನೂ ಆಗಿದ್ದರೆ ನೆನಪುಗಳಲ್ಲೇ ಆತ ಮರುಹುಟ್ಟು ಪಡೆಯಬಲ್ಲ ಕೂಡ.
ಹಾಗೆ ಮರುಹುಟ್ಟಿಗೆ ಕಾರಣವಾಗುವ ಶಕ್ತಿ ಅರ್ಚಕ ರಂಗಸ್ವಾಮಿಯವರ ಕೃತಿಗಿದೆ. ಎಲ್ಲಾದರೂ ಸಿಕ್ಕರೆ ಬಿಡದೆ ಓದಿ.
*****
ಬಂಡೀಹಳ್ಳಿಯ ಮಾತುಗಳು ಹೇಗಿರುತ್ತವೆ ಅನ್ನುವುದಕ್ಕೊಂದು ಉದಾಹರಣೆ ತಗೊಳ್ಳಿ;
ವಾದಿ- ಇದೋ ನೀವು ಹತ್ತೂ ಜನ ಸೇರಿದ್ದೀರಿ. ನಾನು ಬಡವೆ, ತಿರಕೊಂಡು ತಿಂಬೋಳು. ನನ್ನ ಕೋಳೀನ ನೆನ್ನೆ ರಾತ್ರಿ ಇವರಿಬ್ಬರೂ ಸೇರಿ ಮುರ್ದವ್ರೆ. ನ್ಯಾಯಾನ ನೀವೇ ಪರಿಹರಿಸಿ.
ಪ್ರತಿವಾದಿಗಳು- ನಾನಲ್ಲ, ದೇವ್ರಾಣೆ, ನನ್ನಾಣೆ, ನಿಮ್ಮಾಣೆ ನಾವಲ್ಲ.
ಮುಖಂಡರು ಕಾಗದವನ್ನು ತರಿಸಿ `ನೋಡೀ ಕೆಟ್ಹೋಗ್ತೀರಿ, ಬ್ಯಾಡೀ, ಬ್ಯಾಡೀ, ಪೊಲೀಸ್ರಿಗೆ ಅರ್ಜಿ ಕೊಡ್ತೀವಿ, ನಿಜಾ ಹೇಳ್ರೀ'
ಪ್ರತಿವಾದಿಗಳು (ಮೆತ್ತಗೆ)- ನಾವು ಬತ್ತಾ ಹರ್ಡಿದ್ದೋ, ಮೇಯೋಕೆ ಕೋಳಿಗಳು ಬಂದೊ, ದೊಣ್ಣೇಲಿ ಹಿಂಗಂದೊ ನೆಗೆದು ಬಿದ್ಹೋದೋ. ಹೊತ್ತಾರೀಕೆ ಕೊಡೋನೆ ಅಂತ ರಾತ್ರಿ ಮನೇಲಿ ಮಡಗಿದ್ದೊ.
ಮುಖಂಡರು ನಾನಲ್ಲ ನಾನಲ್ಲ ಅಂತ ಸುಳ್ಳು ಹೇಳಿದ್ದಕ್ಕಾಗಿ ನಾಲ್ಕಾಣೆ ಜುಲ್ಮಾನೆ ವಿಧಿಸಿ ನಾಲ್ಕಾಣೆಯನ್ನೂ ಕೋಳಿಗಳನ್ನೂ ವಾದಿಗೆ ಕೊಡಿಸಿ ಉಳಿದ ನಾಲ್ಕಾಣೆಯನ್ನು ಊರೊಟ್ಟಿನ ಹಣಕ್ಕೆ ಸೇರಿಸಿದರು.
ಸಭಿಕರಲ್ಲೊಬ್ಬ- ಹೋಗ್ರಯ್ಯ. ಎಂತಾ ನ್ಯಾಯ ಹೇಳಿದ್ರಿ. ಅವರಿಬ್ಬರ ಮೇಲೂ ಕೋಳಿ ಹೊರ್ಸಿ ಊರೆಲ್ಲ ಮೆರವಣಿಗೆ ಮಾಡಿಸೋದು ಬಿಟ್ಟು ಜುಲ್ಮಾನೆಯಂತೆ ಜುಲ್ಮಾನೆ.
ಮುಖಂಡರು- ಓಹೋ.. ಇಲ್ಲಿ ಸೇರಿರೋ ಜನವೇ ಊರೆಲ್ಲಾ ಆಯ್ತು. ಇನ್ನು ತಿರುಗಿ ಬೇರೆ ಮಾನಾ ಹೋಗಬೇಕೋ.
******
ಇದನ್ನು ಓದಿದ ನಂತರ ವಿವರಿಸುವುದಕ್ಕೆ ಹೋಗಬಾರದು. ಅದು ಅಧಿಕಪ್ರಸಂಗವಾಗುತ್ತದೆ.

Tuesday, April 10, 2007
ಕವಿತೆ ಕಾಮಸೂತ್ರ

ಕವಿತೆ ಹೇಗಿರಬೇಕು?
ಹಾಗೆ ಕೇಳುತ್ತಾ ಕೇಳುತ್ತಾ ರಾಮಚಂದ್ರ ಶರ್ಮರಂಥ ಜಯನಗರದ ಹಿರಿಯ ಕವಿಗಳು ಒಂದಷ್ಟು ಉದಾಹರಣೆಗಳನ್ನು ಕ್ರಿಸ್ತಪೂರ್ವದಿಂದಲೇ ಕೊಡುತ್ತಾ ಬಂದಿದ್ದಾರೆ. ಅವರೇ ಹೇಳಿದ ಮಾನದಂಡದಿಂದ ಅಳೆದರೆ ಅವರ ಕವಿತೆಗಳೇ ದಡಸೇರಲು ನಿರಾಕರಿಸುತ್ತವೆ. ಕವಿತೆ ಹೇಗಿರಬೇಕು ಅಂತ ಹೇಳುವುದು ಸುಲಭ, ಬರೆಯುವುದು ಕಷ್ಟ.
ಆದರೆ ಕವಿತೆ ಹೀಗಿರಬೇಕು ಅನ್ನಿಸುವಂಥ ಕವಿತೆಗಳು ಒಮ್ಮೊಮ್ಮೆ ಕಣ್ಣಿಗೆ ಬೀಳುತ್ತವೆ. ಯಾವತ್ತೋ ಓದಿದ ಕವಿತೆಗಳೂ ಮತ್ತೆ ಮತ್ತೆ ಕಾಡುತ್ತವೆ. ಒಂದು ನಿರ್ದಿಷ್ಟ ಘಟನೆಯ ನೆನಪಾದಾಗ ಆ ಕವಿತೆಯೂ ನೆನಪಾಗಿ, ಆ ಘಟನೆಯನ್ನು ವರ್ಣಿಸಲು ಬೇರೆ ಪದಗಳೇ ಸಿಗದಂತೆ ಮಾಡುತ್ತವೆ.
ಅರಿವೆ ಇರಲಿಲ್ಲ; ಪರಿವೆ ಇರಲಿಲ್ಲ ಅನ್ನುವುದು ಅಂಥ ಒಂದು ಸಾಲು. ಇಲ್ಲಿ ಅರಿವೆ ಅನ್ನುವ ಪದವೇ ಅರಿವು ಮತ್ತು ಅರಿವೆ ಎರಡೂ ಆಗಿಬಿಡಬಹುದಾಗಿತ್ತು. ಹಾಗಾದಾಗ ಪರಿವೆ ಇರಲಿಲ್ಲ ಅನ್ನುವ ಪದವನ್ನು ಬಳಸುವ ಅಗತ್ಯವೇ ಇರಲಿಲ್ಲ. ಹಾಗಿದ್ದರೂ ಗಂಗಾಧರ ಚಿತ್ತಾಲರು ಅರಿವೆ, ಪರಿವೆ ಎರಡನ್ನೂ ಬಳಸುತ್ತಾರೆ. ಎರಡರ ಅರ್ಥವೂ ಒಂದೆ ಅನ್ನುವುದು ಗೊತ್ತಿದ್ದೂ ಅವರು ಅರಿವೆ ಮತ್ತು ಪರಿವೆಯನ್ನು ಬಳಸಿದ್ದೇಕೆ ಎಂದು ಅಚ್ಚರಿಗೊಳ್ಳುತ್ತಿರುವಾಗಲೇ ಮುಂದಿನ ಸಾಲುಗಳು ಬೆಚ್ಚಿಬೀಳಿಸುತ್ತವೆ; ಅರೆನಾಚಿ ಮರೆಮಾಚಿ ಸರಿವುದಿರಲಿಲ್ಲ.
ಹಾಗಿದ್ದರೆ ಅದೇನು ಅಂಥ ಆಟ? ಸಹಜ ಕುತೂಹಲದಿಂದಲೇ ಮನಸ್ಸು ಕೇಳುತ್ತದೆ. ಕವನದ ಶೀರ್ಷಿಕೆ ಓದಿ ಮುಂದುವರಿದರೆ ಆ ಕುತೂಹಲವೂ ಇರಕೂಡದು. ಆದರೂ ಮನಸ್ಸು ಮುಂದಿನ ಮಾತಿಕಾಗಿ ತಡಕಾಡುತ್ತದೆ;
ಜೀವ ಝಲ್ಲೆನೆ ಪೂರ್ಣ ನಗ್ನರಾಗಿ
ಒಬ್ಬರಲ್ಲೊಬ್ಬರು ನಿಮಗ್ನರಾಗಿ
ಕೊಂಬೆಕೊಂಬೆಗೆ ತೂಗಿ ಬೀಗಿ ಬಯಕೆಯ ಹಣ್ಣು
ಹೊಡೆಯೆ ಕಣ್ಣು
ತಡೆಯಲಾರದೆ ಬಂದೆವೆದುರುಬದುರು
ಮೈಯೆಲ್ಲ ನಡುಕ, ತುಟಿಯೆಲ್ಲ ಅದುರು.
ಅಂದು ಬೆತ್ತಲೆ ರಾತ್ರಿ.
ಮತ್ತೆ ಚಿತ್ತಾಲರು ಆರಂಭದ ಸಾಲಿಗೆ ಬಂದುಬಿಡುತ್ತಾರೆ. ಅಂದು ಬೆತ್ತಲೆ ರಾತ್ರಿ ಅನ್ನುವ ಎರಡು ಪದವೇ ಉಳಿದ ಕ್ರಿಯೆಗಳನ್ನೆಲ್ಲ ಹೇಳುತ್ತದೆ. ಕವಿಗೆ ತಾನು ಬಳಸುವ ಪದಗಳ ಬಗ್ಗೆ ಅನುಮಾನ ಇದ್ದಾಗ, ಆತ ಮುಚ್ಚಿಟ್ಟು ಹೇಳುತ್ತಾನೆ; ಕೆ. ಎಸ್. ನರಸಿಂಹಸ್ವಾಮಿಯವರಂತೆ. ತನ್ನ ಪದಗಳ ಲೋಲುಪತೆಯ ಬಗ್ಗೆ ಮೋಹವಿದ್ದಾಗ ಬಿಚ್ಚಿ ಹೇಳುತ್ತಾನೆ; ಆಲನಹಳ್ಳಿಯಂತೆ. ಆದರೆ ತಾನು ಬಳಸುವ ಪದಗಳ ಮೇಲೆ ನಂಬಿಕೆಯಿದ್ದಾಗ ಚಿತ್ತಾಲರಂತೆ ಹೇಳುತ್ತಾನೆ. ಯಾವುದೇ ಕ್ಪಣದಲ್ಲಿ ಬೇಕಾದರೂ ಅವೇ ಪದಗಳು ತಮ್ಮ ಅರ್ಥದ ಲಕ್ಪ್ಮಣರೇಖೆಯನ್ನು ದಾಟಿಬಿಡಬಹುದಾಗಿತ್ತು. ಬೇಕಿದ್ದರೆ;
ತುಟಿಗೆ ತುಟಿ ಮುಟ್ಟಿಸಿತು ಎಂಥ ಮಾತು
ಕಂಠನಾಳದಲೆಲ್ಲ ನಾಗಸಂಪಗೆಯಂತೆ ಉಸಿರು ಹೂತು
ಬಾಯ್ತುಂಬ ಜೇನು, ಕೈತುಂಬ ಮೊಲೆಹೂ
ಮಗ್ಗಲು ತಿರುವಿದಲ್ಲೆಲ್ಲ ಸುಖದ ಉಲುಹು.
ಇಲ್ಲಿ ಮನಸ್ಸು ಜಾಣತನದಿಂದ ಮೊಲೆಹೂ ಅನ್ನುವುದನ್ನು ಸ್ವಲ್ಪ ಒತ್ತಿ, ಮೊಲ್ಲೆ ಹೂ ಎಂದುಕೊಂಡು ಮುಂದೆ ಸಾಗುತ್ತದೆ. ಹಾಗೆ ಒತ್ತುವ ಕ್ರಿಯೆ ಕೂಡ ಉದ್ದೇಶಪೂರ್ವಕವಾದದ್ದೇ. ಯಾಕೆಂದರೆ ಕವಿತೆಯ ಹೆಸರೇ ಕವಿತೆಯ ಲಯವನ್ನೂ ಏರಿಳಿತವನ್ನೂ ಏದುಸಿರನ್ನೂ ನಿರ್ಧರಿಸಿಬಿಟ್ಟಿದೆ; ಕಾಮಸೂತ್ರ.
****
ಗಂಗಾಧರ ಚಿತ್ತಾಲರು ಎಂಥ ಕವಿ.
ಅವರ ಪ್ರತಿಯೊಂದು ಕವಿತೆ ಓದಿದಾಗಲೂ ಜೀವ ಮಿಡುಕುತ್ತದೆ. ಅಡಿಗರು ಕೊಂಚ ಅಬ್ಬರಿಸಿ ಹೇಳಿದ್ದನ್ನು ಕೂಡ ಚಿತ್ತಾಲರು ತಣ್ಣಗೆ ಹೇಳಿ ಸುಮ್ಮನಾಗುತ್ತಾರೆ.
ಕೆಳಗಿಲ್ಲಿ
ಮಣ್ಣಲ್ಲಿ
ಬರುವ ಹೋಗುವ ಬರುವ
ಜೀವಜಾತದ ಗೌಜು.
ಮಣ್ಣಲ್ಲಿ
ಬರುವ ಹೋಗುವ ಬರುವ
ಜೀವಜಾತದ ಗೌಜು.
ಬರುವ ಹೋಗುವ ಬರುವ ಅಂತ ಬಳಸಿದ್ದಾರಲ್ಲ ಚಿತ್ತಾಲರು. ಬರುವ ಹೋಗುವ ಸರಿ, ಮತ್ತೆ ಬರುವ ಎಂದೇಕೆ ಅಂದರು. ಮರಳಿ ಬರುವುದರಲ್ಲಿ ಅವರಿಗೆ ನಂಬಿಕೆ ಇತ್ತಾ? ಇಂಥ ಪ್ರಶ್ನೆಗಳನ್ನೆಲ್ಲ ಚಿತ್ತಾಲರ ಕಾವ್ಯ ಎತ್ತುತ್ತದೆ. ಅದನ್ನೆಲ್ಲ ಒತ್ತಟ್ಟಿಗಿಟ್ಟು ಮೂರು ಭಾಗಗಳಲ್ಲಿ ಸಾಗುವ ಕಾಮಸೂತ್ರವನ್ನೇ ನೋಡೋಣ;
ಅದು ಹುಡುಗನ ಕಾಮೋನ್ಮುಖ ಸ್ಥಿತಿಯನ್ನು ವರ್ಣಿಸುತ್ತದೆ. ಕಾಮಕ್ಕೆ ಬೆರಗಾದ ಹುಡುಗ ಅಚ್ಚರಿಯನ್ನು ಚಿತ್ತಾಲರು ಒಂದೇ ಪದದಲ್ಲಿ ವರ್ಣಿಸುತ್ತಾರೆ; ಯೋನಿಚಕಿತಾ!
ಆಕೆಗೋ ನೆಲ ಕಾಣ, ನಿನಗೆ ದೇಶವೆ ಕಾಣ
ಲೋಹಚುಂಬಿಸಿದೆ ಗುರಿ, ಹೆದೆಗೇರುತಿದೆ ಪ್ರಾಣ
ಅಲ್ಲಿಂದ ಕವಿತೆಯ ಎರಡನೆಯ ಭಾಗ ಶುರುವಾಗುತ್ತದೆ. ಅದು ಅವಳ ಜಗತ್ತು. ಸುಖಸುಖಸುಖದೀ ಮಿಂಚು. ಸಂಚರಿಸಲಿ ಒಡಲಿನ ಒಳ ಒಳ ಅಂಚು ಅಂತ ಕಾಯುತ್ತಾಳೆ ಹುಡುಗಿ. ಇಬ್ಬರೂ ಕಾದು ನಿಂತ ಕ್ಪಣವೇ ಹಾಗಾಗುತ್ತದೆ;
ಇದು ಬಯಕೆ ಇದು ಹಸಿವೆ ಇದುವೆ ದಾಹಾ
ಒಂದೆ ಉಸಿರಿನಲಿತ್ತು ಅಯ್ಯೋ ಅಹಾ
ಹೊಲದುದ್ದ ನಡೆದಿತ್ತು ನೇಗಿನ ಮೊನೆ
ಬಸಿದು ಹೊರಚೆಲ್ಲಿತ್ತು ಜೀವದ ಸೊನೆ
ಅದಕ್ಕೂ ಮುಂಚೆ ನಡೆದದ್ದೇ ಬೇರೆ. ಬೆದೆಯ ಕಾವಿಗೆ ಸಿಕ್ಕು ಮೆತ್ತೆ ಮೆತ್ತೆ, ಬಿಗಿದಪ್ಪಿ ಮುತ್ತಿಟ್ಟು ಮತ್ತೆ ಮತ್ತೆ, ತುಟಿ ತೆರೆದು ಕಟಿ ತೆರೆದು ಎಲ್ಲ ತೆರೆದು, ಒಡಲ ಹೂವನ್ನರಸಿ ಹೊಕ್ಕು ಬೆರೆದು- ಎಲ್ಲವೂ ಮುಗಿದಿದೆ.
ತುಂಬ ಅಶ್ಲೀಲ ಅನ್ನಿಸಬಹುದಾದ ರತಿಯನ್ನೂ ಚಿತ್ತಾಲರು ಮಜುಗರಗೊಳ್ಳದಂತೆ ಬರೆಯುತ್ತಾರೆ. ಇನ್ನೆಲ್ಲಿಗೋ ಸಾಗುತ್ತಾರಲ್ಲ ಅನ್ನಿಸುವ ಹೊತ್ತಿಗೆ ಮತ್ತೆ ದಾರಿಗೆ ಬರುತ್ತಾರೆ;
ಬೇಕಾದ್ದ ತಿನು ಎಂದೆ
ನನ್ನ ತೋಳುಗಳಲ್ಲಿ ಇಡಿಯ ನೀನು
ಬೇಕಾದ್ದ ತಗೋ ಎಂದೆ
ನಿನ್ನ ತೋಳುಗಳಲ್ಲಿ ಇಡಿಯ ನಾನು
ಅಷ್ಟಕ್ಕೂ ಅಲ್ಲಿ ತಿನ್ನುವುದಕ್ಕೋ ತಗೊಳ್ಳುವುದಕ್ಕೋ ಇದ್ದದ್ದಾದರೂ ಏನು? ಅರಿವೆ ಇರಲಿಲ್ಲ, ಪರಿವೆ ಇರಲಿಲ್ಲ ಅಂತ ಕವಿ ಮೊದಲೇ ಹೇಳಿದ್ದಾನಲ್ಲ?
ಅದು ಜ್ಞಾನೋದಯದ ಘಳಿಗೆ. ಚಿತ್ತಾಲರು ಅದನ್ನು ಅದಮ್ಯವಾಗಿ ಅನುಭವಿಸಿದವರ ತೀವ್ರತೆಯಲ್ಲಿ ಬರೆಯುತ್ತಾರೆ;
ಕೊಟ್ಟುದೆನಿತು ನಾವು ಕೊಂಡುದೆನಿತು
ಉಣ್ಣಿಸಿದುದೆನಿತು ಉಂಡುದೆನಿತು
ಕಣ್ಮುಚ್ಚಿಯೂ ಕೂಡ ಕಂಡುದೆನಿತು
ಮಾತಿಲ್ಲದೆಯು ಕೂಡ ಅಂದುದೆನಿತು
ಅಂದು ಬೆತ್ತಲೆ ರಾತ್ರಿ.
****
ಕಾಮಸೂತ್ರ ಕೊನೆಯಾಗುವುದು `ನಾವಿಂದು ಮನುಕುಲದ ತಂದೆತಾಯಿ' ಎಂಬ ದೈವಿಕ ಸಾಲಿನಿಂದ. ಈ ಸಾಲಿಗೆ ಬರುತ್ತಲೇ ಕವಿಯೇ ಹೇಳಿದಂತೆ ಆ ಒಂದು ಗಳಿಗೆಯಲ್ಲಿ ಏನು ಗೈದರು ಮಾಫಿ; ಕಾಡಿದರು ಬೇಡಿದರು ಹಿಡಿಹಿಡಿದು ಆಡಿದರು ಮಾಫಿ. ಯಾವ ಗುಟ್ಟನು ಕೆದಕಿದರು ಮಾಫಿ.
ಈ ಕವಿತೆ ಮತ್ತೆ ಮತ್ತೆ ಮನಸ್ಸಲ್ಲಿ ಉಳಿಯುವುದು ಸ್ವರವಾಗಿ. ನಾದವಾಗಿ. ಪದಗಳಲ್ಲಿ ಉಳಕೊಳ್ಳುವ ಕವಿತೆಗೆ ಆಯಸ್ಸು ಕಡಿಮೆ. ರಾಗದಲ್ಲಿ ಉಳಕೊಳ್ಳುವ ಕವಿತೆಗೆ ತಲುಪುವ ಶಕ್ತಿ ಕ್ಪೀಣ. ಆದರೆ ಲಯದಲ್ಲಿ ಉಳಿದುಕೊಳ್ಳುವ ಕವಿತೆಯಷ್ಟೇ ಒಳಗಿಳಿಯುತ್ತದೆ. ನಾಕುತಂತಿಯ ಹಾಗೆ. ನಾಕೇ ನಾಕು ತಂತಿಯ ಹಾಗೆ.
ಚಿತ್ತಾಲರನ್ನು ಪೂರ್ತಿಯಾಗಿ ಓದೋಣ; ಅವರ ನಾದ ನಮ್ಮಲ್ಲೂ ತುಂಬಿಕೊಳ್ಳಲಿ.
Monday, April 9, 2007
ಕಾಕನಕೋಟೆಯ ಕಾಡೊಳಗೆ ಭಾವಸಂಚಾರ

ಬೆಟ್ಟದಾ ತುದಿಯಲ್ಲಿ ಕಾಡುಗಳ ಎದೆಯಲ್ಲಿ
ಕಪಿನೀಯ ನದಿಯೆಲ್ಲಿ ಉಗುತಿರುವುದಲ್ಲಿ;
ಎಲ್ಲಿ ನೋಡ ನೋಡ ಕರ್ರ ಕಾರುವ ಮೋಡ
ಪಡೆಗೂಡುವುದು ಗಾಡ ಒಟ್ಟೊಟ್ಟಿ ಅಲ್ಲಿ;
ಎಲ್ಲಿ ಕೊಂಬಿನ ಸಲಗ ಹೆಣ್ಣಾನೆ ಮರಿಬಳಗ
ಬೆಳುತಿಂಗಳಿನ ತಳಗ ನಡೆಯುವುದು ಅಲ್ಲಿ;
ಯಾವಲ್ಲಿ ಸಾರಂಗ ಕೆಚ್ಚುಕೋಡಿನ ಸಿಂಗ
ನೋಡುತ ನಿಂತ್ಹಂಗ ನಿಲ್ಲುವುದು ಅಲ್ಲಿ;
ಎಲ್ಲಿ ಎರಳೆಯ ಹಿಂಡು ಹುಲಿಯ ಕಣ್ಣನು ಕಂಡು
ಹೆದರಿ ಹಾರುವ ದಂಡು ಚೆಲ್ಲುವುದು ಅಲ್ಲಿ;
ಗಿಳಿಗೊರವ ಕೋಗೀಲೆ ಹಾರು ಹಕ್ಕಿಯ ಮಾಲೆ
ಹಾಡುತಿದೆ ದನಿಮೇಲೆ ದನಿಯೇರಿ ಎಲ್ಲಿ;
ಎಲ್ಲಿ ಏಕಾಏಕಿ ಗಂಡು ನಮಿಲಿಯ ಕೇಕಿ
ಬೋರಗಲ್ಲಿಗೆ ತಾಕಿ ಗೆಲ್ಲುವುದು ಅಲ್ಲಿ;
ಹೆಜ್ಜೇನು ಯಾವಲ್ಲಿ ಇದ್ದಲ್ಲೇ ಹೂವಲ್ಲಿ
ಕದ್ದೊಂದು ಮೇವಲ್ಲಿ ತಣಿದಿರುವುದಲ್ಲಿ;
ದಿನ ದಿನಾ ಸಂಪಂಗಿ ಇರುವಂತಿ ಮಲ್ಲಂಗಿ
ಮೊಲ್ಲೆ ಅದರ ತಂಗಿ ಅರಳುವುದು ಎಲ್ಲಿ;
ಯಾವಲ್ಲಿ ಜಾಲಾರಿ ಎದೆಯ ಕಂಪನು ಕಾರಿ
ತನ್ನ ತಾಣವ ಸಾರಿ ಬಾ ಎಂಬುದಲ್ಲಿ;
ಯಾವಲ್ಲಿ ಹೆಬ್ಬಲಸು ಕೈಗೆ ಕಾಲಿಗೆ ಗೊಲಸು
ಅಂತ ಹಣ್ಣನು ಹುಲುಸು ಹೊತ್ತಿರುವುದಲ್ಲಿ
ಎಲ್ಲಿ ಕರಿ ಸಿರಿಗಂಧ ಮರ ಬೆಳೆದು ತಾ ಮುಂದ
ಮಾದೇಶ್ವರಗೆ ಚೆಂದ ಮೆಚ್ಚುವುದು ಅಲ್ಲಿ..
ಕಪಿನೀಯ ನದಿಯೆಲ್ಲಿ ಉಗುತಿರುವುದಲ್ಲಿ;
ಎಲ್ಲಿ ನೋಡ ನೋಡ ಕರ್ರ ಕಾರುವ ಮೋಡ
ಪಡೆಗೂಡುವುದು ಗಾಡ ಒಟ್ಟೊಟ್ಟಿ ಅಲ್ಲಿ;
ಎಲ್ಲಿ ಕೊಂಬಿನ ಸಲಗ ಹೆಣ್ಣಾನೆ ಮರಿಬಳಗ
ಬೆಳುತಿಂಗಳಿನ ತಳಗ ನಡೆಯುವುದು ಅಲ್ಲಿ;
ಯಾವಲ್ಲಿ ಸಾರಂಗ ಕೆಚ್ಚುಕೋಡಿನ ಸಿಂಗ
ನೋಡುತ ನಿಂತ್ಹಂಗ ನಿಲ್ಲುವುದು ಅಲ್ಲಿ;
ಎಲ್ಲಿ ಎರಳೆಯ ಹಿಂಡು ಹುಲಿಯ ಕಣ್ಣನು ಕಂಡು
ಹೆದರಿ ಹಾರುವ ದಂಡು ಚೆಲ್ಲುವುದು ಅಲ್ಲಿ;
ಗಿಳಿಗೊರವ ಕೋಗೀಲೆ ಹಾರು ಹಕ್ಕಿಯ ಮಾಲೆ
ಹಾಡುತಿದೆ ದನಿಮೇಲೆ ದನಿಯೇರಿ ಎಲ್ಲಿ;
ಎಲ್ಲಿ ಏಕಾಏಕಿ ಗಂಡು ನಮಿಲಿಯ ಕೇಕಿ
ಬೋರಗಲ್ಲಿಗೆ ತಾಕಿ ಗೆಲ್ಲುವುದು ಅಲ್ಲಿ;
ಹೆಜ್ಜೇನು ಯಾವಲ್ಲಿ ಇದ್ದಲ್ಲೇ ಹೂವಲ್ಲಿ
ಕದ್ದೊಂದು ಮೇವಲ್ಲಿ ತಣಿದಿರುವುದಲ್ಲಿ;
ದಿನ ದಿನಾ ಸಂಪಂಗಿ ಇರುವಂತಿ ಮಲ್ಲಂಗಿ
ಮೊಲ್ಲೆ ಅದರ ತಂಗಿ ಅರಳುವುದು ಎಲ್ಲಿ;
ಯಾವಲ್ಲಿ ಜಾಲಾರಿ ಎದೆಯ ಕಂಪನು ಕಾರಿ
ತನ್ನ ತಾಣವ ಸಾರಿ ಬಾ ಎಂಬುದಲ್ಲಿ;
ಯಾವಲ್ಲಿ ಹೆಬ್ಬಲಸು ಕೈಗೆ ಕಾಲಿಗೆ ಗೊಲಸು
ಅಂತ ಹಣ್ಣನು ಹುಲುಸು ಹೊತ್ತಿರುವುದಲ್ಲಿ
ಎಲ್ಲಿ ಕರಿ ಸಿರಿಗಂಧ ಮರ ಬೆಳೆದು ತಾ ಮುಂದ
ಮಾದೇಶ್ವರಗೆ ಚೆಂದ ಮೆಚ್ಚುವುದು ಅಲ್ಲಿ..
ಈ ಹಾಡು ಬರೆದದ್ದು ಮಾಸ್ತಿ ವೆಂಕಟೇಶ ಅಯ್ಯಂಗಾರರು ಹೌದಾ? ಹಾಗೆ ಬೆರಗಾಗುವಂಥ ವೈವಿಧ್ಯ ಇದರಲ್ಲಿದೆ. ಮಾಸ್ತಿಯವರ ನವರಾತ್ರಿಯ ಪದ್ಯಗಳನ್ನೂ ಇತರ ಗೀತೆಗಳನ್ನೂ ಓದಿದವರಿಗೆ ಇದನ್ನೂ ಅವರೇ ಬರೆದಿದ್ದಾರೆ ಎಂದರೆ ನಂಬಲು ಕಷ್ಟವಾಗುತ್ತದೆ. ಮಾಸ್ತಿಯವರ ಕತೆಗಳನ್ನು ಓದಿದವರಿಗೆ ಪರಿಚಿತವಾಗಿರುವ ಸರಳತೆ ಮತ್ತು ಸ್ಪಷ್ಟತೆ ಅವರ ಈ ನಾಟಕದ ಗೀತೆಯಲ್ಲೂ ಕಾಣಿಸುತ್ತದೆ.
ಇದು `ಕಾಕನಕೋಟೆ' ನಾಟಕಕ್ಕೆ ಮಾಸ್ತಿಯವರು ಬರೆದ ಗೀತೆ. ನಾಟಕದ ಆರಂಭದಲ್ಲೇ ಬರುತ್ತದೆ. ಇದಕ್ಕೆ ಅಶ್ವ್ಥ ಅಷ್ಟೇ ನಾಜೂಕಾಗಿ ಸಂಗೀತ ಸಂಯೋಜಿಸಿದ್ದಾರೆ. ಸಂಗೀತದ ಅಗತ್ಯವೇ ಇಲ್ಲ ಎನ್ನಿಸುವಂಥ ಲಯಬದ್ಧತೆಯೂ ಈ ಗೀತೆಯಲ್ಲಿದೆ. ಎಲ್ಲಿ ಏಕಾಏಕಿ ಗಂಡು ನಮಿಲಿಯ ಕೇಕಿ ಬೋರಗಲ್ಲಿಗೆ ತಾಕಿ ಗೆಲ್ಲುವುದು ಅಲ್ಲಿ- ಎಂಬ ಸಾಲುಗಳನ್ನು ಕಾಡಿನ ಬಗ್ಗೆ ವಿಶೇಷವಾದ ಮತ್ತು ಗಾಢವಾದ ತಿಳುವಳಿಕೆ ಇರದ ಹೊರತು ಬರೆಯುವುದು ಸುಲಭವಲ್ಲ. ದಿನ ದಿನಾ ಸಂಪಂಗಿ ಇರುವಂತಿ ಮಲ್ಲಂಗಿ ಎನ್ನುವ ಸಾಲಿನ ಜೊತೆಗೇ ಅಚ್ಚರಿಗೊಳಿಸುವಂಥ ಮೊಲ್ಲೆ ಅದರ ತಂಗಿ... ಎಂಬ ಸಾಲಿದೆ. ಒಂದು ಹೆಸರಿಲ್ಲದ ಮೊಲ್ಲೆಯಂಥ ಹೂವನ್ನು ಅದರ ತಂಗಿ ಎಂದು ಕರೆಯುವುದು ಅವರಿಗಷ್ಟೇ ಸಾಧ್ಯವಿತ್ತಾ? ಅದಾದ ತುಂಬ ವರುಷಗಳ ನಂತರ ಕೆ ಎಸ್್ ನರಸಿಂಹಸ್ವಾಮಿ ` ತಾರೆಗಳ ಜರತಾರಿ ಅಂಗಿ ತೊಡಿಸುವರಂತೆ ಚಂದಿರನ ತಂಗಿಯರು ನಿನ್ನ ಕರೆದು..' ಎಂದು ಬಳಸಿದಾಗ ಥಟ್ಟನೆ ನೆನಪಾದದ್ದು ಮಾಸ್ತಿಯವರ `ಮೊಲ್ಲೆ... ಅದರ ತಂಗಿ' ಪ್ರಯೋಗ.
ನಮ್ಮಲ್ಲಿ ಅನೇಕರು ತುಂಬ ಕಡೆಗಣಿಸಿದ ಲೇಖಕರ ಪೈಕಿ ಪುತಿನರಂತೆ ಮಾಸ್ತಿ ಕೂಡ ಒಬ್ಬರು. ಮಾಸ್ತಿಯವರು ಕನ್ನಡದ ಆಸ್ತಿ ಎನ್ನುವುದು ಈಗ ಕೇವಲ ಸ್ಲೋಗನ್ನಷ್ಟೇ ಆಗಿ ಉಳಿದುಬಿಟ್ಟಿದೆ. ಟಾಲ್ ಸ್ಟಾಯ್ ಕತೆಗಳನ್ನು ಮೀರಿಸಬಲ್ಲ ಒಳನೋಟ ಮತ್ತು ಬದುಕಿನ ಗಾಢ ಅರಿವು ಮಾಸ್ತಿ ಕತೆಗಳಲ್ಲಿ ಕಾಣಿಸುತ್ತದೆ. ಅವರು ಕತೆ ಬರೆದು ಎಪ್ಪತ್ತೆಂಬತ್ತು ವರುಷಗಳಾದ ನಂತರ ದೃಶ್ಯಮಾಧ್ಯಮವಾದ ಸಿನಿಮಾ ಅವರ ಶೈಲಿಯನ್ನು ಕಂಡುಕೊಳ್ಳಲು ತುಡಿಯುತ್ತಿದೆ. ಮಾಸ್ತಿಯವರಷ್ಟು ನಿರುಮ್ಮಳವಾಗಿ, ತಣ್ಣನೆಯ ದನಿಯಲ್ಲಿ ಮತ್ತು ಅಬ್ಬರವಿಲ್ಲದ ಧಾಟಿಯಲ್ಲಿ ಒಂದು ಕಥಾನಕವನ್ನು ಅರುಹುವುದು ಸಾಧ್ಯವಾದರೆ ಎಷ್ಟು ಚೆನ್ನ ಎಂದು ಈಗ ಎಲ್ಲರಿಗೂ ಅನ್ನಿಸತೊಡಗಿದೆ.
ಮಾಸ್ತಿಯವರ ಕತೆಯಷ್ಟೇ ಬೆರಗುಗೊಳಿಸುವ ಕೆಲವು ನಾಟಕಗಳಿವೆ. ಅವರು ಬರೆದ ಆರೆಂಟು ನಾಟಕಗಳ ಪೈಕಿ ಇವತ್ತಿನ ಸಂದರ್ಭಕ್ಕೆ ತುಂಬ ಆಪ್ತ ಅನ್ನಿಸುವುದು ಕಾಕನಕೋಟೆ. ಇವತ್ತು ನಾವು ಹಿಡಿಯಲೆತ್ನಿಸುತ್ತಿರುವ ಜಾಗತೀಕರಣದ ವಿರುದ್ಧದ ರೂಪಕಕ್ಕೆ ಕಾಕನಕೋಟೆಗಿಂತ ಪ್ರಬಲವಾದ ಮತ್ತೊಂದು ದೃಷ್ಟಾಂತ ಸಿಗಲಾರದು. ನಮ್ಮ ರಾಜಕೀಯ ಸ್ಥಿತಿಯನ್ನು ತುಘಲಕಇವತ್ತಿಗೂ ಹೇಗೆ ಪ್ರತಿನಿಧಿಸುತ್ತದೆಯೋ ಅಷ್ಟೇ ಸಮರ್ಥವಾಗಿ ಕಾಕನಕೋಟೆ ನಮ್ಮ ಗ್ರಸ್ತ ಆರ್ಥಿಕ ಸ್ಥಿತಿಯನ್ನು ಹಿಡಿದಿಡುತ್ತದೆ.
ಹಾಗೆ ನೋಡಿದರೆ ನಾವು ಸಂಸರನ್ನೂ ಶ್ರೀರಂಗರನ್ನೂ ನಾಟಕಕಾರರೆಂದು ಒಪ್ಪಿಕೊಂಡಷ್ಟು ಪುತಿನರನ್ನೂ ಮಾಸ್ತಿಯವರನ್ನೂ ಒಪ್ಪಿಕೊಳ್ಳುವುದಿಲ್ಲ. ಪುತಿನ ಕಾವ್ಯದಲ್ಲಿ ಮಾಸ್ತಿ ಸಣ್ಣಕತೆಯಲ್ಲಿ ಅಗಾಧವಾಗಿ ಸಾಧಿಸಿದ್ದರಿಂದ ಅವರ ಇತರ ಬರಹಗಳು ಮೂಲೆಗುಂಪಾಗಿರುವ ಸಾಧ್ಯತೆಯೂ ಇದೆ. ಆದರೆ ಬಿವಿ ಕಾರಂತರು ಗೋಕುಲ ನಿರ್ಗಮನವನ್ನು ಆಡಿಸದೇ ಹೋಗಿದ್ದರೆ ಅದರ ಅಂತಃಶಕ್ತಿ ಇವತ್ತಿಗೂ ಒಡೆದುಕೊಳ್ಳದೇ ಹೋಗುತ್ತಿತ್ತೋ ಏನೋ? ಹಾಗೇ, ಮಾಸ್ತಿಯವರ ಕಾಕನಕೋಟೆ ಕೂಡ.
ಕಾಕನಕೋಟೆಯ ಕಥಾವಿಸ್ತರವೇ ಬೆಚ್ಚಿಬೀಳಿಸುವಂತಿದೆ. ಕಾಡುಕುರುಬರ ಹಟ್ಟಿಯ ಬುದ್ಧಿವಂತ ಕಾಕ, ತನ್ನ ಬೂಡನ್ನು ಪರಕೀಯರಿಂದ ಕಾಪಾಡುವುದಕ್ಕೆ ಯತ್ನಿಸುವುದು, ಆ ಹಂತದಲ್ಲಿ ಆತ ಸಂಸ್ಥಾನದ ವಿರುದ್ಧ ತಿರುಗಿನಿಲ್ಲದೆ ಅವರಿಗೆ ನಿಷ್ಠನಾಗಿದ್ದುಕೊಂಡೇ ತನ್ನ ಸ್ವಂತಿಕೆಯನ್ನು ಉಳಿಸಿಕೊಳ್ಳುವುದು ಇದರ ವಸ್ತು. ಕುರುಬರು ಅರಸೊತ್ತಿಗೆಗೆ ಸಲ್ಲಿಸಬೇಕಾದ ಕಪ್ಪವನ್ನು ಸಲ್ಲಿಸದೇ ಹೋದಾಗ ಉಂಟಾಗುವ ಪರಿಸ್ಥಿತಿಯನ್ನು ಕಾಕ ನಿಭಾಯಿಸುವ ಶೈಲಿಯಲ್ಲೇ ಕಾಡಿನ ಮಕ್ಕಳಿಗೆ ಸಹಜವಾದ ಬುದ್ಧಿವಂತಿಕೆ ಮತ್ತು ಸ್ವಯಂಸ್ಪೂರ್ತಿ ಎದ್ದು ಕಾಣುತ್ತದೆ.
ಇಲ್ನೋಡಿ;
ಕಂದಾಯ ವಸೂಲಿ ಮಾಡುವ ಕರಣೀಕ ಹೇಳುತ್ತಾನೆ; ಅದೆಲ್ಲ ಆಗೋಲ್ಲ. ಇದೇ ಕೊನೇ ಮಾತು.
ಅದಕ್ಕೆ ಕಾಕನ ಉತ್ತರ; ಅದ್ಯಾಕ ನನ್ನೊಡೆಯ ಹಂಗಂತೀರ? ಜೀವ ಇರಬೇಕಾದರೆ ಇದನ್ಯಾಕ ಕೊನೆ ಮಾತು ಅಂತೀರ?
ಅದಕ್ಕೆ ಕರಣೀಕ ರೇಗುತ್ತಾನೆ. ಕಾಕ ಮತ್ತೂ ಮುಂದುವರಿಸುತ್ತಾನೆ; ಕೊನೇ ಮಾತಾಗಬ್ಯಾಡ ಅಂದಿ ಬುದ್ಧಿ. ಕೊನೇ ಮಾತಾಗೋದೆ ನಿಮಗೆ ಚಂದ ಅಂದರೆ ಹಂಗೆ ಆಗಲೇಳಿರ. ಅಮ್ಮಾವರ ತಾತಿಬಲ ಎಷ್ಟೊ ಅಷ್ಟೆ ಆಯಿತು.
ನಾಟಕಕ್ಕೆ ಬೇಕಾದ ರೋಚಕತೆ, ಕ್ರಿಯೆ ಮತ್ತು ಘಟನೆಗಳ ಸರಮಾಲೆಯೇ ಈ ನಾಟಕದಲ್ಲಿದೆ. ಕಾಕ ತಾನು ಕಾಕ ಅಲ್ಲ ಎಂದು ಹೇಳಿಕೊಂಡು ಕಂದಾಯ ವಸೂಲಿಗೆ ಬರುವ ಹೆಗ್ಗಡೆಯನ್ನು ಭೇಟಿಯಾಗುತ್ತಾನೆ. ಹೆಗ್ಗಡೆಗೆ ಅವನೇ ಕಾಕ ಎಂದು ಗೊತ್ತಾಗಿ ಆತನನ್ನು ಬಂಧಿಸುವ ಯತ್ನ ಮಾಡುತ್ತಾನೆ. ಹಾಗೆ ಬಂಧಿಸುವ ಹುನ್ನಾರ ಮೊದಲೇ ಗೊತ್ತಾಗಿ ಕಾಕ ಅದರಿಂದ ತಪ್ಪಿಸಿಕೊಂಡು ಹೆಗ್ಗಡೆಯವರ ಮಗನನ್ನು ಕರಣೀಕರನ್ನು ಅಪಹರಿಸುತ್ತಾನೆ. ಹಾಗೆ ಅಪಹರಿಸಿಕೊಂಡು ಹೋದ ಹೆಗ್ಗಡೆಯವರ ಮಗ ಕಾಕನ ಮಗಳನ್ನು ಪ್ರೀತಿ ಮಾಡುತ್ತಾನೆ. ಕೊನೆಯಲ್ಲಿ ಕಾಕನ ಮಗಳು ಹೆಗ್ಗಡೆಯವರ ಮಗನನ್ನು ಮದುವೆಯಾಗುತ್ತಾಳೆ. ಕುರುಬರ ಬೂಡಿಗೆ ಮಹರಾಜನ ಆಗಮನವೂ ಆಗುತ್ತದೆ. ಕರಣೀಕರ ವಂಚನೆಯೂ ಬಯಲಾಗುತ್ತದೆ.
ವಿಸ್ತಾರವಾದ ಹಾಗೂ ಪುನರ್ ವ್ಯಾಖ್ಯಾನದ ಮರು ಓದನ್ನು ಬೇಡುವ ಕೃತಿಗಳ ಪೈಕಿ ಕಾಕನಕೋಟೆ ಕೂಡ ಒಂದು. ಇವತ್ತು ಓದಿದಾಗ ಅದರೊಳಗಿರುವ ಅನೇಕ ಹೊಸ ಅರ್ಥಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ತುಂಬ ಸರಳವಾದ ಒಂದು ಮಾತು ಇವತ್ತಿಗೆ ಹೇಗೆ ಹೊಂದಿಕೆಯಾಗುತ್ತದೆ ಅನ್ನುವುದನ್ನು ಗಮನಿಸಿ;
ಕಾಕ ಹೇಳುತ್ತಾನೆ- ಹಿರಿಯರು ಅಂದಿದಾರೆ ಕಾಡು ನಾಡಾಗಬೇಡ ನಾಡು ಬಯಲಾಗಬೇಡ ಅಂತ. ಕಾಡು ದೇವರು ಒಲಿದಿರೋ ಮಂದಿ ಊರ ಕಟ್ಟತೀವಿ ಅನ್ನಬಾರದಂತೆ. ಈಗ ನಮ್ಮ ಹಕ್ಕಳು ಕಾಡಾಗೆ ನಡೀತಿರಲೀಕೆ ಹರಿದಾರೀಲಿರೋ ಆನೆ ಕಂಪು ಮೂಗಿಗೆ ತಿಳೀತದೆ. ತರಗಿನೊಳಗಿರೋ ತೆಕ್ಕೆ ಬಿದ್ದಿರೋ ಸರಪಾ ಕಣ್ಣಿಗೆ ಕಾಣುತದೆ. ಜಿಂಕೆ ಹಿಂದೆ ನಡಿಯೋ ಹುಲಿ ಹೆಜ್ಜೆ ಸಪ್ಪಳ ಕೊಂಬಿನ ದೂರದಲ್ಲಿ ಕಿವಿಗೆ ಕೇಳತದೆ. ಜೇನ ಹುಡುಕುತಾ ಹೋಗತಿದ್ರೆ ನೊಣ ಬಂದು ದಾರಿ ತೋರತದೆ. ಊರು ಕಟ್ಟಿ ನಿಂತಿವಿ, ಇದೊಂದೂ ಆಗಲ್ಲ.
ಇವತ್ತಿಗೂ ನಾವು ಪ್ರೀತಿಯಂದ ಕೇಳುವ ನೇಸರ ನೋಡು.. ನೇಸರಾ ನೋಡು ಗೀತೆಯನ್ನೂ ಬರೆದವರು ಮಾಸ್ತಿ. ಇನ್ನೊಂದು ವಿಚಿತ್ರ ನೋಡಿ. ಕಂಬಾರ, ಮಾಸ್ತಿ, ಲಂಕೇ್ ಮುಂತಾದವರು ಸಿನಿಮಾ ಮಾಡುತ್ತಿದ್ದಾಗ ಅದಕ್ಕೆ ಹೊಂದುವ ಗೀತೆಗಳನ್ನೂ ತಾವೇ ಬರೀತಿದ್ದರು. ಅವು ಇವತ್ತಿಗೂ ಅಷ್ಟೇ ಹೊಸದಾಗಿ ಉಳಕೊಂಡಿವೆ. ಎಲ್ಲಿದ್ದೇ ಇಲ್ಲೀ ತನಕ, ಕೆಂಪಾದವೋ ಎಲ್ಲಾ ಕೆಂಪಾದವೋ, ಕರಿಯವ್ವನ ಗುಡಿತಾವ ಅರಳ್ಯಾವೆ ಬಿಳಿಹೂವು, ನೇಸರ ನೋಡು, ಸಂಗೀತಾ, ಕಾಡುಕುದುರೆ ಓಡಿಬಂದಿತ್ತಾ ಇವಿತ್ಯಾದಿ ಹಾಡುಗಳಿಗೆ ಸಾವಿಲ್ಲ.
ಇಂಥದ್ದೇ ಇನ್ನೊಂದಷ್ಟು ಗೀತೆಗಳೂ ಇಲ್ಲಿವೆ. ಉದಾಹರಣೆಗೆ ಕಾಕ ಹಾಡುವ ಮತ್ತೊಂದು ಹಾಡು ಹೀಗಿದೆ;
ಮಾದೇಶ್ವರ ನಿನ್ನ ನಂಬದ ಮಂದಿ
ಬಾಳಲ್ಲ ಸಾಯಲ್ಲ ಬಾಡುವರು ಕಂದಿ
ಮಾದೇಶ್ವರಾ ನನ್ನ ಸಲಹೆಂದ ಉಸುರು
ಬಾಡಲ್ಲ ಬಳಲಲ್ಲ ಎಂದೆಂದು ಹಸುರು.
ಹಾಗೇ ಆಶೀರ್ವಚನ ಗೀತದಂತಿರುವ ಈ ಸಾಲುಗಳನ್ನು ಓದಿ;
ಕರಿಹೈದನವ್ವನಾ ಹೆಸರೆಂದು ನಿಲ್ಲಲಿ
ಅವನ ಬಳಿಯೆಂದೆಂದು ಒಳ್ಳಿದನು ಮೆಲ್ಲಲಿ
ಅವನ ಹೆತ್ತಾ ಕಾಡು ಎಂದೆಂದು ಚಿಗುರಲಿ
ಅವನ ಬಳಿ ಎಂದೆಂದು ಮಿಕ್ಕಿರಲಿ ಹೊಗರಲಿ
ಅವನ ಹಾಡಿಗಳಿರಲಿ ಎಂದೆಂದು ಸೊಗದಲಿ
ಅವನ ಬಳಿಗೆಂದೆಂದು ನಗೆಯಿರಲಿ ಮೊಗದಲಿ
ಅವನ ಹೊಗಳುವ ಹಾಡು ಎಂದೆಂದು ಹಾಡಲಿ
ಅವನ ಬಳಿ ಎಂದೆಂದು ಹಬ್ಬವನು ಮಾಡಲಿ
******
ಕಾಕನಕೋಟೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಅನೇಕ ಪ್ರಶ್ನೆಗಳಿಗೆ ಉತ್ತರಿಸುತ್ತದೆ. ನಾವು ನಮ್ಮನ್ನು ಆವರಿಸುವ ಆಧುನಿಕತೆ ಎಂಬ ಕಾಯಿಲೆಯನ್ನು ಹೇಗೆ ಎದುರಿಸಬೇಕು ಅನ್ನುವುದಕ್ಕೆ ಆಧುನಿಕತೆಯಲ್ಲಿ ಉತ್ತರವಿಲ್ಲ. ಉತ್ತರ ಹುಡುಕಬೇಕಾದರೆ ನಾವು ಮತ್ತೆ ನಮ್ಮ ಹಳೆಯ ಕಾಲಕ್ಕೆ ಮರಳಬೇಕು. ನಾಗರೀಕತೆಯ ಉತ್ತುಂಗಕ್ಕೆ ತಲುಪಿದ ಒಂದು ಸಂಸ್ಕೃತಿ ಮಾಡುವುದು ಅದನ್ನೇ. ಅದೇ ಕಾರಣಕ್ಕೆ ಪಾಶ್ಚಾತ್ಯ ದೇಶಗಳು ಪೂರ್ವದ ಒಡಪುಗಳಲ್ಲಿ, ಶ್ಲೋಕಗಳಲ್ಲಿ, ಮಾಂತ್ರಿಕತೆಯಲ್ಲಿ, ಪವಾಡದಲ್ಲಿ ಉತ್ತರ ಹುಡುಕಲು ಯತ್ನಿಸಿದ್ದು.
ಆಧುನಿಕತೆ ಒಂದು ಸ್ಥಿತಿಯಲ್ಲ; ಅದೊಂದು ರೋಗ. ಅದು ರೋಗ ಅನ್ನುವುದು ನಮಗೆ ತಕ್ಪಣಕ್ಕೆ ಗೊತ್ತಾಗುವುದಿಲ್ಲ. ಸಮೂಹಸನ್ನಿಯಲ್ಲಿ ಅದೊಂದು ವರದಂತೆ ಕಾಣಿಸುವ ಸಾಧ್ಯತೆಯೇ ಹೆಚ್ಚು. ಆದರೆ ಏಕಾಂತದಲ್ಲಿ ಮುಂಜಾವದ ಒಂಟಿತನದಲ್ಲಿ ಆಧುನಿಕತೆಯ ಶಾಪ ನಮ್ಮನ್ನು ತಟ್ಟುತ್ತದೆ. ನಾವು ಜೀವಿಸಲು ತೀರ ಅಗತ್ಯವಾದ `ಚಾವಡಿ'ಯಂಥ ಜಾಗಗಳನ್ನು, ಜಗಲಿಯನ್ನು, ಹಿತ್ತಿಲನ್ನು ಅದು ನಾಶಮಾಡುತ್ತದೆ.
ನಗರಗಳಲ್ಲಿ ಮನೆಗೆ ಜಗಲಿಗಳಿಲ್ಲ. ಜಗಲಿಯ ಮೇಲೆ ಕುಳಿತು ಮಾತಾಡುವ ಬಳೆಗಾರನಿಲ್ಲ, ಬಳೆಗಾರ ಹೊತ್ತು ತರುವ ಸುದ್ದಿಗಾಗಿ ಕಾಯುವ ರೋಮಾಂಚವಿಲ್ಲ. ಸುದ್ದಿಮೂಲಗಳೂ ಮಾಹಿತಿಕೇಂದ್ರಗಳು ಇವತ್ತು ಬದಲಾಗಿವೆ. ಅಅದಕ್ಕೆ ತಕ್ಕಂತೆ ನಮ್ಮ ನಿಲುವುಗಳೂ ಬದಲಾಗುತ್ತಿವೆ. ಮನೆ ತುಂಬ ಜನರಿಂದ ತುಂಬಿಕೊಂಡು ಕಲಕಲ ಅನ್ನುತ್ತಿದ್ದರೆ ಖುಷಿಯಾಗುತ್ತಿದ್ದ ದಿನಗಳು ಈಗಿಲ್ಲ. ಈಗ ಪ್ರತಿಯೊಬ್ಬರಿಗೂ ನೀರವ ಏಕಾಂತ ಬೇಕು.
ಇದು ಜಾಗತೀಕರಣದ ಕೊಡುಗೆ ಎಂದು ಭಾವಿಸುವುದು ತಪ್ಪು. ಇದು ನಮ್ಮ ಆಧುನಿಕ ಶಿಕ್ಪಣದಿಂದ ಬಂದದ್ದು. ಐವತ್ತು ವರುಷಗಳ ಹಿಂದೆ ಇಂಗ್ಲಿಷ್ ಜ್ಞಾನ ಆ ಕಾಲದ ಲೇಖಕನ ಮತ್ತು ಓದುಗನ ಕನ್ನಡ ಪ್ರೀತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತಿತ್ತು. ಇವತ್ತು ಅದಕ್ಕೆ ತದ್ವಿರುದ್ಧವಾದದ್ದು ನಡೆಯತ್ತಿದೆ.
ಮೊನ್ನೆ ಗೋಪಾಲಕೃಷ್ಣ ಅಡಿಗ ಟ್ರಸ್ಟ್ ನಡೆಸಿದ ಅಡಿಗ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಕಿ.ರಂ. ನಾಗರಾಜ ಅಡಿಗರ ಕೆಲವು ಸಾಲುಗಳನ್ನು ಉದಾಹರಿಸಿದರು;
ಮನೆಯ ಮಕ್ಕಳ ಕೂಡೆ ಆಡ ಬಂದರೆ ಊರ
ಹುಡುಗ ಪಾಳೆಯ, ತಿಂಡಿ ಕೊಟ್ಟು ನಗಿಸು;
ಅಲ್ಲೆ ತಳವೂರಿಸಲು ಬಯಸಿ ತೆಳ್ಳಗೆಮಾಡ
ಬೇಡ ಇರುವಷ್ಟು ತಂಭಾಲು ಗುಟುಕು.
ಕಟ್ಟೆಯೊಳಗಡೆ ನೀರ ಹಣಿಸಿದರೆ ಬೆಳವ ಮರ
ತಲೆಮೇಲೆ ತಳೆಯುವುದು ಗೂಡ ಮಾಲೆ
ಅದರೊಳಗೆ ಬಂದಳಿಕೆ ಬೆಳೆವ ವಿಶ್ವವಿಶಾಲ
ಭಾವವೇ ಬಿಡುಗಡೆಗೆ ಬಿಟ್ಟ ಕೂಳೆ.
ಮೆಟ್ರೋ-ದಂಥ ಬಹುರಾಷ್ಟ್ರೀಯ ಸಂಸ್ಥೆಗಳನ್ನು ಹೇಗೆ ನಿಭಾಯಿಸಬೇಕು ಅನ್ನುವುದಕ್ಕೆ ಉತ್ತರ ಈ ಕಾವ್ಯದಲ್ಲಿದೆ ಅನ್ನುವ ಕಾರಣಕ್ಕೆ ಅಡಿಗರನ್ನು ಎಲ್ಲ ಕಾಲಕ್ಕೂ ಸಲ್ಲುವ ಕವಿ ಎಂದು ಕರೆಯಬಹುದಲ್ಲ.
ಅವರದೇ ಮತ್ತೊಂದು ಸಾಲು ನೋಡಿ;
ಮಾಡಿ ಮಡಿಯದೆ ಬದುಕಿ ಉಳಿಯಬಾರದು, ಮಡ್ಡಿ;
ಕರ್ಪೂರವಾಗದೆ ಬೆಂಕಿ ಬಳಿಗೆ
ಸುಳಿಯಬಾರದು; ಹೊತ್ತಿ ಹೊಗೆವ ಮಡ್ಡಿಯ ಕಂಪು
ಹೊರಗಡೆಗೆ; ಒಳಗೆ ಕೊನೆಯಿಲ್ಲದ ಧಗೆ.
ಇದು ಇವತ್ತಿನ ಸ್ಥಿತಿ. ನಾವೆಲ್ಲ ಕರ್ಪೂರವಾಗದೇ ಬೆಂಕಿ ಬಳಿಗೆ ಸುಳಿಯುತ್ತಿದ್ದೇವಾ?
Photo: www.chitraloka.com
Subscribe to:
Posts (Atom)